LATEST NEWS
ಹೆಣದ ಮೇಲಿನ ವಸ್ತ್ರವನ್ನೂ ಕಳವುಗೈಯುವ ಕಿರಾತಕರು ಇದ್ದಾರೆ ಅಂದ್ರೆ ನಂಬ್ತೀರಾ..!
ಉತ್ತರ ಪ್ರದೇಶ: ಹೆಣಗಳ ಮೇಲಿರುವ ಬಟ್ಟೆಗಳನ್ನು ಸಲಿಸಾಗಿ ಕಳವು ಮಾಡುತ್ತಿದ್ದ ಕಫನ್ ಕಳ್ಳರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಸ್ಮಶಾನ ಸ್ಥಳಗಳಿಂದ ಸತ್ತವರ ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸತ್ತವರನ್ನು ಮುಚ್ಚಿಡಲು ಬಳಸಿದ ಬಟ್ಟೆಗಳನ್ನು, ಸೀರೆಗಳನ್ನು, ಬೆಡ್ಶೀಟ್ಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಿಂದ 520 ಬೆಡ್ಶೀಟ್ಗಳು, 127 ಕುರ್ತಾಗಳು, 52 ಬಿಳಿ ಸೀರೆಗಳು ಮತ್ತು ಬಟ್ಟೆಯ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕದ್ದ ಬಟ್ಟೆಗಳನ್ನು ತೊಳೆದು, ಇಸ್ತ್ರಿ ಮಾಡಿದ ನಂತರ ಗ್ವಾಲಿಯರ್ ಕಂಪನಿಯ ಲೇಬಲ್ ಬಳಸಿ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳನ್ನು ಪ್ರವೀಣ್ ಜೈನ್, ಆಶೀಷ್ ಜೈನ್, ರಿಷಬ್ ಜೈನ್, ಶರವಣ್ ಕುಮಾರ್ ಶರ್ಮಾ, ರಾಜು ಶರ್ಮಾ, ಬಾಬುಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಟ್ಟೆ ವ್ಯಾಪಾರ ಮಾಡುತ್ತಿದ್ದವರು.
ಇವರ ವಿರುದ್ಧ ಸೆಕ್ಷನ್ 188, 269, 270, 457, 380, 411, 420, 467, 471 ಕಲಂ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ.
DAKSHINA KANNADA
ನರ್ಸ್ಗೆ ಶಾಕ್ ನೀಡಿದ ಅಂಬ್ಯುಲೆನ್ಸ್..! ಇದು ಮನಕಲಕುವ ಘಟನೆ..!
ನಿರಂಜಿನಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿರೋ ಆಸ್ಪತ್ರೆಯ ತುರ್ತು ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವತಿ. ಮುಂಜಾನೆ ಆಸ್ಪತ್ರೆಗೆ ಬಂದ್ರೆ ಡ್ಯೂಟಿ ಮುಗಿಸಿ ಮತ್ತೆ ಮನೆಗೆ ವಾಪಾಸಾಗೋದು ಸಂಜೆಯ ವೇಳೆಗೆ. ಆಸ್ಪತ್ರೆಯಲ್ಲಿರೋ ಆಕೆಗೆ ಸಾವು ನೋವು ಎಲ್ಲವನ್ನೂ ನೋಡಿ ಅಭ್ಯಾಸ ಆಗಿದೆ. ಆದ್ರೆ ಇಂದು ಮಾತ್ರ ಅಂಬ್ಯುಲೆನ್ಸ್ನಲ್ಲಿ ಬಂದಿರೋ ಮೃತ ದೇಹ ನೋಡಿ ಆಕೆಯ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ಆಕ್ರಂದನ ನೋಡಿ ಶಾಕ್ ಆದ ಇತರ ಸಿಬ್ಬಂದಿ ವಿಚಾರ ತಿಳಿದ ಬಳಿಕ ತಾವೂ ಕಂಬನಿ ಮಿಡಿದಿದ್ದಾರೆ.
