Connect with us

dehali

ಮೈಕ್ರೋಸಾಫ್ಟ್ ವಿಂಡೋಸ್ ಮುಖ್ಯಸ್ಥರಾದ್ರು ‘ಭಾರತದ ಪವನ್ ದಾವುಲೂರಿ’..!

Published

on

ನವದೆಹಲಿ:  ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥರಾಗಿ ಐಐಟಿ ಮದ್ರಾಸಿನ ಹಳೆಯ ವಿದ್ಯಾರ್ಥಿ ಪವನ್ ದಾವುಲೂರಿ ಅವರು ನೇಮಕಗೊಂಡಿದ್ದಾರೆ. ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ ನ ಸತ್ಯ ನಾಡೆಲ್ಲಾ ಅವರಂತಹ ಬಿಗ್ ಟೆಕ್ ಕಂಪನಿಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ.

ದಾವೂಲ್

ದೀರ್ಘಕಾಲ ಮುಖ್ಯಸ್ಥರಾಗಿದ್ದ ಪನೋಸ್ ಪನಾಯ್ ಅವರಿಂದ ಪವನ್ ದಾವುಲುರಿ ಅಧಿಕಾರ ವಹಿಸಿಕೊಂಡರು.

ಈ ಹಿಂದೆ, ಪವನ್ ದಾವುಲುರಿ ಸರ್ಫೇಸ್ ಗುಂಪನ್ನು ಮೇಲ್ವಿಚಾರಣೆ ಮಾಡಿದ್ದರೆ, ಮಿಖಾಯಿಲ್ ಪರಾಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಪರಖಿನ್ ಮತ್ತು ಪನಾಯ್ ಅವರು ತೊರೆದ ನಂತರ, ಅವರು ವಿಂಡೋಸ್ ಮತ್ತು ಸರ್ಫೇಸ್ ವಿಭಾಗಗಳನ್ನು ವಹಿಸಿಕೊಂಡಿದ್ದಾರೆ.

dehali

ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

Published

on

ದೆಹಲಿ: ಕೇಂದ್ರ ಸರಕಾರ ದೇಶದಾದ್ಯಂತ ಆಧಾರ್ ಕಾರ್ಡ್‌ಅನ್ನು ಕಡ್ಡಾಯಗೊಳಿಸಿದೆ. ಭಾರತೀಯ ನಾಗರಿಕರನ್ನು ಗುರುತಿಸುವುದಕ್ಕಾಗಿ ಹಾಗೂ ದೇಶದ ಭದ್ರತೆ ದೃಷ್ಠಿಯಿಂದ ಆಧಾರ್ ಕಾರ್ಡ್‌ನ್ನು ಜಾರಿಗೊಳಿಸಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್‌ಗಳ ಅಪ್ಡೇಟ್ ಮಾಡಲು, ಹೊಸ ಆಧಾರ್‌ ಮಾಡಿಸಲು ಸೈಬರ್ ಸೆಂಟರ್ ಗಳು ಸರಕಾರಿ ಕಛೇರಿಗಳ ಮುಂದೆ ಮುಗಿ ಬೀಳುತ್ತಾರೆ. ಇದೀಗ ನಾಯಿಗಳಿಗೂ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಯಾಕಂದ್ರೆ ಇದೀಗ ನಾಯಿಗಳಿಗೂ ಆಧಾರ್ ಹೊಂದಿರಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ.

dog

ದೆಹಲಿಯಲ್ಲಿ ಆಧಾರ್ ಕಾರ್ಡ್‌ ಹೋಲ್ಡರ್‌ಗಳಾದ 100 ನಾಯಿಗಳು!

ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆಯಂತೆ. ಸರ್ವೆ ಪ್ರಕಾರ ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ಆಧಾರ್ ಕಾರ್ಡ್‌ಅನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ. ದಾರಿ ತಪ್ಪಿದ ನಾಯಿಗಳನ್ನು ರಕ್ಷಿಸುವ ಹಾಗೂ ಅವುಗಳನ್ನು ಸ್ಥಳಾಂತರಿಸುವ ದೃಷ್ಟಿಯಲ್ಲಿ ಎನ್‌ಜಿಒ ಗಳು ಈ ನಿಯಮವನ್ನು ಜಾರಿಗೆ ತಂದಿದ್ದಾರೆ.

dog

ನಾಯಿಗೂ ಬಂತು ಸ್ಕ್ಯಾನರ್‌ ಒಳಗೊಂಡ ಟ್ಯಾಗ್ ಕಾರ್ಡ್:

ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ . ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದೆ ನೋಡಿ..; ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

Pawfriend.in ಎಂಬ ಎನ್‌ಜಿಒ ಇದನ್ನು ಆವಿಷ್ಕಾರ ಮಾಡಿದ್ದು  ನಾಯಿಗಳಿಗೆ ನೀಡುವ ಆಧಾರ್ ಕಾರ್ಡ್‌ನಲ್ಲಿ ಕ್ಯೂ ಆರ್‌ ಕೋಡ್‌ಅನ್ನು ಕೂಡಾ ಅಳವಡಿಸಿದ್ದಾರೆ.  ಇದು ಮೈಕ್ರೋಚಿಪ್‌ಗಳನ್ನು ಒಳಗೊಂಡಿದ್ದು, ನಾಯಿಗಳು ಒಂದು ವೇಳೆ ಕಳೆದು ಹೋದಲ್ಲಿ ಈ ಟ್ಯಾಗ್‌ಗಳಲ್ಲಿರುವ ಕ್ಯೂಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದ್ರೆ ನಾಯಿಯ ಕುರಿತು ವಿವರಗಳನ್ನು ಪಡೆಯಬಹುದಾಗಿದೆ. ಇದು ನಾಯಿಯ ಯಜಮಾನನಿಗೆ ಬಹಳ ಸಹಾಯಕಾರಿಯಾಗಿದೆ.

 

 

Continue Reading

DAKSHINA KANNADA

ಮಂಗಳೂರಿನಲ್ಲಿ ಹವಾ ಸೃಷ್ಟಿಸಿದ ಪ್ರಧಾನಿ ಮೋದಿ.. ಮುಗಿಲು ಮುಟ್ಟಿದ ಮೋದಿ ಘೋಷಣೆ

Published

on

ಮಂಗಳೂರು:  ಪ್ರಧಾನಿ ನರೇಂದ್ರ ಮೋದಿಯವರು ಎ.14ರಂದು ಮಂಗಳೂರಿಗೆ ಭೇಟಿ ನೀಡಿದ್ದು,  ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ರಾತ್ರಿ ಸರಿ ಸುಮಾರು 7.45 ಕ್ಕೆ ಮಂಗಳೂರು ಆಗಮಿಸಿ ಪ್ರಧಾನಿ ನಾರಾಯಣ ಗುರು ವೃತ್ತದಲ್ಲಿ ನಾರಾಯಣಗುರುಗಳ ಪ್ರತಿಮೆಗೆ ಮಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಬಳಿಕ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ರೋಡ್ ಶೋ ನಡೆಸಿದ್ದಾರೆ.

ನಾರಾಯಣ ಗುರು ವೃತ್ತದಿಂದ ನವಭಾರತ್ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಸಮಾವೇಶ ರದ್ದಾಗಿ ರೋಡ್ ಶೋ ನಿಗದಿಯಾಗಿದ್ದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಭದ್ರತೆ ನಡೆಸಲಾಗಿತ್ತು. ಹೀಗಾಗಿ ರೋಡ್ ಶೋ ನಡೆಯುವ ರಸ್ತೆಯಲ್ಲಿ ರಸ್ತೆಯ ಇಕ್ಕೆಲೆಯಲ್ಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ರೋಡ್ ಶೋ ನಡೆದ ಲಾಲ್‌ಭಾಗ್ ಬಳ್ಳಾಲ್ ಭಾಗ್‌, ಪಿವಿಎಸ್ ಹಾಗೂ ರೋಡ್ ಶೋ ಕೊನೆಗೊಂಡ ನವಭಾರತ್ ಸರ್ಕಲ್‌ ವರೆಗೂ ಸಾವಿರಾರು ಜನರು ಮೋದಿಯವರಿಗಾಗಿ ಕಾದು ಕುಳಿತಿದದ್ದರು. ಮೋದಿ ಆಗಮಿಸುತ್ತಿದ್ದಂತೆ ಮೋದಿ ಘೋಷಣೆ ಮುಗಿಲು ಮುಟ್ಟಿದ್ದು ಅದು ರೋಡ್‌ ಶೋದ ಉದ್ದಕ್ಕೂ ಕೇಳಿಸಿ ಇಡೀ ನಗರವೇ ಮೋದಿ ಘೋಷ ಮೊಳಗಿತ್ತು. 7. 50 ಕ್ಕೆ ಆರಂಭವಾದ ರೋಡ್ ಶೋ 8. 45ಕ್ಕೆ ನವಭಾರತ್ ವೃತ್ತದಲ್ಲಿ ಅಂತ್ಯಗೊಂಡಿದೆ.

Read More..; ರೋಡ್‌ ಶೋ ವೇಳೆ ಕಲ್ಲು ತೂರಾಟ…! ಆಂದ್ರ ಸಿಎಂ ಹಣೆಗೆ ಗಾಯ…!

road show

 

Continue Reading

dehali

75 ಕೆಜಿ ವೆಯಿಟ್ ಲಿಫ್ಟಿಂಗ್ ಮಾಡಿ ನಿಬ್ಬೆರಗಾಗುವಂತೆ ಮಾಡಿದ 9 ವರ್ಷದ ಪೋರಿ..!

Published

on

ನವದೆಹಲಿ: 75 ಕೆ.ಜಿ ವೆಯಿಟ್ ಲಿಫ್ಟಿಂಗ್ ಮಾಡುವ ಮೂಲಕ 9 ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ದಾಖಲೆ ಮಾಡಿದ್ದಾರೆ. ಇವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಹರಿಯಾಣದ ಪಂಚಕುಲದ ಬಾಲಕಿಯಾದ ಈಕೆ ತನ್ನ ವಯಸ್ಸಿಗೆ ಮೀರಿ ಸಾಧನೆ ಮಾಡಿದ್ದಾಳೆ. ಅರ್ಪಿಯಾಳ ಸಾಧನೆಯನ್ನು ಮೆಚ್ಚಿ ಜನರು ಯಂಗೆಸ್ಟ್ ಡೆಡ್‌ಲಿಫ್ಟರ್ ಎಂದು ಕರೆಯುತ್ತಿದ್ದಾರೆ. ಬಾಲಕಿ ತನ್ನ 6ನೇ ವಯಸ್ಸಿನಲ್ಲಿ 45 ಕೆ.ಜಿ ವೇಟ್ ಲಿಫ್ಟ್ ಮಾಡುವ ಮೂಲಕ ದಾಖಲೆ ಮಾಡಿದ್ದರು. ಈ ಸಲ ಬರೋಬ್ಬರಿ 75 ಕೆ.ಜಿ ಭಾರ ಎತ್ತುವ ಮೂಲಕ ಭಾರತದಲ್ಲೇ ಹೆಸರನ್ನು ಪಡೆದಿದ್ದಾರೆ.

Continue Reading

LATEST NEWS

Trending