ಮಂಗಳೂರು: ಫ್ಲೈ ಓವರ್ನ ಪಿಲ್ಲರ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕನ ಸಮೇತ ಟಿಪ್ಪರ್ ಲಾರಿ ಸುಟ್ಟು ಕರಕಲಾಗಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಇಂದು ಬೆಳಗ್ಗಿನ ಜಾವದಲ್ಲಿ ನಡೆದಿದೆ.
ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯ ಎಲ್.ಐ.ಸಿ ಕಛೇರಿಯ ಮುಂಭಾಗವೇ ಘಟನೆ ನಡೆದಿದೆ.
ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ಟಿಪ್ಪರ್ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಫ್ಲೈ ಓವರ್ ಪಿಲ್ಲರ್‌ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಡಿಕ್ಕಿ ರಭಸಕ್ಕೆ ಟಿಪ್ಪರ್ ನಜ್ಜುಗುಜ್ಜಾದ ಹಿನ್ನಲೆಯಲ್ಲಿ ಚಾಲಕ ವಾಹನದೊಳಗೆ ಸಿಲುಕಿ ಹೊರಬರಲಾಗದೇ ಟಿಪ್ಪರ್ನಲ್ಲೇ ಸಜೀವ ದಹನವಾಗಿದ್ದಾನೆ.
ಮೃತ ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಚಾಲಕನ ಶವವನ್ನು ಹೊರ ತೆಗೆದಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಟಿಪ್ಪರ್ ಪಕ್ಕಕ್ಕೆ ಸರಿಸಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.