ಇಂದು ನಿರಂಜಿನಿ ಆಸ್ಪತ್ರೆಗೆ ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಡ್ಯೂಟಿಯಲ್ಲಿದ್ದ ವೇಳೆ ಅಂಬ್ಯುಲೆನ್ಸ್ ಒಂದು ವೇಗವಾಗಿ ಬಂದು ಗಂಭೀರವಾಗಿದ್ದ ಇಬ್ಬರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಶಿಫ್ಟ್ ಮಾಡಿದೆ. ದೇಹ ಜರ್ಜರಿತವಾಗಿದ್ದ ಒಂದು ದೇಹವನ್ನು ಅಂಬ್ಯುಲೆನ್ಸ್ನಿಂದ ಇಳಿಸಿದಾಗ ಅದಾಗಲೇ ಆ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮತ್ತೊಂದು ಮಹಿಳೆಯೂ ಗಂಭೀರವಾಗಿದ್ದು ತಕ್ಷಣ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ವೇಳೆ ಮೃತ ದೇಹವನ್ನು ನೋಡಿದ ನಿರಂಜನಿ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಆರಂಭಿಸಿದ್ದಾಳೆ. ಆಕೆಯ ಅಳುವಿಗೆ ಕಾರಣವಾಗಿದ್ದು ಅಲ್ಲಿದ್ದ ಮೃತ ದೇಹ ಆಕೆಯ ತಂದೆಯದೇ ಆಗಿದ್ದು.
ಮುಂಜಾನೆ ತಂದೆ ತಾಯಿ ಇಬ್ಬರೂ ಅಜ್ಜಾವರ ಗ್ರಾಮದಲ್ಲಿನ ಕೆಎಫ್ಡಿಸಿಗೆ ಕೆಲಸಕ್ಕೆ ಹೋಗಿ ವಾಪಾಸಾಗುವಾಗ ಜೀಪ್ ಒಂದು ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಜೀಪ್ ಅಡಿಗೆ ಬಿದ್ದಿದ್ದ ತಂದೆ ವಿನಾಯಕ ಮೂರ್ತಿ ಮೃ*ತ ಪಟ್ಟಿದ್ದರೆ, ತಾಯಿ ಮಂಜುಳ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ಇದ್ಯಾವುದು ವಿಚಾರ ಗೊತ್ತಿಲ್ಲದ ನಿರಂಜಿನಿ ಎಂದಿನಂತೆ ಇದೂ ಒಂದು ಅಕ್ಸಿಡೆಂಟ್ ಕೇಸ್ ಅಂತ ಅಟೆಂಡ್ ಮಾಡಲು ಹೋಗಿದ್ದಾಳೆ. ಅಂಬ್ಯುಲೆನ್ಸ್ನಲ್ಲಿ ತಂದೆಯ ಮೃತ ದೇಹ ಹಾಗೂ ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಾಯಿಯನ್ನ ನೋಡಿದ್ರೆ ಮಗಳ ಪರಿಸ್ಥಿತಿ ಹೇಗಿರಬಹುದು ಅನ್ನೋದು ಊಹಿಸಲೂ ಅಸಾದ್ಯ. ತಾಯಿ ಮಂಜುಳ ಪರಿಸ್ಥಿತಿ ಕೂಡಾ ಗಂಭೀರವಾಗಿದ್ದು, ಬೆನ್ನು ಮೂಳೆಗೆ ಗಾಯವಾದ ಮಾಹಿತಿ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
LATEST NEWS
ಹೋಟೆಲ್ನಲ್ಲಿ ಅ*ಗ್ನಿ ದುರಂತ; 6 ಮಂದಿ ಸಜೀವ ದ*ಹನ
ಪಾಟ್ನಾ: ಹೋಟೆಲ್ವೊಂದರಲ್ಲಿ ಆಕಸ್ಮಿಕವಾಗಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 6 ಜನರು ಸಜೀವವಾಗಿ ದಹನಗೊಂಡು ಸಾ*ವನ್ನಪ್ಪಿದ್ದು ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ರೈಲು ನಿಲ್ದಾಣದ ಸಮೀಪದ ಹೋಟೆಲ್ನಲ್ಲಿ ಬೆಂ*ಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲೇ 6 ಜನರು ಮೃ*ತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಹೋಟೆಲ್ ಒಳಗಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಬೆಂ*ಕಿಯಿಂದಾಗಿ ಹೋಟೆಲ್ನಲ್ಲಿನ ಎಲ್ಲ ವಸ್ತುಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅ*ಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಾಹಿತಿ ಪ್ರಕಾರ ಹೋಟೆಲ್ನಲ್ಲಿನ ಸುಮಾರು 45 ಜನರನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಕಿಯಿಂದಾಗಿ ಸುಟ್ಟಗಾಯಗಳಿಂದ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ಹೋಟೆಲ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂ*ಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ಹೋಟೆಲ್ನಲ್ಲಿ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸದ ಕಾರಣ 6 ಜನರ ಸಾ*ವಿಗೆ ಕಾರಣವಾಗಿದೆ. ಸದ್ಯ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
FILM
ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?
ಬೆಂಗಳೂರು: ಜೀ ಕನ್ನಡ ವಾಹಿನಿ ವಿಭಿನ್ನ ರೀತಿಯ ಕಥೆಗಳನ್ನೊಳಗೊಂಡ ಧಾರವಾಹಿಗಳ ಜೊತೆಗೆ ರಿಯಾಲಿಟಿ ಶೋಗಳೂ ಜನರ ಮನಸ್ಸು ಗೆದ್ದಿದೆ. ಜೀ ಕನ್ನಡ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಗಳಲ್ಲಿ ಜನರನ್ನು ನಕ್ಕು ನಗಿಸುವ ರಿಯಾಲಿಟಿ ಶೋ ಅಂದ್ರೆ ಅದು ಕಾಮಿಡಿ ಕಿಲಾಡಿಗಳು… ಹೌದು, ನಗುವಿನ ಅಲೆಯಲ್ಲಿ ತೇಲಿಸಿ ಮನೆಯವರೆಲ್ಲರೂ ಒಟ್ಟಾಗಿ ಕೂತು ನೋಡುವಂತಹ ಶೋ ‘ಕಾಮಿಡಿ ಕಿಲಾಡಿಗಳು’.
ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಕಾರ್ಯಕ್ರಮವನ್ನು ‘ಸೈಡ್ಗಿಡ್ರಿ ನಿಮ್ ಟೆನ್ಷನ್ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು’ ಎಂದು ಶೋ ಆರಂಭ ಮಾಡ್ತಾ ಇದ್ದು ಕರ್ನಾಟಕವನ್ನೇ ನಗುವಿನ ಕಡಲಲ್ಲಿ ತೇಲಿಸುವುದಿತ್ತು. ಇದೀಗ ಸೀಸನ್ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼಮೂಲಕ ನಿಮ್ಮನ್ನು ಮನರಂಜಿಸಲು ಸಿದ್ಧವಾಗಿದೆ.
ಮುಂದೆ ಓದಿ..; “ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
ಪ್ರೀಮಿಯರ್ ಲೀಗ್ನಲ್ಲಿ ಇರಲಿದ್ದಾರೆ 5 ಜಡ್ಜಸ್..!
ಈ ಕಾಮಿಡಿ ಪ್ರೀಮಿಯರ್ ಲೀಗ್ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ಸ್ಟೇಜ್ನಲ್ಲಿ ಕಂಟೆಂಸ್ಟೆಂಟ್ಗಳ ಕುರಿತು ಜಡ್ಜಸ್ ಗಳಲ್ಲಿ ಕಮೆಂಟ್ಸ್ ಕೆಳ್ತಾ ಇದ್ದ ನಿರೂಪಕರು ಈಗ ತಾವೇ ಜಡ್ಜ್ಮೆಂಟ್ ನೀಡಲು ಹೊರಟಿದ್ದಾರೆ. ಹೌದು, ನಿರೂಪಕರುಗಳಾದ ಅನುಶ್ರೀ, ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರಂತೆ.
5 ತಂಡಗಳು.. 1 ಟ್ರೋಫಿಗಾಗಿ ಗುದ್ದಾಟ..!
ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಬರೋಬ್ಬರಿ 1 ಲಕ್ಷ ಬಹುಮಾನ ಪಡೆಯುವ ಅವಕಾಶವಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು ಇದಕ್ಕೆ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ತೆರೆ ಬೀಳಲಿದೆ.