Connect with us

    dehali

    ಹುಟ್ಟುಹಬ್ಬಕ್ಕೆ 2 ದಿನ ಕಡ್ಡಾಯ ರಜೆ ಘೋಷಣೆ ಮಾಡಿದ ಕಂಪೆನಿ..!

    Published

    on

    ಹೊಸದಿಲ್ಲಿ/ಮಂಗಳೂರು: ಹುಟ್ಟುಹಬ್ಬ ಅಂದ್ರೆ ಎಲ್ಲರಿಗೂ ಸಂಭ್ರಮದ ದಿನ. ಅದರಲ್ಲೂ ಕಛೇರಿಯಲ್ಲಿ ಹುಟ್ಟುಹಬ್ಬದ ದಿನದಂದು ರಜೆ ಕೊಟ್ಟರೆ..? ಅದು ಕೂಡಾ ಒಂದು ದಿನವಲ್ಲ ಎರಡು ದಿನ.. ಹುಟ್ಟುಹಬ್ಬದ ದಿನ ಹಾಗೂ ಮರುದಿನ ಕಂಪೆನಿಯೊಂದು ಸಿಬಂದಿಗಳಿಗೆ ರಜೆ  ನೀಡುತ್ತೇ ಅಂದ್ರೆ ನಂಬುತ್ತೀರಾ?

    ಹೌದು, ಇಲ್ಲೊಂದು ಕಂಪೆನಿ ಎಲ್ಲಾ ಸಿಬ್ಬಂದಿಗಳಿಗೆ ಹುಟ್ಟು ಹಬ್ಬದ ದಿನದಂದು ಹಾಗೂ ಅದರ ಮರುದಿನ ರಜೆಯನ್ನು ಕಡ್ಡಾಯವಾಗಿ ಘೋಷಣೆ ಮಾಡಿದೆ. ಇಂತಹದೊಂದು ಅಪರೂಪದ ರಜೆ ಘೋಷಣೆ ಮಾಡಿರುವುದು ‘ಎಕ್ಸ್‌ಪೆಡಿಫೈ’ ಎಂಬ ಕಂಪೆನಿ. ಇದು ಅಚ್ಚರಿ ಎನಿಸಿದ್ರೂ ನಿಜವಾದ ಸಂಗತಿ. ಇಂತಹ ನೀತಿಯನ್ನು ರೂಪಿಸಿದ ವಿಶ್ವದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ‘ಎಕ್ಸ್‌ಪೆಡಿಫೈ’ ಕಂಪೆನಿ  ಪಾತ್ರವಾಗಿದೆ.

    abhijith chakravarthi

    ಕಂಪೆನಿ ಸಿಇಒ ಅಭಿಜಿತ್ ಚಕ್ರವರ್ತಿ

    ಜನ್ಮದಿನ ಹಾಗೂ ಮರುದಿನ ದೊರೆಯುವ ರಜೆಗೆ ‘ಬರ್ತ್‌ ಡೇ ಪ್ಲಸ್ ಒನ್’ ಎಂದು ಹೆಸರಿಸಲಾಗಿದೆ. ಈ ರಜೆಗೆ ಪ್ರಮುಖ ಕಾರಣವೆಂದರೆ ‘ಎಕ್ಸ್‌ಪೆಡಿಫೈ’ ಕಂಪೆನಿಯ ಸಿಇಒ ಆದ ಅಭಿಜಿತ್ ಚಕ್ರವರ್ತಿ. ಇವರು ಸಾಮಾನ್ಯ ಉದ್ಯೋಗಿಯಾಗಿದ್ದ ವೇಳೆ ಅವರಿಗಾದ ಕಹಿ ಅನುಭವದಿಂದಾಗಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿಂದೆ ಅಭಿಜಿತ್‌ ರವರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರ ಬಾಸ್‌ ಜೊತೆ ಬರ್ತ್‌ಡೇ ಸೆಲೆಬ್ರೇಷನ್‌ಗಾಗಿ ರಜೆ ಕೊಡುವಂತೆ ಕೇಳಿಕೊಂಡಿದ್ದಾರೆ. ‘ನಿಮಗೆ ರಜೆ ಯಾಕೆ ಬೇಕು?’ ಎಂದು ನನ್ನ ಹಳೆಯ ಬಾಸ್ ಕೇಳಿದ್ದರು. ನಾನು ಹುಟ್ಟುಹಬ್ಬ ಆಸಚರಿಸಲು ಎಂದು ಹೇಳಿದಾಗ ನಾನೇನೋ ಅಪರಾಧ ಮಾಡಿದೇ ಎಂಬ ರೀತಿಯಲ್ಲಿ ವಿಚಿತ್ರವಾಗಿ ನನ್ನತ್ತ ತಿರುಗಿ ನೋಡಿದ್ದರು ಎಂದು ಅಭಿಜಿತ್ ಚಕ್ರವರ್ತಿ ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ.

    ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ಘೋಷಣೆ- ಯಾರದು?

