Connect with us

    LATEST NEWS

    ನಿಮ್ಮ ಬಳಿ ಹೊಸದಾದ ಹಳೆಯ ಬಟ್ಟೆ ಇದೆಯೇ?: ಹಾಗಾದರೆ ಇಲ್ಲಿ ಸೇಲ್ ಮಾಡಿ, ಹಣ ಗಳಿಸಿ

    Published

    on

    ಮದುವೆ ಸಮಾರಂಭಕ್ಕೆ ಅನೇಕ ಬಾರಿ ನಾವು ದುಬಾರಿ ಬಟ್ಟೆಗಳನ್ನು ಖರೀದಿಸುತ್ತೇವೆ. ಆದರೆ, ಅದನ್ನು ಒಂದೋ ಎರಡೋ ಬಾರಿ ಮಾತ್ರ ಧರಿಸಿ ನಂತರ ಮೂಲೆಗೆ ಹಾಕುತ್ತೇವೆ. ಹೆಣ್ಣುಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ-ವೀಡಿಯೊ ಹಾಕಿದ ನಂತರ ಮತ್ತೆ ಆ ಬಟ್ಟೆಗಳನ್ನು ಧರಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಹಳೆಯ ಬಟ್ಟೆಗಳನ್ನು ಮಾರಾಟ ಮಾಡಬಹುದೇ?. ನಿಮ್ಮ ಹಳೆಯ ಬಟ್ಟೆಗಳನ್ನು ಮಾರಾಟ ಮಾಡಿ ಉತ್ತಮ ಹಣವನ್ನು ಗಳಿಸುವ ಅಂತಹ 4 ವೆಬ್‌ಸೈಟ್‌ಗಳ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ಈ ಕೆಲವು ಅಪ್ಲಿಕೇಶನ್‌ಗಳು ನಿಮಗೆ ಡೋರ್ ಸರ್ವಿಸ್ ಸಹ ಒದಗಿಸುತ್ತವೆ. ಈ ಮೂಲಕ ಅವರೇ ನಿಮ್ಮ ಮನೆಯಿಂದ ಬಟ್ಟೆ ತೆಗೆದುಕೊಂಡು ಹೋಗುತ್ತಾರೆ.

    ಹಳೆಯ ಬಟ್ಟೆಗಳನ್ನು ಮಾರಾಟ ಮಾಡಲು ಈ ನಾಲ್ಕು ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ:

    ನಿಮ್ಮ ಹಳೆಯ ಬಟ್ಟೆಗಳನ್ನು ಮಾರಿ ಅದರಿಂದ ಹಣ ಸಂಪಾದಿಸಬಹುದು. ಈಗಾಗಲೇ ಈ ರೀತಿಯ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಭಾರತದಲ್ಲಿ ನಿಮ್ಮ ಹಳೆಯ ಬಟ್ಟೆಗಳನ್ನು ಮಾರಾಟ ಮಾಡುವ ಹಲವಾರು ವೆಬ್‌ಸೈಟ್‌ಗಳಿವೆ. ಅದಕ್ಕಾಗಿ ನಿಮಗೆ ಹಣವನ್ನು ಸಹ ನೀಡಲಾಗುತ್ತದೆ. ಇದಕ್ಕಾಗಿ, ಮೀಶೋ, ಫ್ರೀ ಅಪ್, ರಿಲವ್ ಮತ್ತು ಗ್ಲೆಟಾಟ್ ಎಂಬ ಈ ನಾಲ್ಕು ಅಪ್ಲಿಕೇಶನ್‌ಗಳನ್ನು ಉಪಯೋಗಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಯಾವುದೇ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡುವ ಮೂಲಕ ಮಾರಾಟ ಮಾಡಬಹುದು. ಇನ್ಸ್ಟಾಲ್ ಆದ ಬಳಿಕ ನಿಮ್ಮ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ, ಸರಿಯಾದ ವಿಳಾಸವನ್ನು ಭರ್ತಿ ಮಾಡಿದ ನಂತರ ನಿಮ್ಮ ಬಟ್ಟೆಗಳನ್ನು ಮಾರಾಟ ಮಾಡಬಹುದು. GLETOT ನಂತಹ ಅಪ್ಲಿಕೇಶನ್‌ಗಳು ನಿಮಗೆ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸುತ್ತವೆ.

