Connect with us

    LATEST NEWS

    ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ..!

    Published

    on

    ಮುಂಬೈ/ಮಂಗಳೂರು: ವೈದ್ಯೋ ನಾರಾಯಣೋ ಹರಿ ಅಂತಾರೆ. ಅಂದರೆ ವೈದ್ಯರು ದೇವರಿಗೆ ಸಮಾನ ಎಂಬ ಅರ್ಥ, ಆದರೆ ಇಲ್ಲೊಬ್ಬ ವೈದ್ಯ ಕಣ್ಣು ಕಾಣಿಸದ ದಂಪತಿಯ ಮಗುವನ್ನು 50 ಸಾವಿರ ರೂಪಾಯಿಗೆ ಬೇರೆಯವರಿಗೆ ಮಾರಿದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ವೈದ್ಯನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಕಲ್ಯಾಣದ ಅಂಬಿವ್ಲಿಯಲ್ಲಿರುವ ನರ್ಸಿಂಗ್‌ ಹೋಮ್‌ನಲ್ಲಿ ಈ ಘಟನೆ ನಡೆದಿದೆ.

    ಏನಿದು ಘಟನೆ:
    ಕಣ್ಣು ಕಾಣದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಬಯಸದೇ ಆದ ಗರ್ಭಧಾರಣೆಯನ್ನು ತೆಗೆಯಲೆಂದು ದಂಪತಿ ಆಸ್ಪತ್ರೆಗೆ ಹೋಗಿದ್ದಾರೆ. ಅದಾಗಲೇ ಕಾಲ ಮಿಂಚಿಹೋಗಿತ್ತು. ಮಗು ಹೊಟ್ಟೆಯಲ್ಲಿ ಜೀವವನ್ನು ಪಡೆದು 5 ತಿಂಗಳಾಗಿತ್ತು. ಹೀಗಾಗಿ ಆಸ್ಪತ್ರೆಯ ವೈದ್ಯ ಅನುರಾಗ್‌ ಧೋನಿ ಎಂಬಾತ ಮಗುವನ್ನು ನನಗೆ ನೀಡಿ ಎಂಬುದಾಗಿ ಕೇಳಿಕೊಳ್ಳುತ್ತಾನೆ. ಅಲ್ಲದೇ ಇನ್ನಿಬ್ಬರು ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ತಾನು ನೀಡುವುದಾಗಿ ಹೇಳುತ್ತಾನೆ. ಇನ್ನೇನು ಈ ಮಗುವಿನಿಂದಾಗಿ ಇನ್ನಿಬ್ಬರು ಮಕ್ಕಳ ಭವಿಷ್ಯ ಚೆನ್ನಾಗಿರಬಹುದು ಎಂದು ಭಾವಿಸಿ ದಂಪತಿ ಮಗುವನ್ನು ವೈದ್ಯರಿಗೆ ನೀಡಲು ಒಪ್ಪಿಗೆ ನೀಡುತ್ತಾರೆ. ಆ.23ರಂದು ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಹೋಗುತ್ತಾಳೆ. ಈ ವೇಳೆ ವೈದ್ಯರು ಮಹಿಳೆ ಜೊತೆ ಇದ್ದವರನ್ನೆಲ್ಲಾ ಮನೆಗೆ ಕಳುಹಿಸಿ ಇವತ್ತು ಹೆರಿಗೆ ಆಗುವುದಿಲ್ಲ ಇನ್ನೊಂದು ದಿನ ಕಾಯಬೇಕು ಎಂದು ಹೇಳಿದ್ದಾನೆ. ರಾತ್ರಿ 11.30ರ ಸುಮಾರಿಗೆ ಮಹಿಳೆಗೆ ಹೆರಿಗೆಯನ್ನು ಮಾಡಿದ್ದಾರೆ. ಆದರೆ ಈ ವೇಳೆ ಮಹಿಳೆ ಹೊರತಾಗಿ ಬೇರೆ ಯಾರೂ ಆಸ್ಪತ್ರೆಯಲ್ಲಿ ಇರಲಿಲ್ಲ. ಇನ್ನು ಮಗುವಿನ ಮುಖವನ್ನೂ ತಾಯಿಗೆ ತೋರಿಸಲಿಲ್ಲ. ಆ.23ರಂದು ಮಗು ಜನಿಸಿದರೂ ಕೂಡಾ 8 ರಿಂದ 10 ದಿನಗಳ ಕಾಲ ಮಗುವನ್ನು ಪೋಷಕರ ಹತ್ತಿರ ಬಿಟ್ಟಿಲ್ಲ. ಅಲ್ಲದೇ ಆಸ್ಪತ್ರೆಯ ಬಿಲ್‌ ಕೂಡಾ ದಂಪತಿಯಲ್ಲಿ ಭರಿಸಲು ಹೇಳಿದ್ದಾನೆ.

    8-10 ದಿನಗಳ ಬಳಿಕ ಮಗುವನ್ನು ತೋರಿಸುವಂತೆ ಕೇಳಿದಾಗ ಮಗು ಅಳದೇ ಇದ್ದುದರಿಂದ ಅದನ್ನು ಪರಿಶೀಲನೆಗೆ ಇಡಲಾಗಿದೆ ಎಂದು ಆರಂಭದಲ್ಲಿ ಹೇಳುತ್ತಿದ್ದರು. ಆದರೆ ಬಳಿಕ ಮಗುವನ್ನು 5 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿ ಬಿಡಿಕಾಸನ್ನು ಪೋಷಕರಿಗೆ ನೀಡಿದ್ದಾನೆ. ನಮಗೆ ಹಣ ಬೇಡ ಮಗು ಬೇಕು ಎಂದು ಪೋಷಕರು ಗೋಗರಿದಿದ್ದಾರೆ. ಹೀಗಾಗಿ ದಂಪತಿ ಜಿಲ್ಲೆಯ ರಕ್ಷಣಾ ಘಟಕವನ್ನು ಸಂಪರ್ಕಿಸಿ ವೈದ್ಯನ ವಿರುದ್ಧ ದೂರು ನೀಡಿದ್ದಾರೆ.

