Connect with us

    LATEST NEWS

    ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    Published

    on

    ಅಮರಾವತಿ: ತಿರುಪತಿ ಲಡ್ಡು ಅಪವಿತ್ರವಾಗಿದೆ ಎಂಬ ಆರೋಪಗಳು ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಅಂಥಾದ್ದೇನು ಆಗಿಲ್ಲ. ಈ ಆರೋಪಗಳು ಭಕ್ತರ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಕಳಂಕರಹಿತ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.

    ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ.

    ಅಂದ ಹಾಗೇ, ಲಡ್ಡು ಅಪಚಾರ ಸಂಬಂಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಾಳೆ ಮಹಾಶಾಂತಿ ಯಾಗ ನಿರ್ವಹಿಸಲು ಟಿಟಿಡಿ ಅಧಿಕಾರಿಗಳು ಶರವೇಗದ ಸಿದ್ಧತೆಗಳನ್ನು ನಡೆಸಿದ್ದಾರೆ. ನಾಳೆಯ ಶುಭ ರೋಹಿಣಿ ನಕ್ಷತ್ರದಲ್ಲಿ ಮೊದಲಿಗೆ ಮಹಾಶಾಂತಿ ಹೋಮ ನಿರ್ವಹಿಸಿ ನಂತರ ವಾಸ್ತು ಹೋಮವನ್ನು ಆಗಮ ಪಂಡಿತರು ನೆರವೇರಿಸಲಿದ್ದಾರೆ. ಅಂತಿಮವಾಗಿ ಪಂಚಗವ್ಯಗಳಿಂದ ಸಂಪ್ರೋಕ್ಷಣೆ ಮಾಡಲಿದ್ದಾರೆ.

    ತಿಮ್ಮಪ್ಪನ ಆರ್ಜಿತ ಸೇವೆಗಳಿಗೆ ಭಂಗ ಉಂಟಾಗದಂತೆ ನಾಳೆಯೇ ಎಲ್ಲಾ ಯಾಗಗಳನ್ನು ಮುಗಿಸಲಿದ್ದಾರೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಟಿಟಿಡಿ ಅಧಿಕಾರಿಗಳು ಮತ್ತು ಆಗಮ ಪಂಡಿತರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹಾಗೆಯೇ, ಬ್ರಹ್ಮೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇನ್ನು, ಡಿಸಿಎಂ ಪವನ್ ಕಲ್ಯಾಣ್ ಇಂದಿನಿಂದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದು 11 ದಿನ ಮುಂದುವರಿಯಲಿದೆ. ಈ ಮಧ್ಯೆ, ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಬಿ.ಸುರೇಂದ್ರನಾಥ್ ನೇತೃತ್ವದ ತಜ್ಞರ ಸಮಿತಿ, ಭವಿಷ್ಯದಲ್ಲಿ ಲಡ್ಡುಗೆ ಬಳಸುವ ತುಪ್ಪದ ವಿಚಾರದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಹಲವು ಶಿಫಾರಸು ಮಾಡಿದೆ.

    LATEST NEWS

    ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

    Published

    on

    ಮಂಗಳೂರು/ಉತ್ತರಪ್ರದೇಶ : ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಈ ಸಂದರ್ಭ ಹೆಣ್ಣು ತನ್ನ ರಕ್ಷಣೆಗೆ ಯಾರಾದರೂ ಬರಲಿ ಎಂದು ನಿರೀಕ್ಷಿಸುವುದು ಸಾಮಾನ್ಯ. ಇಲ್ಲಿ ಆಗಿದ್ದೂ ಅದೇ. ಬಾಲಕಿಯ ಮೇಲಾಗುತ್ತಿದ್ದ ಅತ್ಯಾಚಾರವನ್ನು ಕೋತಿಗಳು ತಪ್ಪಿಸಿರುವ ಬಗ್ಗೆ ವರದಿಯಾಗಿದೆ.
    ಈ ಘಟನೆ ನಡೆದಿರೋದು ಉತ್ತರಪ್ರದೇಶದ ಬಾಗ್ಪತ್ ನಲ್ಲಿ. 6 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಯತ್ನಿಸುವಾಗ ಕೋತಿಗಳು ಸಹಾಯ ಮಾಡಿವೆ.


    ಯುವಕನೊಬ್ಬ ಅತ್ಯಾಚಾರ ನಡೆಸಲು ಪ್ರಯತ್ನ ಪಡುತ್ತಿದ್ದು, ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ಮಾಡುವ ಮೂಲಕ ಅತ್ಯಾಚಾರ ನಡೆಯುವುದನ್ನು ತಪ್ಪಿಸಿದೆ. ಕೂಡಲೇ ಬಾಲಕಿ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದಾಳೆ. ದೇವರಂತೆ ಬಂದು ಕೋತಿಗಳು ನನ್ನ ಪ್ರಾಣ ಉಳಿಸಿರುವುದಾಗಿ ಆಕೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
    ಈ ಘಟನೆ ಸೆ.20 ರಂದು ನಡೆದಿದ್ದು. ಪರಾರಿಯಾಗಿದ್ದ ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ,ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ; ಮೂರನೇ ಹಂತದ ಕಾರ್ಯಾಚರಣೆ ವೇಳೆ ಸಿಕ್ಕಿತು ಮೂಳೆ..!

    Published

    on

    ಅಂಕೋಲಾ: ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಮೂರನೇ ದಿನದ ಶೋಧ ಕಾರ್ಯಾಚರಣೆ ವೇಳೆ ಮೂಳೆಯೊಂದು ಸಿಕ್ಕಿದೆ.

