Connect with us

LATEST NEWS

ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ; ಕಾಂಗ್ರೆಸ್ ಸೇರ್ತಾರಾ?

Published

on

ಬೆಂಗಳೂರು : ಲೋಕಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್ ಆಗಿದೆ. ಯಾಕೆಂದರೆ, ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ ನೀಡಿದ್ದಾರೆ.

ಚುನಾವಣೆ ಹೊತ್ತಲ್ಲೇ ಪಕ್ಷಾಂತರಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ತೇಜಸ್ವಿನಿ ಸರದಿ. ಅವರು ಬುಧವಾರ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ತೇಜಸ್ವಿನಿ ಅವರ ಪರಿಷತ್ ಸದಸ್ಯ ಸ್ಥಾನದ ಅವಧಿ ಜೂನ್ 24ರ ವರೆಗೆ ಇತ್ತು. ಆದರೆ ಅವರು ಅವಧಿಗೂ ಮುನ್ನವೇ ತಾವು ಸ್ವ ಇಚ್ಚೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಪೀಕರ್ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ತೇಜಸ್ವಿನಿ ಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಹೊರಟ್ಟಿ, ಬಿಜೆಪಿಯ ತೇಜಸ್ವಿನಿ ರಮೇಶ್‌ಗೌಡ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳಿಂದ‌ ರಾಜೀನಾಮೆ ನೀಡುತ್ತಿದ್ದೇನೆ ಎಂದು‌ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್‌ ಒಡೆಯರ್‌ಗೆ ಟಿಕೆಟ್‌ ನೀಡಿದ್ದರಿಂದ ಅಸಮಾಧಾನಗೊಂಡ ತೇಜಸ್ವಿನಿ ಗೌಡ ಬಿಜೆಪಿಗೆ ಗುಡ್‌ ಬೈ ಹೇಳಿದ್ದಾರೆ ಎನ್ನಲಾಗುತ್ತಿದೆ. ಅವರು ಕಾಂಗ್ರೆಸ್ ಸೇರುತ್ತಾರಾ? ಎಂಬ ಮಾತು ಕೇಳಿ ಬರುತ್ತಿದೆ.

Click to comment

Leave a Reply

Your email address will not be published. Required fields are marked *

LATEST NEWS

8 ಜನರ ಆಹುತಿ ಪಡೆದ ಪಟಾಕಿ ಸ್ಪೋಟ…! 9 ಜನ ಗಂಭೀರ

Published

on

ಮಂಗಳೂರು (ಶಿವಕಾಶಿ) : ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಭೀಕರ ಸ್ಫೋಟದಿಂದ 8 ಜನರು ಇಹಲೋಕ ತ್ಯಜಿಸಿದ್ದು, 9 ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮೇ9 ರ ಮದ್ಯಾಹ್ನ ಊಟದ ವಿರಾಮದಲ್ಲಿ ಈ ಸ್ಫೋಟ ನಡೆದಿರುವ ಕಾರಣ ಹಲವು ಕಾರ್ಮಿಕರು ಬದುಕಿ ಉಳಿದಿದ್ದಾರೆ.

ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಈ ಭೀಕರ ಸ್ಪೋಟ ಸಂಭವಿಸಿದೆ. ಶ್ರೀ ಸುಧರ್ಶನ್ ಫೈರ್‌ ವರ್ಕ್ಸ್‌ ಅನ್ನೋ ಫ್ಯಾಕ್ಟರಿ ಇದಾಗಿದ್ದು, ಮದ್ಯಾಹ್ನ ಊಟದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಸುಮಾರು 50 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಹುತೇಕರು ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಈ ಸ್ಫೋಟ ನಡೆದಿದೆ. ವಿಪರೀತವಾಗಿ ಏರಿದ್ದ ತಾಪಮಾನದಿಂದ ಪಟಾಕಿ ಸ್ಫೋಟಗೊಂಡಿದೆ ಎನ್ನಲಾಗಿದೆ.

