Connect with us

    DAKSHINA KANNADA

    ಉಳ್ಳಾಲದಲ್ಲಿ ಇಲಿ ಜ್ವರಕ್ಕೆ ತಹಶೀಲ್ದಾರ್ ವಾಹನ ಚಾಲಕ ಬಲಿ..!

    Published

    on

    ಉಳ್ಳಾಲ: ಉಳ್ಳಾಲ ತಾಲೂಕು ತಹಶೀಲ್ದಾರ್‌ ಚಾಲಕ, ಸಜೀಪ ದೇರಾಜೆ ನಿವಾಸಿ ಕಿಶೋರ್‌ ಪೂಜಾರಿ (42) ಅವರು ಶನಿವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಇಲಿ ಜ್ವರಕ್ಕೆ ಮೃತಪಟ್ಟಿದ್ದಾರೆ.

    ನ. 3ರ ವರೆಗೂ ಉಳ್ಳಾಲ ತಾಲೂಕು ತಹಶೀಲ್ದಾರ್‌ ಪುಟ್ಟರಾಜು ಅವರ ವಾಹನ ಚಲಾಯಿಸಿದ್ದ ಕಿಶೋರ್‌ ಅವರು ನ. 4ರಂದು ತೀವ್ರ ಜ್ವರ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು.

    ಅಲ್ಲಿ ವೈದ್ಯಕೀಯ ವರದಿಯಲ್ಲಿ ಶಂಕಿತ ಇಲಿ ಜ್ವರ ಕಾಣಿಸಿಕೊಂಡಿತ್ತು. ಅದರಂತೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾರೆ.

    ಕಿಶೋರ್‌ ಅವರು ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಕಂದಾಯ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿದ್ದು, ಅದನ್ನು ಕಳೆದುಕೊಂಡಿದ್ದರು.

    ಬಳಿಕ ಉಳ್ಳಾಲ ಶಾಸಕ ಯು.ಟಿ. ಖಾದರ್‌ ಅವರು ಮತ್ತೆ ಉಳ್ಳಾಲ ತಾಲೂಕು ತಹಶೀಲ್ದಾರ್‌ ಅವರಿಗೆ ಚಾಲಕನಾಗಿ ಹುದ್ದೆಯನ್ನು ದೊರಕಿಸಿ ಕೊಟ್ಟಿದ್ದರು. ಅವರ ನಿಧನಕ್ಕೆ ಶಾಸಕ ಯು.ಟಿ. ಖಾದರ್‌ ಸಂತಾಪ ಸೂಚಿಸಿದ್ದಾರೆ.

    DAKSHINA KANNADA

    ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

    Published

    on

    ಮಂಗಳೂರು: ಹೊಸ ಹೊಸ ಮೊಬೈಲ್ ಅಪ್ಲಿಕೇಶನ್ ಬಂದಂತೆ ನಾವು ಮೊಬೈಲ್ ಗೆ ಹೆಚ್ಚೆಚ್ಚು ಎಡಿಕ್ಟ್ ಆಗುತ್ತಿದ್ದೇವೆ. ಅದರ ಜೊತೆಗೆ ನೆಟ್ ಪ್ಯಾಕ್ ಕೂಡಾ ಇದೀಗ ದುಬಾರಿಯಾಗಿಬಿಟ್ಟಿದೆ. ಮೊಬೈಲ್​ನಲ್ಲಿ ಡೇಟಾ ಪ್ಯಾಕ್ ಹಾಕಿಸಿದ್ದರೂ, ಇಂಟರ್​ನೆಟ್ ಬೇಗ ಖಾಲಿ ಆಗ್ತಾ ಇದ್ಯಾ? ಅದಕ್ಕೆ ಕಾರಣವೇನು? ದಿನಕ್ಕೆ 2 ಜಿಬಿ ಡೇಟಾ ಇದ್ದರೂ ಸಾಕಾಗುತ್ತಿಲ್ಲವೇ? ರೀಲ್ಸ್ ನೋಡುತ್ತಲೇ ಡೇಟಾ ಖಾಲಿ ಆಗುತ್ತಿರುವ ಬಗ್ಗೆ ಮೆಸೇಜ್ ಬರುತ್ತಿದೆಯಾ? ಹಾಗಾದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೆಟ್​ ಬೇಗ ಖಾಲಿ ಆಗದಿರಲು ಏನು ಮಾಡಬೇಕು? ಡೇಟಾ ಪ್ಯಾಕ್ ಹೆಚ್ಚು ಇರುವಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.

