Connect with us

    DAKSHINA KANNADA

    ಪ್ರಯಾಣಿಕರನ್ನು ರಸ್ತೆ ಮಧ್ಯೆ ಇಳಿಸಿ ಟ್ಯಾಕ್ಸಿ ವಶಪಡಿಸಿದ ಪೊಲೀಸರ ವಿರುದ್ಧ ಜಿಲ್ಲಾಧಿಕಾರಿ ರವಿಕುಮಾರ್ ಗರಂ

    Published

    on

    ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಓಡಾಡಲು ಅಗತ್ಯವಾಗಿ ಬೇಕಾಗಿರುವ ವಾಹನಗಳ ವ್ಯವಸ್ಥೆಗೆ ಪೊಲೀಸರು ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಇಳಿಸಿ ಕಾರುಗಳನ್ನು ವಶಪಡಿಸುತ್ತಿದ್ದಾರೆ ಇಂತಹ ಕ್ರಮದ ವಿರುದ್ಧ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳೂರು : ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಓಡಾಡಲು ಅಗತ್ಯವಾಗಿ ಬೇಕಾಗಿರುವ ವಾಹನಗಳ ವ್ಯವಸ್ಥೆಗೆ ಪೊಲೀಸರು ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಇಳಿಸಿ ಕಾರುಗಳನ್ನು ವಶಪಡಿಸುತ್ತಿದ್ದಾರೆ ಎಂದು ವರದಿಯನ್ನು ನಮ್ಮ ಕುಡ್ಲ ವಾಹಿನಿ ಬಿತ್ತರಿಸಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರವಿಕುಮಾರ್ ಎಂ ಆರ್‌ ಅವರು ಪೊಲೀಸರ ಇಂತಹ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರಕಾರಿ ವಾಹನ, ಸರಕಾರಿ ಸ್ವಾಮ್ಯದ ಕಚೇರಿ ವಾಹನ, ಕಂಪೆನಿ , ಕೈಗಾರಿಕೆಗಳ ಅಧೀನದ ವಾಹನವನ್ನು ಚುನಾವಣೆಗೆ ಬಳಸಲಾಗುತ್ತದೆ.

    ಇದಕ್ಕಿಂತ ಹೆಚ್ಚು ವಾಹನಗಳು ಅಗತ್ಯವಿದ್ದರೆ ಸಾರ್ವಜನಿಕ ವಾಹನಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

    ಆದರೆ ಪ್ರಯಾಣಿಕರು ಇದ್ದ ಸಂದರ್ಭದಲ್ಲಿಯೇ ವಾಹನಗಳನ್ನು ಪಡೆದುಕೊಳ್ಳಲು ಅವಕಾಶ ಇಲ್ಲ.

    ಈ ಬಗ್ಗೆ ದೂರುಗಳೇನಾದರೂ ಇದ್ದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿ ದೂರು ನೀಡಿ ಎಂದು ಅವರು ಹೇಳಿದ್ದಾರೆ.

    ನಿನ್ನೆ ಬೆಳಿಗ್ಗೆ ಏಕಾಏಕಿಯಾಗಿ ನಗರದ ಪೊಲೀಸರು ಕೆಲವು ಕಡೆಗಳಲ್ಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವಾಗಲೇ ಜನರನ್ನು ಬಲವಂತವಾಗಿ ಇಳಿಸಿ, ವಶಪಡಿಸಿಕೊಂಡು ಆರ್‌ಟಿಒ ಕಚೇರಿಗೆ ಕೊಂಡು ಹೋಗುತ್ತಿದ್ದರು.

    ಸಾರ್ವಜನಿಕರು ಮುಂಚಿತವಾಗಿಯೇ ವಾಹನಗಳನ್ನು ಕಾದಿರಿಸಿರುತ್ತಾರೆ.

