FILM
ಪುಷ್ಪರಾಜ್‌ಗೆ ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ನಟ
Published
3 hours agoon
By
NEWS DESK4ಮಂಗಳೂರು/ಹೈದರಾಬಾದ್ : ಅತ್ತ ಪುಷ್ಪ 2 ದೇಶದಾದ್ಯಂತ ಕಮಾಲ್ ಮಾಡುತ್ತಿದ್ದರೆ, ಇತ್ತ ಅಲ್ಲು ಅರ್ಜುನ್‌ಗೆ ಸಂಕಷ್ಟ ಎದುರಾಗಿದೆ. ಇದೀಗ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪುಷ್ಪ 2 ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ನಡೆದ ಸಾ*ವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈದರಾಬಾದ್‌ನಲ್ಲಿ ಡಿ.4 ರಂದು ಪುಷ್ಪ 2 ಪ್ರೀಮಿಯರ್ ಶೋ ವೇಳೆ 35 ವರ್ಷದ ಮಹಿಳೆ ಸಾ*ವನ್ನಪ್ಪಿದ್ದು, ಆಕೆಯ 8 ವರ್ಷದ ಮಗ ಗಾ*ಯಗೊಂಡಿದ್ದ. ಈ ಬಗ್ಗೆ ಮಹಿಳೆಯ ಕುಟುಂಬ ಸದಸ್ಯರು ಡಿ.5 ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಅಲ್ಲು ಅರ್ಜುನ್ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿ, ಅರ್ಜಿಯ ವಿಲೇವಾರಿಗೆ ಬಾಕಿ ಉಳಿದಿರುವ ಪ್ರಕ್ರಿಯೆ ಮತ್ತು ಬಂಧನಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್ ಮೃ*ತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಇದನ್ನೂ ಓದಿ : ಅಯ್ಯಪ್ಪ ಸ್ವಾಮಿ ಮಹಿಮೆ ; ಮಾಲೆ ಹಾಕುತ್ತಿದ್ದಂತೆ ಮಾತನಾಡೇ ಬಿಟ್ಟ ಮೂಕ
ಸದ್ಯ ಪುಷ್ಪ 2 ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಹಿಂದೆ ಬಿದ್ದಿಲ್ಲ. ಸಾವಿರ ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಚಿತ್ರದಲ್ಲಿದ್ದಾರೆ.
BIG BOSS
ಆಟಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಸಣ್ಣ ಮಕ್ಕಳಂತೆ ಕಣ್ಣೀರು ಹಾಕಿದ ಚೈತ್ರಾ !
Published
1 hour agoon
12/12/2024By
NEWS DESK3ಮಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ಜೋರಾಗಿದೆ. ಹನುಮಂತ ಹಾಗೂ ಗೌತಮಿ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ನಾಯಕನ ಆಯ್ಕೆಯ ಪ್ರಕ್ರಿಯೆಗಳು ಜಾರಿಯಲ್ಲಿವೆ.
ಈ ಮಧ್ಯೆ ಚೈತ್ರಾ ಕುಂದಾಪುರ ಅವರಿಗೆ ಇತ್ತೀಚೆಗೆ ಆಟ ಆಡೋಕೆ ಅವಕಾಶ ಸಿಗುತ್ತಿರಲಿಲ್ಲ. ಅವರನ್ನು ಕೇವಲ ಉಸ್ತುವಾರಿಗೆ ಸೀಮಿತ ಮಾಡಲಾಗುತ್ತಿತ್ತು. ಈ ವಾರವು ಅದು ಮುಂದುವರಿದಿದೆ. ಈ ಮಧ್ಯೆ ಅವಕಾಶಕ್ಕಾಗಿ ಚೈತ್ರಾ ಸಣ್ಣ ಮಕ್ಕಳಂತೆ ಕಣ್ಣಿರು ಇಟ್ಟಿದ್ದಾರೆ.
ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌತಮಿ ತಂಡದ ಪರ ಚೈತ್ರಾ ಹಾಗೂ ಮಂಜು ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್ ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಹೀಗಾಗಿ ಕ್ಯಾಪ್ಟನ್ ಗೌತಮಿ ತಂಡದಲ್ಲಿರುವ ಚೈತ್ರಾ ಕುಂದಾಪುರಗೆ ಆಡಲು ಅವಕಾಶ ಸಿಗುತ್ತಿಲ್ಲ ಎಂಬುದು ಆರೋಪವಾಗಿದೆ.