    • ಸ್ಮಾರ್ಟ್ಫೋನ್ ಗಳಲ್ಲಿ ಕೆಲವು ಆ್ಯಪ್ ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ. ಆಗ ನೆಟ್ ಬೇಗ ಖಾಲಿಯಾಗುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ ಗೆ ಹೋಗಿ ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಮಾತ್ರ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡೋದು ಒಳಿತು.
    • ಆಂಡ್ರಾಯ್ಡ್ ಫೋನ್ ಗಳು ಡೇಟಾ ಉಳಿತಾಯ ಮೋಡ್ ಎಂಬ ಆಯ್ಕೆಯನ್ನು ಹೊಂದಿದೆ. ಈ ಆಯ್ಕೆ ನಿಮ್ಮ ಮೊಬೈಲ್ ನಲ್ಲಿದ್ದು ಅದನ್ನು ಸಕ್ರಿಯಗೊಳಿಸಿದ್ರೆ ಡೇಟಾ ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ನಿಮ್ಮ ಫೋನ್ ನಲ್ಲಿ ಅನಗತ್ಯ ಡೇಟಾ ಪೋಲು ಆಗುವುದನ್ನು ತಡೆಯುತ್ತದೆ. ಇದರಿಂದ ನಿಮಗೆ ಬಳಕೆಗೆ ಡೇಟಾ ಹೆಚ್ಚು ಲಭ್ಯ ಆಗುತ್ತದೆ.
    • ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಆ್ಯಪ್ ಬಳಸೋದು ಹೆಚ್ಚಾಗಿದೆ. ಇದು ಅತ್ಯಂತ ಹೆಚ್ಚು ಡೇಟಾವನ್ನು ಬಳಸಿಕೊಳ್ಳುತ್ತೆ‌. ಹಾಗಿರುವಾಗ ಇಂತಹ ಆ್ಯಪ್ ಗಳನ್ನು ಆಫ್ ಲೈನ್ ನಲ್ಲಿ ಉಪಯೋಗಿಸಬೇಕೇ ಹೊರತು ಆನ್ಲೈನ್ ನಲ್ಲಲ್ಲ. ಈ ಆ್ಯಪ್ ನ ಅಪ್ಡೇಟ್ ನ್ನು ಕೂಡಾ ವೈಫೈನಲ್ಲೇ ಮಾಡೋದು ಉತ್ತಮ.‌
    • ನಾವು ಎಲ್ಲಿಯಾದರೂ ಸಂಚರಿಸುತ್ತಿದ್ದರೆ ಯೂಟ್ಯೂಬ್ ವೀಡಿಯೋಗಳನ್ನು ಅಥವಾ ಇನ್ನಾವುದೋ ಆ್ಯಪ್ ಬಳಸೋದು ಹೆಚ್ಚು. ಸಂಚಾರದ ಸಂದರ್ಭದಲ್ಲಿ ವೈಫೈ ಅನುಕೂಲತೆ ಇದ್ದರೆ ವೀಡಿಯೋ ಆಗಲೇ ಡೌನ್ಲೋಡ್ ಮಾಡಿಡುವುದು ಉತ್ತಮ. ನಂತರ ಆಫ್ಲೈನಲ್ಲೇ ಅದನ್ನು ವೀಕ್ಷಿಸಬಹುದು.
    • ವೀಡಿಯೋ ಮತ್ತು ಫೋಟೋಗಳನ್ನು ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನಿಂದ ತೆಗೆಯಿರಿ. ಆಗ ಡೇಟಾ ಉಳಿತಾಯವಾಗುತ್ತದೆ.
    Continue Reading

    BELTHANGADY

    ಬಸ್ ನಿಲ್ದಾಣಕ್ಕೆ ಬಂಗೇರ ಹೆಸರು ; ನುಡಿನಮನದಲ್ಲಿ ಸಿಎಂ ಘೋಷಣೆ..!

