Tuesday, July 5, 2022

ಹಳೆಯಂಗಡಿ: ಟೆಂಪೋ ಡಿಕ್ಕಿ; ಗಾಯಾಳು ಮಹಿಳೆ ಸಾವು..!

ಹಳೆಯಂಗಡಿ: ಟೆಂಪೋ ಡಿಕ್ಕಿ; ಗಾಯಾಳು ಮಹಿಳೆ ಸಾವು.

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಇಂದು ಬೆಳಿಗ್ಗೆ ಟೆಂಪೋ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.ಹಳೆಯಂಗಡಿ ಬಸ್ ನಿಲ್ದಾಣ ಬಳಿಯ ನಿವಾಸಿಗಳಾದ ತಾಯಿ ಸುಖಲತಾ(44) ಅವರ ಮಗ ಚಿರಾಗ್(10) ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಹಳೆಯಂಗಡಿ ಸಮೀಪಿಸುತ್ತಿದಂತೆಯೇ ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದು ಬಳಿಕ ಟೆಂಪೋ ಡಿವೈಡರ್ ಮೇಲೇರಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ.

ಅಪಘಾತದಿಂದ ಚಾಲಕ ಪವಾಡಸದೃಶ ಪಾರಾಗಿದ್ದ. ಮೃತ ಸುಖಲತಾ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಹಳೆಯಂಗಡಿಯಲ್ಲಿ ನೆಲೆಸಿದ್ದರು.ಮಗ ಚಿರಾಗ್ ಮುಲ್ಕಿ ವ್ಯಾಸ ಮಹರ್ಷಿ ಶಾಲೆಯ ವಿದ್ಯಾರ್ಥಿ. ಮೃತ ಮಹಿಳೆಯ ಪತಿ ಕಾಪುವಿನಲ್ಲಿ ನೆಲೆಸಿದ್ದು, ಮನೆಯವರ ರೋದನ ಮುಗಿಲು ಮುಟ್ಟಿದೆ. ತಾಯಿಯ ಅನಾರೋಗ್ಯದ ನಿಮಿತ್ತ ಸುಖಲತಾ ಹಳೆಯಂಗಡಿಯಲ್ಲಿ ನೆಲೆಸಿದ್ದರು.

ಸುರತ್ಕಲ್ ಟ್ರಾಫಿಕ್ ಪೊಲೀಸರು ಟೆಂಪೋ ಚಾಲಕನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...