ಮಂಗಳೂರು: ಉಳ್ಳಾಲದ ಐತಿಹಾಸಿಕ ಸ್ಯೆಯ್ಯದ್ ಮದನಿ ದರ್ಗಾ ಉರುಸ್ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಭೇಟಿ ನೀಡಿದರು. ಇದಕ್ಕೂ ಮೊದಲು ತೊಕ್ಕಟ್ಟುವಿನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು....
ಮಂಗಳೂರು: ಉಳ್ಳಾಲದಲ್ಲಿ ನಡೆಯುತ್ತಿರುವ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಜಾಯಿಂಟ್ ವ್ಹೀಲ್ ತುಂಡಾಗಿ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಇಂದು ರಾತ್ರಿ ವೇಳೆ ನಡೆದಿದೆ. ಉರೂಸ್ ಪ್ರಯುಕ್ತ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬದ ನಾಲ್ವರು...
ತಲಪಾಡಿ: ರಸ್ತೆಯಲ್ಲಿ ಬಿದ್ದಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಅನ್ನು ವಾರಿಸುದಾರರಿಗೆ ತಲುಪಿಸಿದ ಘಟನೆ ತಲಪಾಡಿಯಲ್ಲಿ ನಡೆದಿದೆ. ತಲಪಾಡಿ ಗ್ರಾಮದ ತಚ್ಚಾನಿ ರಸ್ತೆಯಲ್ಲಿ ಬಶೀರ್ ಅಹ್ಮದ್ ಉದ್ಯಾವರ ಎಂಬುವವರಿಗೆ ಸುಮಾರು ಒಂದು...
ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ತಂಡದ ನಡುವೆ ಹೊಡೆದಾಟ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಅಮೈ ನಿವಾಸಿಗಳಾದ ಶರಣ್(24), ಪ್ರಮೋದ್(24) ಮತ್ತು...
ಉಳ್ಳಾಲ: ಇಲ್ಲಿನ ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ನಿನ್ನೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಕೇರಳದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಅದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ...
ಉಳ್ಳಾಲ: ನಾಪತ್ತೆಯಾದ ವ್ಯಕ್ತಿಯ ಮೃತದೇಹ ಉಳ್ಳಾಲ ಸೋಮೇಶ್ವರದ ಬೀಚ್ನಲ್ಲಿ ಇಂದು ಸಂಜೆ ವೇಳೆ ಪತ್ತೆಯಾಗಿದೆ. ಸಂಕೊಳಿಗೆ ನಿವಾಸಿ ಭಾಸ್ಕರ್ ನಾಯಕ್ (32) ಮೃತ ವ್ಯಕ್ತಿ. ಇವರು ನಿನ್ನೆ ರಾತ್ರಿಯಿಂದ ಮನೆಯಿಂದ ನಾಪತ್ತೆಯಾಗಿದ್ದರು. ಮನೆಮಂದಿ ಹುಡುಕಾಟ ನಡೆಸಿದ್ದರು....
ಮಂಗಳೂರು: ನಗರ ಹೊರ ವಲಯದ ತೊಕ್ಕೊಟ್ಟುವಿನ ಸೋಮೇಶ್ವರ ಸಮುದ್ರ ತೀರದಲ್ಲಿ ಉದ್ಯಮಿಯೋರ್ವರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ತೊಕ್ಕೊಟ್ಟುವಿನ ಪ್ಲಾನಿಂಗ್ ಪ್ಯಾಲೇಸ್ ಮಾಲೀಕರೆಂದು ತಿಳಿದು ಬಂದಿದೆ. ಕೊಲ್ಯ ನಿವಾಸಿಯಾಗಿದ್ದ ಸುರೇಶ್ ಎರಡನೇ ವಿವಾಹವಾಗಿದ್ದರು....
ಮಂಗಳೂರು: ಮನೆಯಲ್ಲಿ ಅಕ್ರಮವಾಗಿ ಸಿಲಿಂಡರ್ಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ದಾಳಿ ವೇಳೆ ವಿವಿಧ ಕಂಪನಿಗಳ 128 ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೆರ್ಮನ್ನೂರು ಗಾರಮದ ಚೆಂಬುಗುಡ್ಡ ಎಂಬಲ್ಲಿನ...
ಮಂಗಳೂರು: ಅಕ್ರಮವಾಗಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸ್ ತಂಡ ತಲಪಾಡಿ ಟೋಲ್ ಗೇಟ್ ಸಮೀಪ ಇಂದು ಬೆಳಿಗ್ಗೆ ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ಟೋಲ್ ಗೇಟ್ ಸಮೀಪ ತಪಾಸಣೆಗಿಳಿದ ಸಿಸಿಬಿ...
ಕಾಸರಗೋಡು: ಕೇರಳ ಐಸಿಸ್ ಪ್ರಕರಣದಲ್ಲಿ ಎನ್ಐಎ ಎಂಟು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಮೊಮ್ಮಗಳು ದೀಪ್ತಿ ಮಾರ್ಲ ಸಹ ಬಂಧನವಾಗಿತ್ತು. ಇದೀಗ ದೀಪ್ತಿ ಮಾರ್ಲ ಸಹಿತ ಎಂಟು...