    Published

    on

    ಬೆಳ್ತಂಗಡಿ: ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಮಾಜಿ ಸಚಿವ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಮತ್ತು ವಸಂತ ಬಂಗೇರ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಅವತ್ತಿನಿಂದ ಅವರ ಉಸಿರಿನ ಕೊನೆ ಗಳಿಗೆಯವರೆಗೂ ನನ್ನ ಸ್ನೇಹಿತರಾಗಿದ್ದರು. ಇವರ ಅಗಲಿಕೆ ನನಗೆ ಅಪಾರ ದುಃಖ ತಂದಿದೆ ಎಂದರು.

    ಸತ್ಯ, ಬಡವರ ಪರ ಕಾಳಜಿ, ರಾಜಿ ರಹಿತ ಜನಪರ ಕೆಲಸಗಳ ಮೂಲಕ ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿಕೊಂಡವರು ಬಂಗೇರ ಅವರು ನನ್ನ ಬಳಿಗೆ ಯಾವತ್ತೂ ವೈಯುಕ್ತಿಕ ಕೆಲಸಗಳಿಗಾಗಿ ಬಂದಿಲ್ಲ. ಬಂದಾಗಲೆಲ್ಲಾ ಜನರ ಕೆಲಸಗಳಿಗಾಗಿ ಬೇಡಿಕೆ ಇಟ್ಟಿದ್ದರು. 2023 ರಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಈ ಬಾರಿ ಸ್ಪರ್ಧಿಸಿದ್ದರೆ ಖಂಡಿತಾ ಗೆದ್ದು ಮಂತ್ರಿಯಾಗುತ್ತಿದ್ದರು ಎಂದರು.

    ವಸಂತ ಬಂಗೇರ ಅವರ ಸಾವಿನಿಂದ ರಾಜ್ಯ, ರಾಜಕಾರಣ ಅತ್ಯಂತ ಬಡವಾಗಿದೆ. ಬಂಗೇರ ಅವರ ಆರೋಗ್ಯ ಚೇತರಿಸಿಕೊಳ್ಳುತ್ತದೆ, ಮತ್ತಷ್ಟು ಕಾಲ ನಮ್ಮ ಜೊತೆಗೆ ಇರುತ್ತಾರೆ ಎನ್ನುವ ಆಸೆ ಇತ್ತು. ಆದರೆ ನಮ್ಮನ್ನು ಅಗಲಿಬಿಟ್ಟಿರುವುದು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಮಾಜಿ ಸಚಿವ ಜನಾರ್ಧನ ಪೂಜಾರಿ, ಸ್ಪೀಕರ್ ಯು.ಟಿ.ಖಾದರ್ ಮತ್ತು ವಸಂತ ಬಂಗೇರ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

    ಬೆಳ್ತಂಗಡಿ  ಬಸ್‌ ನಿಲ್ದಾಣಕ್ಕೆ ಬಂಗೇರ ಹೆಸರಿಡಲು ಸರ್ಕಾರ ಸಿದ್ದ

    ಬೆಳ್ತಂಗಡಿ ಬಸ್‌ ನಿಲ್ದಾಣಕ್ಕೆ ವಸಂತ ಬಂಗೇರ ಅವರ ಹೆಸರಿಡಲು ಸರ್ಕಾರ ಸಿದ್ದವಿದೆ. ಜೊತೆಗೆ ಅವರ ಪ್ರತಿಮೆ ನಿರ್ಮಿಸಿ ವೃತ್ತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದು ಸಿಎಂ ಭರವಸೆ ನೀಡಿದರು.