ವೃದುನಗರ ಜಿಲ್ಲೆಯಲ್ಲಿರುವ ಶಿವಕಾಶಿಯ ಸೆಂಗಮಲೆಪೆಟ್ಟಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಸುವ ಫ್ಯಾಕ್ಟರಿಯಾಗಿದೆ.  ಸ್ಫೋಟದ ತೀವ್ರತೆಗೆ 7 ಕೊಠಡಿಯ ಕಟ್ಟಡ ಸಂಪೂರ್ಣ ನೆಲಸಮವಾಗಿ ಹೋಗಿದೆ. ಇಲ್ಲಿ ಪೂರ್ಣವಾಗಿ ಸಿದ್ಧಗೊಂಡಿದ್ದ ಪಟಾಕಿಗಳನ್ನು ಶೇಖರಿಸಿ ಇಡಲಾಗಿತ್ತು ಮತ್ತು ಪಕ್ಕದಲ್ಲೇ ಅರ್ಧ ತಯಾರಿಸಿದ್ದ ಪಟಾಕಿಗಳೂ ಕೂಡಾ ಇಡಲಾಗಿತ್ತು. ಪಟಾಕಿ ತಯಾರಿಸಲು ಇಟ್ಟಿದ ಮದ್ದಿಗೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿದೆ.  8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂಭತ್ತು ಜನ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನರಲ್ಲಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಊಟಕ್ಕೆ ರೆಸ್ಟ್‌ ಇದ್ದ ಕಾರಣ ಇನ್ನಷ್ಟು ಜೀವ ಹಾನಿಯಾಗುವುದು ತಪ್ಪಿದ್ದು , ಘಟನೆ ನಡೆಯುವ ಸಮಯದಲ್ಲಿ ಕಟ್ಟಡದ ಸಮೀಪ ಕೇವಲ 17 ಜನ ಮಾತ್ರ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಪಟಾಕಿ ಸ್ಫೋಟವಾಗುತ್ತಿದ್ದಂತೆ ಸ್ಥಳದಿಂದ ಓಡಿ ರಕ್ಷಿಸಿಕೊಳ್ಳುವ ವೇಳೆ ಕಟ್ಟಡ ಉರುಳಿ ಅದರ ಅಡಿಗೆ ಬಿದ್ದು 8 ಜನ ಮೃತ ಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ಘಟನೆ ನಡೆಯುತ್ತಿದ್ದಂತೆ ರಕ್ಷಣೆಗೆ ಉಳಿದ ಕಾರ್ಮಿಕರು ಧಾವಿಸಿದ್ರೂ ಯಾರನ್ನೂ ರಕ್ಷಣೆ ಮಾಡುವ ಪರಿಸ್ಥಿತಿ ಅಲ್ಲಿ ಇರಲಿಲ್ಲ . ಹೀಗಾಗಿ ಸುಮಾರು 1 ಗಂಟೆಯ ಬಳಿಕ ಅಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಆ ವೇಳೆಗಾಗಲೇ 8 ಜನ ಮೃತ ಪಟ್ಟಿದ್ದಾರೆ.

Continue Reading

LATEST NEWS

ಎಸ್‌ಎಸ್‌ಎಲ್‌ಸಿ ಅಲ್ಲಿ ಫೇಲ್ ಎಂದು ತಿಳಿದು ಆತ್ಮಹತ್ಯೆ ಮಾಡಿದ ಯುವತಿ

Published

on

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ರಿಸಲ್ಟ್ ಇಂದು ಪ್ರಕಟಗೊಂಡಿದೆ. ಆದರೆ ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಪ್ಪಾಗಿ ತಿಳಿದು ನೇಣಿಗೆ ಶರಣಾಗಿದ್ದಾಳೆ.

ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟೆ ಎಂದು ತಪ್ಪಾಗಿ ತಿಳಿದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

Continue Reading

DAKSHINA KANNADA

ನಿವೃತ್ತ ಶಿಕ್ಷಕ ರಸ್ತೆ ದುರಂತದಲ್ಲಿ ಸಾ*ವು

Published

on

ಪುತ್ತೂರು : ನಿವೃತ್ತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80) ಅವರು ರಸ್ತೆ ಅಪಘಾತಕ್ಕೆ ಬ*ಲಿಯಾಗಿದ್ದಾರೆ. ಪುತ್ತೂರಿನ ಸಂಪ್ಯ ಎಂಬಲ್ಲಿ ಗುರುವಾರ ರಸ್ತೆ ದಾಟುತ್ತಿದ್ದ ವೇಳೆ ಸೂರ್ಯನಾರಾಯಣ ಕಾರಂತ ಅವರಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದಿತ್ತು.

ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಮತ್ತೊಂದು ರಿಕ್ಷಾದಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ. ಸೂರ್ಯನಾರಾಯಣ ಕಾರಂತ ಅವರು ಗಣಿತ ಶಿಕ್ಷಕರಾಗಿ ಪ್ರಸಿದ್ಧರಾಗಿದ್ದರು.

ಇದನ್ನೂ ಓದಿ : ಕಣಗಿಲೆ ಹೂ ತಿಂದು ಇಹಲೋಕ ತ್ಯಜಿಸಿದ ಯುವತಿ!

Continue Reading

LATEST NEWS

Trending