    ಆದರೆ ಮಾರ್ಗ ಮಧ್ಯದಲ್ಲಿಯೇ ತಡೆದು ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ ಎಂದು ಅದಾನಿ ಗ್ರೂಪ್‌ನ ದಕ್ಷಿಣ ಭಾರತ ಸಿಇಒ ಆಗಿದ್ದ ಕಿಶೋರ್ ಆಳ್ವಾ ಕೂಡಾ ಪೊಲೀಸರ ವರ್ತನೆಯನ್ನು ಖಂಡಿಸಿದ್ದರು.

    ಅಲ್ಲದೆ ಅವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪೊಲೀಸರ ಇಂತಹ ನೀಚ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಕನಿಷ್ಠ ಮಾನವೀಯತೆಯನ್ನೂ ಮರೆತ ಪೊಲೀಸರು ತಾವು ತಪ್ಪು ಮಾಡಿದ್ದಲ್ಲದೇ ಅದನ್ನೂ ಸಮರ್ಥನೆ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಪೊಲೀಸರ ಈ ದರ್ಪದ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

    ಪ್ರಯಾಣಿಕರು ಸಂಚರಿಸುತ್ತಿರುವಾಗಲೇ ಪೊಲೀಸರು ಬಲವಂತವಾಗಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿರುವುದನ್ನು ಖಂಡಿಸಿ, ಹಾಗೂ ಅಧಿಕಾರಿಗಳ ನೀಡುವ ತೊಂದರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೇ 10ರಂದು ಮತದಾನವನ್ನೇ ಬಹಿಷ್ಕಾರ ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮನ್‌ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಅಧ್ಯಕ್ಷ ಆನಂದ್ ಕೆ ಬೆದರಿಕೆ ಹಾಕಿದ್ದರು.

    DAKSHINA KANNADA

    ಎಡನೀರು ಮಠದ ಶ್ರೀಗಳ ಮೇಲೆ ಹ*ಲ್ಲೆ ಪ್ರಕರಣ: ಶಾಸಕ ಡಾ.ಭರತ್ ಶೆಟ್ಟಿ ವೈ ಖಂಡನೆ

    Published

    on

    ಕಾವೂರು: ಕಾಸರಗೋಡು ಬೊವಿಕ್ಕಾನದಲ್ಲಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾದರ ವಾಹನಕ್ಕೆ ಹಾ*ನಿ ಮಾಡಿರುವುದನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

    ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಪುಂಡರು, ಹಿಂದು ವಿರೋಧಿ ಶಕ್ತಿಗಳು ಸವಾಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು  ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.  ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ನಮ್ಮ ಸಮಾಜದ ಪೂಜ್ಯ ಮಠಗಳಲ್ಲಿ ಒಂದಾಗಿರುವ ಎಡನೀರು ಮಠದ ಶ್ರೀಗಳ ಮೇಲಿನ ದಾ*ಳಿ ಹಿಂದೂ ಸಮಾಜದ ಮೇಲೆ ನಡೆದಿರುವ ದಾ*ಳಿಯಾಗಿದೆ.

    ಇದನ್ನೂ ಓದಿ : ಬಿಗ್​ಬಾಸ್​ಗೆ ವೈಲ್ಡ್ ​ಕಾರ್ಡ್ ಎಂಟ್ರಿ ಕೊಡ್ತಾರಂತೆ ಪುಟ್ಟಕ್ಕನ ಮಗಳು ಸ್ನೇಹಾ

    ಸರಕಾರ  ತಕ್ಷಣ ಸಮಾಜಘಾ*ತ ಶಕ್ತಿಗಳನ್ನು ಹೆಡೆಮುರಿ ಕಟ್ಟಲು  ಜಾಮೀನು ರಹಿತ ಸೆಕ್ಷನ್ ಅಡಿ ಕೇಸು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ: ಇಲಿ ಪಾಷಾಣ ಸೇವಿಸಿ ಆ*ತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!!

    Published

    on

    ಬೆಳ್ತಂಗಡಿ : ಇಲಿ ಪಾಷಣ ಸೇವನೆ ಮಾಡಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾ*ವಿಗೆ ಶರಣಾದ ಘಟನೆ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ.

    ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪ್ರಿಯಾಂಕಾ ಡಿ’ಸೋಜ(19) ಆ*ತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.

    ಎಂಟು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಪ್ರಿಯಾಂಕ ಆ*ತ್ಮಹತ್ಯೆಗೆ ಯತ್ನಿಸಿದ್ದಳು. ಇದರಿಂದ ಗಂ*ಭೀರ ಸ್ಥಿತಿಯಲ್ಲಿದ್ದ ಪ್ರಿಯಾಂಕಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಇಂದು (ನ.5) ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾಳೆ.

    ವಿಷ ಪದಾರ್ಥ ಸೇವಿಸಲು ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಮೃ*ತ ಪ್ರಿಯಾಂಕ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ(BSC) ಕಲಿಗೆಯ ವಿದ್ಯಾರ್ಥಿನಿಯಾಗಿದ್ದರು. ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.

    Continue Reading

    DAKSHINA KANNADA

    ಪೂಜೆಗೆಂದು ಬಂದಿದ್ದ ವಿದ್ಯಾರ್ಥಿನಿಯ ಮೈ*ಗೆ ಕೈ ಹಾಕಿದ ಕಾ*ಮುಕ

    Published

    on

    ಮಂಗಳೂರು: ದೇವರ ದರ್ಶನಕ್ಕೆ ಬಂದಿದ್ದಂತಹ ಕಾಲೇಜು ವಿದ್ಯಾರ್ಥಿನಿಯೊಂದಿಗೆ ವ್ಯಕ್ತಿಯೊಬ್ಬ ಅ*ನುಚಿತ ವರ್ತನೆ ತೋರಿ ಅ*ಸಭ್ಯ ಮೆರೆದಿರುವ ಘಟನೆ ಶನಿವಾರ (ನ.2) ದೇವಾಲಯವೊಂದರಲ್ಲಿ ನಡೆದಿದೆ.

    ದೀಪಾವಳಿ ಹಬ್ಬದ ರಜೆ ಪ್ರಯುಕ್ತ ವಿದ್ಯಾರ್ಥಿನಿ ಮನೆಗೆ ಬಂದಿದ್ದು, ನ.2 ರಂದು ರಾತ್ರಿ ನಗರದ ಪ್ರತಿಷ್ಠಿತ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ಭಾಗವಹಿಸಿ ಮನೆಯವರ ಜೊತೆ ಭೋಜನಾ ಶಾಲೆಯತ್ತ ತೆರಳಿದ್ದರು. ಈ ವೇಳೆ ಶಿವರಾಮ ಭಟ್ ಎಂಬಾತ ದು*ರ್ನಡತೆ ತೋರಿದ್ದಾನೆ.

     

    ಇದನ್ನೂ ಓದಿ : ಪಬ್‌ನಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ; ನಾಲ್ವರಿಗೆ ನ್ಯಾಯಾಂಗ ಬಂಧನ

     

    ಯುವತಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಟ ಮಾಡುತ್ತಿದ್ದ ಆರೋಪಿ ಶಿವರಾಮ ಭಟ್ ಯುವತಿಯ ಎ*ದೆ ಭಾ*ಗಕ್ಕೆ ಕೈ ಹಾಕಿ ದೈ*ಹಿಕ ಹಿಂಸೆ ನೀಡಿದ್ದು ಮಾತ್ರವಲ್ಲದೇ, ಪ್ರಶ್ನಿಸಿದಕ್ಕೆ ಅ*ವಾಚ್ಯ ಶಬ್ದ ಗಳಿಂದ ಬೈದಿರುವುದಾಗಿ ದೂರಲಾಗಿದೆ.

    ಆರೋಪಿ ನಗರದಲ್ಲಿಯೇ ಜೆರಾಕ್ಸ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು ದೇಗುಲ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ.

    ಯುವತಿಯ ದೂರನ್ನು ಪರಿಶೀಲಿಸಿ ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ( BNS ACT -75,352 ಕಾಲಂ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending