Connect with us

    International news

    ಜಪಾನ್ ಗೆ ಅಪ್ಪಳಿಸಿದ ಚಂಡಮಾರುತ; ಮೂವರು ಬ*ಲಿ

    Published

    on

    ಮಂಗಳೂರು/ಟೋಕಿಯೊ : ನೈಋತ್ಯ ಜಪಾನ್ ನ ಪ್ರಾಂತ್ಯಕ್ಕೆ ‘ಶಾನ್ ಶಾನ್’ ಚಂಡಮಾರುತ ಅಪ್ಪಳಿಸಿದೆ. ಪರಿಣಾಮ ಮೂರು ಮಂದಿ ಸಾ*ವನ್ನಪ್ಪಿದ್ದಾರೆ ಎಂಬುದಾಗಿ ವರದಿಯಾಗಿದೆ.  ಅಲ್ಲದೇ, ಒಬ್ಬರು ನಾಪತ್ತೆಯಾಗಿದ್ದು, ಇಬ್ಬರು ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ನೈಋತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಘಂಟೆಗೆ 198 ಕಿ.ಮೀ.  ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾರಿ ಮಳೆ, ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.  2.5 ಲಕ್ಷ ಮನೆಗಳ ವಿದ್ಯುತ್ ಕಡಿತ ಉಂಟಾಗಿದೆ. ಚಂಡಮಾರುತವು ವಾರಾಂತ್ಯದಲ್ಲಿ ರಾಜಧಾನಿ ಟೋಕಿಯೊ ಸೇರಿದಂತೆ ಮಧ್ಯ ಮತ್ತು ಪೂರ್ವ ಪ್ರದೇಶಗಳಿಗೆ ವ್ಯಾಪಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇದನ್ನೂ ಓದಿ : ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ – ಮಳೆಗೆ 15 ಸಾ*ವು, 23 ಸಾವಿರ ಮಂದಿ ಸ್ಥಳಾಂತರ

    ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ ನೀಡಿದ್ದಾರೆ.

    ವಿಮಾನ, ರೈಲು ಸೇವೆ ರದ್ದು :

    ಈಗಾಗಲೇ ಜಪಾನ್ ಏರ್‌ಲೈನ್ಸ್, ಎಎನ್‌ಎ ಹೋಲ್ಡಿಂಗ್ಸ್‌ ಸೇರಿದಂತೆ ವಿಮಾನಯಾನ ಸಂಸ್ಥೆಗಳು 600ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. ಕ್ಯುಶು ದ್ವೀಪದ ಹಲವೆಡೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವಾಹನ ತಯಾರಿಕಾ ಸಂಸ್ಥೆಗಳಾದ ಟೊಯೊಟಾ ಹಾಗೂ ನಿಸ್ಸಾನ್ ತನ್ನ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

    International news

    ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು

    Published

    on

    ಮಂಗಳೂರು / ಕೇಪ್ ಕ್ಯಾನವೆರೆಲ್ : ಇತ್ತೀಚೆಗೆ ಬಾಹ್ಯಕಾಯಕ್ಕೆ ತೆರಳಿದ್ದ ಗಗನಯಾತ್ರಿಗಳು ಸುರಕ್ಷಿತವಾಗಿ ಭಾನುವಾರ(ಸೆ.15) ಸಂಜೆ ಭೂಮಿಗೆ ಬಂದಿಳಿದಿದ್ದಾರೆ. ಸ್ಪೇಸ್ ಎಕ್ಸ್ ಸಹಯೋಗದೊಂದಿಗೆ ಈ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಾಗಿತ್ತು.

    ಇದು ಪ್ರಪಂಚದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ ಕಾರ್ಯಕ್ರಮವಾಗಿತ್ತು. ಇದರಲ್ಲಿ ಇಬ್ಬರು ನಾಸಾ ಪೈಲಟ್ ಗಳು ಸೇರಿ ಒಬ್ಬ ಸ್ಪೇಸ್ ಎಕ್ಸ್ ಉದ್ಯೋಗಿ ಹಾಗೂ ಬಿಲಿಯನೇರ್ ಜೇರೆಡ್‌ ಐಸಾಕ್ ಮನ್ ಇದ್ದರು.

