Connect with us

chikkamagaluru

ಚಾರ್ಮಾಡಿ ಘಾಟ್ ನಲ್ಲಿ ಕೆಳಕ್ಕೆ ಬಿದ್ದ ಕಾರಿನ ಚಕ್ರ ಕಿತ್ತುಕೊಂಡು ಹೋದ ಕಳ್ಳರು..!

Published

on

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಅಪಘಾತವಾದ ಕಾರಿನ ನಾಲ್ಕು ಟೈರ್‌ ಮಾಯವಾಗಿದೆ. ಕಳ್ಳರು ನಾಲ್ಕು ಡಿಸ್ಕ್ ಸಮೇತ ಕಾರಿನ ಟೈರ್ ಗಳನ್ನೇ ಕದ್ದುಕೊಂಡು ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ಈ ದುರಂತ ಘಟನೆ ನಡೆದಿತ್ತು.

ಚಾರ್ಮಾಡಿಯಲ್ಲಿ 30 ಅಡಿ ಆಳದ ಕಂದಕಕ್ಕೆ ಕಾರು ಬಿದ್ದು ಪಲ್ಟಿಯಾಗಿತ್ತು. ಧರ್ಮಸ್ಥಳಕ್ಕೆ ಹೋಗುತ್ತಿದ್ದ ಚಿತ್ರದುರ್ಗ ಮೂಲದ ಪ್ರವಾಸಿಗರ ಕಾರು ಇದಾಗಿದ್ದು, ಸೋಮವಾರ ಡಿಸ್ಕ್ ಸಮೇತ ಕಾರಿನ ನಾಲ್ಕು ಚಕ್ರ ಬಿಚ್ಚಿರೋ ಕಿಡಿಗೇಡಿಗಳು ಹಿಡಿದುಕೊಂಡು ಹೋಗಿದ್ದಾರೆ. ಇನ್ನು ಕಾರು ಮಕಾಡೆ ಬಿದ್ದದ್ದು ಕೂಡಾ ಕಾರಿನ ಟಯರ್ ಕೀಳಲು ಕಳ್ಳರಿಗೆ ಹೆಚ್ಚು ಅನುಕೂಲವಾಗಿದೆ. ಚಾರ್ಮಾಡಿಯಲ್ಲಿ ಹೆದ್ದಾರಿಗೆ ತಡೆಗೋಡೆ ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಪಘಾತವಾದ ವಾಹನದ ಬಿಡಿಭಾಗಗಳನ್ನ ಕದಿಯೋ ತಂಡ ಚಾರ್ಮಾಡಿಯಲ್ಲಿ ಸಕ್ರಿಯವಾಗಿದ್ದು, ಕಾರಿನ ಚಕ್ರದ ಜೊತೆ ಇತರೆ ವಸ್ತುಗಳು ಹಾಗೂ ಬಿಡಿಭಾಗಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ನಿರ್ಮಾಣದ ಕಬ್ಬಿಣ, ಸಿಮೆಂಟ್ ಗಳನ್ನೂ ಕೂಡಾ ಇದೇ ತಂಡ ಕದಿಯುತ್ತಿರುವ ಆರೋಪ ಇದೆ. ಬಣಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

chikkamagaluru

ರಾಜ್ಯದ ಹಲವೆಡೆ ಮಳೆಯ ಸಿಂಚನ.. ಸಿಡಿಲಿನ ಅಬ್ಬರಕ್ಕೆ ಇಬ್ಬರ ಬ*ಲಿ..!!

Published

on

ಮಂಗಳೂರು : ಬಿಸಿಲಿನ ಬೇಗೆಯಿಂದ ಭೂಮಿಯೇ ಬಾಯಿಬಿಟ್ಟಂತಾಗಿದ್ದು, ನೀರಿಗಾಗಿ ಜನರ ಹಾಹಾಕಾರ ಮುಗಿಲು ಮುಟ್ಟಿತ್ತು. ಜಾನುವಾರುಗಳು ಪ್ರಾಣಿ ಪಕ್ಷಿಗಳದ್ದಂತು ಹೇಳ ತೀರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದೊಂದು ವಾರದಿಂದ ಇದಕ್ಕೆ ಬ್ರೇಕ್ ನೀಡಿ ವರುಣನ ಸಿಂಚನದಿಂದ ಕೆಲವೊಂದೆಡೆ ಜನರು ನೆಮ್ಮದಿ ಕಂಡಿದ್ರು. ಆದ್ರೆ ಗುರುವಾರ (ಎ.11) ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ವಿಜಯಪುರ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಿದೆ.

rain

ಸು*ಟ್ಟು ಕರಕಲಾಗುವಂತ ಪರಿಸ್ಥಿತಿಯಲ್ಲಿದ್ದ ಕಲಬುರಗಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ ಇನ್ನು ವಿಜಯಪುರ ತಾಲೂಕಿನಲ್ಲೂ ಧಾರಕಾರ ಮಳೆ ಸುರಿದಿದ್ದು, ಒಂದೇ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಸಿಡಿಲಿನ ಅರ್ಭಟಕ್ಕೆ ಜನ ಮನೆಯಿಂದ ಹೊರ ಬಾರದೆ ಮನೆಯಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ. ಆದ್ರೂ 16 ವರ್ಷ ಬಾಲಕ ಹಾಗೂ ಇಂಡಿ ತಾಲೂಕಿನ ಮಸಳಿ ಗ್ರಾಮದಲ್ಲಿ ಜಮೀನು ಕೆಲಸ ಮಾಡುತ್ತಿದ್ದ 45 ವರ್ಷದ ರೈತ ಸೋಮಶೇಖರ್ ಪಟ್ಟಣಶೆಟ್ಟಿ ಸಿಡಿಲು ಬಡಿದು ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ..; ‘ಬಿಗ್ ಬಾಸ್‌’ ಮತ್ತೆ ಆರಂಭ.. ಇಲ್ಲಿದೆ ಸ್ಪರ್ಧಿಗಳ ಲಿಸ್ಟ್‌..!