    ಆ ದಿನವೇ ಅಭಿಜಿತ್‌ ರವರು ಮುಂದೊಂದುದಿನ ನಾನು ಕಂಪೆನಿ ತೆರೆದಾಗ ಎಲ್ಲಾ ಸಿಬಂದಿಗಳಿಗೂ ಹುಟ್ಟುಹಬ್ಬ ದಿನದಂದು ಮಾತ್ರವಲ್ಲದೇ ಅದರ ಮರುದಿನವೂ ರಜೆಯನ್ನು ನೀಡಲು ನಿರ್ಧರಿಸಿದ್ದರಂತೆ.

    ರಜೆಯೇ ಗಿಫ್ಟ್‌:
    ಸಿಬಂದಿಗಳು ಹುಟ್ಟುಹಬ್ಬದ  ಅವರಿಗೆ ಉಡುಗೊರೆ ನೀಡಬೇಕೆ ಹೊರತು ರಜೆ ಮಾಡಿದಕ್ಕಾಗಿ ಅಗಿ ಸಂಬಳ ಕಟ್‌ ಮಾಡುವುರ ಮೂಲಕ ಟೆಂಶನ್ ಕೊಡುವುದಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಇನ್ನು ಮುಂದಿನ ದಿನಗಳಲ್ಲಿ ಕಂಪೆನಿ ಬೆಳೆದಂತೆ ರಜೆಯನ್ನು ಎರಡು ದಿನಗಳಿಂದ ಮೂರು ದಿನಗಳಿಗೆ ವಿಸ್ತರಿಸಿ ‘ಬರ್ತ್‌ಡೇ ಪ್ಲಸ್‌ ಟೂ’ ಎಂದು ಹೆಸರಿಸಲಾಗುತ್ತದೆ ಎಂದು ಅಭಿಜಿತ್ ಚಕ್ರವರ್ತಿಯವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ಕಂಪೆನಿಗೆ ನೀಡುವ ರಜೆ ವೃತ್ತಾಂತದ ಬಗ್ಗೆ ವಿವರಿಸಿದ್ದಾರೆ.

    ಹುಟ್ಟುಹಬ್ಬಕ್ಕೆ ‘ಚರ್ಮ ಕುಟೀರ’ ಕೊಡುಗೆ ನೀಡಿದ ಮಾಜಿ ಮೇಯರ್..!

    ಎಕ್ಸ್‌ಪೆಡಿಫೈ ಕಂಪೆನಿ ಸಿಇಒ ಅಭಿಜಿತ್ ಚಕ್ರವರ್ತಿ ಯವರ ಈ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದ್ದರೆ ನಿಮ್ಮಂಥ ಬಾಸ್ ಇರಬೇಕು ಎಂದು ಹಾಡಿ ಹೊಗಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    dehali

    Paralympics 2024: 29 ಪದಕಗಳೊಂದಿಗೆ ದಾಖಲೆ ಬರೆದ ಭಾರತ

    Published

    on

    Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ.


    ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್​ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.

    Continue Reading

    dehali

    ಸ್ಪೀಕರ್ ಹುದ್ದೆಗೆ ಚುನಾವಣೆ..! ಇತಿಹಾಸದಲ್ಲೇ ಮೊದಲು..!

    Published

    on

    ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಲು ಎನ್‌ಡಿಎ ಹಿಂದೇಟು ಹಾಕಿದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.


    ಹದಿನೆಂಟನೇ ಲೋಕಸಭೆಯಲ್ಲಿ ಹತ್ತು ವರ್ಷಗಳ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಬಲ ವಿರೋಧ ಪಕ್ಷವಾಗಿ ಮೂಡಿಬಂದಿದೆ. ಇದೇ ಕಾರಣದಿಂದ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನೆ ಮಾಡಲು ಆರಂಭಿಸಿವೆ. ಅಧಿವೇಶನದ ಆರಂಭದಲ್ಲಿ ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಹಿರಿಯ ಕಾಂಗ್ರೆಸ್ ಸಂಸದರನ್ನು ಕಡೆಗಣಿಸಿ ಭರ್ತೃಹರಿ ಅವರನ್ನು ನೇಮಿಸಲಾಗಿತ್ತು. ಇದೀಗ 18 ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ನಿಂದ ಓಂ ಬಿರ್ಲಾ ಅವರ ಹೆಸರು ಮತ್ತೆ ಮುಂದಿಡಲಾಗಿದೆ. ಒಮ್ಮತದ ಸ್ಪೀಕರ್ ಆಯ್ಕೆಯ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೊಧ ಪಕ್ಷದ ನಡುವೆ ನಡೆದ ಮಾತುಕತೆ ವಿಫಲವಾಗಿದೆ.