    ಇದರ ಹೊರತಾಗಿ, ನೀವು H&M ನಂತಹ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಅವರ ವೆಬ್‌ಸೈಟ್ ಅಥವಾ ಆಫ್‌ಲೈನ್ ಸ್ಟೋರ್‌ನಲ್ಲಿ ಹಿಂತಿರುಗಿಸಿದರೆ, ನೀವು ಶೇಕಡಾ 15 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ.

    ಇದೆಲ್ಲವನ್ನೂ ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ NGO NEAR ME ಎಂದು ಬರೆಯುವ ಮೂಲಕ ಗೂಗಲ್ನಲ್ಲಿ ಹುಡುಕಿ. ನಿಮ್ಮ ಹತ್ತಿರ ಯಾವ NGO ಇದೆಯೊ ಅಲ್ಲಿಗೆ ಹೋಗಿ ನಿಮ್ಮ ಬಟ್ಟೆಗಳನ್ನು ಕೊಡಬಹುದು. ಇದು ನಿಮಗೆ ಹಣವನ್ನು ನೀಡದಿರಬಹುದು ಆದರೆ ಖಂಡಿತವಾಗಿಯೂ ನಿಮಗೆ ಸಂತೋಷವನ್ನು ನೀಡುತ್ತದೆ.

    ಬಟ್ಟೆಗಳ ಮರುಮಾರಾಟದ ಮೌಲ್ಯವನ್ನು ಪ್ಲಾಟ್‌ಫಾರ್ಮ್‌ಗಳು ನಿರ್ಧರಿಸುತ್ತವೆ ಎಂಬುದನ್ನು ಗಮನಿಸಿ, ನಿಮ್ಮ ಬಟ್ಟೆಗಳು ಅವರ ನಿಯಮ ಮತ್ತು ಷರತ್ತಿನ ಪ್ರಕಾರ ಸೂಕ್ತವಾಗಿದ್ದರೆ, ಅದಕ್ಕಾಗಿ ಅವರು ನಿಮಗೆ ಉತ್ತಮ ಮೊತ್ತವನ್ನು ನೀಡುತ್ತಾರೆ.

    LATEST NEWS

    ಪರಿಷತ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಆಯ್ಕೆ

    Published

    on

    ಮಂಗಳೂರು: ಅಕ್ಟೋಬರ್ 24 ರಂದು ನಡೆಯಲಿರುವ ಪರಿಷತ್ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ ಗೊಳಿಸಿದೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

    ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು. ಬಳಿಕ ಪಕ್ಷದಲ್ಲಿ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದ ಕಿಶೋರ್ ಕುಮಾರ್ ಪಕ್ಷ ಕಟ್ಟುವಲ್ಲಿ ಶ್ರಮ ವಹಿಸಿದ್ದರು.

    ಇತ್ತೀಚೆಗೆ ವಿಧಾನಸಭಾ ಚುನಾವಣಾ ಸಮಯದಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿಶೋರ್ ಕುಮಾರ್‌ಗೆ ಸಿಗಲಿದೆ ಎಂಬ ಸುದ್ದಿ ಹರಡಿತ್ತು. ಆದ್ರೆ ಇದೀಗ ಇವರ ಪರಿಶ್ರಮವನ್ನು ಗುರುತಿಸಿದ ಪಕ್ಷ ವಿಧಾನ ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಹೆಸರು ಘೋಷಣೆ ಮಾಡಿದೆ.