    Continue Reading

    DAKSHINA KANNADA

    ಮೇ 31ರಂದು ಮಸ್ಕತ್ ನಲ್ಲಿ “ಶ್ರೀ ದೇವೀ ಮಹಾತ್ಮೆ” ಚಾರಿತ್ರಿಕ ಯಕ್ಷಗಾನ

    Published

    on

    ಮಂಗಳೂರು: ಬಿರುವ ಜವನೆರ್ ಮಸ್ಕತ್ ಮತ್ತು ಇನ್ಸ್ಟಿರೇಷನ್ ಡಿಪೈನ್ ಇವರ ಸಹ ಪ್ರಯೋಜಕತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಕಲಾ ಮಂಡಳಿಯ ಆರು ಮೇಳಗಳ ಆಯ್ದ 33 ಕಲಾವಿದರು ಮೇ 31 ರಂದು ಮಸ್ಕತ್ ನಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಬಿರುವ ಜವನೆರ್ ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ತಿಳಿಸಿದರು.

     

    ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಒಮಾನ್ ದೇಶದ ಮನ್ಮತ್ ನ ರುವಿ ಯಲ್ಲಿರುವ ಅಫಾಲಾಜ್ ಹೋಟೆಲ್ ನಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 9ರ ತನಕ ಪುಷ್ಪಾಲಂಕಾರದಿಂದ ಶೋಭಿಸುವ ಸಂಪ್ರದಾಯಕ ರಂಗಸ್ಥಳದಲ್ಲಿ ವಿಜೃಂಭಣೆಯ ಬಯಲಾಟ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

     

    ಭಾಗವಹಿಸುವ ಕಲಾವಿದರು:

    ಬಲಿಪ ಶಿವಶಂಕರ್ ಭಟ್, ದೇವಿಪ್ರಸಾದ್ ಆಳ್ವ ಅವರು ಭಾಗವತರಾಗಿ, ದಯಾನಂದ ಶೆಟ್ಟಿಗಾರ, ಭಾಸ್ಕರ್ ಭಟ್ ಕಟೀಲು, ರಾಮಪ್ರಕಾಶ ಕಲ್ಲೂರಾಯ ಚೆಂಡೆ ಮದ್ದಳೆ ವಾದಕರಾಗಿ ಮತ್ತು ಮುಮ್ಮೇಳದಲ್ಲಿ ವೇಷಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಶರ್ಮ ವಾಟೆ ಪಡ್ಪು, ಡಾ। ವಾದಿರಾಜ್ ಕಲ್ಲೂರಾಯ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಡಾ। ಮಹೇಶ್ ಕುಮಾರ್, ಬಾಲಕೃಷ್ಣ ಗೌಡ ಮಿಜಾರು, ಮೋಹನ್ ಕುಮಾರ್ ಅಮ್ಮುಂಜೆ, ಅರುಣ್ ಕೋಟ್ಯಾನ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಗಣೇಶ್ ಚಂದ್ರಮಂಡಲ, ರವಿರಾಜ ಪೆಣೆಯಾಲೆ, ಹರಿನಾರಾಯಣ ಭಟ್, ಕೃಷ್ಣ ಪ್ರಸಾದ್, ಅರಳ ಗಣೇಶ, ಡಾ। ಶ್ರುತಕೀರ್ತಿರಾಜ, ಸಂಜೀವ ಶೇರಂಕಲ್ಲು, ಮೋನಪ್ಪ ದೇವಾಡಿಗ, ಉಮೇಶ ಕುಪ್ಪೆಪದವು, ರವಿ ಪೂಜಾರಿ, ಪ್ರೇಮರಾಜ್ ಕೊಯಿಲ, ರಾಜೇಶ್ ಆಚಾರ್ಯ, ಅಕ್ಷಯ್ ಭಟ್, ರಕ್ಷಿತ್ ಪೂಜಾರಿ, ನಿಖಿಲ್ ಶೆಟ್ಟಿ ಹಾಗೂ ಮಸ್ಕತ್ ನಲ್ಲಿರುವ ಹವ್ಯಾಸಿ ಕಲಾವಿದೆ ವಿದೂಷಿ ಶ್ರೀಮತಿ ತೀರ್ಥ ಕಟೀಲ್ ಭಾಗವಹಿಸಲಿದ್ದಾರೆ. ರಮೇಶ್ ಕುಲಶೇಖರ ವೇಷ ಭೂಷಣದ ವ್ಯವಸ್ಥೆ ಮಾಡಲಿದ್ದಾರೆ.

