LATEST NEWS
ಕಾರ್ಕಳ: ಶ*ವ ಸಂಸ್ಕಾರದ ವೇಳೆ ಉರುಳಿ ಬಿದ್ದ ಮರ
ಕಾರ್ಕಳ ಪುರಸಭಾ ಆಡಳಿತ ಅಧೀನಕ್ಕೊಳಪಟ್ಟ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶ*ವ ಸಂಸ್ಕಾರದ ವೇಳೆ ಮರವೊಂದು ಉರುಳಿಬಿದ್ದ ಘಟನೆ ಸಂಭವಿಸಿದೆ.
ರುದ್ರಭೂಮಿಯಲ್ಲಿ ರೆಂಜಾಳ ಮತ್ತು ಸಾಣೂರು ಗ್ರಾಮದ ವ್ಯಕ್ತಿಗಳ ಮೃ*ತದೇಹಗಳನ್ನು ದಹಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ರುಧ್ರಭೂಮಿಯ ಮೇಲ್ಛಾವಣಿಗೆ ಬಿದ್ದಿದೆ. ಪರಿಣಾಮವಾಗಿ ಅಂದಾಜು ಸುಮಾರು 50 ಸಾವಿರ ನಷ್ಟ ಆಗಿರುತ್ತದೆ.
ರುಧ್ರಭೂಮಿಯಲ್ಲಿ ಕೆಲಸ ಮಾಡುವ ಪ್ರಕಾಶ್ ರಾವ್, ಗೋವಿಂದ ರಾವ್, ಮಹೇಶ್ ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.
LATEST NEWS
ಗೊಂಬೆ ಮನೆಗೆ ಆಗಮಿಸಿದ ಲಕ್ಷ್ಮೀ ; ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ
ಬೆಂಗಳುರು: ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ಮನೆಗೆ ಮುದ್ದಾದ ಗೊಂಬೆಯ ಆಗಮನವಾಗಿದೆ. ಧನತ್ರಯೋಶಿ ದಿನ ನೇಹಾ ಮನೆಗೆ ಲಕ್ಷ್ಮಿ ಬಂದಿದ್ದಾಳೆ. ನಟಿ ನೇಹಾ ರಾಮಕೃಷ್ಣ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ನೇಹಾ ಗೌಡ, ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಅಕ್ಟೋಬರ್ 29ರಂದು ನೇಹಾ ಗೌಡಗೆ ಹೆರಿಗೆಯಾಗಿದೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ. ತಂದೆ ಸ್ವಲ್ಪ ಭಾವುಕರಾಗಿದ್ದಾರೆ ಎಂಬ ಶೀರ್ಷಿಕೆ ಹಾಕಿ, ಖುಷಿ ಸುದ್ದಿಯನ್ನು ನೇಹಾ ಹಾಗೂ ಚಂದನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೇಹಾ ರಾಮಕೃಷ್ಣನ್ ಗೆ ಹೆಣ್ಣು ಮಗು ಎನ್ನುವ ವಿಷ್ಯ ತಿಳಿಯುತ್ತಿದ್ದಂತೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಶುಭಾಶಯಗಳು ಹರಿದು ಬರ್ತಿವೆ. ಇನ್ಸ್ಟಾ ಖಾತೆಯಲ್ಲಿ ಶ್ವೇತಚಂಗಪ್ಪ ಸೇರಿದಂತೆ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ನೇಹಾ ಗೌಡ ಹಾಗೂ ಚಂದನ್ ಗೆ ಶುಭಕೋರಿದ್ದಾರೆ.
ನೇಹಾ ಗೌಡ ತಾವು ಗರ್ಭಿಣಿ ಎಂಬ ಖುಷಿ ವಿಷ್ಯವನ್ನು ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದರು. ಅಲ್ಲದೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರು. ಗರ್ಭಿಣಿಯಾಗಿದ್ದಾಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ನೇಹಾ ಗೌಡ, ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಶಾಕುಂತಲೆ ಫೋಟೋ ಶೂಟ್ ಹಾಗೂ ಕುದುರೆ ಬಳಿ ನಿಂತ ಡಿಫರೆಂಟ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು. ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ನೇಹಾ ಗೌಡಗೆ ಕಲರ್ಸ್ ಕನ್ನಡ ವೇದಿಕೆ ಮೇಲೆ ಸೀಮಂತ ನಡೆದಿತ್ತು. ಸ್ನೇಹಿತೆ ಅನುಪಮ ಗೌಡ ಮನೆ ಪ್ರವೇಶದಲ್ಲಿ ಮಿಂಚಿದ್ದ ನೇಹಾ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಗರ್ಭಾವಸ್ಥೆಯ ಸುಂದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ ಸೀರಿಯಲ್ ನಂತ್ರ ನೇಹಾ ಗೌಡ, ಬಿಗ್ ಬಾಸ್, ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗು, ತಮಿಳು ಧಾರಾವಾಹಿಯಲ್ಲೂ ನಟಿಸಿದ್ದಾರೆ. ರಾಜಾ ರಾಣಿ ಶೋ ವಿನ್ನರ್ ಆಗಿರುವ ನೇಹಾ ಸದ್ಯ ಯಾವುದೇ ಸೀರಿಯಲ್ ಒಪ್ಪಿಕೊಂಡಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್ ಮದುವೆಯಾಗಿದ್ದ ನೇಹಾ, ಪತಿಯನ್ನು ನಟನೆಗೆ ಕರೆ ತಂದಿದ್ದಾರೆ. ರಾಜಾ ರಾಣಿಗಾಗಿ ಆಸ್ಟ್ರೇಲಿಯಾದ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಸೇರಿದ್ದ ಚಂದನ್, ನಂತರ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು. ಜೊತೆಗೆ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಸಹ ಗುರುತಿಸಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಗೆ ಈ ವರ್ಷ ಅನೇಕ ಸ್ಟಾರ್ ಕಿಡ್ಸ್ ಆಗಮನವಾಗಿದೆ. ಚಿನ್ನು – ಚಂದನ್ ಗಂಡು ಮಗುವಿನ ಪಾಲಕರಾದ್ರೆ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಹೆಣ್ಣು ಮಗುವಿಗೆ ಪಾಲಕರಾಗಿದ್ದಾರೆ. ಹರ್ಷಿಕಾ ಪೊಣಚ್ಚ ಹಾಗೂ ಭುವನ್ ಪೊನ್ನಣ್ಣ ಕೂಡ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
FILM
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ: 2 ಕೋಟಿ ರೂ.ಗೆ ಬೇಡಿಕೆ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದೆ. ಜೊತೆಗೆ ಆ ವ್ಯಕ್ತಿಯು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ.
