Connect with us

    BELTHANGADY

    ಬದಲಾಯಿತು ತಲೆಸುತ್ತಿ ಬಿದ್ದ ವ್ಯಕ್ತಿಯ ಬದುಕು; 26ವರ್ಷಗಳ ಬಳಿಕ ಮರಳಿದ ಪುತ್ರ:ಸಂತಸಗೊಂಡ ಕುಟುಂಬಿಕರು..

    Published

    on

    ಬೆಳ್ತಂಗಡಿ:ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ 26 ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಈ ಮೂಲಕ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆ ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದೆ. ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆಯ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆ ಸೇರಿದವರು.
    ಶಿವಪ್ಪ ಅವರು 20 ವರ್ಷ ವಯಸ್ಸಿದ್ದಾಗ ಮನೆ ತೊರೆದಿದ್ದರು. ಇದೀಗ ಅವರಿಗೆ 46 ವರ್ಷ ವಯಸ್ಸಾಗಿದ್ದು, ಅಂದರೆ 26 ವರ್ಷಗಳ ಬಳಿಕ ಮರಳಿ ಮನೆ ಸೇರಿದ್ದಾರೆ.ಹೊಟೇಲ್ ಕೆಲಸಕ್ಕೆ ಸೇರಿದ್ದ ಶಿವಪ್ಪ ಪೂಜಾರಿಯವರು ತಮ್ಮ20ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದರು. ಬಡತನದಿಂದ ಮನೆ ಬಿಟ್ಟು ಹೋಗಿದ್ದ ಅವರು ಆರಂಭದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.

    ಈ ವೇಳೆ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಉದ್ಯೋಗ ಅರಸುತ್ತಾ ತರೀಕೆರೆ, ಮೈಸೂರು ಕಡೆ ಹೋಗಿ ಮನೆಮಂದಿ ಸಂಪರ್ಕಕ್ಕೆ ಸಿಗದೆ ಹೋಗಿದ್ದರು. ಹುಡುಕಾಟ ನಡೆಸಿದರೂ ಮಗ ಸಿಕ್ಕಿರಲಿಲ್ಲ.

    ಆದರೆ ಸುದೀರ್ಘ ಸಮಯದ ಬಳಿಕ ಮಗ ಮರಳುತ್ತಾನೆ ಎಂಬ ನಿರೀಕ್ಷೆ ಕಳೆದುಕೊಂಡಿದ್ದರು. ಪ್ರಸ್ತುತ ಮೈಸೂರಿನ ಹೋಟೆಲೊಂದರಲ್ಲಿ ಬಾಣಸಿಗನಾಗಿ ಕರ್ತವ್ಯನಿರ್ವಹಿಸುತ್ತಿದ್ದ ಶಿವಪ್ಪ ಅವರು ತರೀಕೆರೆಯ ಮೀನಾಕ್ಷಿಯವರೊಂದಿಗೆ ವಿವಾಹವಾಗಿದ್ದೇನೆ ಎಂದು ಹೇಳುತ್ತಿದ್ದು, ಪುತ್ರ ಪ್ರಸನ್ನ ಕುಮಾರ್, ಮಗಳು ಪ್ರಾರ್ಥನಾರೊಂದಿಗೆ ವಾಸ್ತವ್ಯವಿದ್ದರಂತೆ.

    ಇದೀಗ ಲಾಕ್‌ಡೌನ್ ಘೋಷಣೆಯಾಗಿದ್ದು, ಮೈಸೂರಿನಲ್ಲಿ ಹೋಟೆಲುಗಳು ಮುಚ್ಚಿರುವುದರಿಂದ ಲಾರಿಯಲ್ಲಿ ಬಂಟ್ವಾಳಕ್ಕೆ ಬಂದಿದ್ದರು.
    ಬಂಟ್ವಾಳ ಸಮೀಪದ ಮಾರಿಪಳ್ಳ ಬಸ್ ನಿಲ್ದಾಣದಲ್ಲಿ ಶಿವಪ್ಪ ಪೂಜಾರಿಯವರು ಅಸ್ವಸ್ಥಗೊಂಡು ಬಿದ್ದಿದ್ದರು. ತಕ್ಷಣ ಸ್ಥಳೀಯರು ಆರೈಕೆ ಮಾಡಿ ಊಟ ಕೊಡಿಸಿ ಮನೆ ವಿಚಾರಿಸುವಾಗ ಬೆಳಾಲಿನಲ್ಲಿರುವ ತಮ್ಮ ಮನೆಯವರ ಬಗ್ಗೆ ತಿಳಿಸಿದ್ದರು.