    ಇವರನ್ನುಹೊತ್ತಿದ್ದ ನೌಕೆ ಭಾನುವಾರ ಸಂಜೆ ಮೆಕ್ಸಿಕೊ ಕೊಲ್ಲಿಯಲ್ಲಿ ಯಶಸ್ವಿಯಾಗಿ ಇಳಿಯಿತು. ಬಿಲಿಯನೇರ್ ಜೇರೆಡ್‌ ಐಸಾಕ್ ಮನ್ ಬಾಹ್ಯಾಕಾಶ ನಡೆಸಿದ ಮೊದಲ ಖಾಸಗಿ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಖಾಸಗಿಯಾಗಿ ಆಯೋಜಿಸಲಾಗಿದ್ದ ‘ವಿಶ್ವದ ಮೊದಲ ಬಾಹ್ಯಾಕಾಶ ನಡಿಗೆ’ಯು ಯಶಸ್ವಿಯಾಗಿದೆ.

    ಸಾಮಾನ್ಯವಾಗಿ ತರಬೇತಿ ಹೊಂದಿದ ಗಗನಯಾತ್ರಿಗಳನ್ನು ಮಾತ್ರವೇ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಆದರೆ, ಅವರ ಹೊರತಾಗಿ ಸಾಮಾನ್ಯರೂ ಬಾಹ್ಯಾಕಾಶಕ್ಕೆ ಹೋಗಿರುವುದು ಅಪರೂಪದ ಘಟನೆ.

    ಇದನ್ನೂ ಓದಿ : ವಾರ ಕಳೆದ್ರೂ ವೈರಲ್ ಫೀವರ್‌ ಗುಣ ಆಗ್ತಿಲ್ವಾ? ಈ ಮನೆಮದ್ದು ಪ್ರಯತ್ನಿಸಿ, ಜ್ವರದೊಂದಿಗೆ ಮೈಕೈನೋವು ಮಾಯವಾಗುತ್ತೆ

    ಐಸಾಕ್ ಮನ್ ಕುರಿತು :

    ಭೂಮಿಯಿಂದ 740 ಕಿ.ಮೀ ದೂರದ ಕಕ್ಷೆಯಲ್ಲಿ ‘ಬಾಹ್ಯಾಕಾಶ ನಡಿಗೆ’ ಯಶಸ್ವಿಯಾಗಿ ನಡೆಯಿತು. ಬಾಹ್ಯಾಕಾಶ ನಡಿಗೆ ಗುರುತಿಸಲಾಗಿದ್ದ ಅನುಕೂಲಕರ ಸ್ಥಳದಲ್ಲಿ ನೌಕೆಯು ನಿಂತಿತು. ಇದರಿಂದ ಹೊರಬಂದ ಐಸಾಕ್ ಮನ್ ಬಾಹ್ಯಾಕಾಶ ನಡಿಗೆಯನ್ನು ಸಂಭ್ರಮಿಸಿದ್ದರು. 41 ವರ್ಷದ ಐಸಾಕ್ ಮನ್ ಅವರು ‘ಶಿಫ್ಟ್ 4’ ಎಂಬ ಕ್ರೆಡಿಟ್  ಕಾರ್ಡ್ ಪ್ರೊಸೆಸಿಂಗ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ. ಇದುವರೆಗೆ 12 ದೇಶಗಳ ಸುಮಾರು 263 ಜನರು ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ್ದಾರೆ. 1965ರಲ್ಲಿ ರಷ್ಯಾದ ಅಲೆಕ್ಸಿ ಲಿಯೋನೊವ್ ಮೊದಲ ಬಾರಿಗೆ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದರು

    Continue Reading

    International news

    ಚಿಟ್ಟೆಗಳ ಕಳ್ಳಸಾಗಣಿಕೆಗೆ ಯತ್ನಿಸಿದ ತಂದೆ-ಮಗನ ಬಂಧನ

    Published

    on

    ಮಂಗಳೂರು/: ಸಾಮಾನ್ಯವಾಗಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತದೆ. ಪ್ರಾಣಿಗಳ ವಿಚಾರ ನೋಡೋದಾದರೆ ಕೆಲವರು ಸಾಕು ಪ್ರಾಣಿಗಳಿಗೂ ಕನ್ನ ಹಾಕುವವರಿದ್ದಾರೆ. ಅದರ ಹೊರತಾಗಿ ಗಂಭೀರ ಪ್ರಕರಣವಾದ ಇರ್ತಲೆ ಹಾವು ಸಾಗಾಟ, ನಕ್ಷತ್ರ ಆಮೆ ಸಾಗಾಟ, ಅಂಬರ್ ಗ್ರೀಸ್ ಸಾಗಾಟ ಮಾಡಿ ತಗಲಾಕ್ಕೊಂಡವರಿದ್ದಾರೆ. ಆದರೆ, ಇಲ್ಲಿ ಮಾತ್ರ ವಿಚಿತ್ರ ಘಟನೆ ನಡೆದಿದೆ.

