Saturday, August 20, 2022

ಕಿನ್ನಿಗೋಳಿ: ಆಟೋಗೆ ಢಿಕ್ಕಿ ಹೊಡೆದ ಟಿಪ್ಪರ್ ಜಖಂ-ರಿಕ್ಷಾ ಸೇರಿ ಸ್ಕೂಟರ್‌ಗೂ ಹಾನಿ

ಕಿನ್ನಿಗೋಳಿ: ಆಟೋ ರಿಕ್ಷಾಕ್ಕೆ ಟಿಪ್ಪರೊಂದು ಢಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾವು ಜಖಂಗೊಂಡ ಘಟನೆ ಕಟೀಲು – ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರಿನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.


ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾವು ರಸ್ತೆಯಂಚಿನಿಂದ ಸರಿದು ಸಮೀಪದಲ್ಲಿಯೇ ನಿಲ್ಲಿಸಲಾಗಿದ್ದ ಮತ್ತೊಂದು ಆಟೋ ರಿಕ್ಷಾ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ 2 ಆಟೋ ಹಾಗೂ ಸ್ಕೂಟರ್‌ಗೆ ಹಾನಿಯಾಗಿದೆ. ಘಟನೆ ನಡೆದ ಸಂದರ್ಭ ಚಾಲಕ ಆಟೋದಲ್ಲಿಯೇ ಕುಳಿತಿದ್ದರು. ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ದೃಶ್ಯಾವಳಿಯು ಸಮೀಪದ ಅಂಗಡಿಯೊಂದರಲ್ಲಿ ಆಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...

ಮಂಗಳೂರು: ಆ.22ರಂದು ನಾಡದೋಣಿ ಎಂಜಿನ್ ತಪಾಸಣೆ

ಮಂಗಳೂರು: 2022-23ನೇ ಸಾಲಿಗೆ ಮೀನುಗಾರಿಕೆ ಉದ್ದೇಶಕ್ಕಾಗಿ ಬಳಸುವ ಸೀಮೆಎಣ್ಣೆಯ ಪರವಾನಿಗೆಯನ್ನು ನವೀಕರಿಸುವ ಹಿನ್ನಲೆಯಲ್ಲಿ ನಾಡದೋಣಿ ಎಂಜಿನ್ ತಪಾಸಣೆ ಆ.22ರ ಸೋಮವಾರ ನಡೆಯಲಿದೆ.ದೋಣಿ ಮಾಲಕರು ದೋಣಿಯ ನೋಂದಣಿ ಪತ್ರದ ಪ್ರತಿ, ಆಧಾರ್ ಪ್ರತಿ ಮತ್ತು...

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...