Connect with us

UDUPI

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..!

Published

on

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..!

ಉಡುಪಿ :  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪುವಿನ ಅಮೃತೇಶ್ ಮಗಳಾದ ತೃಷಾ ಅವರನ್ನು ನಿನ್ನೆ ಕಾಪು ವೃತ್ತ ಕಛೇರಿಯಲ್ಲಿ ಸನ್ಮಾನಿಸಲಾಗಿದೆ.

ತೃಷಾ ಉಡುಪಿಯ ಸೈಂಟ್ ಸಿಸಿಲಿಯಾ ಹೈಸ್ಕೂಲಿನಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.

2018-19 ರಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯಲ್ಲಿ 400 ಮೀಟರ್ ಓಟವನ್ನು 1:02:77 ಸಮಯದಲ್ಲಿ ಪೂರೈಸಿ ರಾಜ್ಯ ಮಟ್ಟದ ದಾಖಲೆ ನಿರ್ಮಿಸಿದ್ದರು.

ಅಲ್ಲದೇ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಗಳಲ್ಲಿ 100 ಮೀಟರ್, 200 ಮೀಟರ್, ಹಾಗೂ 400 ಮೀಟರ್ ಓಟಗಳಲ್ಲಿ ಬಹುಮಾನಗಳನ್ನು ಪಡೆದು ತೃಷಾ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಬ್ರಹ್ಮಾವರ : ಮೀನು ಹಿಡಿಯಲು ಹೋಗಿ ನೀರು ಪಾಲಾದ ಯುವಕರು

Published

on

ಉಡುಪಿ: ಮೀನು ಹಿಡಿಯಲು ನದಿಗೆ ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಯುವಕರು ಇದೇ ಗ್ರಾಮದ ಶ್ರೀಶ(21) ಹಾಗೂ ಪ್ರಶಾಂತ್ ಪೂಜಾರಿ(30) ಎಂದು ಗುರುತಿಸಲಾಗಿದೆ.

brahmavara

ಮೀನಿಗೆ  ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಇಬ್ಬರೂ ನೀರು ಪಾಲಗಿದ್ದರು. ಮಾ.26 ರಂದು ಈ ಘಟನೆ ನಡೆದಿದ್ದು ಮಾ. 27 ರಂದು ಬೆಳಕಿಗೆ ಬಂದಿದೆ. ಈ  ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಚೈತ್ರಾ ಗ್ಯಾಂಗ್‌ ಹೊಸ ಕಿರಿಕ್‌…! ಸಾಕ್ಷಿ ಹೇಳದಂತೆ ಬೆದರಿಕೆ…!

Published

on

ಮಂಗಳೂರು ( ಚಿಕ್ಕಮಗಳೂರು ) : ಉದ್ಯಮಿಯೊಬ್ಬರಿಗೆ ಟಿಕೇಟ್ ಕೊಡಿಸುವುದಾಗಿ 5  ಕೋಟಿ ವಂಚನೆ ಮಾಡಿ ಜೈಲು ಸೇರಿದ್ದ ಉಡುಪಿ ಜಿಲ್ಲೆಯ ಚೈತ್ರಾ ಗ್ಯಾಂಗ್ ಮತ್ತೆ ಸುದ್ದಿಯಾಗಿದೆ. ಜೈಲು ಸೇರಿ ತಿಂಗಳುಗಳ ಬಳಿಕ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದ ಆರೋಪಿ ಸಾಕ್ಷಿಯೊಬ್ಬರ ಜೊತೆ ಕಿರಿಕ್ ಮಾಡಿದ್ದಾನೆ.

CHAITRA KUNDAPUR

ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಕೇಸ್‌ನ ಪ್ರಮುಖ ಆರೋಪಿ, ಚೈತ್ರಾಳ ರೈಟ್ ಹ್ಯಾಂಡ್ ಆಗಿದ್ದ ಧನರಾಜ್‌ ಇದೀಗ ಕಿರಿಕ್ ಮಾಡಿಕೊಂಡಿದ್ದಾನೆ. ಧನರಾಜ್ ಚೈತ್ರಾ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬನ ಮೇಲೆ ಹ*ಲ್ಲೆ ನಡೆಸಿದ್ದಾನೆ.

