LATEST NEWS
ಯುದ್ಧದ ಕಾರ್ಮೋಡ..! ಗಲ್ಫ್ ದೇಶದ 90 ಲಕ್ಷ ಭಾರತೀಯರಿಗೆ ಆತಂಕ..!
Published
2 months agoon
By
NEWS DESKನವದೆಹಲಿ : ಇಸ್ರೇಲ್ ಮೇಲಿನ ಇರಾನ್ ದಾಳಿಯಿಂದ ಕೊಲ್ಲಿ ರಾಷ್ಟ್ರಗಳ ಮೇಲೆ ಆತಂಕದ ಕರಿಛಾಯೆ ಮೂಡಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇದೇ ಮೊದಲು ಅಲ್ಲವಾದ್ರೂ, ಇದೀಗ ನಡೆಯುತ್ತಿರುವ ವಿದ್ಯಮಾನ ಇಂತಹ ಆತಂಕಕ್ಕೆ ಕಾರಣವಾಗಿದೆ.
ಗಾಜಾ, ಹೆಜ್ಬುಲ್ಲಾ ಮತ್ತು ಹೌತಿಗಳ ಮೇಲಿನ ನಿರಂತರ ದಾಳಿಗೆ ಪ್ರತೀಕಾರವಾಗಿ ಇರಾನ್ ಇಸ್ರೆಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅಕ್ಟೋಬರ್ 1 ರ ರಾತ್ರಿ 200ಕ್ಕೂ ಹೆಚ್ಚು ಕ್ಷಿಪಣಿಗಳ ಮೂಲಕ ಇಸ್ರೇಲ್‌ನ ನಿಗದಿತ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆದಿದೆ. ಇರಾನ್ ಮಾಡಿರುವ ಈ ದಾಳಿಗೆ ಅಮೆರಿಕಾ ಪ್ರತಿಕ್ರಿಯೆ ನೀಡಿದ್ದು, ಇರಾನ್‌ಗೆ ತಕ್ಕ ಶಾಸ್ತಿ ಮಾಡುವ ಎಚ್ಚರಿಕೆ ಕೂಡ ನೀಡಿದೆ. ಇದು ಈಗ ಆತಂಕ ಸೃಷ್ಟಿಸಿದ್ದು, ಇದು ದೊಡ್ಡ ದುರಂತಕ್ಕೆ ನಾಂದಿ ಹಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದು ಎರಡು ದೇಶದ ನಾಗರಿಕರು ಮಾತ್ರವಲ್ಲದೆ, ಇಡೀ ಗಲ್ಫ್ ದೇಶ ಹಾಗೂ ವಿಶ್ವಕ್ಕೆ ವ್ಯಾಪಿಸಬಹುದಾದ ಯುದ್ಧವಾಗಿ ಬದಲಾಗಬಹುದಾದ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಗಲ್ಫ್ ರಾಷ್ಟ್ರದಲ್ಲಿರುವ 90 ಲಕ್ಷ ಭಾರತೀಯರ ಬದುಕಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ತಜ್ಞರ ಪ್ರಕಾರ, ಅಮೆರಿಕ ಇಸ್ರೇಲ್‌ಗೆ ಬೆಂಬಲ ನೀಡದೇ ಇದ್ದಲ್ಲಿ ಇಸ್ರೇಲ್ ಸ್ಥಿತಿ ಗಂಭೀರವಾಗಬಹುದು. ಯಾಕಂದ್ರೆ, ಬಹುತೇಕ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ವಿರುದ್ಧವಾಗಿದ್ದು ಇಸ್ರೇಲ್ ನಾಶಕ್ಕಾಗಿ ಕಾಯುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಇಸ್ರೇಲ್, ಹಮಾಸ್, ಹಿಜ್ಬುಲ್ಲಾ ಮತ್ತು ಹೌತಿಗಳ ಜೊತೆಗೆ ಹೋರಾಡಿ ಬೇಸತ್ತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಮದ್ಯ ಪ್ರವೇಶ ಮಾಡುವುದು ಖಚಿತ ಎಂದು ಅಂದಾಜಿಸಲಾಗಿದೆ. ಹಾಗೊಂದು ವೇಳೆ ಅಮೆರಿಕಾ ಮಧ್ಯ ಪ್ರವೇಶ ಮಾಡಿದ್ರೆ ಈ ಯುದ್ಧ ದೀರ್ಘಕಾಲದವರೆಗೆ ಮುಂದುವರಿಯಬಹುದು. ಇದರಿಂದ ಜಗತ್ತಿನ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಇರಾನ್-ಇಸ್ರೇಲ್ ಯುದ್ಧ ಎಷ್ಟು ಅಪಾಯಕಾರಿ?
