LATEST NEWS
ಇಸ್ರೋದಿಂದ ಇಂದು ರಾತ್ರಿ ಎರಡು ಉಪಗ್ರಹ ಉಡಾವಣೆ
Published
3 days agoon
By
NEWS DESK3ಮಂಗಳೂರು/ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದ್ರೆ ನಮ್ಮ ಇಸ್ರೋ ಈ ವರ್ಷ ಅನೇಕ ಸಾಧನೆಗಳನ್ನು ಮಾಡಿದೆ. ಮತ್ತೊಂದು ಸಂಶೋಧನೆ ಮೂಲಕ ಇಸ್ರೋ ಸಂಸ್ಥೆ ಈ ವರ್ಷವನ್ನು ಮುಗಿಸಲು ಸಜ್ಜಾಗಿದೆ.
ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’ ಮತ್ತು ‘ಅನ್ ಡಾಕಿಂಗ್’ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ತನ್ನ ಮಹತ್ತರ ಯೋಜನೆಯ ಭಾಗವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಸೋಮವಾರ ರಾತ್ರಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ: ನ್ಯೂ ಇಯರ್ ಆಫರ್; ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು
ಸ್ಪೇಸ್ ಡಾಕಿಂಗ್ ಎಕ್ಸ್ ಪರಿಮೆಂಟ್ (ಸ್ಪೇಡ್ ಎಕ್ಸ್) ಹೆಸರಿನ ಈ ಕಾರ್ಯಯೋಜನೆ ಯಶಸ್ವಿಯಾದರೆ ಭಾರತವು ಇಂತಹ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎನಿಸಿಕೊಳ್ಳಲಿದೆ.
ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’, ತಂತ್ರಜ್ಞಾನವನ್ನು ಹೊಂದಿರುವ ದೇಶಗಳಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ ಸ್ಪೇಡೆಕ್ಸ್ ಯೋಜನೆಯ ಉಪಗ್ರವನ್ನು ಇವತ್ತು (ಡಿ.30) ಭಾರತೀಯ ಕಾಲಮಾನ ರಾತ್ರಿ 9:58ಕ್ಕೆ ಉಡಾವಣೆಗೊಳಿಸಲು ಸಿದ್ದತೆ ನಡೆಸಿದೆ.
‘ಸ್ಪೇಡೆಕ್ಸ್’ ಅಂದ್ರೆ ಏನು
ಸ್ಪೇಡೆಕ್ಸ್ ಅಂದ್ರೆ ಸ್ಪೇಸ್ ಡಾಕಿಂಗ್ ಎಕ್ಸ್ ಪರಿಮೆಂಟ್. ಈ ಸ್ಪೇಡೆಕ್ಸ್ ಯೋಜನೆಯು 2024ರಲ್ಲಿ ಇಸ್ರೋದ ಅಂತಿಮ ಯೋಜನೆಯಾಗಲಿದೆ. ಇದೊಂದು ಕಡಿಮೆ ವೆಚ್ಚದ ಯೋಜನೆಯಾಗಿದ್ದು, ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸುವ ತಂತ್ರಜ್ಞಾನವನ್ನು ಪ್ರದರ್ಶಿಸಲು ವಿನ್ಯಾಸಗೊಂಡಿದೆ.
ಡಾಕಿಂಗ್ ಪ್ರಕ್ರಿಯೆಯಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶದಲ್ಲಿ ಒಂದಕ್ಕೊಂದು ಜೋಡಿಸಲಾಗುತ್ತದೆ. ಈ ಯೋಜನೆಯನ್ನು ಇಸ್ರೋದ ಪಿಎಸ್ ಎಲ್ ವಿ ರಾಕೇಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ ಎಂದು ಇಸ್ರೋದಿಂದ ಮಾಹಿತಿ ನೀಡಲಾಗಿದೆ.
‘ಸ್ಪೇಡ್ ಎಕ್ಸ್’ ಉದ್ದೇಶ
ಚಂದ್ರನ ಅಂಗಳದಿಂದ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಭೂಮಿಗೆ ತರುವುದು, ಪ್ರಸ್ತಾವಿತ 2035ಕ್ಕೆ ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’ ಸ್ಥಾಪಿಸುವುದು ಮತ್ತು ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸುವುದು ಸೇರಿದಂತೆ ಬಾಹ್ಯಾಕಾಶದಲ್ಲಿ ಭಾರತದ ಭವಿಷ್ಯದ ಪ್ರಯೋಗಗಳಿಗೆ ‘ಸ್ಪೇಡ್ ಎಕ್ಸ್’ ಮಿಷನ್ ಒಂದು ಮೆಟ್ಟಿಲು ಎಂದು ನಿರೀಕ್ಷಿಸಲಾಗಿದೆ.
