Connect with us

dehali

“ಚುನಾವಣೆಗೆ ಸ್ಪರ್ಧಿಸಲು ಹಣವಿಲ್ಲ, ಹಾಗಾಗಿ ಸ್ಪರ್ಧಿಸುತ್ತಿಲ್ಲ” ಎಂದ ಕೇಂದ್ರ ಸಚಿವೆ..!!

Published

on

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದ್ದರೂ, ನನ್ನಲ್ಲಿ ಚುನಾವಣೆಗೆ ಹೋರಾಡಲು ಅಗತ್ಯವಿರುವಷ್ಟು ಹಣ ಇಲ್ಲದೆ ಇರುವುದರಿಂದ ನಾನು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.

ಈ ಬಾರಿಯ ಚುನಾವಣೆಗೆ ಬಿಜೆಪಿ ಅಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಆದರೆ, ಚುನಾವಣೆಗೆ ಖರ್ಚು ಮಾಡಲು ಬೇಕಾದಷ್ಟು ಹಣದ ಕೊರತೆ ಇರವುದರಿಂದ ಸ್ವತಃ ನಾನು  ಅವಕಾಶವನ್ನು ತಿರಸ್ಕರಿಸಿದ್ದೇನೆ. ಚುನಾವಣೆಗೆ ಅಗತ್ಯವಿರುವಷ್ಟು ಹಣ ನನ್ನ ಬಳಿ ಇಲ್ಲ. ನನ್ನ ಸಂಪಾದನೆ, ನನ್ನ ಉಳಿತಾಯ, ನನ್ನ ಸ್ವಂತದ್ದಷ್ಟೇ ನನ್ನ ಆಸ್ತಿ. ದೇಶದ ಹಣ ನನ್ನದಾಗಲು ಸಾಧ್ಯವಿಲ್ಲ. ಹೀಗಾಗಿ ಹಣದ ಕೊರತೆಯಿಂದ ನಾನು ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ.

 

ಇದರ ಜತೆಗೆ ಯಾವ ರಾಜ್ಯದ ಯಾವ ಕ್ಷೇತ್ರ ಆಯ್ದುಕೊಳ್ಳಬೇಕೆಂಬ ಗೊಂದಲ, ಗೆಲುವಿಗಾಗಿ ಅನುಸರಿಸುವ ಕೆಲವು ಮಾನದಂಡ ಯಾವ ಧರ್ಮ, ಯಾವ ಜಾತಿ, ಯಾವ ಸಮುದಾಯ ಎಂಬುದೆಲ್ಲ ನನ್ನಿಂದ ಸಾಧ್ಯವಾಗದು ಎಂದೆನಿಸಿದೆ. ಹಾಗಾಗಿ ನಾನೇ ಈ ಪ್ರಸ್ತಾಪ ತಿರಸ್ಕರಿಸಿದ್ದೇನೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

 

 

 

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರಿನಲ್ಲಿ ಹವಾ ಸೃಷ್ಟಿಸಿದ ಪ್ರಧಾನಿ ಮೋದಿ.. ಮುಗಿಲು ಮುಟ್ಟಿದ ಮೋದಿ ಘೋಷಣೆ

Published

on

ಮಂಗಳೂರು:  ಪ್ರಧಾನಿ ನರೇಂದ್ರ ಮೋದಿಯವರು ಎ.14ರಂದು ಮಂಗಳೂರಿಗೆ ಭೇಟಿ ನೀಡಿದ್ದು,  ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ರಾತ್ರಿ ಸರಿ ಸುಮಾರು 7.45 ಕ್ಕೆ ಮಂಗಳೂರು ಆಗಮಿಸಿ ಪ್ರಧಾನಿ ನಾರಾಯಣ ಗುರು ವೃತ್ತದಲ್ಲಿ ನಾರಾಯಣಗುರುಗಳ ಪ್ರತಿಮೆಗೆ ಮಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಬಳಿಕ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ರೋಡ್ ಶೋ ನಡೆಸಿದ್ದಾರೆ.

ನಾರಾಯಣ ಗುರು ವೃತ್ತದಿಂದ ನವಭಾರತ್ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಸಮಾವೇಶ ರದ್ದಾಗಿ ರೋಡ್ ಶೋ ನಿಗದಿಯಾಗಿದ್ದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಭದ್ರತೆ ನಡೆಸಲಾಗಿತ್ತು. ಹೀಗಾಗಿ ರೋಡ್ ಶೋ ನಡೆಯುವ ರಸ್ತೆಯಲ್ಲಿ ರಸ್ತೆಯ ಇಕ್ಕೆಲೆಯಲ್ಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ರೋಡ್ ಶೋ ನಡೆದ ಲಾಲ್‌ಭಾಗ್ ಬಳ್ಳಾಲ್ ಭಾಗ್‌, ಪಿವಿಎಸ್ ಹಾಗೂ ರೋಡ್ ಶೋ ಕೊನೆಗೊಂಡ ನವಭಾರತ್ ಸರ್ಕಲ್‌ ವರೆಗೂ ಸಾವಿರಾರು ಜನರು ಮೋದಿಯವರಿಗಾಗಿ ಕಾದು ಕುಳಿತಿದದ್ದರು. ಮೋದಿ ಆಗಮಿಸುತ್ತಿದ್ದಂತೆ ಮೋದಿ ಘೋಷಣೆ ಮುಗಿಲು ಮುಟ್ಟಿದ್ದು ಅದು ರೋಡ್‌ ಶೋದ ಉದ್ದಕ್ಕೂ ಕೇಳಿಸಿ ಇಡೀ ನಗರವೇ ಮೋದಿ ಘೋಷ ಮೊಳಗಿತ್ತು. 7. 50 ಕ್ಕೆ ಆರಂಭವಾದ ರೋಡ್ ಶೋ 8. 45ಕ್ಕೆ ನವಭಾರತ್ ವೃತ್ತದಲ್ಲಿ ಅಂತ್ಯಗೊಂಡಿದೆ.