    ಗಂಗಾವಳಿ ನದಿಯ ಆಳದಿಂದ ಮೇಲೆತ್ತಲಾದ ಮಣ್ಣು ರಾಶಿಯಲ್ಲಿ ಮೂಳೆಯ ತುಂಡೊಂದು ಪತ್ತೆಯಾಗಿದ್ದು, ಇದು ಜುಲೈ 16 ರಂದು ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿ ಇದುವರೆಗೂ ಪತ್ತೆಯಾಗದ ಮೂವರಲ್ಲಿ ಯಾರದಾದರೂ ಆಗಿರಬಹುದೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಇದು ಮನುಷ್ಯರ ಮೂಳೆಯೇ ಅಥವಾ ಯಾವುದೋ ಪ್ರಾಣಿಯ ಮೂಳೆಯೇ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸಿದ.

    ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹಗಳು ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಕಣ್ಮರೆಯಾದವರ ಎಲುಬಿನ ತುಂಡಾದರೂ ಸಿಕ್ಕರೆ ಸಂಸ್ಕಾರ ಕಾರ್ಯ ನಡೆಸುವ ನಿರೀಕ್ಷೆಯಲ್ಲಿ ಅವರ ಕುಟುಂಬದವರಿದ್ದಾರೆ.

    ಹೀಗಾಗಿ ಪ್ರತಿದಿನ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಕುಟುಂಬದವರು ಹಾಜರಿರುವುದು ಕಂಡುಬರುತ್ತಿದೆ. ವೈಜ್ಞಾನಿಕ ಪರೀಕ್ಷೆ ಬಳಿಕವೇ ಈ ಮೂಳೆಯ ಕುರಿತು ನಿಖರವಾದ ಮಾಹಿತಿ ಸಿಗಲಿದೆ.

    Continue Reading

    FILM

    ಟಾಲಿವುಡ್‌ ಮೆಗಾಸ್ಟಾರ್‌ಗೆ ಗಿನ್ನಿಸ್ ವಿಶ್ವದಾಖಲೆಯ ಗೌರವ

    Published

    on

    ಹೈದರಾಬಾದ್/ಮಂಗಳೂರು: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸರ್ಜಾ ಅವರ ನೃತ್ಯಗಳಿಗಾಗಿ ಕ್ರಿಯಾತ್ಮಕ ತಾರೆ ಎಂಬ ಬಿರುದಿನೊಂದಿಗೆ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಚಿರಂಜೀವಿ ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸಿರುವ ನೃತ್ಯಗಳಿಗಾಗಿ ಭಾರತೀಯ ಚಲನಚಿತ್ರೋದ್ಯಮ ಅತ್ಯಂತ ಕ್ರಿಯಾತ್ಮಕ ತಾರೆ ಎಂದು ಗಿನ್ನಿಸ್ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಅವರು ಈ ಕ್ಷಣ ಅವಿಸ್ಮರಣೀಯವಾಗಿದೆ. ನನ್ನ ನೃತ್ಯಕ್ಕೆ ವಿಶ್ವ ದಾಖಲೆಯನ್ನು ಪಡೆದುಕೊಳ್ಳುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಇದು ನಿಜವಾಗಿಯೂ ನನ್ನನ್ನು ನಟನಾಗಿ ಮಾಡಿದೆ. ನೃತ್ಯವೂ ನನ್ನ ವೃತ್ತಿ ಜೀವನದುದ್ದಕ್ಕೂ ನನಗೆ ಪ್ರಶಂಸೆಯನ್ನು ತಂದುಕೊಟ್ಟಿದೆ. ಸಾವಿತ್ರಿಯಂತಹ ದಂತಕಥೆಯುಳ್ಳ ನಾಯಕಿಯರೊಂದಿಗೆ ಪರದೆ ಮೇಲೆ ಕಾಣಿಸಿಕೊಂಡಿದ್ದು ಸಿನೆಮಾದಲ್ಲಿ ಅವರ ಜತೆ ಹೆಜ್ಜೆ ಹಾಕಿದ್ದು ಎಲ್ಲವನ್ನೂ ಸದಾ ನೆನಪಿಸಿಕೊಳ್ಳುತ್ತೇನೆ. ನನ್ನನ್ನು ನಟನಾಗಿ ಮಾಡಲು ನಿರ್ದೇಶಕರು, ನಿರ್ಮಾಪಕರು, ನೃತ್ಯ ಸಂಯೋಜಕರ ಪ್ರಯತ್ನ ಅಪಾರವಾಗಿದೆ. ಇವರೆಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

    ‘ಬಿಗ್ ಬಾಸ್’ ಟೀಮ್ ಜೊತೆ ಅಪ್‌ಡೇಟ್ ಹೊತ್ತು ತರುತ್ತಿದ್ದಾರೆ ಸುದೀಪ್- ಏನದು?

    ನಟ ಚಿರಂಜೀವಿ 45 ವರ್ಷಗಳ ಸಿನಿ ಪ್ರಯಾಣದಲ್ಲಿ 156 ಚಿತ್ರಗಳಲ್ಲಿ ಅಭಿನಯಿಸಿದ್ದು, 537 ಹಾಡುಗಳಲ್ಲಿ 24,000 ಡ್ಯಾನ್ಸ್‌ ಸ್ಟಪ್ ಹಾಕಿದ್ದಾರೆ.

    Continue Reading

    LATEST NEWS

    Trending