You may like
BIG BOSS
BBK11: ಅಮ್ಮನ ಅದೊಂದು ಮಾತಿಗೆ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಅಷ್ಟಕ್ಕೂ ಹೇಳಿದ್ದೇನು?
Published
19 minutes agoon
02/01/2025By
NEWS DESK2ಇಷ್ಟು ದಿನ ಬಿಗ್ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಈ ಗಳಿಗೆಗಾಗಿಯೇ ಕಾಯುತ್ತಿದ್ದರು. 95 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಜೀವನದಲ್ಲೇ ಬಹಳ ಸುಂದರವಾದ ಕ್ಷಣವಿದು.
ಹೌದು, ಬಿಗ್ಬಾಸ್ ಸೀಸನ್ 11 ಶುರುವಾಗಿ ಇಂದಿಗೆ 95 ದಿನಗಳು ಕಳೆದಿವೆ. ಇಷ್ಟು ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಿಗೆ ಈ ವಾರ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ ಈ ವಾರ ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟು ಮಕ್ಕಳಿಗೆ ಹೊಸ ಹುರುಪನ್ನು ತುಂಬಿದ್ದರು.
ಅದರಂತೆ ಮಂಗಳವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಕಿಶನ್ ಫ್ಯಾಮಿಲಿಯವರು ಬಂದಿದ್ದರು. ನಿನ್ನೆ ಬಿಗ್ಬಾಸ್ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್ ಮನೆಗೆ ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಮನಗೆ ಚೈತ್ರಾ ಕುಂದಾಪುರ ತಾಯಿ ಹಾಗೂ ತಂಗಿ ಎಂಟ್ರಿ ಕೊಟ್ಟ. ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಆದ್ರೆ ತಾಯಿ ಆಡಿದ ಅದೊಂದು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಚೈತ್ರಾ. ಹೌದು ಬಿಗ್ಬಾಸ್ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಸತತವಾಗಿ 4 ಬಾರಿ ಸ್ಪರ್ಧಿಗಳಿಂದ ಕಳಪೆ ಪಟ್ಟ ಸಿಕ್ಕಿತ್ತು. ಹೀಗಾಗಿ ಇದೇ ವಿಚಾರವಾಗಿ ಚೈತ್ರಾ ಅವರ ತಾಯಿ ಮಾತಾಡಿದ್ದಾರೆ. ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ಧೀರಾ, ಆದ್ರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಅಂತ ಹೇಳುತ್ತಾ ಮೆಡಲ್ ಹಾಕಿದ್ದಾರೆ. ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದ್ದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಗುತ್ತೆ, ಮೂರನೇದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಹೇಳಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
BANTWAL
ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಂದ ಕಳಚಿ ಬಿದ್ದ ಡೀಸೆಲ್ ಟ್ಯಾಂಕ್
Published
29 minutes agoon
02/01/2025By
NEWS DESK2ವಿಟ್ಲ: ಇಲ್ಲಿನ ಮಾಣಿ ಸಮೀಪದ ಮಹಾವೀರ ಎಂಬಲ್ಲಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ಸಿನ ಡೀಸೆಲ್ ಟ್ಯಾಂಕ್ ಕಳಚಿ ಬಿದ್ದ ಘಟನೆ ಜ.2ರ ಗುರುವಾರದಂದು ನಡೆದಿದೆ.
ಸರಕಾರಿ ಬಸ್ಸೊಂದು ಮಂಗಳೂರಿನಿಂದ ಅರಸೀಕೆರೆಗೆ ಹೋಗುತ್ತಿದ್ದ ಸಂದರ್ಭ ಬಸ್ ನಿಂದ ಡಿಸೇಲ್ ಟ್ಯಾಂಕ್ ಹೆದ್ದಾರಿಗೆ ಕಳಚಿ ಬಿದ್ದಿದ್ದು, ತತ್ ಕ್ಷಣ ಬಸ್ ಸಂಚಾರ ಸ್ಥಗಿತಗೊಂಡಿದೆ.ಈ ನಡುವೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬದಲಿ ಬಸ್ಸಿನ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಯಿತು. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಈ ಘಟನೆ ಸಂಭವಿಸಿದ ಎಂದು ಸಾರ್ವಜನಿಕರು ದೂರಿದ್ದಾರೆ.