    Continue Reading

    LATEST NEWS

    ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಕೊಂ*ದ ವ್ಯಕ್ತಿ

    Published

    on

    ಉತ್ತರ ಪ್ರದೇಶ: ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಹ*ತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


    ವ್ಯಕ್ತಿ ಫ್ಲಿಪ್​ಕಾರ್ಟ್​ ಮೂಲಕ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಐಫೋನ್​ನ್ನು ಕ್ಯಾಶ್​ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ, ಡೆಲಿವರಿ ಏಜೆಂಟ್​ ಅವರ ಮನೆಗೆ ಬಂದು ಐಫೋನ್ ಕೊಟ್ಟಿದ್ದಾರೆ ಆದರೆ ಆತನಿಗೆ ಹಣಕೊಡಬೇಕಲ್ಲಾ ಎಂದು ಚಿಂತಿಸಿ ಡೆಲಿವರಿ ಏಜೆಂಟ್​ನನ್ನೇ ಹ*ತ್ಯೆ ಮಾಡಿ ಕಾಲುವೆಗೆ ಎಸೆದಿದ್ದಾನೆ.

    ನಿಶಾತ್‌ಗಂಜ್ ನಿವಾಸಿಯಾದ ಡೆಲಿವರಿ ಬಾಯ್ ಭರತ್ ಸಾಹು ಫೋನ್ ಡೆಲಿವರಿ ಮಾಡಲು ಅವರ ಮನೆಗೆ ಹೋಗಿದ್ದರು. ಅಲ್ಲಿ ಗಜಾನನ ಮತ್ತು ಅವನ ಸಹಚರರು ಅವರನ್ನು ಕೊ*ಲೆ ಮಾಡಿದ್ದಾರೆ. ಸಾಹುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಮೃ*ತದೇಹವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಗೆ ಎಸೆದಿದ್ದಾರೆ.

    ಎರಡು ದಿನಗಳ ಕಾಲ ಸಾಹು ಮನೆಗೆ ಬಾರದಿದ್ದಾಗ, ಆತನ ಕುಟುಂಬದವರು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಸಾಹುವಿನ ಕಾಲ್ ಡಿಟೇಲ್ಸ್ ಸ್ಕ್ಯಾನ್ ಮಾಡಿ ಆತನ ಲೊಕೇಶನ್ ಹುಡುಕಿ ಪೊಲೀಸರು ಗಜಾನನ ನಂಬರ್ ಪತ್ತೆ ಮಾಡಿ ಆತನ ಸ್ನೇಹಿತ ಆಕಾಶ್​ನನ್ನು ತಲುಪಿದ್ದಾರೆ.

    ವಿಚಾರಣೆ ವೇಳೆ ಆಕಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅಧಿಕಾರಿ ತಿಳಿಸಿದ್ದಾರೆ. ಹತ್ಯೆಯ ನಂತರ ಆಕಾಶ್ ಕೂಡ ಮುಂಬೈಗೆ ಪರಾರಿಯಾಗಿದ್ದ. ಆದರೆ, ಪೊಲೀಸರಿಗೆ ಇನ್ನೂ ಶ*ವ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಕಾಲುವೆಯಲ್ಲಿ ದೇಹವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

    Continue Reading

    LATEST NEWS

    ರಾಯರ ದರ್ಶನಕ್ಕೆ ಹೋದವರ ಮನೆಗೆ ಕನ್ನ; ಮಂಜುನಾಥನ ಸನ್ನಿಧಿಯಲ್ಲಿ ಅರೆಸ್ಟ್​

    Published

    on

    ಮಂಗಳೂರು/ಬೆಂಗಳೂರು : ಆ ಐನಾತಿ ಕಳ್ಳರು ಪ್ರವಾಸಕ್ಕೆ ತೆರಳುವ ಮಂದಿಯ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.  ಆದರೆ, ಈ ಬಾರಿ ಕೆಲಸ ಕೈ ಕೊಟ್ಟಿದೆ. ರಾಯರ ದರ್ಶನಕ್ಕೆ ಹೋದವರ ಮನೆಯಲ್ಲಿ ಕದ್ದು ಮಂಜುನಾಥನ ದರ್ಶನಕ್ಕೆ ಹೋದವರು ತಗಲಾಕ್ಕೊಂಡಿದ್ದಾರೆ.

