Connect with us

DAKSHINA KANNADA

ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳಾರೋಪ ಮಾಡಿ ಅಮಾಯಕರ ಬಂಧನ ಖಂಡನೀಯ: ಎಸ್‌ಡಿಪಿಐ..!

Published

on

ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳಾರೋಪ ಮಾಡಿ ಅಮಾಯಕರ ಬಂಧನ ಖಂಡನೀಯ: ಎಸ್‌ಡಿಪಿಐ..!

ಮಂಗಳೂರು: ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ದಿನದಂದು ಬೆಳ್ತಂಗಡಿ ತಾಲೂಕಿನ ಮತ ಎಣಿಕೆ ಕೇಂದ್ರವಾದ ಉಜಿರೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಯಾವುದೇ ಸಾಕ್ಷಿಗಳಿಲ್ಲದೆ ಸುಳ್ಳಾರೋಪ ಮಾಡಿದ್ದಾರೆ.

ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲಿಸಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ಅಸಭ್ಯ ವರ್ತನೆಯ ಮೂಲಕ 3 ಮಂದಿಯನ್ನು ಪೋಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದಾಗ ಬೆಂಬಲಿಗರು ಪಕ್ಷದ ಪರ ಮತ್ತು ಅಭ್ಯರ್ಥಿಗಳ ಪರ ಘೋಷಣೆ ಕೂಗುವುದು ಸರ್ವೇ ಸಾಮಾನ್ಯ,

ಇದನ್ನು ಸಹಿಸಲಾಗದ ಸಂಘಪರಿವಾರ ಮತ್ತು ಕೆಲವು ಕೋಮು ಮನೋಸ್ಥಿತಿಯ ಮಾಧ್ಯಮಗಳು ಎಸ್‌ಡಿಪಿಐ ಝಿಂದಾಬಾದ್ ಘೋಷಣೆಗಳನ್ನು ತಿರುಚಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬುದಾಗಿ ಬಿಂಬಿಸಿದ್ದಾರೆ.

ಆದರೆ ವೀಡಿಯೋದಲ್ಲಿ ಅಂತಹ ಯಾವುದೇ ಶಬ್ದಗಳು ಕೇಳಲು ಸಾದ್ಯವಿಲ್ಲ, ಇದು ಜಿಲ್ಲೆಯ ಶಾಂತಿಯನ್ನು ಕದಡಲು ದಿಗ್ವಿಜಯ ಟಿವಿ ವಾಹಿನಿ ಯವರು ನಡೆಸಿದ ಷಡ್ಯಂತ್ರದ ಭಾಗವಾಗಿದೆ.

ಇಂತಹ ಸಂಧರ್ಭದಲ್ಲಿ ಸೂಕ್ಷ್ಮವಾಗಿ ವೀಡಿಯೋವನ್ನು ಪರಿಗಣಿಸಿ ಪ್ರಕರಣವನ್ನು ದಾಖಲಿಸಿ ಕೊಳ್ಳಬೇಕಾಗಿದ್ದ ಪೋಲಿಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಯದೇ ಇದ್ದ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ, ಅಮಾಯಕ ಯುವಕರನ್ನು ಬಂಧಿಸಿ ಪೋಲಿಸ್ ವೃತ್ತಿಗೆ ಕಳಂಕ ತಂದಿದ್ದಾರೆ.

