LATEST NEWS
ಪ್ರವಾಸಿಗರೇ ಗಮನಿಸಿ, ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಮಂಗಳೂರು/ ಚಿಕ್ಕಮಗಳೂರು : ಶ್ರೀರಾಮಸೇನೆ ನೇತೃತ್ವದಲ್ಲಿ ದತ್ತಮಾಲಾ ಅಭಿಯಾನ ಆರಂಭವಾಗಿದೆ. ದತ್ತಮಾಲಾಧಾರಿಗಳು ಏಳು ದಿನಗಳ ಕಾಲ ಕಠಿಣ ವ್ರತದಲ್ಲಿದ್ದು, ಕೊನೆಯ ದಿನ (ನ. 10) ದತ್ತಪೀಠಕ್ಕೆ ಆಗಮಿಸುತ್ತಾರೆ. ಅಂದು, ದತ್ರಪೀಠದಲ್ಲಿ ಹೋಮ–ಹವನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸರು ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾದ್ಯಂತ ಏಳು ದಿನಗಳ ಕಾಲ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಅಲ್ಲದೇ, ಮುಂಜಾಗ್ರತ ಕ್ರಮವಾಗಿ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಮತ್ತು ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನವೆಂಬರ್ 9ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.
ಇದನ್ನೂ ಓದು : BBK11: ಬಿಗ್ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ಮದ್ವೆ ಆಗ್ತಾರಂತೆ ಈ ಸ್ಪರ್ಧಿ; ಯಾರವರು?
ದತ್ತ ಮಾಲಾಧಾರಿಗಳು ನವೆಂಬರ್ 10ರಂದು ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಬರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.
LATEST NEWS
ರೈಲ್ವೆ ನಿಲ್ದಾಣದಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
ಮಂಗಳೂರು/ತಮಿಳುನಾಡು : ತಮಿಳುನಾಡಿನ ರೈಲ್ವೆ ನಿಲ್ದಾಣದೊಳಗೆ ಸೂಟ್ಕೇಸ್ವೊಂದರಲ್ಲಿ ಮಹಿಳೆಯ ಶ*ವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿರುವ ಮಿಂಜೂರ್ ರೈಲ್ವೇ ನಿಲ್ದಾಣದಲ್ಲಿ ಸೂಟ್‌ಕೇಸ್‌ನಲ್ಲಿ ಶ*ವ ಪತ್ತೆಯಾಗಿದೆ.
ತಂದೆ – ಮಗಳು ಅರೆಸ್ಟ್ :
ನವೆಂಬರ್ 4 ರ ಸೋಮವಾರ ತಡರಾತ್ರಿ 43 ವರ್ಷದ ಬಾಲಸುಬ್ರಮಣ್ಯಂ ಮತ್ತು ಅವರ 17 ವರ್ಷದ ಮಗಳು ದೊಡ್ಡ ಸೂಟ್‌ಕೇಸ್‌ನೊಂದಿಗೆ ನಿಲ್ದಾಣಕ್ಕೆ ಬಂದಿದ್ದರು. ಬಾಲಸುಬ್ರಹ್ಮಣ್ಯಂ ಆ ಸೂಟ್ಕೇಸ್ನ್ನು ಅಲ್ಲಿಯೇ ಬಿಟ್ಟು ರೈಲ್ವೆ ನಿಲ್ದಾಣದಿಂದ ಹೊರಹೋಗಲು ಯತ್ನಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಸಾಮಾನು ಸರಂಜಾಮು ಬಿಟ್ಟು ಹೋಗಿರುವ ಬಗ್ಗೆ ಆತಂಕಗೊಂಡ ಪ್ರಯಾಣಿಕರು ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸೂಟ್‌ಕೇಸ್ ತುಂಬಾ ದೊಡ್ಡದಾಗಿದ್ದ ಕಾರಣ, ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಆರ್‌ಪಿಎಫ್ ಅಧಿಕಾರಿಗಳು ಅನುಮಾನಗೊಂಡು ಕೊರುಕ್ಕುಪೇಟೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಅನುಮಾನಗೊಂಡ ಅಧಿಕಾರಿಗಳು ಸೂಟ್‌ಕೇಸ್‌ನ ವಿಷಯಗಳ ಬಗ್ಗೆ ವಿಚಾರಿಸಲು ಬಾಲಸುಬ್ರಮಣ್ಯಂನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಅವರು ಕೊಟ್ಟ ವಿವರಣೆ ಅಸ್ಪಷ್ಟವಾಗಿತ್ತು. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತ್ತು. ಹೀಗಾಗಿ ಸೂಟ್ ಕೇಸ್ ತೆರೆಯಲಾಗಿದೆ. ಈ ವೇಳೆ ಅದರಲ್ಲಿ ಮಹಿಳೆಯ ಶ*ವ ಕಂಡು ಬಂದಿದೆ.
ಇದನ್ನೂ ಓದಿ : ಆತ್ಮಹ*ತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್
ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಲಾಗಿದ್ದ ಶ*ವದ ತಲೆಯಲ್ಲಿ ಗಾ*ಯಗಳಿದ್ದವು. ತಕ್ಷಣವೇ ಪೊಲೀಸರು ಬಾಲಸುಬ್ರಮಣ್ಯಂ ಮತ್ತು ಅವರ ಪುತ್ರಿ ಇಬ್ಬರನ್ನೂ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಕೊ*ಲೆ ಮಾಡಿದ್ಯಾಕೆ?