    ಇದನ್ನು ಓದಿ: ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದ ಬ್ರಿಜೇಶ್ ಚೌಟ

    ಓಂ ಬಿರ್ಲಾ ಅವರನ್ನು ಒಮ್ಮತದ ಆಯ್ಕೆಯಾಗಿ ಪರಿಗಣಿಸಲು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಕಾನೂನುಬದ್ಧವಾಗಿ ವಿರೋಧ ಪಕ್ಷಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮನವಿ ಮಾಡಿತ್ತು. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕೂಡ ನಡೆದಿತ್ತು. ಆದರೆ ವಿರೋಧ ಪಕ್ಷದ ಮನವಿಗೆ ಎನ್‌ಡಿಎನಿಂದ ಸಕಾರಾತ್ಮಕ ಉತ್ತರ ಬಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದಿಂದ ಹಿರಿಯ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
    ಎನ್‌ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಇರುವ ಕಾರಣ ಓ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗಲು ಯಾವುದೇ ತೊಂದರೆ ಇಲ್ಲ. ಆದ್ರೆ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ . ಹೀಗಾಗಿ ಅಸಹಕಾರದ ಹೆಜ್ಜೆಯನ್ನು ವಿರೋಧ ಪಕ್ಷ ಇಡಲು ಅವರೇ ಪ್ರೇರೇಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    Continue Reading

    dehali

    ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

    Published

    on

    ದೆಹಲಿ: ಕೇಂದ್ರ ಸರಕಾರ ದೇಶದಾದ್ಯಂತ ಆಧಾರ್ ಕಾರ್ಡ್‌ಅನ್ನು ಕಡ್ಡಾಯಗೊಳಿಸಿದೆ. ಭಾರತೀಯ ನಾಗರಿಕರನ್ನು ಗುರುತಿಸುವುದಕ್ಕಾಗಿ ಹಾಗೂ ದೇಶದ ಭದ್ರತೆ ದೃಷ್ಠಿಯಿಂದ ಆಧಾರ್ ಕಾರ್ಡ್‌ನ್ನು ಜಾರಿಗೊಳಿಸಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್‌ಗಳ ಅಪ್ಡೇಟ್ ಮಾಡಲು, ಹೊಸ ಆಧಾರ್‌ ಮಾಡಿಸಲು ಸೈಬರ್ ಸೆಂಟರ್ ಗಳು ಸರಕಾರಿ ಕಛೇರಿಗಳ ಮುಂದೆ ಮುಗಿ ಬೀಳುತ್ತಾರೆ. ಇದೀಗ ನಾಯಿಗಳಿಗೂ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಯಾಕಂದ್ರೆ ಇದೀಗ ನಾಯಿಗಳಿಗೂ ಆಧಾರ್ ಹೊಂದಿರಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ.

    dog

    ದೆಹಲಿಯಲ್ಲಿ ಆಧಾರ್ ಕಾರ್ಡ್‌ ಹೋಲ್ಡರ್‌ಗಳಾದ 100 ನಾಯಿಗಳು!

    ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆಯಂತೆ. ಸರ್ವೆ ಪ್ರಕಾರ ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ಆಧಾರ್ ಕಾರ್ಡ್‌ಅನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ. ದಾರಿ ತಪ್ಪಿದ ನಾಯಿಗಳನ್ನು ರಕ್ಷಿಸುವ ಹಾಗೂ ಅವುಗಳನ್ನು ಸ್ಥಳಾಂತರಿಸುವ ದೃಷ್ಟಿಯಲ್ಲಿ ಎನ್‌ಜಿಒ ಗಳು ಈ ನಿಯಮವನ್ನು ಜಾರಿಗೆ ತಂದಿದ್ದಾರೆ.

    dog

    ನಾಯಿಗೂ ಬಂತು ಸ್ಕ್ಯಾನರ್‌ ಒಳಗೊಂಡ ಟ್ಯಾಗ್ ಕಾರ್ಡ್:

    ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ . ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

    ಮುಂದೆ ನೋಡಿ..; ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

    Pawfriend.in ಎಂಬ ಎನ್‌ಜಿಒ ಇದನ್ನು ಆವಿಷ್ಕಾರ ಮಾಡಿದ್ದು  ನಾಯಿಗಳಿಗೆ ನೀಡುವ ಆಧಾರ್ ಕಾರ್ಡ್‌ನಲ್ಲಿ ಕ್ಯೂ ಆರ್‌ ಕೋಡ್‌ಅನ್ನು ಕೂಡಾ ಅಳವಡಿಸಿದ್ದಾರೆ.  ಇದು ಮೈಕ್ರೋಚಿಪ್‌ಗಳನ್ನು ಒಳಗೊಂಡಿದ್ದು, ನಾಯಿಗಳು ಒಂದು ವೇಳೆ ಕಳೆದು ಹೋದಲ್ಲಿ ಈ ಟ್ಯಾಗ್‌ಗಳಲ್ಲಿರುವ ಕ್ಯೂಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದ್ರೆ ನಾಯಿಯ ಕುರಿತು ವಿವರಗಳನ್ನು ಪಡೆಯಬಹುದಾಗಿದೆ. ಇದು ನಾಯಿಯ ಯಜಮಾನನಿಗೆ ಬಹಳ ಸಹಾಯಕಾರಿಯಾಗಿದೆ.

     

     

    Continue Reading

    LATEST NEWS

    Trending