Connect with us

    LATEST NEWS

    ಗುಟ್ಕಾ ತಿಂದು ಉಗುಳಲು ಲಾರಿಯಿಂದ ತಲೆ ಹೊರಗೆ ಹಾಕಿದವನ ತಲೆಯೇ ಇಲ್ಲ..!!

    Published

    on

    ಮಧ್ಯಪ್ರದೇಶ/ಮಂಗಳೂರು: ಬಸ್ಸು ಲಾರಿಗಳಲ್ಲಿ ಸಂಚರಿಸುವಾಗ ಕೆಲವರು ತಲೆ ಹೊರಗೆ ಹಾಕಿ ಉಗುಳುವ ದುರಾಭ್ಯಾಸವಿದೆ. ಅದರಲ್ಲೂ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುವವರ ಬಗ್ಗೆ ಹೇಳಲೇ ಬೇಕಿಲ್ಲ.ರಸ್ತೆ ಎಂದಿಲ್ಲ, ಸಾರ್ವಜನಿಕ ಸ್ಥಳ ಎಂದಿಲ್ಲ.. ಬೇಕಾಬಿಟ್ಟಿ ಬಾಯಿ ತಂಬಾ ಗುಟ್ಕಾ ತಿಂದು ಉಗುಳುತ್ತಾರೆ.

    ಸಾಂದರ್ಭಿಕ ಚಿತ್ರ

    ಇಲ್ಲೊಬ್ಬ  ವ್ಯಕ್ತಿ ಲಾರಿಯಿಂದ ತಲೆ ಹೊರಗೆ ಹಾಕಿದಾಗ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ತಲೆಯನ್ನೇ ಕಳೆದುಕೊಂಡ ಘಟನೆ ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ನಡೆದಿದೆ. ಗುಟ್ಕಾ ತಿಂದು  ಚಲಿಸುತ್ತಿದ್ದ ಮಿನಿ ಲಾರಿಯಿಂದ ಉಗುಳಲು ತಲೆ ಹೊರಗೆ ಹಾಕಿದ್ದಾನೆ. ಅಷ್ಟರಲ್ಲೇ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ.

    ನಾನ್ ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್….ಶೀಘ್ರದಲ್ಲೇ ಶವರ್ಮಾ ಬ್ಯಾನ್!?

    ಬರ್ವಾನಿ ಜಿಲ್ಲೆಯ ತಳವಾರ ಡ್ಯಾಮ ನಿವಾಸಿ ಆಕಾಶ್‌ ಮಕಸಾರೆ(22) ಅಪಘಾತಕ್ಕೀಡಾದ ದುರ್ದೈವಿ. ಜಬಲ್‌ಪುರದಿಂದ ಪಿಕಪ್‌ ವಾಹನದಲ್ಲಿ ತರಕಾರಿ ತುಂಬಿಸಿ ಖಾರ್ಗೋನೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಭೀಕರ ಅಪಘಾತದಲ್ಲಿ ಚಾಲಕನ ತಲೆ, ಕೈ ತುಂಡರಿಸಿ ರಸ್ತೆಯಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಪ್ರಯಾಣಿಕರು ಭಯಭೀತರಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಘಾತ ಮಾಡಿದ ವಾಹನ ಚಾಲಕ ಪರಾರಿಯಾಗಿದ್ದಾನೆ.  ಸುತಾಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

    1 Comment

    1 Comment

    1. Pingback: 25ಕ್ಕೂ ಅಧಿಕ ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ..! ಚಾಲಕ ಸೇರಿದಂತೆ ಮೂವರು ಗಂಭೀರ - NAMMAKUDLA NEWS - ನಮ್ಮಕುಡ್ಲ ನ್ಯೂಸ್

    Leave a Reply

    Your email address will not be published. Required fields are marked *

    LATEST NEWS

    ಜು.15ರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ

    Published

    on

    ಬೆಂಗಳೂರು : ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನವನ್ನು ಜು.15ರಿಂದ 26ರವರೆಗೆ ಕರೆಯಲು ರಾಜ್ಯಪಾಲರಿಗೆ ರಾಜ್ಯ ಸರಕಾರ ಶಿಫಾರಸ್ಸು ಮಾಡಿದೆ.

    ಜೂ.20ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರ ನೀಡಲಾಗಿತ್ತು. ಅದರಂತೆ, ಮುಖ್ಯಮಂತ್ರಿ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಿದ್ದು, ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ.

    Continue Reading

    FILM

    ಕೊನೆಗೂ ಮೌನ ಮುರಿದ್ರಾ ಸುಮಲತಾ..! ವೈರಲ್ ಪೋಸ್ಟ್‌ನಲ್ಲಿ ಏನಿದೆ ಗೊತ್ತಾ?

    Published

    on

    ಬೆಂಗಳೂರು/ಮಂಗಳೂರು:  ನಟ ದರ್ಶನ್ ಜೈಲು ಸೇರಿದ ಮೇಲೆ ಸುಮಲತಾ ಅಂಬರೀಶ್ ಮೌನಕ್ಕೆ ಜಾರಿದ್ದರು. ಚಿತ್ರರಂಗದ ಕೆಲವು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನು ಕೆಲವರು ಮೌನಕ್ಕೆ ಜಾರಿದ್ದಾರೆ. ಅದರಲ್ಲೂ ದರ್ಶನ್ ಆಪ್ತರು ಎಣಿಸಿಕೊಂಡವರು, ದರ್ಶನ್‌ನಿಂದ ಸಹಾಯ ಪಡೆದುಕೊಂಡವರು ಈಗ ಬೆಂಬಲ ನೀಡುತ್ತಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

    ದರ್ಶನ್ ನನ್ನ ದೊಡ್ಡ ಮಗ ಎಂದೇ ಕರೆಯುತ್ತಿದ್ದರು ಸುಮಲತಾ. ಇನ್ನು ದರ್ಶನ್ ಕೂಡಾ ಸುಮಲತಾರವರನ್ನು ಮದರ್ ಇಂಡಿಯಾ ಎಂದೇ ಹೇಳುತ್ತಿದ್ದರು. ಇಷ್ಟೆಲ್ಲಾ ಇರುವಾಗ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲು ಸೇರಿದ ಮೇಲೆ ಸುಮಲತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

    ತಾಯಿಯಾಗುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ..! ಹೊಸ ಅತಿಥಿ ಆಗಮನ ಯಾವ್ಯಾಗ?