    ತಕ್ಷಣ ಸ್ಥಳೀಯರೊಬ್ಬರು ವಾಟ್ಸ್‌ಪ್‌ನಲ್ಲಿ ಅವರ ವಿವರ, ಫೋಟೋ ಹಾಕಿದ್ದರು. ವಾಟ್ಸ್‌ಪ್ ಬಳಗದಲ್ಲಿ ಬೆಳಾಲಿನ ಯುವಕರು ಮನೆಮಂದಿಯನ್ನು ಸಂಪರ್ಕಿಸಿದಾಗ ಕಾಣೆಯಾಗಿದ್ದ ವಿಚಾರ ಖಾತ್ರಿಯಾಗಿತ್ತು.

    ತಕ್ಷಣವೇ ಯುವಕರಾದ ತಾರಿದಡಿ ಆದಂ, ಆದರ್ಶನಗರದ ಉಸ್ಮಾನ್, ಕಬೀರ್, ಪರಂಗಿಪೇಟೆಯ ಮುಸ್ತಪ್ ಕೌಸರಿ ಅವರು ಮೇ 6ರಂದು ಶಿವಪ್ಪ ಅವರನ್ನು ಮನೆಗೆ ಕರೆದುಕೊಂಡು ಕುಟುಂಬವನ್ನು ಸೇರಿಸಿದ್ದಾರೆ.

    ಕಳೆದ 26 ವರ್ಷಗಳಿಂದ ನಾಪತ್ತೆಯಾಗಿದ್ದ ಮಗ ಮನೆಗೆ ಮರಳಿರುವ ಸಂತೋಷದಲ್ಲಿ ಕುಟುಂಬವಿದ್ದು, ಇತ್ತ ಶಿವಪ್ಪ ಅವರು ಮನೆ ಮಂದಿಯೊಂದಿಗೆ ಸಂತೋಷವಾಗಿ ಸಮಯ ಕಳೆಯುತ್ತಿದ್ದಾರೆ.

    BELTHANGADY

    ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

    Published

    on

    ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಫ್ಲಾಯ್ಡ್ ಮಿಸ್ಕಿತ್ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ಜರುಗಿದ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

    ಫ್ಲಾಯ್ಡ್ ಮಿಸ್ಕಿತ್ ಮಡಂತ್ಯಾರು ನಿವಾಸಿ ಬೇಬಿ ಡಯಾನ ಮಿಸ್ಕಿತ್ ಹಾಗೂ ಕ್ಲೌಡಿ ಫ್ರಾನ್ಸಿಸ್ ಮಿಸ್ಕಿತ್ ದಂಪತಿಗಳ ಪುತ್ರರಾಗಿದ್ದು, ಸಿದ್ಧಾರ್ಥ್ ಎಂ.ಸಿ ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿ.ಸಿ.ರೋಡ್ ನ ನ್ಯಾಯವಾದಿ ಪಿ.ಚೆನ್ನಪ್ಪ ಸಾಲಿಯಾನ್ ದಂಪತಿಗಳ ಪುತ್ರರಾಗಿದ್ದಾರೆ.

    ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ವಿಟ್ಲ ತರಬೇತಿ ನೀಡಿರುತ್ತಾರೆ.

    Continue Reading

    BELTHANGADY

    ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

    ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

    Continue Reading

    BELTHANGADY

    ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

    Published

    on

    ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

    ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

    ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

    Continue Reading

    LATEST NEWS

    Trending