ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವವು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 6ರವರೆಗೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಆಶಯದಂತೆ ನಡೆಯಲಿದ್ದು, ಈ ನಿಟ್ಟಿನಲ್ಲಿ ನಗರದ ಲೇಡಿಹಿಲ್ ಸಮೀಪದ ನಾರಾಯಣ ಗುರು ವೃತ್ತದಿಂದ ಶ್ರೀಕ್ಷೇತ್ರದವರೆಗೆ ಶ್ರೀ ಗೋಕರ್ಣನಾಥ ಸೇವಾದಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ವೇಳೆ ನಮ್ಮ ಕುಡ್ಲ ವಾಹಿನಿಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ಮಂಗಳೂರು ದಸರಾ ಮಹೋತ್ಸವದ ಪೂರ್ವ ಭಾವಿಯಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಸುಮಾರು ನೂರಕ್ಕಿಂತಲೂ ಹೆಚ್ಚು ಮಂದಿ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಈ ಸಂದರ್ಭ ಗೋಕರ್ಣನಾಥ ಸೇವಾದಳದ ವಿಷ್ಣುದಾಸ್, ಸುನೀಲ್, ರೋಹಿದಾಸ್, ದಿನೇಶ್ ಮತ್ತಿತರರು, ಶಕ್ತಿನಗರ ಯುವವಾಹಿನಿ ಅಧ್ಯಕ್ಷ ಜಯರಾಮ್ ಮತ್ತು ತಂಡದ ಸದಸ್ಯರು, ಶಿವ ಫ್ರೆಂಡ್ಸ್, ಬರ್ಕೆ ಫ್ರೆಂಡ್ಸ್, ದಂಬೇಲ್ ಫ್ರೆಂಡ್ಸ್ ತಂಡದ ಸದಸ್ಯರು, ಉರ್ವ ಬಿಲ್ಲವ ಸಂಘ,
ಕದ್ರಿ ಬಿಲ್ಲವ ಸಂಘದ ಸದಸ್ಯರು, ಶ್ರೀ ಗೋಕರ್ಣನಾಥ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು, ಗುರುಬೆಳದಿಂಗಳು ಫೌಂಡೇಶನ್, ಉದ್ಯಮಿ ತರುಣ್ ತಾಕರ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.