    ಬಿರುದು ಗೌರವ:

    ಹಿರಿಯ ಅರ್ಥಧಾರಿ, ವೇಷ ಧಾರಿ, ಪ್ರಭಂದಕ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ “ಯಕ್ಷ ಸಿರಿ” ಹಾಗೂ ವೇಷಧಾರಿ, ಅರ್ಥಧಾರಿ, ಉಪನ್ಯಾಸಕ, ನಿರೂಪಕ ಡಾ. ವಾದಿರಾಜ ಕಲ್ಲೂರಾಯರಿಗೆ “ಯುವ ಸಿರಿ” ಬಿರುದು ನೀಡಿ ಗೌರವಿಸಲಾಗುವುದು.

    ವಿಶೇಷ ಅತಿಥಿಗಳು:

    ಈ ಕಾರ್ಯಕ್ರಮದಲ್ಲಿ ಕರಾವಳಿಯ ಶಾಂತಾ ರಾಮ ಅಮೀನ್ ನಾನಿಲ್ ಹಳೆಯಂಗಡಿ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ, ಸುಚೇತನಾ ಕೆ ಅಂಚನ್, ಸೂರ್ಯ ಕಾಂತ್ ಜಯ ಸುವರ್ಣ, ಮಿತ್ರ ಹೆರಾಜೆ, ಮೋಹನ್ ದಾಸ್ ಸಾಲಿಯಾನ್ ಪಚ್ಚನಾಡಿ, ಆನಂದ ಸನಿಲ್, ಗಂಗಾಧರ್ ಪೂಜಾರಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

    ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಬಿರುವ ಜವನೆರ್ ಸಂಘಟನೆ ಈ ಪೂರ್ವದಲ್ಲಿ ಎರಡು ಬಾರಿ ಶ್ರೀ ಶನೀಶ್ವರ ಮಹಾತ್ಮೆ ಹಾಗೂ ಒಂದು ಬಾರಿ ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯನ್ನು ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ, ಮಂಗಳೂರು ತಂಡದ ಮೂಲಕ ನಡೆಸಿದೆ. ಕಳೆದ ವರ್ಷ ನಡೆದ ಸ್ವಾಮಿ ಕೊರಗಜ್ಜ ತಾಳಮದ್ದಳೆಯೂ ಜನ ಮೆಚ್ಚುಗೆ ಪಡೆದಿತ್ತು. ಕಲ್ಲಡ್ಕ ವಿಠಲ್ ನಾಯ್ಕ ಅವರ ಗೀತಾ ಸಾಹಿತ್ಯ ಸಂಭ್ರಮವನ್ನೂ ಮಸ್ಕತ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿ ಕರಾವಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿದೆ.

    ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನಕ್ಕೆ ಉಚಿತ ಪ್ರವೇಶ ಇದ್ದು ಬೆಳಿಗ್ಗೆ 11 ರಿಂದ ಪ್ರಸಾದ ಭೋಜನ ಇದೆ ಸಂಜೆ ಉಪಹಾರ ಹಾಗೂ ರಾತ್ರಿ ಭೋಜನ ಪೊಟ್ಟಣ ವ್ಯವಸ್ಥೆಯನ್ನೂ ಮಾಡಲಾಗಿದೆ.

    ಪತ್ರಿಕಾಗೋಷ್ಠಿಯಲ್ಲಿ , ಡಾ. ವಾದಿರಾಜ ಕಲ್ಲೂರಾಯ, ಸುಹಾನ್ ಹೇಮಚಂದ್ರ, ಗಂಗಾಧರ್ ಪೂಜಾರಿ, ಕದ್ರಿ ನವನೀತ ಶೆಟ್ಟಿ, ಮೋಹನ್ ದಾಸ್ ಉಪಸ್ಥಿತರಿದ್ದರು.

    Continue Reading

    LATEST NEWS

    Trending