Connect with us

LATEST NEWS

ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನಡೆದ ಮಹಾದುರಂತ; 20ಕ್ಕೂ ಅಧಿಕ ರೋಗಿಗಳ ದುರ್ಮರಣ;

Published

on

ಚಾಮರಾಜನಗರ: ಆಕ್ಸಿಜನ್ ಕೊರತೆ ಹಾಗೂ ಇತರ ಸಮಸ್ಯೆಗಳಿಂದ ಕಳೆದ 24 ಗಂಟೆಗಳಲ್ಲಿ 24 ಕೊರೋನಾ ಸೋಂಕಿತ ರೋಗಿಗಳು ಮೃತಪಟ್ಟಿರುವ ಘಟನೆ ಜಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಮೈಸೂರಿನಿಂದ ನಮಗೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆಯಾಗಲಿಲ್ಲ, ಇದರಿಂದ ರೋಗಿಗಳು ಮೃತಪಟ್ಟಿದ್ದಾರೆ. ಹಾಗೂ 18 ಮಂದಿಗೆ ಗಂಭೀರಸ್ಥರವಾದ ರೋಗಗಳು ಭಾಧಿಸಿತ್ತು. ಸುಮಾರು ದಿನಗಳಿಂದ ಇವರೆಲ್ಲಾ ಚಿಕಿತ್ಸೆಯನ್ನ ಪಡೀತಾ ಇದ್ರು. ಹಾಗೂ 23 ಜನ ವೆಂಟಿಲೇಟರ್ ನಲ್ಲೇ ಇದ್ದವರು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ತಿಳಿಸಿದ್ದಾರೆ.

ಕಳೆದ ರಾತ್ರಿ 16 ಮಂದಿ ರೋಗಿಗಳು ಮೃತಪಟ್ಟಿದ್ದರೆ ಇಂದು ನಸುಕಿನ ಜಾವ 4ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಆಕ್ಸಿಜನ್ ಇಲ್ಲದೆ ನರಳಾಡಿ ಪ್ರಾಣ ಕಳೆದುಕೊಂಡಿದ್ದಾರೆ.

ಆಕ್ಸಿಜನ್ ಸಿಲಿಂಡರ್ ಬರುವ ಹೊತ್ತಿಗೆ ರೋಗಿಗಳ ಪ್ರಾಣಪಕ್ಷಿ ಹಾರಿಹೋಗಿತ್ತು. ತಮ್ಮವರನ್ನು ಕಳೆದುಕೊಂಡ ಮನೆಯವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಇನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಚಾರದ ಕುರಿತಾಗಿ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಆಸ್ಪತ್ರೆಯಲ್ಲಿನ ಸಮಸ್ಯೆ, ಆಕ್ಸಿಜನ್ ಕೊರತೆ, ಬೆಡ್ ವ್ಯವಸ್ಥೆ, ಚಿಕಿತ್ಸೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈ ನಡುವೆ ತಮ್ಮದೇ ಉಸ್ತುವಾರಿ ಜಿಲ್ಲೆಯಲ್ಲಿ ದುರಂತ ಸಂಭವಿಸುತ್ತಿದ್ದರೂ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸದ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಸಿಎಂ ಗರಂ ಆಗಿದ್ದಾರೆ.

ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ “ಔಷಧಿಗಳ ಸಂಗ್ರಹ ಅಥವ ಆಕ್ಸಿಜನ್ ಸಂಗ್ರಹಗಳ ವಿಚಾರದಲ್ಲಿ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಇದು ಸರ್ಕಾರದ ನಿರ್ಲಕ್ಷ್ಯ .

ಇದರಿಂದಾಗಿ ಸರ್ಕಾರ ಜನತೆಯ ವಿಶ್ವಾಸ ಕಳೆದುಕೊಂಡಿದೆ.

LATEST NEWS

ಪಾಕ್ ನಿಂದ ಬಂದಿದ್ದ ಸೀಮಾ ಹೈದರ್ ಮೇಲೆ ಪತಿಯಿಂದ ಹ*ಲ್ಲೆ; ಸೀಮಾ ಹೇಳಿದ್ದೇನು?

Published

on

ನವದೆಹಲಿ : ಸೀಮಾ ಹೈದರ್ ಯಾರಿಗೆ ತಾನೇ ಗೊತ್ತಿಲ್ಲ. ದೂರದ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ಪ್ರೇಮಿಗಾಗಿ ಬಂದ ಮಹಿಳೆ. ಈ ವಿಚಾರ ದೇಶದಾದ್ಯಂತ ದೊಡ್ಡ ಮಟ್ಟಿನ ಸುದ್ದಿಯಾಗಿತ್ತು. ಆದರೆ, ಈಗ ಆಕೆಯ ಕುರಿತು ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು, ಯಾರ ಪ್ರೀತಿ ಅರಸಿ ಬಂದು ಆತನನ್ನು ವಿವಾಹವಾಗಿದ್ದಳೋ ಆತನೇ ಆಕೆಯ ಮೇಲೆ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬುದಾಗಿ.

ಆಕೆಯ ಪತಿ ಸಚಿನ್ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋದಲ್ಲಿ ಸೀಮಾ ಕಣ್ಣುಗಳು ಊದಿಕೊಂಡಿವೆ. ಆಕೆಯ ಬಲಭಾಗದ ಕಣ್ಣಿನ ಕೆಳಭಾಗ ಊದಿಕೊಂಡಿದೆ. ಹೆಪ್ಪುಗಟ್ಟಿದಂತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಪತಿಯಿಂದ ಸೀಮಾ ತೀವ್ರ ಹ*ಲ್ಲೆಗೆ ಒಳಗಾಗಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ
ಸೀಮಾ ಹೈದರ್ ಹೇಳಿದ್ದೇನು?

ಈ ವೈರಲ್ ವೀಡಿಯೋ ಬಗ್ಗೆ ಸ್ವತಃ ಸೀಮಾ ಹೈದರ್ ವೀಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪತಿ-ಪತ್ನಿ ಜೊತೆಯಾಗಿ ಕುಳಿತು ಈ ವೀಡಿಯೋ ಮಾಡಿದ್ದಾರೆ. ‘ಈ ವೀಡಿಯೋ ಫೇಕ್ ಆಗಿದೆ. ನನ್ನ ಹಾಗೂ ನನ್ನ ಪತಿಯನ್ನು ಹೀಗೆ ತೋರಿಸಲು ಯಾವ ಕೀಳುಮಟ್ಟಕ್ಕೂ ಇಳಿಯಬಲ್ಲರು. ನಮ್ಮ ಪ್ರೇಮವನ್ನು ಬಲಹೀನಗೊಳಿಸಲು ಹೀಗೆ ಮಾಡಲಾಗಿದೆ. ನಿಮಗೆ ಗೊತ್ತಿರುವಂತೆ ದಯವಿಟ್ಟು ಇಂತಹ ಫೇಕ್ ವೀಡಿಯೋಗಳಿಂದ ಎಚ್ಚರವಾಗಿರಿ ಎಂದು ಸೀಮಾ ಹೈದರ್ ಹೇಳಿದ್ದಾರೆ.

Continue Reading

FILM

ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

Published

on

ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟು ಜಿಮ್ ನಲ್ಲಿ ಮೇಘಾ ಶೆಟ್ಟಿ ವರ್ಕೌಟ್ ಮಾಡಿದ್ದಾರೆ. ಮುದ್ದಾಗಿ, ಗ್ಲಾಮರಸ್ ಆಗಿ ಅವರು ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಅಂದ್ರೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗೋದು ಸಹಜ. ಈ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ನಟಿಸಿದ್ದರು. ನಟ ಅನಿರುದ್ಧ್ ಜೊತೆ ನಟಿಸಿದ್ದ ಮೇಘಾಗೆ ಈ ಧಾರಾವಾಹಿ ಜಪ್ರಿಯತೆಯ ಉತ್ತುಂಗಕ್ಕೇರಿಸಿತ್ತು.