    ಆರೋಪಿ ಸನ್ಯಾಸಿಮಠ ನಂದೀಶ್ ಮತ್ತು ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳು. ಹನುಮೇಗೌಡ ಎಂಬಾತ  ಪರಾರಿಯಾಗಿದ್ದಾನೆ. ಕಳ್ಳತನ ಮಾಡಿದ 12 ಗಂಟೆಯಲ್ಲೇ ಸುಬ್ರಮಣ್ಯ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸುಬ್ರಮಣ್ಯ ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರಿಗೆ ಆರೋಪಿ ಸನ್ಯಾಸಿಮಠ ನಂದೀಶ್​​ ಸಂಬಂಧಿಕನಾಗಿದ್ದ. “ತಮ್ಮ ಮನೆಯ ಮಾಲೀಕರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ” ಎಂದು ಮನೆ ಕೆಲಸದವರು ಮಾತನಾಡಿಕೊಳ್ಳುತ್ತಿದ್ದರು. ಇವರ ಮಾತನ್ನು ಪಕ್ಕದಲ್ಲೇ ನಿಂತು ಸನ್ಯಾಸಿಮಠ ನಂದೀಶ್​ ಕದ್ದು ಕೇಳಿಸಿಕೊಂಡಿದ್ದ. ಈ ವಿಚಾರವನ್ನ ಸನ್ಯಾಸಿಮಠ ನಂದೀಶ್​ ತನ್ನ ಸ್ನೇಹಿತರಿಗೆ ಹೇಳಿ, ಕನ್ನ ಹಾಕಲು ಯೋಜನೆ ರೂಪಿಸಿದ್ದರು.

    ಚಿನ್ನ ಎಗರಿಸಿ ಪರಾರಿ :

    ಮನೆಯವರು ಮಂತ್ರಾಲಯಕ್ಕೆ ಯಾವಾಗ ಹೋಗುತ್ತಾರೆ ಅಂತ ಮನೆ ಬಳಿ ನಿತ್ಯ ಪರೇಡ್​ ಮಾಡಿದ್ದಾನೆ. ಒಂದು ದಿನ ಮನೆಯವರು ಮಂತ್ರಾಲಯಕ್ಕೆ ಹೋಗಿದ್ದಾರೆ.  ಇತ್ತ ಖದೀಮರು ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್​ನಿಂದ ಕಟ್ ಮಾಡಿ ಮನೆಯೊಳಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ 1 ಕೆಜಿ 800 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಕದ್ದ ಎಲ್ಲ ಚಿನ್ನವನ್ನು ಸನ್ಯಾಸಿಮಠ ನಂದೀಶ್​ ತನ್ನ ರೂಂನಲ್ಲಿ ಇಟ್ಟಿದ್ದ. ಬಳಿಕ, ಚಿನ್ನ ಕದ್ದ ಖುಷಿಯಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದಾನೆ.

    ಇದನ್ನೂ ಓದಿ : ದೇಗುಲ ಆಗಿರಲಿ, ದರ್ಗಾ ಆಗಿರಲಿ ಅಕ್ರಮವಾಗಿ ಕಟ್ಟಿದ್ದರೆ ತೆರವು : ಸುಪ್ರೀಂ ಕೋರ್ಟ್

    ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದು ನೋಡಿದಾಗ, ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಾಲೀಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಪೊಲೀಸರು ಆರೋಪಿಗಳ ಬೆನ್ನು ಹತ್ತಿದ್ದಾರೆ. ಸನ್ಯಾಸಿಮಠ ನಂದೀಶ್​ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬಳಿಕ, ಇನ್ನೋರ್ವ ಆರೋಪಿ ನಂದೀಶ್​ ಪ್ರತಾಪ್​ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 1ಕೆಜಿ 800 ಗ್ರಾಂ ಚಿನ್ನ ಸೇರಿದಂತೆ 18 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ.

    Continue Reading

    LATEST NEWS

    Trending