ಇನ್ನು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯ ಕೆರಮಕ್ಕಿ, ಬೈಗೂರು,ಹಂರವಳ್ಳಿ, ಆವುತಿ ಪರಿಸರದಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.

Continue Reading

chikkamagaluru

ಉಡುಪಿ-ದ.ಕ ಜಿಲ್ಲೆಯಲ್ಲಿ ಸಂಭ್ರಮದ ರಂಜಾನ್ ಆಚರಣೆ: ಇಂದೇ ಸರ್ಕಾರಿ ರಜೆ ಘೋಷಸಿದ ಜಿಲ್ಲಾಡಳಿತ

Published

on

ಮಂಗಳೂರು: ಕೇರಳದ ಪೊನ್ನಾನಿಯಲ್ಲಿ ನಿನ್ನೆ(ಎ.9)  ಚಂದ್ರದರ್ಶನವಾಗಿದ್ದ ಹಿನ್ನಲೆಯಲ್ಲಿ ದ.ಕ.ಜಿಲ್ಲೆ, ಉಡುಪಿ ಸೇರಿದಂತೆ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.10ರಂದು ರಮ್ಜಾನ್ ಆಚರಿಸಲು ದ.ಕ ಜಿಲ್ಲಾ ಖಾಝಿ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲೆಯ ಸಂಯುಕ್ತ ಖಾಘಿ ಅವರು ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಈ ಜಿಲ್ಲೆಗಳಲ್ಲಿ ರಮ್ಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಮಂಗಳೂರಿನ ಬಾವುಟ ಗುಡ್ಡದ ಈದ್ಗಾದಲ್ಲಿ ಸಾಮೂಹಿಕ ನಮಾಜ್ ಮಾಡುವ ಮೂಲಕ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಹಲವಾರು ಪ್ರಮುಖರು ಈದ್ಗಾದ ನಮಾಜ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಸ್ಪೀಕರ್ ಖಾದರ್ ಅವರು ಎಲ್ಲಾ ಜನತೆಗೆ ರಮ್ಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ಈಸ್ಟರ್‌, ಯುಗಾದಿ ಹಾಗೂ ರಮ್ಜಾನ್ ಮೂರು ಹಬ್ಬಗಳು ಒಟ್ಟೊಟ್ಟಿಗೆ ಬಂದಿರುವ ಕಾರಣ ಇದೊಂದು ವಿಶೇಷ ಸನ್ನಿವೇಶವಾಗಿ ಅವರು ಪರಿಗಣಿಸಿದ್ದಾರೆ. ಎಲ್ಲಾ ಹಬ್ಬಗಳ ಸಂದೇಶ ಸಾಮರಸ್ಯವನ್ನು ಸಾರಿದ್ದು, ನಮ್ಮ ಜಿಲ್ಲೆಯಿಂದ ಅಂತಹ ಸಾಮರಸ್ಯ ಇಡೀ ದೇಶಕ್ಕೆ ಸಾರುವಂತಾಗಲಿ ಎಂದು ಹೇಳಿದ್ದಾರೆ.

ಇನ್ನು ಅಧಿಕೃತವಾಗಿ ರಮ್ಜಾನ್ ಹಬ್ಬದ ಸರ್ಕಾರಿ ರಜೆ ನಾಳೆ ಇದ್ದು , ಇಂದು ಹಬ್ಬ ಆಚರಿಸುತ್ತಿರುವ ಕಡೆಗಳಲ್ಲಿ ಇಂದೇ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಸ್ಪೀಕರ್ ಖಾದರ್ ಅವರ ಮನವಿ ಪುರಸ್ಕರಿಸಿ ಈ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಇಂದು ಹಬ್ಬ ಆಚರಿಸುತ್ತಿರುವ ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಇರಲಿದೆ.

Continue Reading

chikkamagaluru

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

Published

on

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದರು.

 

 

ಕಚೇರಿ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲೆಯ ಅಭ್ಯರ್ಥಿ ಬ್ರಿಜೇಶ್ ಚೌಟ, ರಾಜ್ಯ ಚುನಾವಣಾ ಸಂಚಾಲಕ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ,  ಗುರ್ಮೆ ಸುರೇಶ್ ಶೆಟ್ಟಿ, ಸಿಟಿ ರವಿ, ಜಾತ್ಯಾತೀತ ಜನತಾದಳದ ಮುಖಂಡ, ಶಾಸಕ ಭೋಜೇಗೌಡ ಉಪಸ್ಥಿತರಿದ್ದರು.

Continue Reading

LATEST NEWS

Trending