    ತಂದೆ, ಮಗ ಸೇರಿಕೊಂಡು ಹಲವಾರು ಚಿಟ್ಟೆ ಮತ್ತು ಕೀಟಗಳನ್ನು ಹಿಡಿದು ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದಾರೆ. ಚಿಟ್ಟೆಗಳನ್ನು ಕಳವು ಮಾಡುವಾಗ ಈ ಇಬ್ಬರೂ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ಶ್ರೀಲಂಕಾದಲ್ಲಿ. ಇಟಲಿಯಲ್ಲಿ ವೃತ್ತಿಯಲ್ಲಿ ವೈದ್ಯ ಹಾಗೂ ಮೊಡೆನಾ ಸಿಟಿಯ ಕೀಟಶಾಸ್ತ್ರ ಸಂಘದ ಸದಸ್ಯ ಲುಯಿಗಿ ಫೆರಾರಿ (68) ಮತ್ತು ಆತನ ಮಗ ಮಟ್ಟಿಯಾ ಫೆರಾರಿ (28) ಬಂಧಿತ ಆರೋಪಿಗಳು.

    ಇವರ ಈ ಕೃ*ತ್ಯಕ್ಕೆ ನ್ಯಾಯಾಲಯ ಬರೋಬ್ಬರಿ $200000 ಡಾಲರ್‌ ಅಂದ್ರೆ ಸುಮಾರು 1.62 ಕೋಟಿ ರೂ. ದಂಡ ವಿಧಿಸಿದೆ. ನಿಗದಿತ ಸಮಯದೊಳಗೆ ದಂಡ ಪಾವತಿಸದಿದ್ದರೆ, 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದೆ.

    ರಾಸಾಯನಿಕ ಬಳಸಿ ಚಿಟ್ಟೆ ಹಿಡಿಯುತ್ತಿದ್ದ ಆರೋಪಿಗಳು :

    ಇಟಲಿಯಿಂದ ಶ್ರೀಲಂಕಾಗೆ ಪ್ರವಾಸ ಬಂದಿದ್ದ ತಂದೆ – ಮಗ ಅಲ್ಲಿಂದ ಚಿಟ್ಟೆಗಳನ್ನು ಕಳ್ಳಸಾಗಣಿಕೆ ಮಾಡಲು ಯತ್ನಿಸಿದ್ದಾರೆ. ಮೇಣ ಮತ್ತು ಮತ್ತಿತರ ರಾಸಾಯನಿಕಗಳನ್ನು ಬಳಸಿ ಶ್ರೀಲಂಕಾದ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಚಿಟ್ಟೆಗಳನ್ನು ಹಿಡಿಯುತ್ತಿದ್ದರು. ಈ ಸಂದರ್ಭದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಇವರನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : ಮಗುವಿನ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಮೇಲೆ ದೌರ್ಜನ್ಯ; ಬಟ್ಟೆ ಬಿಚ್ಚಿಸಿ ವೀಡಿಯೋ ಮಾಡಿದ ಕಿರಾತಕ

    ಇವರ ಬಳಿ ಪತ್ತೆಯಾದ ಸಾವಿರಾರು ಅಪರೂಪದ ಕೀಟಗಳು ಮತ್ತು 92 ಬಗೆಯ ಅಪರೂಪದ ಜಾತಿಯ ಚಿಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಹಲವು ಅಪರೂಪದ ಜಾತಿಯ ಕೀಟಗಳು ಸಾ*ವನ್ನಪ್ಪಿವೆ.  ವನ್ಯಜೀವಿ ಕಾಯ್ದೆಯಡಿ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ತಂದೆ ಮಗನ ವಿರುದ್ಧ ಎಫ್.ಐ.ಆರ್‌ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    Continue Reading

    dehali

    Paralympics 2024: 29 ಪದಕಗಳೊಂದಿಗೆ ದಾಖಲೆ ಬರೆದ ಭಾರತ

    Published

    on

    Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ.


    ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್​ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.

    Continue Reading

    LATEST NEWS

    Trending