ಚೈತ್ರಾ ಗ್ಯಾಂಗ್ ನ ಪ್ರಮುಖ ಆರೋಪಿಯಾಗಿರುವ ದನರಾಜ್ 2024ರ  ಫೆಬ್ರವರಿ ತಿಂಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಈ ನಡುವೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಸೆಲೂನ್ ಮಾಲೀಕ ರಾಮು ಮೇಲೆ ಹ*ಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಸೋಮವಾರ ಕಡೂರಿನ ಹೋಟೆಲ್‌ ಒಂದರಲ್ಲಿ ರಾಮು ಮೇಲೆ ಹ*ಲ್ಲೆ ನಡೆಸಿದ್ದಾಗಿ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಗೋಪಾಲ್‌ ಜೀ ಪಾತ್ರದಾರಿಗೆ ರಾಮು ಸೆಲೂನಲ್ಲಿ ಮೇಕಪ್ ಮಾಡಿಲಾಗಿತ್ತು. ಪಾತ್ರದಾರಿ ಚೆನ್ನಾ ನಾಯ್ಕಗೆ ಮೇಕಪ್ ಮಾಡಿಸಲು ಧನರಾಜ್, ರಾಮು ಸೆಲೂನಿಗೆ ಕರೆದುಕೊಂಡು ಹೋಗಿದ್ದ. ರಾಮು ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಆರೋಪಿಗಳ ಬಂಧನವಾಗಿತ್ತು.

ಆದ್ರೆ ಇದೀಗ ಷರತ್ತುಬದ್ಧ ಜಾಮೀನು ಪಡೆದು ಹೊರಬಂದ ಆರೋಪಿ, ಸೆಲೂನ್ ಮಾಲೀಕ ರಾಮುವಿಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿ ಹ*ಲ್ಲೆ ನಡೆಸಿದ ಬಗ್ಗೆ ರಾಮು ಕುಟುಂಬ ಬೀರೂರು ಪೊಲೀಸರಿಗೆ ದೂರು ನೀಡಿದೆ. ಆದ್ರೆ ಈ ಬಗ್ಗೆ ಬೀರೂರು ಪೊಲೀಸರು ದೂರು ದಾಖಲಿಸದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಆರೋಪಿಯೊಬ್ಬ ಬೆದರಿಕೆ ಹಾಕುತ್ತಿದ್ದು, ಸೂಕ್ತ ನ್ಯಾಯ ಕೊಡಿಸಬೇಕು ಎಂದು ರಾಮು ಕುಟುಂಬ ಒತ್ತಾಯಿಸಿದೆ.

Continue Reading

LATEST NEWS

ಶಿರ್ವ: ಮಲಗಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ; ಗಂಭೀರ ಗಾಯ

Published

on

ಶಿರ್ವ : ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಯೋರ್ವರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರ್ವ ಗ್ರಾಪಂ ವ್ಯಾಪ್ತಿಯ ಕಲ್ಲೊಟ್ಟು ಬಳಿ ಭಾನುವಾರ ರಾತ್ರಿ ಸಂಭವಿಸಿದೆ. ಗಾಯಗೊಂಡವರನ್ನು ಬಿಹಾರ ಮೂಲದ ಕಾರ್ಮಿಕ ಸುರೇಂದ್ರ(55) ಎಂದು ಗುರುತಿಸಲಾಗಿದೆ.

ಸುರೇಂದ್ರ ಮರಳುಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅವರು ಕಲ್ಲೊಟ್ಟು ಸಂತೋಷ್ ಪೂಜಾರಿ ಅವರ ಮನೆಯ ಜಗಲಿಯಲ್ಲಿ ರಾತ್ರಿ ಮಲಗಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಸುರೇಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯಲು ಬೋನು ಇಡುವ ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

 

Continue Reading

LATEST NEWS

Trending