Connect with us

    DAKSHINA KANNADA

    ದಿ| ಪ್ರವೀಣ್ ನೆಟ್ಟಾರು ಕನಸನ್ನು ನನಸು ಮಾಡಿದ ಬಿಜೆಪಿ- ಭವ್ಯ ಭಾರತಕ್ಕೆ ಪ್ರವೀಣ್ ತ್ಯಾಗ ಶ್ರೇಷ್ಟವೆಂದ ಡಾ. ಪ್ರಭಾಕರ ಭಟ್

    Published

    on

    ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕಾಗಿ ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನೂತನ ಮನೆ ನಿರ್ಮಾಣ ಮಾಡಲಾಗಿದ್ದು, ಅದರ ಗೃಹ ಪ್ರವೇಶ ಕಾರ್ಯಕ್ರಮ ಇಂದು ನಡೆಯಿತು.

    ಪುತ್ತೂರು:ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕಾಗಿ ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನೂತನ ಮನೆ ನಿರ್ಮಾಣ ಮಾಡಲಾಗಿದ್ದು, ಅದರ ಗೃಹ ಪ್ರವೇಶ ಕಾರ್ಯಕ್ರಮ ಇಂದು ನಡೆಯಿತು.

    ಸಮಾರಂಭಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರವೀಣ್ ನೆಟ್ಟಾರು ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಪ್ರವೀಣ್ ನೆಟ್ಟಾರು ನಮ್ಮ ಪಕ್ಷದ ನಿಷ್ಟವಂತ ಕಾರ್ಯಕರ್ತ. ಅವನಿಗೆ ಅವನದೇ ಆದ ಹಲವಾರು ಕನಸುಗಳಿತ್ತು.

    ಅತನ ಸಾವು ಸಂಭವಿಸಿದಾಗ ಕನಸಿನಲ್ಲಿ ಒಂದಾದ ಮನೆ ನಿರ್ಮಾಣದ ಕನಸು ಅರ್ಧದಲ್ಲೇ ನಿಂತಿತ್ತು. ಆ ಕನಸನ್ನು ನನಸು ಮಾಡಲು ನಾವೆಲ್ಲಾ ಕೂತು ಚರ್ಚೆ ಮಾಡಿದೆವು. ಪ್ರವೀಣ್ ಹತ್ಯೆ ನಡೆಸಿದ ಆರೋಪಿಗಳ ಬಂಧನವಾಗಿದ್ದು ನಮ್ಮ ಸರಕಾರ ಕಾರ್ಯರ್ತನ ಸಾವಿಗೆ ನ್ಯಾಯ ಒದಗಿಸಿದೆ ಎಂದರು.

    ಇನ್ನು ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಪ್ರವೀಣ್ ನ ಕನಸು ಕೇವಲ ಮನೆ ಕಟ್ಟುವುದು ಮಾತ್ರವಲ್ಲ. ಆತನದು ರಾಷ್ಟ್ರ ಕಟ್ಟುವ ಕೆಲಸಕ್ಕಾಗಿ.ಇದಕ್ಕಾಗಿ ಆತ ಪ್ರಾಣವನ್ನೆ ಬಲಿದಾನ ಮಾಡಿದ ಯುವಕನಾಗಿದ್ದಾನೆ ಎಂದು ನೆಟ್ಟಾರು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.


    ಇನ್ನು ಸುಂದರವಾಗಿ ಕಟ್ಟಿದ ಮನೆಗೆ “ಪ್ರವೀಣ್ ನಿಲಯ ಎಂದು ಹೆಸರು ಇಡಲಾಗಿದ್ದು, ಈ ನಿಟ್ಟಿನಲ್ಲಿ ಬೆಳಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ನಡೆಯಿತು.