ಈ ವೇಳೆ ಸಿನಿಮಾಗಳಿಂದಲೂ ಮೇಘಾ ಅವಕಾಶಗಳನ್ನು ಗಿಟ್ಟಿಸಿಕೊಂಡರು, ಅತ್ತ ಧಾರಾವಾಹಿ ಮುಕ್ತಾಯಗೊಂಡಿತ್ತು. ಇತ್ತು ಮೇಘಾ ಸಿನಿಮಾಗಳಲ್ಲಿ ಬಿಝಿ ಆದರು.ಮಂಗಳೂರು ಮೂಲದ ಈ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ನಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ನಲ್ಲಿ ನಟಿಸಿದ್ದಾರೆ. ಧನ್ವೀರ್ ಗೌಟ ಜೊತೆ ‘ಕೈವ’ ದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೇಘ, ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

ಇನ್ನು, ಜಿಮ್ ವರ್ಕೌಟ್ ಸಮಯದ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ಬ್ಯೂಟಿಫುಲ್ ಎಂದು ಕಮೆಂಟ್ ಹಾಕುತ್ತಿದ್ದಾರೆ.

Continue Reading

DAKSHINA KANNADA

WATCH VIDEO : ದಪ್ಪು ಹಿಡಿದು ನೃತ್ಯ ಮಾಡಿದ ಯು.ಟಿ.ಖಾದರ್; ಹಬ್ಬದ ಸಂಭ್ರಮದ ವಿಡಿಯೋ ವೈರಲ್

Published

on

ಮಂಗಳೂರು : ವಿಧಾನ ಸಭಾ ಸ್ಪೀಕರ್ ಆಗಿದ್ರೂ ಸದಾ ಒಂದಿಲ್ಲ ಒಂದು ಕಾರಣದಿಂದ ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಯಾಗ್ತಾನೆ ಇರ್ತಾರೆ. ಅವರು ಎಲ್ಲೇ ಹೋದ್ರು ಅವರ ಅಭಿಮಾನಿಗಳು ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ.

ರಮ್ಜಾನ್ ಹಬ್ಬದಂದು ಈ ವಿಡಿಯೋ ಶೂಟ್ ಮಾಡಲಾಗಿದೆ ಎನ್ನಲಾಗಿದೆಯಾದ್ರೂ ಅದರ ಖಚಿತತೆ ಇಲ್ಲ. ಹಬ್ಬದ ಸಲುವಾಗಿ ನಡೆದಿದ್ದ ಮೆರವಣಿಗೆ ಒಂದರಲ್ಲಿ ಸ್ಪೀಕರ್ ಖಾದರ್ ಅವರು ದಪ್ಪು ಬಾರಿಸಿ ನೃತ್ಯ ಮಾಡಿದ್ದಾರೆ. ದಪ್ಪು ಅನ್ನೋದು ಮುಸ್ಲಿಂ ಸಮೂದಾಯದ ಸಾಂಪ್ರದಾಯಿಕ ನೃತ್ಯವಾಗಿದ್ದು, ಹೆಚ್ಚಾಗಿ ಇದನ್ನು ಮಕ್ಕಳು ಪ್ರದರ್ಶನ ಮಾಡುತ್ತಾರೆ.


ಇಲ್ಲಿ ಕೂಡಾ ಮೆರವಣಿಗೆಯಲ್ಲಿ ದಪ್ಪು ಪ್ರದರ್ಶನ ಮಾಡುತ್ತಿರುವ ಮಕ್ಕಳ ಜೊತೆ ಮಕ್ಕಳಾಗಿ ದಪ್ಪು ನೃತ್ಯಕ್ಕೆ ಖಾದರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಖಾದರ್ ಅವರ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗಿನದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ : WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Continue Reading

LATEST NEWS

Trending