ಮೇಲಿಂದ ಮೇಲೆ ನಟ ಸಲ್ಮಾನ್ ಖಾನ್ ಜೀವ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ತಾವು ಕೇಳಿದಷ್ಟು ಹಣ ನೀಡದೆ ಇದ್ದರೆ ಹತ್ಯೆ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಎನ್‌ಸಿಪಿ ಶಾಸಕ ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಹಾಗೂ ನಟ ಸಲ್ಮಾನ್ ಖಾನ್ ಇಬ್ಬರಿಗೂ ಜೀವ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಬೆದರಿಕೆಯೊಡ್ಡಿದ ಆರೋಪಿಯನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದರು.
DAKSHINA KANNADA
ಕಂಬಳ ಯಜಮಾನ ಇ*ನ್ನಿಲ್ಲ; ಸುಧಾಕರ್ ಆಳ್ವ ವಿ*ಧಿವಶ !
ಮಂಗಳೂರು: ಯುವ ಉದ್ಯಮಿ, ಮೋರ್ಲ ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕಂಬಳಕೋಡಿ (45) ಅವರು ಆಕಸ್ಮಿಕವಾಗಿ ತಮ್ಮ ಮನೆಯ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಮೃ*ತಪಟ್ಟಿದ್ದಾರೆ.
ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸುಧಾಕರ ಆಳ್ವ ಅವರು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ನಾ*ಪತ್ತೆಯಾಗಿದ್ದು ಮನೆ ಮಂದಿ ಹಾಗೂ ಸ್ಥಳೀಯರು ಸುತ್ತ ಮುತ್ತ ಹುಡುಕಾಟ ನಡೆಸಿದ್ದು ಮನೆಯ ಪಕ್ಕದ ಕೆರೆಯ ಬದಿಯಲ್ಲಿ ಮೃ*ತದೇಹ ಕಂಡು ಬಂದಿದೆ.
ಪಂಪ್ ಸ್ವಿಚ್ ಹಾಕಲು ಬಂದಾಗ ಕಾಲು ಜಾರಿ ಬಿದ್ದು ಮೃ*ತಪಟ್ಟಿರುವುದಾಗಿ ತಿಳಿದು ಬಂದಿದೆ.
ಬೇಕರಿ ತಿಂಡಿ-ತಿನಿಸುಗಳ ತಯಾರಕರಾಗಿ, ಯುವ ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ಸುಧಾಕರ ಆಳ್ವರು ಮಂಗಳವಾರ ತೋಟಕ್ಕೆ ನೀರು ಹಾಯಿಸಲು ಹಾಕಿದ್ದ ಮೋಟಾರ್ ಪಂಪ್ ಅನ್ನು ಬಂದ್ ಮಾಡಲು ಕೆರೆ ಬಳಿ ತೆರಳಿದ್ದರು. ಮನೆಮಂದಿ ಚಹಾ ಕುಡಿಯಲು ಅವರನ್ನು ಕರೆಯಲು ಕೆರೆ ಬಳಿ ತೆರಳಿದಾಗ ಅವರ ಕೈಯಲ್ಲಿದ್ದ ಕೃಷಿಗೆ ಸಂಬಂಧಿ ಪರಿಕರಗಳು ಕೆರೆ ಪಕ್ಕದಲ್ಲಿ ಬಿದ್ದಿದ್ದು, ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದು ಕಂಡುಬಂದಿದೆ. ಅಕ್ಕ-ಪಕ್ಕ ಹುಡುಕಾಟ ನಡೆಸಿದರೂ, ಅವರ ಪ*ತ್ತೆಯಾಗಿರಲಿಲ್ಲ.
ಕೊನೆಗೆ ಕೆರೆಗೆ ಬಿದ್ದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧನೆ ನಡೆಸಿದಾಗ ಮೃ*ತದೇಹ ಪ*ತ್ತೆಯಾಗಿದೆ.
- BIG BOSS4 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- BIG BOSS7 days ago
ಕಲರ್ಸ್ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್ಗೆ ಗುಡ್ ನ್ಯೂಸ್
- LATEST NEWS3 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- FILM7 days ago
ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್