    8.45 ಮುಹೂರ್ತದಲ್ಲಿ ಗೃಹ ಪ್ರವೇಶ , ಬೆಳಗ್ಗೆ 11ಕ್ಕೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಜನಾ ಸಂಕೀರ್ತನೆ ನಡೆಯಿತು. ರಾತ್ರಿ 7ಕ್ಕೆ ಮನೆಯಲ್ಲಿ ಕಲ್ಲುರ್ಟಿ ದೈವದ ನೇಮ ನೆರವೇರಲಿದೆ.

     

    Click to comment

    Leave a Reply

    Your email address will not be published. Required fields are marked *

    Baindooru

    ಕದ್ರಿ ಪಾರ್ಕ್‌ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್‌ನಿಂದ ಲಾಂಛನ ಬಿಡುಗಡೆ

    Published

    on

    ಮಂಗಳೂರು : ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಶರಧಿ ಪ್ರತಿಷ್ಟಾನವು ಆಯೋಜಿಸುವ ‘ ಕಲಾ ಪರ್ಬ ‘ ಇದರ ಲಾಂಛನ ಮತ್ತು ಕರಪತ್ರವನ್ನು ಇಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಬಿಡುಗಡೆ ಗೊಳಿಸಿದರು.

    ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ಕಲಾ ಪರ್ಬವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ – ಅಮೂರ್ತ, ಹಿರಿಯ – ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ ಅಭಿವ್ಯಕ್ತ ಹರಿವು, ಸೆಳವುಗಳ ಮೂಲಕ ಮೇಳದ ರೂಪದಲ್ಲಿ ಇಲ್ಲಿ ಆಗುತ್ತಿರುವುದು ಕಲಾ ಸಂಭ್ರಮ ಮತ್ತು ಕಲಾ ಜಂಗಮ.

    ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರುವುದು. ಕಲಾಕೃತಿಗಳನ್ನು ಮಿತ ದರದಲ್ಲಿ ಖರೀದಿಸುವವರಿಗೆ ಉತ್ತಮ ಅವಕಾಶವಿದು.

    ಲಾಂಛನದ ಅರ್ಥ :

    ಈ ಕಲಾಪರ್ಬದ ಲಾಂಛನವು ಒಂದು ಸಂದೇಶವನ್ನು ನೀಡುತ್ತಿದೆ. ಇಲ್ಲಿ ಒಂದು ಕ್ಯಾನ್ವಾಸ್ ನಲ್ಲಿ 3 ಬಣ್ಣಗಳ ಸಂಗಮ ( K ) ಇಲ್ಲಿ ಕ್ಯಾನ್ವಾಸ್ ಕಲಾಕೃತಿಯ ಪ್ರತೀಕವಾದರೂ ನಮ್ಮ ಸಮಾಜವೇ ಒಂದು ರೀತಿಯ ಕ್ಯಾನ್ವಾಸ್ ಎಂಬ ಚೌಕಟ್ಟು. ಈ ಬದುಕಿನ ಚೌಕಟ್ಟಿನ ಒಳಗೆ ಎಲ್ಲರದ್ದೂ ಒಂದು ರೀತಿಯ ಬಣ್ಣದ ಬದುಕು. ನಮ್ಮ ನಿತ್ಯ ದಿನಚರಿ, ಚಟುವಟಿಕೆಗಳಿಂದ ಸಮಾಜಕ್ಕೆ, ಪ್ರಕೃತಿಗೆ ಒಂದು ಕೊಡುಗೆಯನ್ನು ನೀಡಬೇಕಾದರೆ ನಮ್ಮ ಸೀಮಿತ ಚೌಕಟ್ಟಿನಿಂದ ವಾದ ಮತ್ತು ಪಾದಗಳನ್ನು ಹೊರಗಿಡಲೇ ಬೇಕು. ಇದರ ಪ್ರತಿ ರೂಪವಾಗಿ ಕ್ಯಾನ್ವಾಸ್ ನಿಂದ ಒಂದು ಕಡೆ ಕುಂಚ ( ವಾದ…ತತ್ವ, ಸಿದ್ದಾಂತ ) ಹೊರಗೆ ಬಂದಿರುತ್ತದೆ. ಇನ್ನೊಂದು ಕಡೆ ಹೆಜ್ಜೆ ( ಪಾದ…ನಡೆ, ನಡತೆ ) ಹೊರಗೆ ಬಂದಿರುತ್ತದೆ.

