Thursday, September 29, 2022

ಮಂಗಳೂರಿನಲ್ಲಿ ಗ್ರಾಹಕರಿಗೆ ಹುಳಿಯಾದ ರೈತರಿಗೆ ಸಿಹಿಯಾದ ಟೊಮ್ಯಾಟೋ: ಕೆ.ಜಿಗೆ 60ಗಡಿ ದಾಟಿದ ಬೆಲೆ

ಮಂಗಳೂರು: ನಗರದಲ್ಲಿ ಟೊಮೇಟೊ ಬೆಲೆ ಗಗಕ್ಕೇರಿದ್ದು, ನಗರದ ಕೆಲವೆಡೆ ಟೋಮ್ಯಾಟೊ ಬೆಲೆ 70 ರೂಪಾಯಿ ಏರಿಕೆಯಾಗಿದೆ.

ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.


ಮಾರುಕಟ್ಟೆಯಲ್ಲಿ 25 ಕೆ.ಜಿ ತೂಕದ ಬಾಕ್ಸ್‌ ಟೊಮೇಟೊ ಬೆಲೆ 1400 ರವರೆಗೂ ಏರಿಕೆ ಆಗಿರುವುದರಿಂದ ರೈತರು ಟೊಮೇಟೊ ಬೆಳೆ ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.

ಇದು ಮಂಗಳೂರು ನಗರಕ್ಕೆ ಸಾಗಾಟವಾಗಿ ಗ್ರಾಹಕರ ಕೈಗೆ ತಲುಪುವ ವೇಳೆ 1750 ರ ಗಟಿ ದಾಟುತ್ತದೆ.

ಕಳೆದ ಎರಡು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿ ಟೊಮೇಟೊ ದರ ಹೆಚ್ಚಾಗದಿದ್ದರಿಂದ ಬೆಳೆ ಬೆಳೆಯಲು ಖರ್ಚು ಮಾಡಿದ್ದ ಹಣವೂ ಬೆಳೆಗಾರರ ಕೈಸೇರುತ್ತಿರಲಿಲ್ಲ. ಇದರಿಂದ ಹಲವು ರೈತರು ಈ ಬೆಳೆ ಬೆಳೆಯುವ ಸಾಹಸಕ್ಕೆ ಹೋಗಿರಲಿಲ್ಲ.

ಆದರೂ ಈ ಬಾರಿ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ರೈತರು ನಿರಂತರವಾಗಿ ಟೊಮೇಟೊ ಬೆಳೆಯುತ್ತಲೇ ಬಂದಿದ್ದರು.
ಕಳೆದ 15 ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ ಟೊಮೇಟೊ ಹಾನಿಯಾಗಿದೆ. ಇದರ ಜೊತೆಗೆ ಕೊತ್ತಂಬರಿ ಸೊಪ್ಪಿನ ಬೆಲೆಯೂ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಪುತ್ತೂರಿನಲ್ಲಿ ಜಾಗದ ತಕರಾರು: V.A ಕಚೇರಿಗೆ ನುಗ್ಗಿ ದಾಂಧಲೆ-ಮಾರಕಾಸ್ತ್ರಗಳಿಂದ ಹತ್ಯೆ ಯತ್ನ

ಪುತ್ತೂರು: ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರಿನ ಸವಣೂರು ಜಂಕ್ಷನ್ ನಲ್ಲಿ ಇಂದು ನಡೆದಿದೆ.ಸವಣೂರು ಗ್ರಾಮದ...

ಮಂಗಳೂರು: ಗೆಳೆಯನ ಸಾವಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ-ಯುವಕನ ಏಕಾಂಗಿ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ರಸ್ತೆಗಳಲ್ಲಿರುವ ಯಮಗಾತ್ರದ ಗುಂಡಿಗಳ ಅವ್ಯವಸ್ಥೆಯಿಂದ ತನ್ನ ಗೆಳೆಯ ಮೃತಪಟ್ಟಿದ್ದು, ಈ ಹಿನ್ನಲೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ...

ಉಡುಪಿ: ರಸ್ತೆ ಅವ್ಯವಸ್ಥೆ-ಕೋಣಗಳ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ

ಉಡುಪಿ: ಮಲ್ಪೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಪ್ರವಾಸಿಗರ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಸದ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಅನುಭವಿಸುತ್ತಿರುವ ಕಷ್ಟವನ್ನು...