Connect with us

LATEST NEWS

ಟಾಟಾ ಸುಮೊ‌ -ಕ್ಯಾಂಟರ್ ನಡುವೆ ಭೀಕರ ರಸ್ತೆ ಅಪಘಾತ- ಮಗು ಸೆರಿ 13 ಮಂದಿ ಮೃತ್ಯು..!

Published

on

ಚಿಕ್ಕಬಳ್ಳಾಪುರ: ಟಾಟಾ ಸುಮೊ‌ ಮತ್ತು ಕ್ಯಾಂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 13 ಮಂದಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ಚಿತ್ರಾವತಿ ಬಳಿ ಸಂಚಾರ ಠಾಣೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ 7ರ ಸುಮಾರಿನಲ್ಲಿ ಸಂಭವಿಸಿದೆ.

ಒಂದು ಮಗು, ಮೂವರು ಮಹಿಳೆಯರು ಹಾಗೂ ಎಂಟು ಮಂದಿ ಪುರುಷರು ಮೃತಪಟ್ಟವರಾಗಿದ್ದು, ಮೃತರೆಲ್ಲ ಕಾರ್ಮಿಕರು ಎಂದು ತಿಳಿದು ಬಂದಿದೆ. ಮೃತಪಟ್ಟವರು ಎಲ್ಲಿಯವರು ಎಂಬ ಬಗ್ಗೆ ಮಾಹಿತಿ ಇನ್ನೂ ಖಚಿತವಾಗಿಲ್ಲ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಂತಿದ್ದ ಸಿಮೆಂಟ್ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದರು. ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರದಿಂದ ಬೆಂಗಳೂರಿಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

FILM

ಹೃದಯಾಘಾತದಿಂದ ಸಾವನ್ನಪ್ಪಿದ ಕೇವಲ 24 ವರ್ಷದ ನಟಿ

Published

on

ಕೇರಳ : ಮಲೆಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು.
ಚಲನಚಿತ್ರ ಮತ್ತು ದೂರದರ್ಶನದಲ್ಲಿ ಜನಪ್ರಿಯ ಹೆಸರಾಗಿರುವ ಮಲಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ಡಿ. 9ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನಿಧನರಾದರು.
ವರದಿಗಳ ಪ್ರಕಾರ ಹಠಾತ್ ಹೃದಯಾಘಾತದಿಂದ ನಿಧನರಾದರು. ಅಂಚಿನಲ್ಲಿರುವ ಸಮುದಾಯಗಳ ಹೋರಾಟದ ಸುತ್ತ ಸುತ್ತುವ ಕಾಕ್ಕಾದಲ್ಲಿ ಪಂಚಮಿ ಪಾತ್ರಕ್ಕಾಗಿ ಅವರು ಜನಪ್ರಿಯರಾಗಿದ್ದಾರೆ. ಆಕೆಯ ನಿಧನದ ಸುದ್ದಿ ಮಾಲಿವುಡ್‌ನಲ್ಲಿ ಆಘಾತವನ್ನುಂಟು ಮಾಡಿದೆ.


ಕನ್ನಡದ ಬ್ಯೂಟಿ ಶ್ರೀಲೀಲಾ ಏಕಾಏಕಿ ಶ್ರೀಲಂಕಾಕ್ಕೆ ಹೋಗಿದ್ದಾರೆ. ಭರ್ತಿ ಎರಡು ದಿನ ಅಲ್ಲಿ ಕಳೆಯಲಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ. ಒಂದೊಂದು ಗಂಟೆ ಟೈಮ್‌ಗೂ ಒದ್ದಾಡುತ್ತಿದ್ದಾರೆ ಶ್ರೀಲೀಲಾ. ಶೂಟಿಂಗ್, ಮೆಡಿಕಲ್ ಪರೀಕ್ಷೆ, ಪ್ರಚಾರಕ್ಕೆಲ್ಲಾ ಸಮಯ ಕೊಡಲಾರದ ಹುಡುಗಿ ಶ್ರೀಲಂಕಾಕ್ಕೆ ಹೋಗಿದ್ಯಾಕೆ? ಇಲ್ಲಿದೆ ಮಾಹಿತಿ.
‘ಗುಂಟೂರು ಖಾರಂ’ ಶೂಟಿಂಗ್ ನಡೆಯುತ್ತಿದೆ. ಪ್ರಿನ್ಸ್ ಮಹೇಶ್‌ ಬಾಬು ಜೊತೆ ನಟಿ ಬ್ಯುಸಿ. ಇದರ ನಡುವೆ ನಿತಿನ್ ಜೊತೆಗಿನ ‘ಎಕ್ಸಾರ್ಡನರಿ ಮ್ಯಾನ್’ ಬಿಡುಗಡೆ ಪ್ರಚಾರಕ್ಕೆ ಹೋಗಬೇಕು.

ಇದು ಸಾಲದು ಎಂಬಂತೆ ಜನವರಿಗೆ ಮೆಡಿಕಲ್ ಪರೀಕ್ಷೆ ಕೂಡ ಇದೆ. ಒಂದೇ ಒಂದು ಗಂಟೆಗಾಗಿ ನಿರ್ಮಾಪಕರು ಕಾಯುತ್ತಿದ್ದಾರೆ. ಶ್ರೀಲೀಲಾ ಸಮಯ ಹೊಂದಿಸಲು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಪುರುಸೊತ್ತು ಇಲ್ಲದ ಸಮಯದಲ್ಲಿ ಶ್ರೀಲೀಲಾ ಶ್ರೀಲಂಕಾಕ್ಕೆ ಹಾರಿದ್ದಾರೆ. ‘ಬಾಹುಬಲಿ’ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ಮದುವೆ ಇಂದು (ಡಿ.6) ನಡೆಯುತ್ತಿದೆ. ಹುಡುಗಿ ಪ್ರತ್ಯೂಶಾ. ಈಕೆಗಾಗಿ ಶ್ರೀಲೀಲಾ ಶ್ರೀಲಂಕಾಕ್ಕೆ ಹೋಗಿದ್ದಾರೆ. ಬಾಲ್ಯದ ಗೆಳತಿ ಪ್ರತ್ಯೂಶಾ- ಶ್ರೀಲೀಲಾ ಅಮೆರಿಕಾದಲ್ಲಿ ಇಬ್ಬರೂ ಒಂದೇ ಕಾಲೇಜಿನ ಗೆಳತಿಯರು. ಹೀಗಾಗಿ ಇದ್ದ ಬದ್ದ ಕೆಲಸವೆಲ್ಲಾ ಪಕ್ಕಕ್ಕಿಟ್ಟು ಶ್ರೀಲೀಲಾ ಮದುವೆಗೆ ಹಾಜರಾಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್ ಮತ್ತು ಸಿನಿಮಾ ರಿಲೀಸ್‌ನಲ್ಲಿ ಬ್ಯುಸಿಯಿದ್ದ ‘ಕಿಸ್’ ನಟಿ. ಕೊಂಚ ತೆಗೆದುಕೊಂಡು ಶ್ರೀಲಂಕಾಗೆ ಹಾರಿದ್ದಾರೆ. ಅಂದಹಾಗೆ, ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಶ್ರೀಲೀಲಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

Continue Reading

DAKSHINA KANNADA

Surathkal: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ- ವಿದ್ಯಾರ್ಥಿನಿಯರು ಗಂಭೀರ..!

Published

on

ಸುರತ್ಕಲ್: ರಸ್ತೆ ದಾಟುತ್ತಿದ್ದ ವೇಳೆ ರಾಂಗ್‌ ಸೈಡ್‌ನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್‌ ಜಂಕ್ಷನ್‌ ಬಳಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ  ಗಾಯಗೊಂಡವರು ಎಂದು ತಿಳಿದು ಬಂದಿದೆ. ಇನ್ನೋರ್ವಳ ಸ್ಥಿತಿ ಚಿಂತಾಜನಕವಾಗಿದ್ದು. ಇನ್ನೊಬ್ಬಳಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅಗಮಿಸಿದ ಸುರತ್ಕಲ್‌ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Continue Reading

bangalore

ಸ್ನೇಹಿತ್ ಔಟ್- ನಮ್ರತಾ- ಸ್ನೇಹಿತ್ ಲವ್ ಸ್ಟೋರಿಗೆ ಬ್ರೇಕ್..!

Published

on

ಬಿಗ್ ಬಾಸ್: ಬಿಗ್ ಬಾಸ್ ಮನೆ ಆಟ ಇದೀಗ 60 ದಿನಗಳ ಪೂರೈಸಿದೆ. ಪ್ರತಿ ವಾರವು ಸ್ಪರ್ಧೆಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಲಿಮಿನೆಟ್ ಆಗುತ್ತಿದ್ದಾರೆ. ಈ ವಾರವು ಸ್ನೇಹಿತ್ ಔಟ್ ಆಗಿದ್ದಾರೆ.

ಹಿಂದಿನ ವಾರದಲ್ಲಿ ಸ್ನೇಹಿತ್ ನಮ್ರತಾ ಜೊತೆ ಲವ್ವಿ-ಡವ್ವಿ ವಿಷಯಗಳನ್ನು ಮಾತನಾಡುತ್ತಿದ್ದರು. ನಮ್ರತಾ ಜೊತೆ ಬೆಸ್ಟ್ ಫ್ರೇಂಡ್ ಆಗಿದ್ದ ಸ್ನೇಹಿತ್ ಟಾಸ್ಕ್ ಗಳಲ್ಲಿ ಗೆಲ್ಲುತ್ತಿದ್ದರೂ, ಕೊನೆ ಕೊನೆಗೆ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ಕ್ಯಾಪ್ಟನ್ಸಿ ಆಗಿದ್ದಾಗ ಎರಡು ತಂಡಗಳ ಜೊತೆ ಪಕ್ಷಪಾತ ಮಾಡುತ್ತಿದ್ದರು. ಒಂದು ಟೀಮ್ ಗೆ ಮಾತ್ರ ಸಪೋರ್ಟ್ ಮಾಡುತ್ತಿದ್ದರು.

ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಎಂಬ ತಂಡಗಳ ನಡುವೆ ಜಗಳಗಳು ಹೆಚ್ಚಾಗಿತ್ತು. ಇದೇ ಟಾಸ್ಕ್ ನಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಕಣ್ಣಿಗೆ ಪೆಟ್ಟಾಗಿದ್ದು, ಇದಕ್ಕೆ ಪರೋಕ್ಷವಾಗಿ ಸ್ನೇಹಿತೇ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿತ್ತು. ಆದರೆ ಏನೂ ಮಾತನಾಡಲೂ ಮುಂದೆ ಹೋಗಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ನೇಹಿತ್ ನ ನಡೆತೆಯಿಂದ ಇದೀಗ ಅವರ ಬಿಗ್ ಬಾಸ್ ನಿಂದ ಹೊರ ಹೋಗಿದ್ದಾರೆ.

ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಸ್ನೇಹಿತ್ ಎಲಿಮಿನೇಷನ್ ನಿಂದ ವಿನಯ್ & ಟೀಮ್ ಶಾಕ್ ಆಗಿದೆ. ನಮ್ರತಾ ಗೌಡ ಜೊತೆ ಲವ್ವಿ ಡವ್ವಿ ಅಂತ ಹಿಂದೆ ಬೀಳತ್ತಿದ್ದ ಸ್ನೇಹಿತ್ ಮುಂದಿನ ನಡೆಯೇನು? ಬಿಗ್ ಬಾಸ್ ಆಟದ ನಂತರ ಮುಂದಿನ ದಿನಗಳಲ್ಲಿ ನಮ್ರತಾ ಮೆಚ್ಚಿ ಸ್ನೇಹಿತ್ ಒಪ್ಪಿಕೊಳ್ತಾರಾ ಕಾಯಬೇಕಿದೆ.

ಅಂತೂ ಬಿಗ್ ಬಾಸ್ ನಿಂದ ಸ್ನೇಹಿತ್ ಔಟ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರ ಲವ್ ಸ್ಟೋರಿ ಬ್ರೇಕ್ ಆಗುತ್ತಾ ಅಲ್ಲ ಬಿಗ್ ಮನೆಯಿಂದ ಹೊರ ಹೋದ ಬಳಿಕ ಮುಂದುವರಿಯುತ್ತಾ ಅನ್ನೋದು ಕಾದು ನೋಡಬೇಕಷ್ಟೇ.

Continue Reading

LATEST NEWS

Trending