Connect with us

    LATEST NEWS

    ದ್ವೇಷ ಭಾಷಣಗಳನ್ನು ಯಾಕೆ ತಡೆಯುತ್ತಿಲ್ಲ: ರಾಜ್ಯಗಳಿಗೆ ಸುಪ್ರೀಂ ಪ್ರಶ್ನೆ

    Published

    on

    ನವದೆಹಲಿ: ‘ದ್ವೇಷ ಭಾಷಣಗಳನ್ನು ತಡೆಯುವ ಸಂಬಂಧ ನ್ಯಾಯಾಲಯ ಮಾರ್ಗಸೂಚಿಗಳನ್ನು ನೀಡಿದ್ದರೂ, ಇಂಥ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇವೆ. ಅದನ್ನು ತಡೆಯಲು ಅಗತ್ಯ ಕ್ರಮಗಳನ್ನು ಯಾಕೆ ಕೈಗೊಂಡಿಲ್ಲ’ ಎಂದು ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ.

    ಈ ಬಗ್ಗೆ ಮಂಗಳವಾರ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌, ಅಭಯ್ ಎಸ್.ಓಕಾ ಹಾಗೂ ಸಿ.ಟಿ.ರವಿಕುಮಾರ್‌ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

    ರೂರ್ಕಿಯಲ್ಲಿ ಬುಧವಾರ ಧರ್ಮ ಸಂಸದ್‌ ಆಯೋಜಿಸಿರುವ ಹಿನ್ನೆಲೆಯಲ್ಲಿ ಪತ್ರಕರ್ತ ಕುರ್ಬಾನ್ ಅಲಿ ಹಾಗೂ ನಿವೃತ್ತ ನ್ಯಾಯಾಧೀಶೆ ಅಂಜನಾ ಪ್ರಕಾಶ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಸಮಾಧಾನ ಹೊರಹಾಕಿತು.

    ಉತ್ತರಾಖಂಡ ಸರ್ಕಾರದ ಪರ ವಕೀಲ, ‘ಸರ್ಕಾರ ಕ್ರಮ ಕೈಗೊಳ್ಳಲಿದ್ದು, ವಿಶ್ವಾಸ ಇಡಿ’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರತಿಯೊಬ್ಬರ ಮೇಲೂ ವಿಶ್ವಾಸ ಇದೆ. ಆದರೆ, ವಾಸ್ತವ ಬೇರೆಯೇ ಇದೆ’ ಎಂದು ಹೇಳಿತು.

    ‘ಅರ್ಜಿದಾರರು ಒಂದು ಸಮುದಾಯಕ್ಕೆ ಕಳಂಕ ಹಚ್ಚಲು ಯತ್ನಿಸುತ್ತಿದ್ದಾರೆ’ ಎಂದು ಉತ್ತರಾಖಂಡ ಸರ್ಕಾರ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದು ಯಾವ ರೀತಿಯ ವಾದ’ ಎಂದು ಪ್ರಶ್ನಿಸಿತಲ್ಲದೇ, ‘ಇಂಥ ಘಟನೆಗಳು ಮರುಕಳಿಸಿದಲ್ಲಿ ಮುಖ್ಯಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಸೂಚಿಸಬೇಕಾಗುತ್ತದೆ’ ಎಂದು ಎಚ್ಚರಿಸಿತು. ‘ರಾಜ್ಯದಲ್ಲಿ ನಡೆಯಲಿರುವ ಧಾರ್ಮಿಕ ಸಭೆಗಳಿಗೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಸಲ್ಲಿಸುವಂತೆ’ ಉತ್ತರಾಖಂಡ ಸರ್ಕಾರದ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಿತು.
    ಅರ್ಜಿದಾರರ ಪರ ವಕೀಲ ಕಪಿಲ್‌ ಸಿಬಲ್‌ ಅವರು ವಾದ ಮಂಡಿಸಿದರು.

    LATEST NEWS

    ಮಂಗಳೂರು ವಿಮಾನ ದುರಂತ ಕಹಿ ನೆನಪಿಗೆ ಇಂದು 14 ವರ್ಷ..! ಕೂಳೂರಿನಲ್ಲಿ ಶ್ರದ್ದಾಂಜಲಿ

    Published

    on

    ಮಂಗಳೂರು: ಮಂಗಳೂರು ವಿಮಾನ ದುರಂತಕ್ಕೆ ಇಂದು 14 ವರ್ಷ ತುಂಬಿದೆ. 2010 ರ ಮೇ 22 ರ ಮುಂಜಾನೆ ನಡೆದಿದ್ದ ಘಟನೆಯನ್ನು ಇಡೀ ದೇಶವೇ ಮರೆಯುವ ಹಾಗಿಲ್ಲ. 158 ಜನರನ್ನು ಆಹುತಿ ಪಡೆದಿದ್ದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಹನ್ನೆರಡು ಜನರ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಮಂಗಳೂರಿನ ಕೂಳೂರು ಬಳಿಯಲ್ಲಿ ಆ ದೇಹಗಳನ್ನು ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅಲ್ಲಿ ಸ್ಮಾರಕ ನಿರ್ಮಿಸಿ ಪ್ರತಿ ವರ್ಷ ಗೌರವ ಸೂಚಿಸಲಾಗುತ್ತಿತ್ತು. ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕೂಳೂರು ಸೇತುವೆ ಸಮೀಪ ನಿರ್ಮಿಸಲಾದ ಸ್ಮಾರಕದಲ್ಲಿ ಇದೇ ಸ್ಮಾರಕದ ಬಳಿ ವಿಮಾನ ದುರಂತದಲ್ಲಿ ಮೃತ ಪಟ್ಟ ಎಲ್ಲರಿಗೂ ಶೃದ್ಧಾಂಜಲಿ ಕಾರ್ಯಕ್ರಮ ನಡೆಸಿದೆ.