ತಂದೆ ಮತ್ತು ಮಗಳು ತಾವೇ ಕೊ*ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಹಿಳೆ ಮಗಳನ್ನು ವೇ*ಶ್ಯಾವಾಟಿಕೆಗೆ ಬಲವಂತಪಡಿಸಲು ಯತ್ನಿಸಿದಾಗ ಕೋಪದಿಂದ ಕೊಂ*ದಿರುವುದಾಗಿ ಹೇಳಿದ್ದಾರೆ. ಮೃ*ತಳನ್ನು ಮಾನ್ಯಂ ರಮಣಿ ಎಂದು ಪೊಲೀಸರು ಗುರುತಿಸಿದ್ದು, ಆಕೆ ಚೆನ್ನೈನಲ್ಲಿರುವ ಆರೋಪಿಗಳ ಮನೆಯ ಬಳಿ ವಾಸಿಸುತ್ತಿದ್ದಳು. ಮಹಿಳೆಯ ಕೊರಳಲ್ಲಿ 50 ಗ್ರಾಂ ಚಿನ್ನಾಭರಣವಿದ್ದು, ಆರೋಪಿಗಳು ಅದನ್ನು ಕದ್ದು ಬಾರ್‌ಗಳನ್ನಾಗಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
LATEST NEWS
ಮಂಗಳೂರು: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
ಮಹಾನಗರ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಆಟೋ ಚಾಲಕರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದ್ದಾರೆ.
ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರವೇ ಪ್ರಿ ಪೇಯ್ಡ್ ಆಟೋ ವ್ಯವಸ್ಥೆ ಇದೆ. ಅನಂತರ ವಂದೇಭಾರತ್ ರೈಲುಗಳು ಸಹಿತ ಹಲವಾರು ರೈಲುಗಳು ನಿಲ್ದಾಣಕ್ಕೆ ಬರುತ್ತವೆ. ಅದರಲ್ಲಿ ಬರುವ ಪ್ರಯಾಣಿಕರಿಗೆ ಪ್ರೀ ಪೇಯ್ಡ್ ಆಟೋ ಸಿಗುತ್ತಿಲ್ಲ. ಈ ಪ್ರಯಾಣಿಕರಿಂದ ಕೆಲವು ಆಟೋರಿಕ್ಷಾ ಚಾಲಕರು ತೀರಾ ಹೆಚ್ಚಿನ ಬಾಡಿಗೆಯನ್ನು ವಸೂಲಿ ಮಾಡುತ್ತಾರೆ. ಆಟೋರಿಕ್ಷಾ ನಿಲ್ದಾಣದಲ್ಲಿ ಬಾಡಿಗೆದರದ ವಿಷಯವಾಗಿ ಚರ್ಚೆ, ಗಲಾಟೆಗಳು ನಡೆಯುತ್ತವೆ. ಪೊಲೀಸರು ಕೂಡ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರು ಬೇರೆ ಉಪಾಯವಿಲ್ಲದೆ ಹೆಚ್ಚಿನ ಬಾಡಿಗೆಗೆ ಒಪ್ಪಿಕೊಂಡು ಮನೆ ಸೇರುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಯಾಕೆ ಇಲ್ಲ?
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9.30ರ ವರೆಗೂ ಪ್ರಿ ಪೇಯ್ಡ ಆಟೋರಿಕ್ಷಾ ಕೌಂಟರ್ ತೆರೆದಿರುತ್ತದೆ.
ಮನಬಂದಂತೆ ಬಾಡಿಗೆ ದರ
ನಾನು ರಾತ್ರಿ 11.30ಕ್ಕೆ ವಂದೇಭಾರತ್ ರೈಲಿನಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದಾಗ ಅಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್ ಇರಲಿಲ್ಲ. ಇದರಿಂದ ನನಗೆ ತುಂಬಾ ತೊಂದರೆಯಾಗಿದೆ. ರಾತ್ರಿ ವೇಳೆಯೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯ ರೈಲುಗಳು ಬರುತ್ತವೆ. ಸಾವಿರಾರು ಮಂದಿ ಪ್ರಯಾಣಿಕರು ಆಗಮಿಸುತ್ತಾರೆ. ಹಾಗಾಗಿ ಕೂಡಲೇ ರಾತ್ರಿಯೂ ಪ್ರಿಪೇಯ್ಡ್ ಆಟೋ ಕೌಂಟರ್ ಆರಂಭಿಸಬೇಕು.
LATEST NEWS
ಸಾಲಭಾದೆ ತಾಳದೆ ಬಾವಿಗೆ ಹಾರಿ ಪ್ರಾ*ಣಬಿಟ್ಟ ಮಹಿಳೆ
ಮಂಗಳೂರು/ಮುಧೋಳ: ಸಾಲಭಾದೆ ತಾಳದೆ ರೈತ ಮಹಿಳೆಯೋರ್ವಳು ಬಾವಿಗೆ ಹಾರಿ ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸೋರಗಾವಿ ಗ್ರಾಮದಲ್ಲಿ ಸೋಮವಾರ (ನ.4) ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಆ*ತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲಿ ಬಹುಪಾಲು ರೈತರು ತೆಗೆದುಕೊಂಡ ಸಾಲ ಮನ್ನಿಸಲಾಗದೆ ಆ*ತ್ಮಹತ್ಯೆ ಮಾಡಿಕೊಳ್ಳುವವರೇ ಆಗಿದ್ದಾರೆ. ಇದೀಗ ಅಂತಹದ್ದೇ ಘಟನೆ ಮುಧೋಳದಲ್ಲೂ ನಡೆದಿರುವುದು.
ಮೃ*ತ ಮಹಿಳೆಯನ್ನು ದೊಡ್ಡವ್ವ ಕಟ್ಟಿಮನಿ (46) ಎಂದು ಗುರುತಿಸಲಾಗಿದೆ.
ದೊಡ್ಡವ್ವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 3,80,000 ಸಾ*ಲ ಪಡೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- FILM6 days ago
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