Read More..; ರೋಡ್‌ ಶೋ ವೇಳೆ ಕಲ್ಲು ತೂರಾಟ…! ಆಂದ್ರ ಸಿಎಂ ಹಣೆಗೆ ಗಾಯ…!

road show

 

Continue Reading

dehali

75 ಕೆಜಿ ವೆಯಿಟ್ ಲಿಫ್ಟಿಂಗ್ ಮಾಡಿ ನಿಬ್ಬೆರಗಾಗುವಂತೆ ಮಾಡಿದ 9 ವರ್ಷದ ಪೋರಿ..!

Published

on

ನವದೆಹಲಿ: 75 ಕೆ.ಜಿ ವೆಯಿಟ್ ಲಿಫ್ಟಿಂಗ್ ಮಾಡುವ ಮೂಲಕ 9 ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ದಾಖಲೆ ಮಾಡಿದ್ದಾರೆ. ಇವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಹರಿಯಾಣದ ಪಂಚಕುಲದ ಬಾಲಕಿಯಾದ ಈಕೆ ತನ್ನ ವಯಸ್ಸಿಗೆ ಮೀರಿ ಸಾಧನೆ ಮಾಡಿದ್ದಾಳೆ. ಅರ್ಪಿಯಾಳ ಸಾಧನೆಯನ್ನು ಮೆಚ್ಚಿ ಜನರು ಯಂಗೆಸ್ಟ್ ಡೆಡ್‌ಲಿಫ್ಟರ್ ಎಂದು ಕರೆಯುತ್ತಿದ್ದಾರೆ. ಬಾಲಕಿ ತನ್ನ 6ನೇ ವಯಸ್ಸಿನಲ್ಲಿ 45 ಕೆ.ಜಿ ವೇಟ್ ಲಿಫ್ಟ್ ಮಾಡುವ ಮೂಲಕ ದಾಖಲೆ ಮಾಡಿದ್ದರು. ಈ ಸಲ ಬರೋಬ್ಬರಿ 75 ಕೆ.ಜಿ ಭಾರ ಎತ್ತುವ ಮೂಲಕ ಭಾರತದಲ್ಲೇ ಹೆಸರನ್ನು ಪಡೆದಿದ್ದಾರೆ.

Continue Reading

dehali

‘ಗೋಮಾಂಸ ತಿನ್ನುವುದಿಲ್ಲ, ನಾನು ಹೆಮ್ಮೆಯ ಹಿಂದೂ’ ಎಂದ ಕಂಗನಾ ರಣಾವತ್

Published

on

ದೆಹಲಿ: ನಟಿ  ಕಂಗನಾ ರಣಾವತ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಇದೀಗ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇವರು ಹಿಮಾಚಲ ಪ್ರದೇಶದ ಲೋಕಸಭೆ ಕ್ಷೇತ್ರ ಮಂಡಿಯ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿದ್ದಾರೆ. ಕಂಗನಾ ಕೆಲವೊಂದು ವಿಚಾರಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದರು.  ಬೋಲ್ಡ್ ಆಗಿರುವ ಕಂಗನಾ ತಮ್ಮ ನೇರ ನುಡಿಯಿಂದ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು.

kangana

ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ವಿಜಯ್ ವಾಡೆಟ್ಟಿವಾರ್ ಅವರು ಕಂಗನಾ ಅವರು ಗೋಮಾಂಸವನ್ನು ಇಷ್ಟಪಡುತ್ತಾರೆ ಹಾಗೂ ಸೇವನೆ ಮಾಡುತ್ತಾರೆ ಎಂದು ಎಕ್ಸ್​​ನಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಎಕ್ಸ್​​ನಲ್ಲಿ​​​ ಭಾರೀ ಚರ್ಚೆಗೆ ಕಾರಣವಾಗಿದ್ದ ಕಂಗನಾ ಇದೀಗ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಂಗನಾ ವಿಜಯ್ ವಾಡೆಟ್ಟಿವಾರ್‌ವರ ಹೇಳಿಕೆಗೆ ತಮ್ಮ ಎಕ್ಸ್​​​ ಖಾತೆ ಮೂಲಕ ‘ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ನಾನು ಕಳೆದ ದಶಕಗಳಿಂದ ಆಯುರ್ವೇದ ಹಾಗೂ ಯೋಗವನ್ನು ಪಾಲನೆ ಮಾಡುತ್ತಿದ್ದೇನೆ. ಜೊತೆಗೆ ಇದನ್ನು ಪ್ರಚಾರ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನನ್ನ ಬಗ್ಗೆ ಈ ರೀತಿ ಅಪಪ್ರಚಾರ ಮಾಡುವುದು ನಾಚಿಕೆಗೇಡಿನ ವಿಷಯ.  ನಾನು ಹೆಮ್ಮೆಯ ಹಿಂದೂ. ಅದು ನನ್ನವರಿಗೆಲ್ಲರಿಗೂ ಗೊತ್ತಿದೆ. ಇಂತಹ ಆರೋಪಗಳು ನನ್ನ ಇಮೇಜ್ ಹಾಳು ಮಾಡುವುದಿಲ್ಲ. ಜೈ ಶ್ರೀ ರಾಮ್’ ಎಂದು ಟಾಂಗ್ ನೀಡಿದ್ದಾರೆ.

Continue Reading

LATEST NEWS

Trending