Connect with us

    LATEST NEWS

    T20 ವಿಶ್ವಕಪ್: ಭಾರತ ತಂಡಕ್ಕೆ ಟ್ವೀಟ್ ಮೂಲಕ ಶುಭಕೋರಿದ ಸಿಎಂ

    Published

    on

    ಬೆಂಗಳೂರು:  ಬರೋಬ್ಬರಿ 11 ವರ್ಷಗಳ ವಿಶ್ವಕಪ್ ಕನಸು ಇದೀಗ ನನಸಾಗಿದೆ. 9 ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಮಣಿಸಿ ಟೀಂ ಇಂಡಿಯಾ 2ನೇ ಬಾರಿಗೆ ವಿಶ್ವಕಪ್‌ನ್ನು ಮುಡಿಗೇರಿಸಿಕೊಂಡಿದೆ.

    ಭಾರತ ತಂಡದ ಅದ್ಭುತ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರು ಅಭಿನಂದಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸದಲ್ಲಿದ್ದರೂ ಕ್ರಿಕೆಟ್ ವೀಕ್ಷಣೆ ಮಾಡಿದ್ದಾರೆ. ರಾಜ್ಯ ರಾಜಕೀಯ ಜಂಜಾಟದ ನಡುವೆಯೂ ಕ್ರಿಕೆಟ್ ವೀಕ್ಷಣೆ ಮಾಡಿ ತಾನೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಂಡಿಯಾ ಗೆಲುವಿನ ಬಳಿಕ ಇದೊಂದು ಐತಿಹಾಸಿಕ ಕ್ಷಣ ಎಂದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‌ ನಲ್ಲಿ ಹಿಗಿದೆ..

    ‘ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದು ಕಡೇ ಕ್ಷಣದಲ್ಲಿ ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದ ಆಟವೂ ಮೆಚ್ಚತಕ್ಕದ್ದೆ. ಇದೊಂದು ಐತಿಹಾಸಿಕ ಕ್ಷಣ. ಕ್ರಿಕೆಟ್ ಪ್ರೇಮಿಯಾದ ನನಗೆ ನಮ್ಮವರ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಕೋಟ್ಯಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ, ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆ’ ಎಂದು ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

    LATEST NEWS

    ಶಿವಮೊಗ್ಗ : ಗಾಂಧಿ ಬಜಾರ್‌ ನಲ್ಲಿ ಅಗ್ನಿ ಅವಘ*ಡ; ಹಲವು ಅಂಗಡಿಗಳಿಗೆ ಹಾ*ನಿ

    Published

    on

    ಶಿವಮೊಗ್ಗ: ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಬಟ್ಟೆ ಮಾರುಕಟ್ಟೆಯಲ್ಲಿ ರಾತ್ರಿ 10 ಗಂಟೆ ವೇಳೆಗೆ ಅಗ್ನಿ ಅವಘ*ಡ ಉಂಟಾಗಿ, ಅಪಾರ ಪ್ರಮಾಣದ ಹಾ*ನಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಏಳೆಂಟು ಬಟ್ಟೆ ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿವೆ. ಒಳಗಿದ್ದ ವಸ್ತುಗಳು ಬೆಂ*ಕಿಗಾಹುತಿಯಾಗಿವೆ.


    ಬಸವೇಶ್ವರ ದೇವಸ್ಥಾನದ ಹಿಂಭಾಗದ ಬಟ್ಟೆ ಮಾರುಕಟ್ಟೆಯ ಅಂಗಡಿಗಳಿಗೆ ಬೆಂ*ಕಿ ತಗುಲಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು, ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಈ ವೇಳೆಗೆ ಇಡೀ ಆವರಣದಲ್ಲಿ ದಟ್ಟ ಹೊಗೆ ಆವರಿಸಿದೆ. ಹಾಗಾಗಿ ಎಲ್ಲೆಲ್ಲಿ ಬೆಂ*ಕಿ ಹೊತ್ತಿಕೊಂಡಿದೆ ಎಂಬುದು ಗಮನಕ್ಕೆ ಬಾರದೆ, ಕಾರ್ಯಾಚರಣೆಗೆ ಅಡ್ಡಿಯಾಗಿದೆ.

    ಇದನ್ನೂ ಓದಿ : ಮಂಗಳೂರು ಸಬ್ ಜೈಲಿನಲ್ಲಿ ಮಾರಾಮಾರಿ..! ಇಬ್ಬರು ಆಸ್ಪತ್ರೆಗೆ ದಾಖಲು

    ಬಟ್ಟೆ ಮಾರುಕಟ್ಟೆ ಭಾಗದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿದೆ.