LATEST NEWS
ಸೈಬರ್ ಕ್ರೈಮ್ ಅಪರಾಧ; ವಾಟ್ಸಪ್ ಗೆ ಅಗ್ರಸ್ಥಾನ !
Published
30 minutes agoon
02/01/2025By
NEWS DESK3ಮಂಗಳೂರು/ನವದೆಹಲಿ : ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಸೈಬರ್ ಅಥವಾ ಮೊಬೈಲ್ ಸಂಬಂಧಿತ ಅಪರಾಧಗಳು ಜಾಸ್ತಿಯಾಗಿವೆ. ಇದಕ್ಕೆ ಸಾಮಾಜಿಕ ಮಾಧ್ಯಮ ಹೊರತಾಗಿಲ್ಲ,
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ವರದಿ ಬಿಡುಗಡೆ ಮಾಡಿದ್ದು, ಸೈಬರ್ ಕ್ರೈಮ್ ಅಪರಾಧಗಳಲ್ಲಿ ಸೈಬರ್ ಕ್ರಿಮಿನಲ್ ಗಳು ದುರುಪಯೋಗಪಡಿಸಿಕೊಂಡ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ವಾಟ್ಸಾಪ್ ಅಗ್ರಸ್ಥಾನದಲ್ಲಿದೆ. ನಂತರ ಟೆಲಿಗ್ರಾಮ್ ಮತ್ತು ಇನ್ ಸ್ಟಾಗ್ರಾಮ್ ಸೈಬರ್ ವಂಚಕರ ನೆಚ್ಚಿನ ಬೇಟೆಯಾಡುವ ವೇದಿಕೆಗಳಾಗಿವೆ.
ದಾಖಲಾದ ಒಟ್ಟು ಪ್ರಕರಣಗಳು
2024ರ ಸಾಲಿನ ಮೊದಲ ಮೂರು ತಿಂಗಳಲ್ಲಿ, ವಾಟ್ಸಾಪ್ ಮೂಲಕ ಒಟ್ಟು 43,797 ಸೈಬರ್ ವಂಚನೆಗಳ ದೂರುಗಳನ್ನು ಸ್ವೀಕರಿಸಲಾಗಿದೆ. ಟೆಲಿಗ್ರಾಮ್ ಮೂಲಕ ಒಟ್ಟು 22,680 ಮತ್ತು ಇನ್ ಸ್ಟಾಗ್ರಾಮ್ ವಿರುದ್ದ 19,800 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವರದಿಯಲ್ಲಿ ಹೇಳಿದೆ.
ಸೈಬರ್ ವಂಚಕರಿಗೆ ಸೈಬರ್ ಅಪರಾಧಗಳನ್ನು ಮಾಡಲು ಗೂಗಲ್ ಪ್ಲಾಟ್ ಫಾರ್ಮ್ ಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಗೂಗಲ್ ಜಾಹೀರಾತುಗಳು ಅನುಕೂಲಕರವಾಗಿದೆ ಎಂದು 2023-24ರ ವಾರ್ಷಿಕ ವರದಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಸೈಬರ್ ವಂಚನೆಗೆ ಬಲಿಯಾಗುತ್ತಿರುವವರು ಯಾರು ?
ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ನಗದುರಹಿತ ವಹಿವಾಟು ಪ್ರಾರಂಭವಾದ ನಂತರ ಈ ಅಪರಾಧಗಳು ಇನ್ನಷ್ಟು ಜಾಸ್ತಿಯಾಗಿವೆ. ಇದಕ್ಕೆ ನಿರುದ್ಯೋಗಿ ಯುವಕರು, ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಬಡವರನ್ನು ಗುರಿಯಾಗಿಸಿಕೊಂಡು ದೊಡ್ಡ ದೊಡ್ಡ ಮೊತ್ತವನ್ನು ಕಳೆದುಕೊಳ್ಳುತ್ತಿದ್ದಾರೆ.
ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (14C) ಡಿಜಿಟಲ್ ಅಕ್ರಮ ಸಾಲಗಳ ಅಪ್ಲಿಕೇಶನ್ ಗಳನ್ನು ತೆರೆಯುವುದರಿಂದ, ವೈಯಕ್ತಿಕ ಮಾಹಿತಿ ಅಥವಾ ವ್ಯವಹಾರಿಕ ವಿಷಯಗಳು ಸೈಬರ್ ವಂಚಕರ ಕೈ ಸೇರುತ್ತಿದೆ. ಇನ್ನೊಂದೆಡೆ ಬ್ಯಾಂಕಿಂಗ್ ಮಾಲ್ ವೇರ್ ಗಳು (Hashes) ಮೂಲಕ ಗೂಗಲ್ ನ ಉಚಿತ ಹೋಸ್ಟಿಂಗ್ ಗಳ (Firebase Domain) ದುರುಪಯೋಗದಂತಹ ಪೂರ್ವಭಾವಿ ಕ್ರಿಯೆಗಳಿಗೆ ಕೆಲವು ಗೌಪ್ಯ ಮತ್ತು ಗುಪ್ತಚರ ಮಾಹಿತಿಗಳನ್ನು ಇತರರ ನಡುವೆ ಹಂಚಿಕೊಳ್ಳಲು ಗೂಗಲ್ ಮತ್ತು ಫೆಸ್ಬುಕ್ ಪಾಲುದಾರಿಕೆ ಹೊಂದಿದೆ.
ಭಾರತದಲ್ಲಿ ಅಕ್ರಮ ಸಾಲ ನೀಡುವ ಅಪ್ಲಿಕೇಶನ್ ಗಳನ್ನು ಪ್ರಾರಂಭಿಸಲು ಸೈಬರ್ ವಂಚಕರ ಜಾಲ ಅನುಕೂಲಕರ ಫೇಸ್ ಬುಕ್ ಜಾಹೀರಾತುಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಅಂತಹ ಲಿಂಕ್ ಗಳನ್ನು ಮೊದಲೇ ಗುರುತಿಸಿ, ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರ ಜೊತೆಗೆ ಫೇಸ್ ಬುಕ್ ಅಪ್ಲಿಕೇಶನ್ ನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಕೈಗೊಳ್ಳಬೇಕಾದ ಕ್ರಮಗಳು
ಒಮ್ಮೆ ನೀವು ಸೈಬರ್ ವಂಚನೆಗೆ ಬಲಿಯಾಗಿದ್ದೀರಿ ಎಂದು ಅರಿತುಕೊಂಡರೆ, ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಸೊರಿಕೆಯಾಗಿದೆ ಎಂದು ಅವರಿಗೆ ತಿಳಿಸಿ.
LATEST NEWS
ಭೋಪಾಲ್ ಅನಿಲ ದುರಂ*ತ : 40 ವರ್ಷಗಳ ಬಳಿಕ ತ್ಯಾಜ್ಯ ವಿಲೇವಾರಿ
ಕ್ಷಣಾರ್ಧದಲ್ಲಿ ಲಕ್ಷಾಧಿಪತಿಗಳಾದ ಗಣಿ ಕಾರ್ಮಿಕರು..!
ಕೇಂದ್ರ ಸರ್ಕಾರದಿಂದ ಖೇಲ್ ರತ್ನ ಪ್ರಶಸ್ತಿ ಘೋಷಣೆ ; ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಅತ್ಯುನ್ನತ ಗೌರವ
ಕರಾವಳಿ ಉತ್ಸವದ ಅಂಗವಾಗಿ ಸಿನೆಮಾ ಹಬ್ಬ; ಫಿಲ್ಮ್ ಫೆಸ್ಟಿವಲ್ ಉದ್ಘಾಟಿಸಿದ ಹಿನ್ನಲೆ ಗಾಯಕ ಗುರುಕಿರಣ್
ನೀರಿನ ದರ ಏರಿಕೆ ಬಹುತೇಕ ಫಿಕ್ಸ್ : ಜ.2ನೇ ವಾರ ದರ ಏರಿಕೆ ಸಾಧ್ಯತೆ!
ಇನ್ಮುಂದೆ ನಾನು ಮಹಿಳೆಯರನ್ನು ನೋಡುವುದೇ ಇಲ್ಲ; ಹೊಸ ವರ್ಷಕ್ಕೆ ಖ್ಯಾತ ಡೈರೆಕ್ಟರ್ ಟ್ವೀಟ್ ವೈರಲ್ !
Trending
- DAKSHINA KANNADA6 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- DAKSHINA KANNADA23 hours ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- BIG BOSS5 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA5 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!