ನಗರದ ಹೊರ ವಲಯದ ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ನಡೆದ ಹುಲಿಗಳ ಕಾದಾಟದಲ್ಲಿ ಒಂದು ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರು: ನಗರದ ಹೊರ ವಲಯದ ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ನಡೆದ ಹುಲಿಗಳ ಕಾದಾಟದಲ್ಲಿ ಒಂದು ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ಎರಡು ಹುಲಿಗಳ ನಡುವೆ ಭೀಕರ ಕಾಳಗ ನಡೆದು ಅದರಲ್ಲಿ ಒಂದು ಹುಲಿ ಗಾಯಗೊಂಡಿತ್ತು.
ಗಾಯಗೊಂಡಿದ್ದ ಹುಲಿಯನ್ನು ಪ್ರತ್ಯೇಕವಾಗಿರಿಸಿ ಆರೈಕೆ ಮಾಡಲಾಗುತ್ತಿದ್ದರಿಂದ ಅದು ಕೊಂಚ ಚೇತರಿಕೆ ಕಂಡಿತ್ತು. ಆದ್ರೆ ಇಂದು ಅದು ಏಕಾಎಕಿ ಹೃದಯಾಘಾತದಿಂದ ಮೃತಪಟ್ಟಿದೆ.
ಸಾವನ್ನಪ್ಪಿದ ಹುಲಿ ಸುಮಾರು ೧೫ ವರ್ಷ ಪ್ರಾಯದ ಹೆಣ್ಣು ಹುಲಿಯಾಗಿತ್ತು.
ಪ್ರಾಯಕ್ಕೆ ಬಂದ ಹುಲಿಗಳು ಬೆದೆಗೆ ಬರುವುದರಿಂದ ಹುಲಿಗಳ ಮಧ್ಯೆ ಕಾಳಗ ಒಂದು ಸಹಜ ಪ್ರಕ್ರೀಯೆಯಾಗಿದ್ದು ಇದರಲ್ಲಿ ಹೆಣ್ಣು ಹುಲಿ ಗಾಯಗೊಂಡಿತ್ತು.
ಅದಕ್ಕೆ ಚಿಕಿತ್ತೆ ನೀಡಲಾಗುತ್ತಿದ್ದು ಗುಣವಾಗುತ್ತಿದ್ದು ಆದ್ರೆ ಇಂದು ಮುಂಜಾನೆ ಏಕಾಏಕಿ ಹೃದಯಾಘಾತದಿಂದ ಅಸು ನೀಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾಹಿತಿ ನೀಡಿದ್ದಾರೆ.