ಇಸ್ರೇಲ್ ಬೆಂಬಲಕ್ಕೆ ಅಮೆರಿಕಾ ಬಂದಲ್ಲಿ ಕೊಲ್ಲಿ ರಾಷ್ಟ್ರದಲ್ಲಿರುವ ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ನಡೆಸಲಿದೆ. ಈ ಬಗ್ಗೆ ಇರಾನ್ ಈಗಾಗಲೇ ಸ್ಪಷ್ಟ ಸಂದೇಶವನ್ನು ಅಮೆರಿಕಾಗೆ ರವಾನಿಸಿದೆ. ಇರಾನ್ ಕೊಲ್ಲಿ ರಾಷ್ಟ್ರದ ಅಮೆರಿಕ ನೆಲೆ ಮೇಲೆ ದಾಳಿ ನಡೆಸಿದ್ರೆ, ಅದು ಸಂಪೂರ್ಣ ಗಲ್ಫ್ ದೇಶಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ತೈಲ ಪೂರೈಕೆಯ ವ್ಯತ್ಯಯದ ಜೊತೆಗೆ ಜನರ ಉದ್ಯೋಗ, ಪ್ರಾಣಕ್ಕೂ ಅಪಾಯ ಎದುರಾಗುವ ಆತಂಕ ಇದೆ.
Baindooru
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
Published
8 minutes agoon
22/11/2024By
NEWS DESK4ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಉಡುಪಿಯ ಅಂಬಾಗಿಲು – ಪೆರಂಪಳ್ಳಿ ಕ್ರಾಸ್ ನಲ್ಲಿ ಸಂಭವಿಸಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಘಟನೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಇರದೇ ಇದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಸಿಮೆಂಟ್ ರೆಡಿಮಿಕ್ಸ್ ಲಾರಿ ಅಂಬಾಗಿಲಿನಿಂದ ಮಣಿಪಾಲದ ಕಡೆಗೆ ತೆರಳುತ್ತಿತ್ತು.
ಇದನ್ನೂ ಓದಿ : ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಪೆರಂಪಳ್ಳಿಗೆ ತೆರಳುವ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Baindooru
ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
Published
14 minutes agoon
22/11/2024By
NEWS DESK2ಬೆಂಗಳೂರು: ಇನ್ಮುಂದೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ! ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉಬರ್‌ನಿಂದ ಹೊಸ ಯೋಜನೆ. ಹೌದು, ಬೆಂಗಳೂರು ಎಂದಾಕ್ಷಣ ತಟ್ಟನೆ ನೆನಪಾಗುವುದು ಟ್ರಾಫಿಕ್ ಜಾಮ್.. ಇದನ್ನು ಗಮನದಲ್ಲಿಟ್ಟುಕೊಂಡು ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸಲು ಉಬರ್ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಶೀಘ್ರವೇ ಬೆಂಗಳೂರಿನಲ್ಲಿ ಉಬರ್ ಶಟಲ್ ಬಸ್ ಸೇವೆಯನ್ನು ಪರಿಚಯಿಸುತ್ತಿದೆ. ಈ ಬಗ್ಗೆ ಈಗಾಗಲೇ ಘೋಷಣೆ ಕೂಡ ಮಾಡಲಾಗಿದೆ. ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ದೆಹಲಿ, ಕೋಲ್ಕತ್ತಾ ಬಳಿಕ ಬೆಂಗಳೂರಿನಲ್ಲಿ ಈ ಉಬರ್ ಶಟಲ್ ಬಸ್ ಸೇವೆ ಜಾರಿಗೆ ಬರುತ್ತಿದೆ.
ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಜಾಗತಿಕ ರೈಡ್-ಹೇಲಿಂಗ್ ಸಂಸ್ಥೆಯ ಭಾರತದಲ್ಲಿನ ಹೊಸ ಕೊಡುಗೆಯಾದ ಉಬರ್ ಷಟಲ್ ಅನ್ನು ಅವರು ಪರಿಶೀಲಿಸಿದರು.ಈಗಲೇ ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಉಬರ್ ಷಟಲ್ ಅನ್ನು ಪ್ರಾರಂಭಿಸಲಾಗಿದೆ, ಹೆಚ್ಚಿನ ಜನರು ತಮ್ಮ ಪ್ರಯಾಣಗಾಗಿ ದೊಡ್ಡ ವಾಹನಗಳಲ್ಲಿ ಕಾಯ್ದಿರಿಸಲು ಸಹಾಯ ಮಾಡುತ್ತದೆ. ಇದು ನಿಗದಿತ ಮಾರ್ಗಗಳಲ್ಲಿ ಚಲಿಸುತ್ತದೆ ಮತ್ತು ಮುಂಚಿತವಾಗಿ ಬುಕ್ ಮಾಡಿದ ಸೀಟುಗಳನ್ನು ನೀಡುತ್ತದೆ.
ಉಬರ್ ಶಟಲ್ ಬಸ್ ಸೇವೆಯಿಂದ ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸಲು ಮತ್ತು ಬೆಂಗಳೂರಿನಂತಹ ನಗರಗಳಿಗೆ ಇದು ಉತ್ತಮವಾಗಿದೆ. ಹೆಚ್ಚು ಪರಿಣಾಮಕಾರಿ ಸಾರಿಗೆ ವ್ಯವಸ್ಥೆಯನ್ನು ರಚಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳ ಅಗತ್ಯವನ್ನು ಖರ್ಗೆ ಪ್ರತಿಪಾದಿಸಿದ್ದಾರೆ ಎಂದು ಉಬರ್ ಹೇಳಿಕೆಯಲ್ಲಿ ತಿಳಿಸಿದೆ.
ಉಬರ್ ಇಂಡಿಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು ಈ ಹಿಂದೆ ಕಂಪನಿಯು “ಬೆಂಗಳೂರಿನಲ್ಲಿ ಬಸ್ ಸೇವೆಯನ್ನು ಪ್ರಾರಂಭಿಸಲು ಬಹು ಮಧ್ಯಸ್ಥಗಾರರೊಂದಿಗೆ ಸಕ್ರಿಯ ಮಾತುಕತೆ ನಡೆಸುತ್ತಿದೆ” ಎಂದು ಹೇಳಿದ್ದರು. “ಈ ರೀತಿಯ ಸೇವೆಯನ್ನು ಪ್ರಾರಂಭಿಸಲು ನಮಗೆ ನಿಯಂತ್ರಣದ ಅಗತ್ಯವಿದೆ ಮತ್ತು ಅದನ್ನು ಸ್ವೀಕರಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು. “ನಿಯಂತ್ರಕರು ನಮಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಭಾವಿಸಿ ನಾವು ಉಬರ್ ಬಸ್ ಅನ್ನು ಬೆಂಗಳೂರಿಗೆ ತರಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಉತ್ಸಾಹದ ಯೋಜನೆಯಾಗಿದೆ, ಆದರೆ ಇದು ಗ್ರಾಹಕರು ಬಯಸಿದ ರೀತಿಯಲ್ಲಿ ನಾವು ತಿರುಗುತ್ತಿರುವ ಸ್ಥಳೀಕರಣದ ಪ್ರಯಾಣವನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ. ಸಿಂಗ್ ಪ್ರಕಾರ, ಶಟಲ್ ಸೇವೆಯು ಹೆಬ್ಬಾಳದಿಂದ ಮತ್ತು ಹೊರವರ್ತುಲ ರಸ್ತೆಯಲ್ಲಿರುವ ಟೆಕ್ ಹಬ್‌ನವರೆಗೆ ಚಲಿಸಬಹುದು.