    Continue Reading

    BELTHANGADY

    ಹಿರಿಯ ಸಾಹಿತಿ, ವಿಶ್ರಾಂತ ಪ್ರಧ್ಯಾಪಕ ಪ್ರೊ. ಎನ್.ಜಿ ಪಟವರ್ಧನ್ ಅಸ್ತಂಗತ

    Published

    on

    ಬೆಳ್ತಂಗಡಿ; ತಾಲೂಕಿನ ಹಿರಿಯ ಸಾಹಿತಿ, ಉಜಿರೆ ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್ ಜಿ ಪಟವರ್ಧನ್ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜು.1 ರಂದು ಕೊನೆಯುಸಿರೆಳೆದಿದ್ದಾರೆ.

    ಮುಂಡಾಜೆ ಗ್ರಾಮದ ಮೂಲಾರು ಎಂಬಲ್ಲಿ ಮೂಲ ಮನೆ ಹೊಂದಿದ್ದ‌ ಅವರು ಕಳೆದ ಅನೇಕ ವರ್ಷಗಳಿಂದ ಉಜಿರೆಯಲ್ಲಿ ನೆಲೆಸಿದ್ದರು.
    ಚಿತ್ಪಾವನ ಸಮಾಜದ ಹಿರಿಯರೂ ಆಗಿದ್ದ ಅವರು ಹಲವು ಕಥೆ, ಕವನ, ವಿಮರ್ಷೆ ರಚನಾಕರ್ತರಾಗಿದ್ದರು‌. ಅವರ ಹಲವು ಕೃತಿಗಳು ಸಾಹಿತ್ಯ ಲೋಕಕ್ಕೆ ಸಮರ್ಪಿತ ವಾಗಿತ್ತು.
    ಉತ್ತಮ ಶೋತೃ ಹಾಗೂ ಸಾಹಿತ್ಯ ವಿಷಯಾಸಕ್ತಿ ಹೊಂದಿದ್ದ ಅವರು ಹಲವಾರು ಯುವ ಬರಹಗಾರರ ಬರಹಗಳ ಬಗ್ಗೆ ವಿಮರ್ಷೆ ಬರೆದು ಆ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ದೀರ್ಘ ವರ್ಷ ಅಂಕಣಗಳನ್ನೂ ಪ್ರಕಟಿಸುತ್ತಿದ್ದರು.

    Continue Reading

    DAKSHINA KANNADA

    ಮಂಗಳೂರು ಸಬ್ ಜೈಲಿನಲ್ಲಿ ಮಾರಾಮಾರಿ..! ಇಬ್ಬರು ಆಸ್ಪತ್ರೆಗೆ ದಾಖಲು

    Published

    on

    ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಳೆದ 20 ದಿನಗಳಿಂದ ವಿಚಾರಣಾಧೀನ ಖೈದಿಗಳಾಗಿ ಜೈಲು ಸೇರಿದ್ದ ಉಳ್ಳಾಲದ ಮಹಮ್ಮದ್ ಸಮೀರ್ ಹಾಗೂ ಮಹಮ್ಮದ್ ಮನ್ಸೂರ್ ಮೇಲೆ ಟೋಪಿ ನೌಫಾಲ್ ಹಾಗೂ ಇತರ ಹತ್ತು ರೌಡಿಗಳಿಂದ ಈ ದಾಳಿ ನಡೆಸಲಾಗಿದೆ.


    ಸಂಜೆ 6.45ರ ಸುಮಾರಿಗೆ ಈ ಘಟನೆ ನಡೆದಿದ್ದು,ಜೈಲಿನ ಅಡುಗೆ ರೂಮಿನಲ್ಲಿ ಹರಿತವಾದ ವಸ್ತುಗಳಿಂದ ದಾಳಿ ನಡೆಸಲಾಗಿದೆ. ಹಲ್ಲೆಗೊಳಗಾದ ಇಬ್ಬರಿಗೂ ತಲೆ,ಭುಜ ಸೇರಿದಂತೆ ದೇಹದ ಹಲವೆಡೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಹಲ್ಲೆ ನಡೆಸಿದವರು ಹಾಗೂ ಹಲ್ಲೆಗೆ ಒಳಗಾದವರು ನಟೋರಿಯಸ್ ಗಳಾಗಿದ್ದು ಹಲವಾರು ಪ್ರಕರಣಗಳ ಆರೋಪಿಗಳಾಗಿದ್ದಾರೆ.
    ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ವಿರುದ್ದ ಜೈಲರ್ ನೀಡಿದ ದೂರಿನ ಅನ್ವಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Continue Reading

    LATEST NEWS

    Trending