    ಈ ಹಿಂದೆ ಸುಮಲತಾ ಪರ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ”ಅಮ್ಮ ಕಣ್ಣು ಮುಚ್ಚಿ ಹಾಳು ಬಾವಿಗೆ ಬೀಳು ಅಂದ್ರೂ ನಾನು ಬೀಳುತ್ತೇನೆ. ಅಮ್ಮ ಏನು ಹೇಳಿದರೂ ಶಿರಸಾವಹಿಸಿ ಪಾಲಿಸುವುದು ನನ್ನ ಹಾಗೂ ನನ್ನ ತಮ್ಮನ ಕೆಲಸ. ಅಷ್ಟೊಂದು ಗಾಢವಾದ ಬಾಂಧವ್ಯವಿದೆ ಆ ಮನೆಗೂ ನನಗೂ” ಎಂದು ಹೇಳಿದ್ದರು. ಆದರೆ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ ಸುಮಲತಾ ಯಾಕೆ ಅವರ ಪರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದರು.

    ಇದೀಗ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ ಭಾರೀ ವೈರಲ್ ಆಗುತ್ತಿದೆ. ಭಗವದ್ಗೀತೆಯಲ್ಲಿದ್ದ ಕೃಷ್ಣನ ಸಾಲುಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. “ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ. ಕೇವಲ ನಂಬಿಕೆ ಇರಲಿ” ಎನ್ನುವ ಸಾಲುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಟ ದರ್ಶನ್ ಗೆ ಬಂದಿರುವ ಸಂಕಷ್ಟಕ್ಕೆ ಪರೋಕ್ಷವಾಗಿ ಸುಮಲತಾ ಈ ಪೋಸ್ಟ್ ಮಾಡಿದ್ದಾರೆ ಎಂದು ಹಲವರು ಅಂದುಕೊಂಡಿದ್ದಾರೆ.

    Continue Reading

    LATEST NEWS

    WATCH VIDEO : ಮದುವೆ ಮನೆಗೆ ಎಂಟ್ರಿ ಕೊಟ್ಟ ಕಪಿರಾಯ; ಮಾಡಿದ್ದೇನು ನೋಡಿ

    Published

    on

    ಹಾಸನ : ಮದುವೆ ಅಂದ್ರೆ ಸಂಬಂಧಿಕರು, ನೆರೆ ಹೊರೆಯರು, ಆಪ್ತರು ಬರೋದು ಸಾಮಾನ್ಯ. ಆದ್ರೆ ಇಲ್ಲಿ ಕಪಿರಾಯ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಸುಮ್ಮನೆ ಮದುವೆ ನೋಡಿ ಹೋಗಿಲ್ಲ. ರಂಪಾಟ ಮಾಡಿದ್ದಾನೆ. ಈ ಘಟನೆ ನಡೆದಿರೋದು ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ.


    ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಸೋಮವಾರ(ಜು.1) ಮದುವೆ (Marriage) ಸಮಾರಂಭ ನಡೆಯುತ್ತಿತ್ತು. ಈ ವೇಳೆ ಕೋತಿಯೊಂದು ಮದುವೆ ಮನೆಗೆ ಎಂಟ್ರಿ ಕೊಟ್ಟಿದೆ. ಈ ಕೋತಿ ವರನ ಪಕ್ಕದಲ್ಲಿ ಕುಳಿತು ಮದುವೆಗೆ ಅಡ್ಡಿ ಪಡಿಸಿದೆ.
    ಅಷ್ಟೇ ಅಲ್ಲ, ಊಟದ ಹಾಲ್ ಗೂ ಹೋಗಿ ತೊಂದರೆ ಕೊಟ್ಟಿದ್ದು ಮಾತ್ರವಲ್ಲದೇ, 8 ಮಂದಿಗೆ ಕಚ್ಚಿದೆ. ಮದುವೆ ಸಂಭ್ರಮಕ್ಕೆ ಬಂದಿದ್ದ ಮಂದಿದ್ದ ಮಂದಿ ಗಾಯಗೊಂಡು ಆಸ್ಪತ್ರೆ ದರ್ಶನ ಪಡೆಯುವಂತೆ ಕಪಿರಾಯ ಮಾಡಿದ್ದಾನೆ.

    ಇದನ್ನೂ ಓದಿ : ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?

    ಇನ್ನು, ಈ ಹಳ್ಳಿಯ ಜನರಿಗೆ ಮಂಗನ ಕಾಟ ಯಾವಾಗಲೂ ಇದೆಯಂತೆ. ಈ ಬಾರಿ ಮದುವೆ ಮನೆಯಲ್ಲೂ ಕಪಿ ಚೇಷ್ಠೆ ಮಾಡಿದೆ. ಇದರಿಂದ ಕೋತಿಯನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    Continue Reading

    LATEST NEWS

    Trending