ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ನ ವಸ್ತ್ರ ಸಂಹಿತೆ ಬೋರ್ಡ್ ಗೆ ಕಿಡಿ ಕಾರಿದ ತೃಪ್ತಿ ದೇಸಾಯಿ
ಪುಣೆ: ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ವಿವಾದ ಸೃಷ್ಟಿಸಿದ್ದ ತೃಪ್ತಿ ದೇಸಾಯಿ ಇದೀಗ ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಬೋರ್ಡ್ ಹಾಕಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರಡಿ ದೇವಾಲಯ ಇಂತಹ ಬೋರ್ಡ್ ಹಾಕುವ ಮೂಲಕ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೂಜಾರಿಗಳು ತುಂಡುಡುಗೆಯಲ್ಲಿರುತ್ತಾರೆ ಅವರಿಗಿಲ್ಲದ ವಸ್ತ್ರ ಸಂಹಿತೆ ಭಕ್ತರಿಗೇಕೆ ಎಂದು ಪ್ರಶ್ನಿಸಿದ್ದಾರೆ.
ಶಿರಡಿ ದೇವಾಲಯ ಇಂತಹ ಬೋರ್ಡ್ ಗಳನ್ನು ಹಾಕುವ ಮೂಲಕ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ತೃಪ್ತಿ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ವಿಡಿಯೋ ಸಂದೇಶ ರವಾನಿಸಿರುವ ಅವರು. ಶಿರಡಿ ದೇವಾಲಯದಲ್ಲಿ ಸುಸಂಸ್ಕೃತ ರೀತಿಯಲ್ಲಿ ಉಡುಗೆ ಧರಿಸಿ ಬರಬೇಕೆಂದು ಫಲಕಗಳನ್ನು ಹಾಕಲಾಗಿದೆ, ದೇವಾಲಯ ಟ್ರಸ್ಟ್ ಈ ಫಲಕಗಳನ್ನು ತೆಗೆಯದಿದ್ದರೇ ನಾವೇ ಶಿರಡಿಗೆ ಹೋಗಿ ಫಲಕಗಳನ್ನು ತೆಗೆದು ಹಾಕುವುದಾಗಿ ಎಚ್ಚರಿಸಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಸಿಇಓ, ಇದೊಂದು ಮನವಿ ಅಷ್ಟೇ, ದೇವಾಲಯಕ್ಕೆ ಬರುವವರಿಗೆ ಯಾವುದೇ ವಸ್ತ್ರ ಸಂಹಿತೆ ನಿಗದಿ ಪಡಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಅವನಿಗಿಷ್ಟವಾದ ವಸ್ತ್ರ ಧರಿಸುವ ಹಕ್ಕು ನೀಡಿದೆ ಎಂದು ತೃಪ್ತಿ ದೇಸಾಯಿ ತಿಳಿಸಿದ್ದಾರೆ.