ದ.ಕ ಜಿಲ್ಲೆಯ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಕಲ್ಲಡ್ಕ ಪ್ರಭಾಕರ ಭಟ್ಟನ ಮೇಲೆ ಪ್ರಕರಣ ದಾಖಲಿಸಲು ಇಡೀ ಜಿಲ್ಲೆಯೇ ಒತ್ತಾಯಪಡಿಸಿದಾಗ ಹಿಂದು ಮುಂದು ನೋಡಿ ಮೌನ ವಹಿಸಿದ ಪೋಲಿಸ್ ಇಲಾಖೆಯು ಸಂಘಪರಿವಾರ ಸುಳ್ಳಾರೋಪ ನಡೆಸಿ ಜಿಲ್ಲೆಯ ಸಾಮರಸ್ಯವನ್ನು ಹದಗೆಡಿಸಲು ಷಡ್ಯಂತ್ರ ನಡೆಸುವಾಗ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲು ಉತ್ಸುಕತೆ ತೋರಿಸುತ್ತಿರುವುದು ಖಂಡನೀಯ ಮತ್ತು ಧ್ವಿಮುಖ ದೋರಣೆಯಾಗಿದೆ.

ಜಿಲ್ಲೆಯಲ್ಲಿ ಎಸ್‌ಡಿಪಿಐ ಪಕ್ಷವು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆಯ ಫಲಿತಾಂಶವನ್ನು ನೋಡಿ ಬಿಜೆಪಿ ಮತ್ತು ಸಂಘಪರಿವಾರ ನಿಬ್ಬೆರಗಾಗಿ ಈ ರೀತಿಯ ಹುನ್ನಾರವನ್ನು ನಡೆಸುತ್ತಿದೆ. ಆದರೆ ಇಂತಹ ಸುಳ್ಳಾರೋಪದಿಂದ ನಮ್ಮ ಸಾಧನೆಯನ್ನು ತಡೆಯಲು ಖಂಡಿತಾ ಸಾಧ್ಯವಿಲ್ಲ.

ಪೋಲಿಸ್ ಇಲಾಖೆ ಈ ಬಗ್ಗೆ ದ್ವಿಮುಖ ಧೋರಣೆಯನ್ನು ಕೈ ಬಿಟ್ಟು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಅಮಾಯಕ ಯುವಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕು ಮತ್ತು ಬಂಧಿತ ಅಮಾಯಕ ಯುವಕರನ್ನು ಬಿಡುಗಡೆ ಗೊಳಿಸಬೇಕು.

ರಾತ್ರೋ ರಾತ್ರಿ ಮನೆಗೆ ನುಗ್ಗಿ ಅಮಾಯಕರನ್ನು ಬಂಧಿಸಿ ಕರೆದೊಯ್ದ ಬೆಳ್ತಂಗಡಿ ಪೋಲಿಸರಲ್ಲಿ ಘಟನೆಯ ಬಗ್ಗೆ ವಿಚಾರಿಸಿದಾಗ ನಾವು ನಿಸ್ಸಹಾಯಕರು.

ನೀವು ಏನಿದ್ದರೂ ಜಿಲ್ಲಾ ವರಿಷ್ಠಾದಿಕಾರಿಯವರಲ್ಲಿ ಮಾತನಾಡಬೇಕೆಂದರು, ಆದರೆ ವರಿಷ್ಠಾಧಿಕಾರಿಯವರಲ್ಲಿ ಮಾತನಾಡಿದಾಗ ಅವರು ಈ ಬಗ್ಗೆ ನಾವು ತನಿಖೆ ನಡೆಸಿದ್ದೇವೆ. ನೀವು ನ್ಯಾಯಾಲಯದಲ್ಲಿ ನೋಡಿಕೊಳ್ಳಿ ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆ.

ಇಲ್ಲಿ ಪೋಲಿಸ್ ವರೀಷ್ಠಾಧಿಕಾರಿಯವರು ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತೀ ಸಂಧರ್ಭದಲ್ಲೂ ನ್ಯಾಯವು ತಾರತಮ್ಯ ವಾಗುತ್ತಿದೆ.

ಉಜಿರೆಯಲ್ಲಿ ನಡೆದ ಘಟಣೆಯ ಹಿಂದೆ ಸಂಘಪರಿವಾರದ ಷಡ್ಯಂತ್ರ ಗೋಚರವಾಗುತ್ತಿದೆ. ಇಂತಹ ಸಂಧರ್ಭಗಳಲ್ಲಿ ಮಾಧ್ಯಮಗಳನ್ನು ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳು ನಡೆಯುತ್ತಿದೆ.

ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಸತ್ಯಾ ಸತ್ಯತೆ ಜನರ ಮುಂದಿಡಬೇಕು. ಬಂಧಿಸಿದ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು.

ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ಪೋಲಿಸ್ ಪರಿಷ್ಠಾಧಿಕಾರಿಗಳ ಕ್ರಮದ ಬಗ್ಗೆ ಉನ್ನತ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಮೂರು ದಿನಗಳಲ್ಲಿ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಮಾರ್ಚ್ ನಡೆಸಿ ಮುತ್ತಿಗೆ ಹಾಕಲಾಗುವುದೆಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಎಚ್ಚರಿಸಿದ್ದಾರೆ.

ರಿಯಾಝ್ ಫರಂಗಿಪೇಟೆ,  ಅಶ್ರಫ್ ಮಾಚಾರ್, ಶಾಹುಲ್ ಎಸ್.ಎಚ್ (ಜಿಲ್ಲಾ ಪ್ರ.ಕಾರ್ಯದರ್ಶಿ ಎಸ್‌ಡಿಪಿಐ ದ.ಕ ಜಿಲ್ಲೆ),ಅನ್ವರ್ ಸಾದತ್ ಬಜತ್ತೂರು  ಹೈದರ್ ನಿರ್ಸಾಲ್,ಅನ್ವರ್ ಸಾದತ್ ಬಜತ್ತೂರು ಉಪಸ್ಥಿತರಿದ್ದರು.

DAKSHINA KANNADA

UDUPI : ಕ್ರೈಸ್ತ ಧರ್ಮದ ಪ್ರಚಾರಕ್ಕೆ ಬಂದವರನ್ನು ಬಾ.. ಬಾ.. ಎಂದು ಅಟ್ಟಾಡಿಸಿಕೊಂಡು ಹೋದ ಸ್ಥಳೀಯ

Published

on

ಉಡುಪಿ : ಕ್ರೈಸ್ತ ಧರ್ಮದ ಪ್ರಚಾರಕ್ಕೆ ಬಂದವರನ್ನು ಸ್ಥಳೀಯರೊಬ್ಬರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿ ಜಿಲ್ಲೆ  ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಉಪ್ಪಿನಕೋಟೆಯ ಬಳಿ ಕ್ರೈಸ್ತ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಧರ್ಭದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಆಕ್ರೋಶಗೊಂಡಿದ್ದಾರೆ.

ಮತಾಂತರ ಮಾಡಲು ಬಂದಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದ ಆತ ಬಳಿಕ ಕೋಲು ಹಿಡಿದು ಅವರನ್ನು ಓಡಿಸಿದ್ದಾರೆ. ಅವ್ಯಾಚ ಶಬ್ಧಗಳಿಂದ ನಿಂದಿಸಿ ಮಹಿಳೆಯರನ್ನು ಓಡಿಸಿದ್ದು, ಹೆದರಿ ಓಡಿದ ಮಹಿಳೆಯರನ್ನು ಬೆನ್ನು ಹತ್ತಿ ಇನ್ನೊಮ್ಮೆ ಈ ಭಾಗಕ್ಕೆ ಭಾರದಂತೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ಬಗ್ಗೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

Continue Reading

DAKSHINA KANNADA

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನೂತನ ಧ್ವಜ ಮರ ಸ್ಥಾಪನೆ

Published

on

ಸುರತ್ಕಲ್‍: ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ನೂತನ ಧ್ವಜಮರ ಸ್ಥಾಪನೆ ಫೆ. 21ರಂದು  ಜರಗಿತು.


ಶಿಬರೂರು ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು,ಪೂಜೆ ನೆರವೇರಿದ ಬಳಿಕ ಧ್ವಜಮರವನ್ನು ಪುನರ್ ಸ್ಥಾಪಿಸಲಾಯಿತು.