    Baindooru

    ಮಾರ್ಚ್​ 14 ರಿಂದ ಐಪಿಎಲ್ ಆರಂಭ

    Published

    on

    ಮುಂಬಯಿ: 18ನೇ ಆವೃತ್ತಿಯ ಐಪಿಎಲ್‌ನ ವೇಳಾಪಟ್ಟಿ ಬಹಿರಂಗವಾಗಿದೆ. ಕ್ರೀಡಾ ವೆಬ್‌ಸೈಟ್ ಒಂದರಲ್ಲಿ ಮುಂದಿನ ಮೂರು ವರ್ಷಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಐಪಿಎಲ್ ಸಹಿತ ಪ್ರಮುಖ ಕ್ರೀಡಾಕೂಟಗಳ ನೇರ ಪ್ರಸಾರ ಮಾಡುವ ಇಎಸ್‌ಪಿಎನ್‌ ಟಿವಿ ವಾಹಿನಿಗೆ ಸೇರಿದ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಎಂಬ ವೆಬ್‌ಸೈಟ್ ಐಪಿಎಲ್ ವೇಳಾಪಟ್ಟಿಯನ್ನು ಬಹಿರಂಗಗೊಳಿಸಿದೆ. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

    ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಮಾರ್ಚ್ 14ರಿಂದ ಆರಂಭವಾಗಲಿದ್ದು, ಮೇ 25ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಇದರ ಜೊತೆಗೆ ಮುಂದಿನ ಎರಡು ಆವೃತ್ತಿಗಳ ವೇಳಾಪಟ್ಟಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, 2026ರಲ್ಲಿ ಐಪಿಎಲ್ ಟೂರ್ನಿ ಮಾರ್ಚ್ 15 ರಿಂದ ಮೇ 31ರವರೆಗೆ ನಡೆದರೆ, 2027ರ ಐಪಿಎಲ್ ಮಾರ್ಚ್ 14ರಿಂದ ಮೇ 30ರವರೆಗೆ ನಡೆಯಲ್ಲಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳಿಗೆ ಬಿಸಿಸಿಐ, ಇ-ಮೇಲ್ ಮುಖಾಂತರ ವೇಳಾಪಟ್ಟಿ ರವಾವಿಸಿದೆ. ಮುಂದಿನ ಮೂರು ಆವೃತ್ತಿಗಳ ಆರಂಭ ಮತ್ತು ಅಂತ್ಯದ ಬಗ್ಗೆ ಮಾತ್ರ ಮಾಹಿತಿ ಹೊರಬಿದ್ದಿದ್ದು, ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ. ಕಳೆದ ಮೂರು ಆವೃತ್ತಿಗಳಂತೆ ಮುಂದಿನ ಆವೃತ್ತಿಯಲ್ಲೂ 74 ಪಂದ್ಯಗಳು ನಡೆಯಲಿವೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಹೇಳಿಕೊಂಡಿದೆ.

    ಇದಕ್ಕೂ ಮೊದಲು 2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಜ್ಜಾಗಿದೆ. ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ 574 ಆಟಗಾರರ ಬಿಡ್ಡಿಂಗ್ ನಡೆಯಲಿದೆ.

    Continue Reading

    Baindooru

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    LATEST NEWS

    ಭಜನಾ ಗುರು ಅಶೋಕ್ ನಾಥ್ ಕಳಸಬೈಲ್ ಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’

    Published

    on

    ಮೂಡುಬಿದಿರೆ: 2024 ರ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’ ಗೆ ಭಜನಾ ಗುರು ಅಶೋಕ್ ನಾಥ್ ಕಳಸಬೈಲ್ ಆಯ್ಕೆಯಾಗಿದ್ದಾರೆ.

    ಕಲಾಭೂಮಿ ಪ್ರತಿಷ್ಠಾನ ರಿ. ಬೆಂಗಳೂರು ಇದರ ವತಿಯಿಂದ ಇದೇ ನವೆಂಬರ್ 29ರಂದು ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದ ಮತ್ತು ಜನಪದ ಸೇವೆಯಲ್ಲಿ ಗುರುತಿಸಿ ನೀಡಲ್ಪಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಯನ್ನು, ಕುಣಿತ ಭಜನೆ, ಸಂಗೀತ, ಕ್ರೀಡೆ, ಪರಿಸರ ಮತ್ತು ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕುಣಿತ ಭಜನಾ ಗುರು ಅಶೋಕ್ ನಾಯ್ಕ ಕಳಸಬೈಲು ಇವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕಲಾಭೂಮಿ ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.

    ಅಶೋಕ್ ನಾಯ್ಕರವರು ನಮ್ಮ ಕುಡ್ಲ ವಾಹಿನಿಯ ನೃತ್ಯ ಭಜನೆ ಸೀಸನ್ 1 ಹಾಗು ಸೀಸನ್ 2 ರಲ್ಲಿ ಹಲವು ತಂಡಗಳೊಂದಿಗೆ ಭಾಗವಹಿಸಿದ್ದಾರೆ. ಇವರಿಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದ ಈ ಸಂಧರ್ಭದಲ್ಲಿ ನಮ್ಮ ಕುಡ್ಲ ವಾಹಿನಿಯು ಶುಭಾಶಯ ಕೋರುತ್ತಿದೆ.

    Continue Reading

    LATEST NEWS

    Trending