DAKSHINA KANNADA
ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ!
Published
6 days agoon
By
NEWS DESK4ಪುತ್ತೂರು : ನಿನ್ನೆ(ಡಿ.5) ಸೊಸೈಟಿಯೊಂದರಿಂದ ಹಣ ಡ್ರಾ ಮಾಡಿ ತೆರಳಿದ್ದ ವ್ಯಕ್ತಿಯೊಬ್ಬರು ಶ*ವವಾಗಿ ಪತ್ತೆಯಾಗಿದ್ದಾರೆ. ಪುತ್ತೂರಿನ ಪಡ್ಡಾಯೂರು ಎಂಬಲ್ಲಿನ ನಿವಾಸಿಯಾಗಿರುವ ನಂದಕುಮಾರ್(61) ಎಂಬವರು ಅನುಮಾನಸ್ಪದವಾಗಿ ಸಾ*ವನ್ನಪ್ಪಿದ್ದಾರೆ.
ನಂದಕುಮಾರ್ ಪುತ್ತೂರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಈ ವೇಳೆ ಸಂಬಂಧಿಯೊಬ್ಬರಿಗೆ ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ಡ್ರಾ ಮಾಡಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ಇಂದು(ಡಿ.6) ಪುತ್ತೂರು ಸಾಲ್ಮರ ಸಮೀಪದ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ ಮೃ*ತದೇಹ ಪತ್ತೆಯಾಗಿದೆ. ನಿನ್ನೆಯಿಂದ ನಾಪತ್ತೆಯಾಗಿದ್ದ ನಂದಕುಮಾರ್ ಎಲ್ಲಿ ಹೋಗಿದ್ದರು ಎಂಬ ಸುಳಿವು ಇರಲಿಲ್ಲ. ಆದ್ರೆ ಅವರು ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ಇತ್ತಾದ್ರೂ ಮೃ*ತದೇಹದ ಬಳಿ ಸಿಕ್ಕ ಚೀಲದಲ್ಲಿ ಯಾವುದೇ ಹಣ ಕಂಡು ಬಂದಿಲ್ಲ. ಹೀಗಾಗಿ ಹಣಕ್ಕಾಗಿ ನಂದಕುಮಾರ್ ಅವರನ್ನು ಕೊ*ಲೆ ಮಾಡಿ ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : Viral Video: ಜಾಯಿಂಟ್ ವೀಲ್ನಿಂದ ಹೊರಬಿದ್ದ ಬಾಲಕಿ; ರಕ್ಷಣಾ ಕಾರ್ಯಚರಣೆಯೇ ರೋಚಕ
ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
DAKSHINA KANNADA
ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ; ಬಹುಕಾಲದ ಬೇಡಿಕೆ ಈಡೇರಿಕೆ
Published
26 minutes agoon
12/12/2024ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.
2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :
ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
DAKSHINA KANNADA
ಉತ್ತಮ ಜನಸ್ಪಂದನೆಯೊಂದಿಗೆ ಮಂಗಳೂರು-ಕಾರ್ಕಳ KSRTC ಸಂಚಾರ ಆರಂಭ
Published
44 minutes agoon
12/12/2024ಮಂಗಳೂರು: ಮಂಗಳೂರು ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಾಯೋಗಿಕ ಸಂಚಾರ ಗುರುವಾರ(ಡಿ.12) ದಿಂದ ಆರಂಭವಾಗಿದೆ.
ಬೆಳಗ್ಗೆ 6-45 ಕ್ಕೆ ಮೊದಲ ಬಸ್ ಹೊರಟಿದ್ದು, ಎರಡನೇ ಬಸ್ 7-15ಕ್ಕೆ ಮಂಗಳೂರಿನಿಂದ ಹೊರಟಿದೆ. ಇದೇ ವೇಳೆ ಕಾರ್ಕಳದಿಂದಲೂ ಎರಡು ಬಸ್ ಮಂಗಳೂರಿಗೆ ಪ್ರಯಾಣ ಆರಂಭಿಸಿದೆ.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್, ‘ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ’ ಎಂದು ವಾದ ಮಂಡಿಸಿದರು. ‘ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿದ್ದೇವೆ’ ಎಂದು ಸದಸ್ಯ ಐವನ್ ಡಿ’ ಸೋಜಾ ತಿಳಿಸಿದರು.
ಇದನ್ನೂ ಓದಿ : ಮಂಗಳೂರು-ಕಾರ್ಕಳ ಕೆ.ಎಸ್.ಆರ್.ಟಿ.ಸಿ ಪ್ರಾಯೋಗಿಕ ಸಂಚಾರಕ್ಕೆ ನಾಳೆ ಚಾಲನೆ !!
ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಬಸ್ ಸಂಚರಿಸಲಿದೆ. ಈ ಬಸ್ ಗಳಿಗೆ ನಾಲ್ಕು ತಿಂಗಳ ತಾತ್ಕಾಲಿಕ ಪರವಾನಗಿ ಲಭಿಸಿದ್ದು, ಮೊದಲ ದಿನವೇ ಬಸ್ ಗಳಿಗೆ ಉತ್ತಮ ಜನಸ್ಪಂದನೆ ಲಭಿಸಿದೆ.
DAKSHINA KANNADA
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
Published
18 hours agoon
11/12/2024ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.
ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್ ಶೆಟ್ಟಿ ಮೊದಲಾದವರಿದ್ದರು.
LATEST NEWS
ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ
ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಇಸ್ರೇಲ್ ಪ್ರಧಾನಿ
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
ಆರ್ಬಿಐ ಹೊಸ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ !!
ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ !
ವಿಚ್ಛೇದನ ನೀಡದೆ ಎರಡನೇ ಮದುವೆ; ಮಂಟಪದಲ್ಲೇ ಮೊದಲ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ
Trending
- BIG BOSS4 days ago
ಚೈತ್ರಾ ಕಣ್ಣೀರು, ಐಶ್ವರ್ಯ ಆಕ್ಟಿವಿಟಿ ರೂಮ್….ಎಲಿಮಿನೆಟ್ ಆಗಿದ್ದು ?
- BIG BOSS5 days ago
BBK11: ಈ ವಾರ ಬಿಗ್ಬಾಸ್ ಮನೆಯಲ್ಲಿ ಕಾದಿದ್ಯಾ ಬಿಗ್ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್
- BIG BOSS5 days ago
ಬಿಗ್ಬಾಸ್ ನಿರ್ಧಾರಗಳಿಗೆ ರೆಸ್ಪೆಕ್ಟೇ ಇಲ್ಲ -ಇಬ್ಬರು ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್
- BANTWAL6 days ago
ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