Sunday, June 4, 2023

ಉಡುಪಿ: ಟ್ಯಾಂಕರ್ ಪಲ್ಟಿ- ಭಾರೀ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಹೈಡ್ರೋ ಕ್ಲೋರಿಕ್ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.


ಕಾರವಾರದಿಂದ ಮಂಗಳೂರು ಗೆ ಹೊರಟಿದ್ದ ಟ್ಯಾಂಕರ್‌ ಮಾರ್ಗ ಮಧ್ಯೆ ಪಲ್ಟಿ ಹೊಡೆದಿದ್ದು, ಪಲ್ಟಿ ಹೊಡೆದ ರಭಸಕ್ಕೆ ಟ್ಯಾಂಕರ್‌ನಲ್ಲಿದ್ದ ಹೈಡ್ರೋ ಕ್ಲೋರಿಕ್ ಆಸಿಡ್ ಗ್ಯಾಸ್ ರೂಪದಲ್ಲಿ ಲಿಕೇಜ್ ಆಗಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು,

ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಆಗ್ನಿಶಾಮಕ ದಳದ ಸಿಬ್ಬಂದಿ ಲಿಕೇಜ್‌ ತಡೆಗಟ್ಟಿ ಅನಾಹುತ ತಪ್ಪಿಸಿದ್ದಾರೆ.

ಅಪಘಾತದ ವೇಳೆ ಟ್ಯಾಂಕರ್‌ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ‌ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here

Hot Topics