Sunday, May 22, 2022

ಲಡಾಕ್ ನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮಂಗಳೂರಿನ ” ಯೂಥ್ ಆಫ್ ಜಿ ಎಸ್ ಬಿ” ತಂಡ

ಮಂಗಳೂರು : ಸೆಪ್ಟೆಂಬರ್ 27, 2021ರಂದು ಜಗತ್ತಿನ “Highest Battle Field” ಎಂದೇ ಖ್ಯಾತಿಯಾಗಿರುವ ಲಡಾಕ್ ಪ್ರಾಂತ್ಯದ ಸಿಯಾಚಿನ್ ಮಿಲಿಟರಿ ಬೇಸ್ ಪ್ರವಾಸಿಗರ ವೀಕ್ಷಣೆಗೆ ಉದ್ಘಾಟನೆಗೊಂಡಿದೆ.

ಈ ಉದ್ಘಾಟನೆ ಸಂದರ್ಭದಲ್ಲಿ ಮಂಗಳೂರಿನ ಮತ್ತು ಕರ್ನಾಟಕದ ಏಕೈಕ ಪ್ರವಾಸಿಗರ ತಂಡವಾಗಿ “ಯೂಥ್ ಆಫ್ ಜಿ ಎಸ್ ಬಿ” ತಂಡ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಉದ್ಘಾಟನೆ ಮಾಡಿದ ಲಡಾಕ್ ಸಂಸದರಾಗಿರುವ ಜಮ್ಯಾಂಗ್ ತ್ಸೆರಿಂಗ್ ಅವರು ಭಾರತದ ಕೊನೆಯ ಹಳ್ಳಿಯಾಗಿರುವ ವಾರ್ಷಿ ಯಲ್ಲಿ ಮಾತನಾಡುತ್ತಾ ಮೋದಿಜೀ ನೇತೃತ್ವದ ಕೇಂದ್ರ ಸರಕಾರ ಇಂದು ಅಭೂತಪೂರ್ವ ನಿರ್ಧಾರ ತೆಗೆದುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ, ಲಡಾಕ್ ಪ್ರದೇಶದ ಆರ್ಥಿಕವಾಗಿ ಅಭಿವೃದ್ಧಿ ಜೊತೆಗೆ ತನ್ನ ಜೀವವನ್ನೂ ಲೆಕ್ಕಿಸದೇ ಜಗತ್ತಿನ ಅತ್ಯಂತ ದುರ್ಗಮ ಯುದ್ಧ ಪ್ರದೇಶವಾಗಿರುವ ಸಿಯಾಚಿನ್ ಮಿಲಿಟರಿ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಂಡು ಭಾರತೀಯ ಸೈನಿಕರಿಗೆ ಮತ್ತಷ್ಟು ಮನೋಸ್ಥೈರ್ಯ ತುಂಬಿಸುವ ಕಾರ್ಯ ಮಾಡಿದೆ.

ಸ್ವಾತಂತ್ರ್ಯ ಬಳಿಕ ಹಲವು ಸರಕಾರ ಆಢಳಿತ ನಡೆಸಿದ್ದು ಇಂತಹ ನಿರ್ಧಾರ ಯಾರೂ ತೆಗೆದುಕೊಂಡಿಲ್ಲ.

ಉದ್ಘಾಟನೆ ಸಮಯದಲ್ಲಿ ಆಗಮಿಸಿ ಐತಿಹಾಸಿಕ ಕ್ಷಣಕ್ಕೆ ಭಾಗಿಯಾದ ಮಂಗಳೂರಿನ ತಂಡ ಸಮೇತ ನಾನಾ ಭಾಗಗಳಿಂದ ಆಗಮಿಸಿದ ಪ್ರವಾಸಿಗರಿಗೆ ಹೃದಯ ಪೂರ್ವಕ ಧನ್ಯವಾದ ಸಮರ್ಪಿಸಿದರು.

ಯೂಥ್ ಆಫ್ ಜಿ ಎಸ್ ಬಿ ಮುಖ್ಯಸ್ಥರಾಗಿರುವ ಮಂಗಲ್ಪಾಡಿ ನರೇಶ ಶೆಣೈ ಹಾಗೂ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಕಾಂಗ್ರೆಸ್ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಬಿಜೆಪಿ

ಮಂಗಳೂರು: ಕಾಂಗ್ರೆಸ್ ಮತ್ತು ಮಾಜಿ ಶಾಸಕ ಜೆ ಆರ್ ಲೋಬೋ ಅವರು ಗೊಂದಲ ಸೃಷ್ಟಿಸಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್...

Big Breaking: ಪೆಟ್ರೋಲ್‌ 9.50 ಪೈಸೆ, ಡೀಸೆಲ್‌ 7 ರೂ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ರೂ ಹಾಗೂ 6ರೂ ರಷ್ಟು ಕಡಿತ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಘೋಷಿಸಿದ್ದಾರೆ. ಇದರಿಂದ ಪ್ರತಿ...

‘ಶಿವಲಿಂಗ’ ಪತ್ತೆ ಕುರಿತಂತೆ ಆಕ್ಷೇಪಾರ್ಹ ಪೋಸ್ಟ್: ದೆಹಲಿ ವಿವಿ ಪ್ರಾಧ್ಯಾಪಕನ ಬಂಧನ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ 'ಶಿವಲಿಂಗ' ಪತ್ತೆ ಕುರಿತಂತೆ ಹೇಳಿಕೆಗಳನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ನಿನ್ನೆ ರಾತ್ರಿ ದೆಹಲಿಯ ಉತ್ತರ...