ಇದನ್ನೂ ಓದಿ: ಇಂದಿಗೂ ಅಚ್ಚಳಿಯದೇ ಉಳಿದಿದೆ ವಿನೋದ್ ಕಾಂಬ್ಳಿಯವರ ಈ ದಾಖಲೆ !
ಇದಕ್ಕೆ ಬೆಸರಗೊಂಡ ಚೈತ್ರಾ, ನನಗೆ ಆಡೊಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತಿನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡೊಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ.
ಆದರೆ ನಂತರ ನಡೆದ ಟಾಸ್ಕ್ ನಲ್ಲೂ ಮತ್ತೆ ಗೌತಮಿ ತಂಡ ಸೋಲನ್ನು ಕಂಡಿದೆ. ಹೀಗಾಗಿ ಬಿಗ್ ಬಾಸ್, ನಿಮ್ಮ ತಂಡದಿಂದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್ ನಿಂದ ಹೊರಗೆ ಇಡಬೇಕು ಎನ್ನುತ್ತಾರೆ. ಆಗ ಗೌತಮಿ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಚೈತ್ರಾ ಅವರಿಗೆ ಮತ್ತಷ್ಟು ನೋವು ಉಂಟುಮಾಡಿದೆ.
ಹೀಗಾಗಿ ಇಂದಿನ ಸಂಚಿಕೆಯಲ್ಲಿ ಯಾವ ರೀತಿಯ ಹೈಡ್ರಾಮಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
FILM
ಯುಎಇಯಲ್ಲಿ ಹೊಸ ದಾಖಲೆ ಬರೆದ ತುಳು ಚಿತ್ರ “ಮಿಡ್ಲ್ ಕ್ಲಾಸ್ ಫ್ಯಾಮಿಲಿ”
Published
4 hours agoon
12/12/2024By
NEWS DESK4ಮಂಗಳೂರು : ಯುವ ನಟ, ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿ, ವಿನೀತ್ ಕುಮಾರ್ ನಾಯಕ ನಟನಾಗಿ ನಟಿಸಿರುವ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಯುಎಇ ರಾಷ್ಟ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ದುಬೈಯಲ್ಲಿ ಜರುಗಿತು.
ಡಿಸೆಂಬರ್ 8 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಆತ್ಮನಂದ ರೈ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಿನೇಶ್ ಶೆಟ್ಟಿ ಕೊಟ್ಟಿಂಜ, ಸುಧಾಕರ ರಾವ್ ಪೇಜಾವರ, ಉದ್ಯಮಿಗಳಾದ ಡಾ. ಬು.ಅಬ್ದುಲ್ಲ, ಗುಣಶೀಲ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ, ಡಾ. ರಶ್ಮಿ ನಂದ ಕಿಶೋರ್, ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಹಾಗೂ ಚಿತ್ರ ತಂಡದ ನಿರ್ಮಾಪಕರು, ಸಹ ನಿರ್ಮಾಪಕರು, ಚಿತ್ರದ ನಟ ನಟಿಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು.
ಚಿತ್ರದ ಫ್ಯಾಮಿಲಿ ವೀಡಿಯೋ ಹಾಡನ್ನು ಅಬುಧಾಬಿಯ ಉದ್ಯಮಿ ಸುಂದರ ಶೆಟ್ಟಿ ಬಿಡುಗಡೆಗೊಳಿಸಿದರು. ಕರ್ನಾಟಕ ಸಂಘ ರಾಸ್ ಅಲ್ ಕೈಮಾದ ಅಧ್ಯಕ್ಷ ಸಂತೋಷ್ ಹೆಗ್ಡೆ, ಸಂಘಟಕ ನೋಯಲ್ ಅಲ್ಮೇಡಾ, ಶಾನ್ ಪೂಜಾರಿ, ದೇವಿ ಪ್ರಸಾದ್ ಶೆಟ್ಟಿ, ಪಟ್ಲ ಫೌಂಡೇಷನ್ ಯುಎಇಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು, ವಸಂತ್ ಶೆಟ್ಟಿ, ಪತ್ರಕರ್ತ ರೋನ್ಸ್ ಬಂಟ್ವಾಳ, ವರದರಾಜ್ ಶೆಟ್ಟಿಗಾರ್, ರಾಜೇಶ್ ಕುತ್ತಾರ್, ಪ್ರಕಾಶ್ ಪಕ್ಕಳ, ದೀಪಕ್ ಪಾಲಡ್ಕ ಉಪಸ್ಥಿತರಿದ್ದರು. ಚಿತ್ರದ ವೀಡಿಯೋ ಹಾಡನ್ನು ನೋಡಿದ ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದರು.