ಇದೇ ಸಂದರ್ಭ ಎ.22ರಿಂದ 30ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.


ಉಮೇಶ್ ಗುತ್ತಿನಾರ್ ಶಿಬರೂರುಗುತ್ತು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಶೆಟ್ಟಿ, ಸಿ.ಎ ಉದಯಕುಮಾರ್ ಶೆಟ್ಟಿ, ಉದಯ ಸುಂದರ್ ಶೆಟ್ಟಿ, ಯದುನಾರಾಯಣ ಶೆಟ್ಟಿ , ಸುಧಾಕರ ಪೂಂಜ ಸುರತ್ಕಲ್, ಸಿ.ಎ ಸುದೇಶ್ ಕುಮಾರ್ ರೈ, ಬಾಲಕೃಷ್ಣ ಕೊಠಾರಿ,ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಕ್ಷೇತ್ರದ ಸಮಿತಿ ಪ್ರಮುಖರು, ಸಂಬಂಧಪಟ್ಟ ಗುತ್ತು ಮನೆತನದವರು , ಗ್ರಾಮಸ್ಥರು ಭಾಗವಹಿಸಿದ್ದರು

Continue Reading

DAKSHINA KANNADA

ಮಂಗಳೂರು : ಹಲವು ಕ್ರಿಮಿನಲ್ ಕೃತ್ಯದಲ್ಲಿ ಶಾಮೀಲಾಗಿದ್ದ ಕುಖ್ಯಾತ ಕಳ್ಳರಿಬ್ಬರ ಬಂಧನ

Published

on

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನಾಟೆಕಲ್ ಸಮೀಪದ ಕಲ್ಕಟ್ಟ ಎಂಬಲ್ಲಿನ  ಅಬ್ದುಲ್ ಫಯಾನ್ (26) ಮತ್ತು ನರಿಂಗಾನ ಸಮೀಪದ ತೌಡುಗೋಳಿ ಕ್ರಾಸ್ ನಿವಾಸಿ ಮೊಯಿದ್ದೀನ್ ಹಫೀಸ್ ಯಾನೆ ಆಬಿ (47) ಬಂಧಿತ ಆರೋಪಿಗಳು.  ಅಬ್ದುಲ್ ಫಯಾನ್ ಎಂಬಾತನು ಕೊಣಾಜೆ, ಉಳ್ಳಾಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಉಪ್ಪಿನಂಗಡಿ, ಕಡಬ ಪೊಲೀಸ್ ಠಾಣೆಗಳಲ್ಲಿನ ವಿವಿಧ ಕಡೆಗಳಲ್ಲಿ ಸರಕಾರಿ ಕಚೇರಿ, ಶಾಲೆ ಹಾಗೂ ಅಂಗಡಿಗಳಲ್ಲಿ ಕಳ್ಳತನ ಸಹಿತ 23 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ಕಾರಾಗೃಹದೊಳಗೆ ಇತರ ಕೈದಿಗಳಿಗೆ ಹಲ್ಲೆ ನಡೆಸಿದ ಮತ್ತು ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪವೂ ಇದೆ. ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಈತ ಕಳೆದ 2 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಈತನನ್ನು ಬಂಧಿಸಿದ್ದಾರೆ.

ಮೊಯಿದ್ದೀನ್ ಹಫೀಸ್ ಯಾನೆ ಆಬಿ ಕೊಣಾಜೆ, ಉಳ್ಳಾಲ, ಬಂದರ್, ಸುರತ್ಕಲ್, ಕಂಕನಾಡಿ ನಗರ ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ/ಸಾಗಾಟ ಸಹಿತ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಈತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಈತನನ್ನು ಮಂಜೇಶ್ವರ ಸಮೀಪದ ಮೀಂಜದಿಂದ ಬಂಧಿಸಲಾಗಿದೆ.

 

Continue Reading

LATEST NEWS

Trending