Connect with us

    DAKSHINA KANNADA

    ಮಡಂತ್ಯಾರು: ಗೇರುಕಟ್ಟೆ ಸಮೀಪ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶ*ವ ಪತ್ತೆ

    Published

    on

    ಬೆಳ್ತಂಗಡಿ: ತೋಟದ ಕೆರೆಯಲ್ಲಿ ಕೊಳೆತ ಶ*ವ ಅ.22 ರಂದು ಸಂಜೆ ಪತ್ತೆಯಾದ ಘಟನೆ ಮಡಂತ್ಯಾರು,  ಗೇರುಕಟ್ಟೆ ಪೇಟೆ ಸಮೀಪ ನಡೆದಿದೆ.


    ಗೇರುಕಟ್ಟೆ ಏರೋಡಿ ರಸ್ತೆ ಪಕ್ಕದ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಕೆರೆಯಲ್ಲಿ ಕೊ*ಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶ*ವ ಪತ್ತೆಯಾಗಿದ್ದು, ಸುಮಾರು ಏಳು ದಿನಗಳ ಹಿಂದೆ ವ್ಯಕ್ತಿ ಸಾ*ವನ್ನಪ್ಪಿರಬಹುದೆಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಶ*ವ ಕೊಳೆತು ಹೋಗಿದೆ.

    ಮೃತಪಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆತ್ಮಹತ್ಯೆಯೋ, ಕೊಲೆಯೋ ಎಂದು ತಿಳಿದು ಬಂದಿಲ್ಲ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸುರತ್ಕಲ್: ಸಮುದ್ರದಲ್ಲಿ ಆಡಲು ಹೋಗಿ ಸಮುದ್ರಪಾಲಾದ ಯವಕ

    Published

    on

    ಸುರತ್ಕಲ್: ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ ಸಂಜೆ ಸುರತ್ಕಲ್ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.

    ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಇಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    DAKSHINA KANNADA

    ಅಮೆರಿಕದಲ್ಲಿ ಆರ್‌ಎಸ್‌ಎಸ್‌ಗೆ ಉತ್ತಮ ಸ್ಪಂದನೆ : ವಿಪುಲ್‌ ರೈ

    Published

    on

    ಪುತ್ತೂರು: ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘ(ಎಚ್‌ಎಸ್‌ಎಸ್‌)ದ ಹೆಸರಿನಲ್ಲಿ ಪ್ರತಿ ರವಿವಾರ ಸಂಘದ ಶಾಖೆ ನಡೆಸುತ್ತಿದ್ದಾರೆ. ಅಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಸಂಘಟಣ ಸದಸ್ಯನಾಗಿರುವ ವಿಪುಲ್‌ ಎಸ್‌. ರೈ ಕಡಮಜಲು ತಿಳಿಸಿದ್ದಾರೆ.


    “ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಹಿಂದುತ್ವದ ವಿಚಾರದಲ್ಲಿ ಕನ್ನಡ ಸಂಘ, ತುಳು ಸಂಘಟನೆ, ಯಕ್ಷಗಾನಕ್ಕೆ ಸಹಕಾರ, ದಕ್ಷಿಣ ಕನ್ನಡ ಒಕ್ಕೂಟ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ಯೋತಕವಾಗಿ ಹಿಂದೂ ಸ್ವಯಂ ಸೇವಕ ಸಂಘದಲ್ಲಿ ಸಂಘಟನ ಸದಸ್ಯನಾಗಿ ದುಡಿಯುತ್ತಿದ್ದೇನೆ” ಎಂದರು.

    “ಮುಂದಿನ ಪೀಳಿಗೆಗೆ ಅಮೆರಿಕದಲ್ಲಿ ನೆಲೆಸಿರುವ ಮಕ್ಕಳಿಗಾಗಿ ಕನ್ನಡ ಶಾಲೆ, ಭಾರತದ ಸಂಸ್ಕೃತಿ ಮತ್ತು ಧರ್ಮದ ವಿಚಾರಧಾರೆಗಳನ್ನು ಕಲಿಸುವ ಚಿನ್ಮಯ ಮಿಷನ್‌ನ ಬಾಲವಿಹಾರ ಶಾಲೆಗಳನ್ನು ಮುನ್ನಡೆಸಲಾಗುತ್ತದೆ,  ಕ್ಯಾಲಿಫೋರ್ನಿಯ ರಾಜ್ಯದ ಲಾಸ್‌ಏಂಜಲೀಸ್‌ ಜಿಲ್ಲೆಯಲ್ಲಿ 8 ಶಾಖೆಗಳಿವೆ. ಪ್ರತಿಯೊಂದು ಶಾಖೆಗೂ ಸುಮಾರು 50ರಿಂದ 60 ಮಂದಿ ಪೋಷಕರು ಹಾಗೂ ಅವರ ಜತೆ ಮಕ್ಕಳು ಬರುತ್ತಾರೆ” ಎಂದು ಅಭಿಪ್ರಾಯಪಟ್ಟರು.
    ಮೂರು ವಾರಗಳ ಹಿಂದೆ ನ್ಯಾಂಟಕ್ಲಾರಿಟಾ ಎಂಬಲ್ಲಿ ಹೊಸ ಶಾಖೆ ಆರಂಭಗೊಂಡಿದೆ. ಕಡಮಜಲು ಸುಭಾಷ್‌ ರೈ, ಶಶಿಕುಮಾರ್‌ ರೈ ಬಾಲೊಟ್ಟು, ದಯಾನಂದ ಶೆಟ್ಟಿ ಉಜಿರುಮಾರು, ಶಿವಕುಮಾರ್‌ ಕಲ್ಲಿಮಾರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    Continue Reading

    BANTWAL

    ಬಂಟ್ವಾಳ: ಕಾಮಗಾರಿ ಯಂತ್ರ ಡಿ*ಕ್ಕಿ;ಪಾದಚಾರಿಗೆ ಗಾ*ಯ

    Published

    on

    ಬಂಟ್ವಾಳ: ಬಿ.ಸಿ.ರೋಡು – ಅಡ್ಡಹೊಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆಯ ಯಂತ್ರವೊಂದು ಡಿ*ಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಅ. 21ರಂದು ಮೆಲ್ಕಾರಿನ ಬೋಳಂಗಡಿಯಲ್ಲಿ ನಡೆದಿದೆ.

    ಬೋಳಂಗಡಿ ನಿವಾಸಿ ಪದ್ಮನಾಭ ಶೆಣೈ ಗಾ*ಯಾಳು ಎಂದು ಗುರುತಿಸಲಾಗಿದೆ.

    ಕಾಲಿಗೆ ಗಂ*ಭೀರ ಸ್ವರೂಪದ ಗಾ*ಯವಾಗಿರುವ ಗಾ*ಯಾಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

     

    ಇದನ್ನೂ ಓದಿ: ಬಂಟ್ವಾಳ : ರೈಲ್ವೇ ಹಳಿ ಬದಿ ರುಂ*ಡ – ಮುಂ*ಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃ*ತದೇಹ ಪ*ತ್ತೆ

     

    ಚಾಲಕ ರಾಜಕುಮಾರ ಯಾದವ್‌ ಯಂತ್ರವನ್ನು ಏಕಾಏಕಿ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಪದ್ಮನಾಭರಿಗೆ ಡಿ*ಕ್ಕಿ ಹೊಡೆದಿದೆ.

    ಘಟನೆ ಕುರಿತು ಗಾಯಾಳಿನ ಸಂಬಂಧಿ ಗುರುಪ್ರಸಾದ್‌ ನೀಡಿದ ದೂರಿನಂತೆ ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending