Connect with us

    LATEST NEWS

    ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾದ ಸಾವಿರಾರು ಕೊಳೆಗೇರಿ ಮನೆಗಳು; ಅಪಾಯದಿಂದ ಪಾರಾದ ನಿವಾಸಿಗಳು..!

    Published

    on

    ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾದ ಸಾವಿರಾರು ಕೊಳೆಗೇರಿ ಮನೆಗಳು; ಅಪಾಯದಿಂದ ಪಾರಾದ ನಿವಾಸಿಗಳು..!

    ಕೋಲ್ಕತ್ತ: ಬಾಗ್‍ಬಜಾರ್ ಪ್ರದೇಶದ ಕೊಳೆಗೇರಿಯೊಂದರಲ್ಲಿ ಬುಧವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ಗುಡಿಸಲುಗಳು ಸುಟ್ಟುಹೋಗಿರುವ ಕುರಿತು ವರದಿಯಾಗಿದೆ.ಚಿತ್ ಫೋರ್ ಲಾಕ್ ಗೇಟ್ ಸೇತುವೆ ಬಳಿಯ ಬಾಗ್‍ಬಜಾರ್ ಮಹಿಳಾ ಕಾಲೇಜಿನ ಪಕ್ಕದಲ್ಲಿರುವ ಕ್ಷಿರೋದ್ದ್ಯಾವಿನೋದ್ ಅವೆನ್ಯೂನಲ್ಲಿ   ಕೊಳೆಗೇರಿಯ ಹಲವಾರು ಮನೆಗಳಿಗೆ ಬೆಂಕಿ ಆವರಿಸಿದೆ. ಕನಿಷ್ಠ 24 ಅಗ್ನಿಶಾಮಕ  ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಕೊಳೆಗೇರಿಗಳಲ್ಲಿ ಸ್ಫೋಟಗಳು ನಡೆದಿದ್ದು, ಬೆಂಕಿಗೆ ಆಹುತಿಯಾಗಿರುವ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ .

    ಹೆಚ್ಚಿನ ಜನರನ್ನು ಸಮಯಕ್ಕೆ  ಸರಿಯಾಗಿ ಸ್ಥಳಾಂತರಿಸಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಜನರನ್ನು ಹೊರಗೆ ಕರೆದೊಯ್ಯುತ್ತಿದ್ದಂತೆ ಪಕ್ಕದ ಶಾರದಾ ಮೇಯರ್ ಬ್ಯಾರಿಗೂ ಬೆಂಕಿ ಹರಡಿತು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.“ಬೆಂಕಿಗೆ  ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದವರು  ಬೆಂಕಿ ನಂದಿಸಲು  ಪ್ರಯತ್ನಿಸಿದ್ದಾರೆ. ಶೀಘ್ರದಲ್ಲೇ ಬೆಂಕಿ ನಿಯಂತ್ರಣಕ್ಕೆ ಬರಲಿದೆ.

    ನಾವು ಇಡೀ ಪ್ರದೇಶವನ್ನು ಖಾಲಿ ಮಾಡಿದ್ದೇವೆ. ಹಲವಾರು ಸ್ಫೋಟಗಳು ಸಂಭವಿಸಿವೆ,  ಗ್ಯಾಸ್ ಸಿಲಿಂಡರ್ ಗಳ  ಕಾರಣದಿಂದಾಗಿ ಈ ಸ್ಫೋಟಗಳು ಸಂಭವಿಸಿರಬಹುದು  ಎಂದು “ಕೋಲ್ಕತಾ ಪೊಲೀಸ್  ಹಿರಿಯ ಅಧಿಕಾರಿ ಹೇಳಿದ್ದಾರೆ.ಅಗ್ನಿಶಾಮಕ ಒಂದು ಗಂಟೆ ತಡವಾಗಿ ಸ್ಥಳಕ್ಕೆ ತಲುಪಿದ್ದಾಗಿ  ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಬೆಂಕಿ ನಿಯಂತ್ರಣಕ್ಕೆ ಬರುವುದು ಕಠಿಣವಾಗಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ಒಂದೆರಡು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.

    ಜನಸಮೂಹವನ್ನು ನಿಯಂತ್ರಿಸಲು ರಾಪಿಡ್ ಆಕ್ಷನ್ ಫೋರ್ಸ್   ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಕ್ಷಿರೋದ್ವಿದ್ಯಾವಿನೋದ್ ಅವೆನ್ಯೂ ಮತ್ತು ನಗರದ ಉತ್ತರದ ಅಂಚಿನಲ್ಲಿ ವಾಸಿಸುವ ಜನರ ಜೀವನಾಡಿಯಾಗಿರುವ ಚಿಟ್ ಫೋರ್ ಲಾಕ್    ಗೇಟ್ ಸೇತುವೆಯಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.“ನಾವು ಇಡೀ ಪ್ರದೇಶದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದೇವೆ. ಕನಿಷ್ಠ 40 ಕುಟುಂಬಗಳ ಮನೆಗಳು  ಬೆಂಕಿಯಿಂದ ಸಮಸ್ಯೆಗೆ ಸಿಲುಕಿದೆ.

    ಪುಸ್ತಕಗಳ ಗೋಡೌನ್ ಸಹ ಮುಚ್ಚಲ್ಪಟ್ಟಿದೆ” ಎಂದು ಪೊಲೀಸ್ ಅಧಿಕಾಯೊಬ್ಬರು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕತ್ತೆಗೂ ಒಂದು ಕಾಲ..! ಈ ದೇಶದ ಆರ್ಥಿಕತೆಗೆ ಕತ್ತೆಯೇ ಆಸರೆ..!

    Published

    on

    ಮಂಗಳೂರು :  ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಪಾಕಿಸ್ತಾನ ಸಾಲದ ಸುಳಿಯಲ್ಲಿ ನಲುಗಿ ಹೋಗಿದೆ. ಆದ್ರೆ ಸೂಕ್ತ ಆರ್ಥಿಕ ನೀತಿಯನ್ನು ಜಾರಿ ಮಾಡದ ಪಾಕಿಸ್ತಾನ ಆರ್ಥಿಕ ನಷ್ಟದಿಂದ ಹೊರಬರಲು ದೇಶದಲ್ಲಿ ಕತ್ತೆ ಸಾಕಾಣಿಕೆಗೆ ಉತ್ತೇಜನ ನೀಡಿದೆ. ಇದರಿಂದ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಕತ್ತೆಗಳ ಸಂಖ್ಯೆ ಏರಿಕೆಯಾಗ್ತಾ ಇದು ಜನರ ಆರ್ಥಿಕ ಪರಿಸ್ಥಿತಿ ಚೇತರಿಸುತ್ತಿದೆಯಂತೆ.

    ಕತ್ತೆಯ ಸಂಖ್ಯೆ ಏರಿಕೆ ಕಾರಣ ಇದು..!

    ಪಾಕಿಸ್ತಾನದಲ್ಲಿ ಕಳೆದೊಂದು ವರ್ಷದಲ್ಲಿ ಕತ್ತೆಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು, ದೇಶದ 80 ಲಕ್ಷ ಜನ ಈ ಕತ್ತೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕತ್ತೆಗಳಿಂದಾಗಿಯೇ ತನ್ನ ವಿದೇಶಿ ವಿನಿಮಯ ಹೆಚ್ಚಿಸಿಕೊಂಡಿರುವ ಪಾಕಿಸ್ತಾನ, ದೇಶದ ಆರ್ಥಿಕ ಸುಧಾರಣೆಗೆ ಮುಂದಾಗಿದೆ. ಚೀನಾ ದೇಶದಲ್ಲಿ ಪಾಕಿಸ್ತಾನದ ಕತ್ತೆಗಳಿಗೆ ಬೇಡಿಕೆ ಇದ್ದು, ಪಾಕಿಸ್ತಾನ ಈ ಕತ್ತೆಗಳನ್ನು ಚೀನಾ ದೇಶಕ್ಕೆ ರಪ್ತು ಮಾಡುತ್ತಿದೆ. ಈ ರಪ್ತಿನಿಂದಾಗಿ ಪಾಕಿಸ್ತಾನದ ಜನರ ಗಳಿಕೆಯಲ್ಲಿ 40% ಹೆಚ್ಚಳವಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಮಹಮ್ಮದ್ ಔರಂಗಜೇಬ್ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 15 ಕೋಟಿ ಜಾನುವಾರುಗಳಿವೆ. ಅವುಗಳಲ್ಲಿ ಸರಿ ಸುಮಾರು 59 ಲಕ್ಷ ಕತ್ತೆಗಳೇ ಇದೆ ಅಂತೆ.


    ಜಗತ್ತಿನ ಕತ್ತೆಗಳ ದೊಡ್ಡ ಆಮದುದಾರ ದೇಶ ಚೀನಾ..!