    ಅಂದರೆ ಕಲಾಕ್ಷೇತ್ರದಲ್ಲಿ ಆಗಲಿ, ಸಮಾಜದಲ್ಲಾಗಲಿ ನಾವು ನಮ್ಮದೇ ಸೀಮಿತ ಬಣ್ಣ, ಬದುಕು ಎಂಬ ಚೌಕಟ್ಟಿನಲ್ಲಿ ಕಂಡು ಕೊಂಡದ್ದಕ್ಕಿಂತ, ನಾವು ಚೌಕಟ್ಟು ಮೀರಿ ಹೊರ ಆಯಾಮವನ್ನು ತಲುಪಲು ಪ್ರಯತ್ನಿಸಿದರೆ ( ಖಾಸಗಿ ಬದುಕಿನಿಂದ ಸಾಮಾಜಿಕ ಬದುಕಿಗೆ ) ಉತ್ತಮವಾದ ಕಲಾಕೃತಿಯನ್ನು ಮತ್ತು ಸಮಾಜವನ್ನು ರೂಪಿಸಬಹುದು ಎಂಬುದು ಈ ಲಾಂಛನದ ಒಳಾರ್ಥ.

    ಅದೇ ರೀತಿ ಕರ ಪತ್ರದಲ್ಲಿ ಬಣ್ಣದ ಹುಡುಗಿಯೊಬ್ಬಳು ಸಂಭ್ರಮಿಸುತ್ತಿದ್ದಾಳೆ. ಆಕೆಯ ಮುಖ ಬಣ್ಣದ ಪಾಲೇಟ್ ಮತ್ತು ನೀರಿನ ಹೂಜಿ, ಕೈ, ಕಾಲುಗಳು ಕುಂಚ ( ಚಿತ್ರ ಕಲಾ ಮೇಳ ಆಗಿರುವುದರಿಂದ ) ಕೆಳಗಿನ ಪಾದದ ಕುಂಚಗಳಲ್ಲಿ ಹೆಜ್ಜೆ – ಗೆಜ್ಜೆ ( ಈ ಪರ್ಬದಲ್ಲಿ ನೃತ್ಯವೂ ಇರುವುದರಿಂದ ) ಉಟ್ಟ ಲಂಗವು ಶಿಲಾ ಹಾಸುಗಳ ಪ್ರತಿರೂಪ ( ಈ ಪರ್ಬದಲ್ಲಿ ಶಿಲ್ಪ ಕಲೆಯೂ ಇರುವುದರಿಂದ ) ಎದೆ ಭಾಗದಲ್ಲಿ ಕ್ಯಾಮೆರಾ ಲೆನ್ಸ್ ( ಈ ಪರ್ಬದಲ್ಲಿ ಛಾಯಾ ಚಿತ್ರ ಪ್ರದರ್ಶನವೂ ಇರುವುದರಿಂದ ) ಇದೆಲ್ಲರ ಪ್ರತೀಕವಾಗಿ ಈ ಚಿತ್ರವನ್ನು ರಚಿಸಲಾಗಿದೆ.

    ಬನ್ನಿ ಕಲಾ ಪರ್ಬ ನಿಮ್ಮದೇ…ಬಣ್ಣದ ಲೋಕದಲ್ಲಿ ಸಂಭ್ರಮಿಸೋಣ. ನಿಮ್ಮ ಬೆಂಬಲವೇ ಈ ಪರ್ಬದ ಯಶಸ್ಸು

    Continue Reading

    Baindooru

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    LATEST NEWS

    Trending