ಉಡುಪಿ : ಉಡುಪಿ ಜಿಲ್ಲೆಯ ಕಾಪುವಿನ ಐತಿಹಾಸಿಕ ಪ್ರಸಿದ್ಧ ಕಾಪು ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನದ ನೇಮೋತ್ಸವವು ಇಂದು ನಡೆದ ಹುಲಿಚಂಡಿ ನೇಮೋತ್ಸವದಲ್ಲಿ ಮೂರು ಮಂದಿಯನ್ನು ಸ್ಪರ್ಶಿಸುವ ಮೂಲಕ ಸಂಪನ್ನಗೊಂಡಿತು.
ಕಾಪು ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಮೇ 10 ರಂದು ಆರಂಭವಾಗುವ ನೇಮೋತ್ಸವವು ಇಂದು ಪಿಲಿಕೋಲ ನೇಮೋತ್ಸವದೊಂದಿಗೆ ಸಂಪನ್ನಗೊಂಡಿದೆ.
ಕಾಪುವಿನ ಹುಲಿಚಂಡಿ ಕೋಲವು ಇತರ ಕಡೆ ನಡೆಯುವ ಆರಾಧನೆಗಿಂತ ಭಿನ್ನವಾಗಿರುವುದರಿಂದ ದೂರದೂರಿನಿಂದ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.ಹುಲಿವೇಷಧಾರಿ ಈ ಸಲ ಮೂರು ಮಂದಿಯನ್ನು ಸ್ಪರ್ಶಿಸಿದರು.
ಹುಲಿಯು ಯಾರನ್ನಾದರೂ ಸ್ಪರ್ಶಿಸಿದರೆ ಆ ವ್ಯಕ್ತಿಯು ಬರು ಕೋಲದ ಒಳಗೆ ಸಾಯುತ್ತಾರೆ,ಮತ್ತು ಕೋಲದ ವೇಷಧಾರಿಗೆ ಯಾರನ್ನು ಸ್ಪರ್ಶಿಸದಿದ್ದರೆ ಆ ವೇಷಧಾರಿಯೇ ಸಾಯುತ್ತಾರೆ ಎಂಬ ನಂಬಿಕೆ ಈ ಕೋಲದ್ದು.
ಇದಕ್ಕಾಗಿ ಈ ಕೋಲ ನೋಡಲು ಸಾವಿರಾರು ಜನ ಸೇರುತ್ತಿದ್ದು ಈ ಬಾರಿಯೂ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭಯ- ಭಕ್ತಿಯಿಂದ ಭಾಗವಹಿಸಿದ್ದರು.