    ಚೀನಾ ದೇಶದಲ್ಲಿ ಕತ್ತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಜಗತ್ತಿನ ಹಲವು ದೇಶಗಳಿಂದ ಕತ್ತೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದೀಗ ಪಾಕಿಸ್ತಾನ ಕತ್ತೆಗಳನ್ನು ಚೀನಾ ದೇಶಕ್ಕೆ ರಪ್ತು ಮಾಡುವ ಮೂರನೇ ದೊಡ್ಡ ದೇಶವಾಗಿದೆ. ಚೀನಾದಲ್ಲಿ ಕತ್ತೆಗಳಿಂದ ಔಷಧ ತಯಾರಿ ಸೇರಿದಂತೆ ಕತ್ತೆ ಹಾಲು, ಮಾಂಸ ಹಾಗೂ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಇನ್ನು ಕತ್ತೆ ಮಾಂಸ ಚೀನಾ ದೇಶದ ಜನಪ್ರೀಯ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದೆ.

    Continue Reading

    FILM

    ಕನ್ನಡತಿ ರಂಜನಿ ರಾಘವನ್‌ಗೆ ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಯ ಗರಿ..!! ಈ ಬಗ್ಗೆ ರಂಜನಿ ಹೇಳಿದ್ದೇನು?

    Published

    on

    ಬೆಂಗಳೂರು: ಪುಟ್ಟಗೌರಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ರಂಜನಿ ರಾಘವನ್ ಕನ್ನಡತಿ ಸೀರಿಯಲ್ ಮೂಲಕ ಅತೀ ಹೆಚ್ಚು ಮೆಚ್ಚುಗೆಯನ್ನು ಪಡೆದಿದ್ದಾರೆ. ಈ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ತನ್ನ ಸ್ವಚ್ಛಂದವಾದ ಕನ್ನಡದಿಂದಾಗಿ ಕನ್ನಡಿಗರ ಹೃದಯ ಕದ್ದ ನಟಿ. ನಟನೆಯಲ್ಲಿ ಮಾತ್ರವಲ್ಲದೇ ಬರಹದಲ್ಲೂ ಸೈ ಎನಿಸಿಕೊಂಡಿದ್ದಾರೆ ರಂಜನಿ.

    ಒಳ್ಳೆಯ ಬರಹಗಾರ್ತಿಯೂ ಆಗಿರುವ ರಂಜನಿ ರಾಘವನ್ ಇತ್ತೀಚೆಗೆ ‘ಕಥೆ ಡಬ್ಬಿ’ ಎಂಬ ಕಥಾಸಂಕಲನ ಹಾಗೂ ‘ಸ್ವೈಪ್‌ರೈಟ್’ ಎಂಬ ಕಾದಂಬರಿಯನ್ನು ಬರೆದಿದ್ದು ಸಾಹಿತ್ಯ ಲೋಕದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿ, ಸಿನೆಮಾ ಶೂಟಿಂಗ್‌ಗಳಲ್ಲಿ ಬ್ಯುಸಿ ಇದ್ದರೂ ಬಿಡುವ ಮಾಡಿಕೊಂಡು ಕಥೆ ಬರೆಯುತ್ತಾರೆ. ಇನ್ನು ನಟನೆಯಲ್ಲಿ ಸದಾ ಬ್ಯುಸಿ ಇರುವವರು ಬಿಡುವು ಮಾಡಿಕೊಳ್ಳುವುದೇ ಕಷ್ಟ. ಈ ಮಧ್ಯೆ ರಂಜನಿ ತಮ್ಮ ಸಾಹಿತ್ಯ ಆಸಕ್ತಿಗಾಗಿ ಬಿಡುವು ಮಾಡಿಕೊಂಡು ಕಥೆಗಳನ್ನು ಬರೆಯುತ್ತಾರೆ.

    ಕುಡಿದ ಅಮಲಿನಲ್ಲಿ ತೇಲಾಡಿದ ಉರ್ಫಿ ಜಾವೇದ್..!

    ಇದೀಗ ಇವರ ಸಾಹಿತ್ಯಾಭಿರುಚಿಗಾಗಿ ಹೆಮ್ಮೆಯ ಗರಿಯೊಂದು ಮುಡಿಗೇರಿದೆ. ಇವರ ಸಾಹಿತ್ಯ ಪ್ರೇಮವನ್ನು ಗುರುತಿಸಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕ ಸಂಘದ ವತಿಯಿಂದ “ಯುವ ಸಾಹಿತ್ಯ ರತ್ನ ಬಿರುದು” ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಜೊತೆ ವೀಡಿಯೋ ಮಾಡಿ ರಂಜನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅವರ ಕಥೆ ಡಬ್ಬಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ ಸಾಹಿತ್ಯಾಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. “ಈ ಹಿಂದೆ ನಾನು ಬರೆದ ಕಥೆ ಡಬ್ಬಿ ಪುಸ್ತಕಕ್ಕೆ ಬಹಳಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದೀರಿ. ಹಾಗೆ ತುಂಬಾ ಜನ ನನ್ನ ಫ್ಯಾನ್ ಪೇಜ್ ಮೂಲಕ ಪ್ರಮೋಷನ್ ಗಳನ್ನು ನೀಡಿದ್ದೀರಿ ನಿಮಗೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

    ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ಮುಜುಗರ ಎನಿಸುತ್ತಿದೆ. ಈ ಪ್ರಶಸ್ತಿಯನ್ನು ಎಲ್ಲಾ ಸಾಹಿತಿಗಳಿಗೆ, ಓದುಗಾರರಿಗೆ ಮತ್ತು ಅಭಿಮಾನಿಗಳಿಗೆ ನಾನು ಅರ್ಪಣೆ ಮಾಡುತ್ತೇನೆ ಎಂದು ಹೇಳಿದರು.

    Continue Reading

    LATEST NEWS

    ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಹಿಟ್‌ಮ್ಯಾನ್ ನಾಯಕ

    Published

    on

    ನವದೆಹಲಿ : ಟಿ20 ವಿಶ್ವಕಪ್ ಭಾರತ ಗೆದ್ದು ಬೀಗಿತ್ತು. ಈ ಪಂದ್ಯದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರು. ಮುಂದೆ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಮುಂದುವರೆಯಲಿದ್ದಾರ? ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಅನುಮಾನ ಪರಿಹರಿಸಿದ್ದಾರೆ.


    ರೋಹಿತ್ ಶರ್ಮಾ ನಾಯಕತ್ವ :

    ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ವೀಡಿಯೋ ಹೇಳಿಕೆಯನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಟಿ20 ವಿಶ್ವಕಪ್ ಗೆಲುವಿಗೆ ಭಾರತ ತಂಡವನ್ನು ಅಭಿನಂದಿಸಿರುವ ಅವರು, ಭಾರತದ ವಿಜಯಯಾತ್ರೆ ಮುಂದುವರಿಯುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಾವು ಎರಡು ಬಾರಿ ಫೈನಲ್​ ಆಡಿದ್ದೆವು. 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಿದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಹಾಗೆಯೇ ಕಳೆದ ವರ್ಷ ನವೆಂಬರ್ 23 ರಂದು ಏಕದಿನ ವಿಶ್ವಕಪ್​ನಲ್ಲಿ 10 ಪಂದ್ಯಗಳನ್ನು ಗೆದ್ದ ನಂತರ ನಾವು ಹೃದಯಗಳನ್ನು ಗೆದ್ದವು. ಆದರೆ ನಮಗೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿ, ಜೂನ್ 29 ರಂದು ನಾವು ಹೃದಯಗಳನ್ನು ಗೆಲ್ಲುವುದರ ಜೊತೆ ಕಪ್ ಅನ್ನು ಸಹ ಗೆದ್ದಿದ್ದೇವೆ. ಬಾರ್ಬಡೋಸ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುತ್ತೇವೆ ಎಂದು ನಾನು ರಾಜ್‌ಕೋಟ್‌ನಲ್ಲಿ ಹೇಳಿದ್ದೇನೆ. ಅದರಂತೆ ನಮ್ಮ ಕ್ಯಾಪ್ಟನ್ ಭಾರತದ ಧ್ವಜ ಹಾರಿಸಿದರು ಎಂದು ಜಯ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಜಯಭೇರಿ ಬಾರಿಸಲಿದೆ ಎಂದು ಜಯ್ ಶಾ ಹೇಳಿದ್ದಾರೆ.

    ಇದನ್ನೂ ಓದಿ : ಪ್ಯಾರಿಸ್‌ ಒಲಿಂಪಿಕ್ಸ್ 2024: ಒಲಿಂಪಿಕ್ಸ್‌ಗೆ ಆಗಮಿಸುವ ಆಟಗಾರರಿಗೆ ಏನೇನು ಸೌಲಭ್ಯ ಸಿಗಲಿದೆ ಗೊತ್ತಾ!?

    ಮುಂದಿನ ವರ್ಷ ಫೆಬ್ರವರಿ – ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಜೂನ್ 2025 ರಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಶಾ ಖಚಿತಪಡಿಸಿದ್ದಾರೆ.

     

    Continue Reading

    LATEST NEWS

    Trending