ದಾಖಲೆ ಬರೆದ ತುಳು ಚಿತ್ರ :
ಚಿತ್ರದ ಪ್ರೀಮಿಯರ್ ಪ್ರದರ್ಶನದ ಪಾಸ್ ಗಳನ್ನು ಯುಎಇಯ ಚಿತ್ರದ ಪ್ರಾಯೋಜಕರಾದ ಮೋನಿಷಾ ಶರತ್ ಶೆಟ್ಟಿ, ಹರೀಶ್ ಬಂಗೆರ, ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್, ದೀಪಕ್ ಕುಮಾರ್ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.ವಿಶೇಷವೆಂದರೆ ಈ ಚಿತ್ರವು ಬಿಡುಗಡೆಯ ಮೊದಲೇ ಯುಎಇ ಯಲ್ಲಿ 30 ಲಕ್ಷಗಳ ಗಳಿಕೆಯನ್ನು ಯುಎಇ ಚಿತ್ರ ಪ್ರಸ್ತುತಿ ಪ್ರಾಯೋಜಕರ ಮೂಲಕ ಗಳಿಸಿದ್ದು ತುಳು ಚಿತ್ರರಂಗದಲ್ಲಿ ನೂತನ ದಾಖಲೆ ಬರೆದಿದ್ದು , ಟಿಕೆಟ್ ಬಿಡುಗಡೆಯ ದಿನವೇ 1500ಕ್ಕೂ ಹೆಚ್ಚಿನ ಟಿಕೆಟ್ ಮಾರಾಟದೊಂದಿಗೆ ದಾಖಲೆಯ ಪುಟ ಸೇರಿಕೊಂಡಿದೆ.
ನಾಯಕ ನಟ ವಿನೀತ್ ಕುಮಾರ್ ಮಾತನಾಡುತ್ತಾ ಹಿರಿಯವರ ಆರ್ಶಿವಾದೊಂದಿಗೆ ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶನ ಮಾಡಿ ತುಳುನಾಡಿನ ಜನರಿಗೆ ನೀಡಲಿದ್ದೇವೆ .ಒಳ್ಳೆಯ ಚಿತ್ರವನ್ನು ತುಳುವರು ಕೈ ಬಿಡಲ್ಲ ಎಂಬ ಧೈರ್ಯದಿಂದ ಈ ಚಿತ್ರವನ್ನು ಜನವರಿ 18, 19 ರಂದು ಯುಎಇಯ ತುಳುವರಿಗೆ ನೀಡಲಿದ್ದೆವೆ. ಎಲ್ಲರೂ ಚಿತ್ರವನ್ನು ನೋಡಿ ಈ ಚಿತ್ರವನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ವಿನೀತ್ ಕುಮಾರ್ ನಾಯಕ ನಟನಾಗಿ ಮತ್ತು ಸಮತಾ ಅಮೀನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್,ಬೋಜರಾಜ ವಾಮಂಜೂರು,ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ,ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತಾಯ್ನಾಡಿನಿಂದ ಆಗಮಿಸಿದ ಚಿತ್ರದ ನಾಯಕ ವಿನೀತ್ ಕುಮಾರ್, ನಾಯಕಿ ಸಮತಾ ಅಮೀನ್, ನಿರ್ದೇಶಕ ರಾಹುಲ್ ಅಮೀನ್, ನಿರ್ಮಾಪಕ ಆನಂದ ಕುಂಪಲ, ಸಹ ನಿರ್ಮಾಪಕ ನಿತೀನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಕಲಾ ನಿರ್ದೇಶಕ ಪವನ್ ಕುಮಾರ್ ಹಾಗೂ ಚಿತ್ರದ ಸಹ ನಿರ್ಮಾಪಕ, ಯುಎಇಯ ಮಿತ್ರಂಪಾಡಿ ಜಯರಾಮ ರೈ,ಸ್ವಸ್ತಿಕ್ ಆಚಾರ್ಯ ಯುಎಇಯಲ್ಲಿ ಇರುವ ಎಲ್ಲಾ ತುಳುವರು ಈ ಚಿತ್ರವನ್ನು ನೋಡಿ ಚಿತ್ರದ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಯುಎಇಯ ಹೆಸರಾಂತ ನಾಟಕ ತಂಡ ಗಮ್ಮತ್ ಕಲಾವಿದೆರ್ ಯುಎಇಯ ಪ್ರಬುಧ್ಧ ಕಲಾವಿದರೂ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದು, ಚಿದಾನಂದ ಪೂಜಾರಿ ವಾಮಂಜೂರು, ಗಿರೀಶ್ ನಾರಾಯಣ್, ಆಶಾ ಕೊರೆಯ, ಡೊನಿ ಕೊರೆಯ,ದೀಪ್ತಿ ದಿನ್ ರಾಜ್, ಕಿರಣ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮನರಂಜನೆಯ ಕಾರ್ಯಕ್ರಮದ ಅಂಗವಾಗಿ ನೃತ್ಯ ಕಾರ್ಯಕ್ರಮ ಮತ್ತು ಯುಎಇಯ ಪ್ರಸಿದ್ಧ ಗಾಯಕ ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು. ನಟ ವಿನೀತ್ ಕುಮಾರ್, ಗಿರೀಶ್ ನಾರಾಯಣ್ ಮತ್ತು ಸ್ವಸ್ತಿಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಹುಲ್ ಅಮೀನ್ ವಂದಿಸಿದರು.
ಇದನ್ನೂ ಓದಿ : ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರರಂಗದ ಪ್ರಬುದ್ಧ ಕಲಾವಿದರು ಅಭಿನಯಿಸಿದ ಈ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನವು ಯುಎಇಯ ಅಬುಧಾಬಿ, ದುಬೈ, ಶಾರ್ಜಾದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಕರಾವಳಿಯ ಪ್ರಬುದ್ಧ ಚಿತ್ರ ನಟರನ್ನೊಳಗೊಂಡ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರದಲ್ಲಿ ಕಥೆ ನಿರೀಕ್ಷೆ ಮೂಡಿಸಿ ಕಲಾ ರಸಿಕರನ್ನು ಕಾತರದಿಂದ ಕಾಯುವಂತಾಗಿಸಿದೆ ಎಂದು ಯು.ಎ.ಇ ಯಲ್ಲಿ ಚಿತ್ರ ಬಿಡುಗಡೆಯ ಜವಾಬ್ದಾರಿಯನ್ನು ಹೊತ್ತಿರುವ OMG ದುಬೈ ಸಂಸ್ಥೆ ಮತ್ತು ಸಂಘಟಕರಾದ ಸ್ವಸ್ತಿಕ್ ಆಚಾರ್ಯ ತಿಳಿಸಿದ್ದಾರೆ.
DAKSHINA KANNADA
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
Published
23 hours agoon
11/12/2024ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.
ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್ ಶೆಟ್ಟಿ ಮೊದಲಾದವರಿದ್ದರು.
LATEST NEWS
ಡಿ.13 ರಂದು ತೆರೆಗೆ ಅಪ್ಪಳಿಸಲಿದೆ ತುಳು ಚಿತ್ರ ‘ದಸ್ಕತ್’
ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಆರ್.ನಾರಾಯಣ್ ವಿ*ಧಿವಶ
ಇಂದಿಗೂ ಅಚ್ಚಳಿಯದೇ ಉಳಿದಿದೆ ವಿನೋದ್ ಕಾಂಬ್ಳಿಯವರ ಈ ದಾಖಲೆ !
ಪುಷ್ಪರಾಜ್‌ಗೆ ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ನಟ
ವಾರದ ಹಿಂದೆ ಜನಿಸಿದ್ದ ಹೆಣ್ಣು ಮಗುವನ್ನು ನದಿಗೆ ಎ*ಸೆದ ಹೆತ್ತಮ್ಮ !!
ಅಯ್ಯಪ್ಪ ಸ್ವಾಮಿ ಮಹಿಮೆ ; ಮಾಲೆ ಹಾಕುತ್ತಿದ್ದಂತೆ ಮಾತನಾಡೇ ಬಿಟ್ಟ ಮೂಕ
Trending
- BIG BOSS4 days ago
ಚೈತ್ರಾ ಕಣ್ಣೀರು, ಐಶ್ವರ್ಯ ಆಕ್ಟಿವಿಟಿ ರೂಮ್….ಎಲಿಮಿನೆಟ್ ಆಗಿದ್ದು ?
- BIG BOSS5 days ago
BBK11: ಈ ವಾರ ಬಿಗ್ಬಾಸ್ ಮನೆಯಲ್ಲಿ ಕಾದಿದ್ಯಾ ಬಿಗ್ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್
- BIG BOSS5 days ago
ಬಿಗ್ಬಾಸ್ ನಿರ್ಧಾರಗಳಿಗೆ ರೆಸ್ಪೆಕ್ಟೇ ಇಲ್ಲ -ಇಬ್ಬರು ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್
- BANTWAL6 days ago
ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