Baindooru
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
Published
49 minutes agoon
22/11/2024By
NEWS DESK2ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡು ತಾಲೂಕಿನ ಇಂದಿರಾಗಾಂಧಿ ವಸತಿ ನಿಲಯದ ಮಕ್ಕಳಲ್ಲಿ ಮಂಗನಬಾವು ಸೋಂಕು ಉಲ್ಬಣಿಸಿದ್ದು, ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.
ಇಂದಿರಗಾಂಧಿ ವಸತಿ ನಿಲಯದಲ್ಲಿ ಒಟ್ಟು 210 ಮಕ್ಕಳಿದ್ದಾರೆ. ನ.16 ರಂದು ಐದು ವಿದ್ಯಾರ್ಥಿಗಳಲ್ಲಿ ಮಾತ್ರ ಸೋಂಕು ಕಾಣಿಸಿತ್ತು. ಅದಾದ ಮೂರು ದಿನದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೋಂಕು ಕಾಣಿಸಿಕೊಂಡಿತ್ತು. ಇದೀಗ 125 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ವೈದ್ಯಕೀಯ ತಂಡವೊಂದನ್ನು ಮುಂಡಗೋಡು ವಸತಿ ನಿಲಯಕ್ಕೆ ನಿಯೋಜನೆ ಮಾಡಲಾಗಿದ್ದು, ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ.
ಮಂಗನಬಾವು ಹರಡುವುದು ಹೇಗೆ?
ಮಂಗನಬಾವು ರೋಗವು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಹೀಗಾಗಿ ಮತ್ತಷ್ಟು ವಿದ್ಯಾರ್ಥಿಗಳು ಸೋಂಕಿತರಾಗುವ ಆತಂಕ ಉಂಟಾಗಿದೆ.
ಮಂಗನಬಾವು ಲಕ್ಷಣಗಳೇನು?
ಆರಂಭದಲ್ಲಿ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡು ಬಳಿಕ ಮುಖದ ಮೇಲೆ ಬಾವು ಕಾಣಿಸುತ್ತದೆ. ಸದ್ಯ ಮಕ್ಕಳಿಗೂ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಕ್ಕಳಲ್ಲಿ ಕಾಣಿಸಿಕೊಂಡ ಮಂಗಬಾವು ಇದೀಗ ಮತ್ತಷ್ಟು ಗಂಭೀರವಾಗತೊಡಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುವುದರ ಜತೆಗೆ, ರೋಗ ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.
LATEST NEWS
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ
ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾ*ವು: ಮೂವರ ಬಂಧನ
ಕಾಸರಗೋಡು: ಮಹಿಳಾ ಪೊಲೀಸ್ಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ
ವಾಟ್ಸಾಪ್ ಗ್ರೂಪ್ ನೋಡಿ ಪತ್ನಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ ಪತಿ..!
ಎಚ್ಚರ!! ಪ್ರೀತಿ ಪಾತ್ರರ ಸಾ*ವೇ ಟಾರ್ಗೆಟ್; ಸೈಬರ್ ಕ್ರೈಂನಲ್ಲಿ ಅಂ*ತ್ಯಸಂಸ್ಕಾರ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