    Read More..; ಪತಿಯಿಂದಲೇ ಭೀಕರ ಹ*ತ್ಯೆಯಾದ ‘ಭಜರಂಗಿ’ ಸಿನೆಮಾ ನಟಿ ..!

     AIR CRASH

    ಅಂದು ಏನಾಗಿತ್ತು?: 

    2010ರ ಮೇ 22ರಂದು ಬೆಳಗ್ಗೆ 6.20ರ ಸಮಯದಂದು ದುಬೈನಿಂದ ಮಂಗಳೂರು ಏರ್‌ ಪೋರ್ಟ್ ಆಗಮಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಲ್ಯಾಂಡಿಂಗ್‌ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಅಪಘಾತಕ್ಕೀಡಾಗಿತ್ತು. ಕೂಡಲೆ ವಿಮಾನ ಪೂರ್ತಿ ಅಗ್ನಿ ಆವರಿಸಿದ್ದು, ಅದರಲ್ಲಿದ್ದ 158 ಮಂದಿ ಸಜೀವ ದಹನವಾಗಿದ್ದರು. ಕೇವಲ 8 ಮಂದಿಯಷ್ಟೇ ಬದುಕಿ ಉಳಿದಿದ್ದರು. ನಸುಕಿನ ನಿದ್ರೆಯಲ್ಲಿದ್ದವರು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದ್ದರು.

     

     

     

     

    Continue Reading

    DAKSHINA KANNADA

    ಮಂಗಳೂರು : ಭಾರಿ ಮಳೆಗೆ ಧರೆಗುರುಳಿದ ಮರ

    Published

    on

    ಮಂಗಳೂರು : ಬಿರುಬಿಸಿಲಿನಿಂದ ಕಂಗಾಲಾಗಿದ್ದ ಕರಾವಳಿಗರ ಮೇಲೆ ವರುಣ ಕೃಪೆ ತೋರಿದ್ದು, ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು(ಮೇ 21) ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ.

     

    ಸಂಜೆಯಿಂದ ಶುರುವಾದ ಮಳೆಗೆ ಮಂಗಳೂರು ನಗರದ ಕರಂಗಲ್ಪಾಡಿ ಬಳಿ ಇರುವ ರಾಧಾ ಮೆಡಿಕಲ್ಸ್ ಎದುರುಗಡೆ ಭಾರಿ ಗಾತ್ರದ ಮರವೊಂದು ಧರೆಗುರುಳಿದ್ದು, ವಾಹನಗಳು ಜಖಂ ಗೊಂಡಿವೆ.

    ಘಟನೆಯಿಂದ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮರದ ಕೊಂಬೆಗಳನ್ನು ಸ್ವಲ್ಪ ಮಟ್ಟಿಗೆ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ಲಭಿಸಿದೆ.

    Continue Reading

    DAKSHINA KANNADA

    ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

    Published

    on

    ಮಂಗಳೂರು: ಹೊಸ ಹೊಸ ಮೊಬೈಲ್ ಅಪ್ಲಿಕೇಶನ್ ಬಂದಂತೆ ನಾವು ಮೊಬೈಲ್ ಗೆ ಹೆಚ್ಚೆಚ್ಚು ಎಡಿಕ್ಟ್ ಆಗುತ್ತಿದ್ದೇವೆ. ಅದರ ಜೊತೆಗೆ ನೆಟ್ ಪ್ಯಾಕ್ ಕೂಡಾ ಇದೀಗ ದುಬಾರಿಯಾಗಿಬಿಟ್ಟಿದೆ. ಮೊಬೈಲ್​ನಲ್ಲಿ ಡೇಟಾ ಪ್ಯಾಕ್ ಹಾಕಿಸಿದ್ದರೂ, ಇಂಟರ್​ನೆಟ್ ಬೇಗ ಖಾಲಿ ಆಗ್ತಾ ಇದ್ಯಾ? ಅದಕ್ಕೆ ಕಾರಣವೇನು? ದಿನಕ್ಕೆ 2 ಜಿಬಿ ಡೇಟಾ ಇದ್ದರೂ ಸಾಕಾಗುತ್ತಿಲ್ಲವೇ? ರೀಲ್ಸ್ ನೋಡುತ್ತಲೇ ಡೇಟಾ ಖಾಲಿ ಆಗುತ್ತಿರುವ ಬಗ್ಗೆ ಮೆಸೇಜ್ ಬರುತ್ತಿದೆಯಾ? ಹಾಗಾದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೆಟ್​ ಬೇಗ ಖಾಲಿ ಆಗದಿರಲು ಏನು ಮಾಡಬೇಕು? ಡೇಟಾ ಪ್ಯಾಕ್ ಹೆಚ್ಚು ಇರುವಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.

    • ಸ್ಮಾರ್ಟ್ಫೋನ್ ಗಳಲ್ಲಿ ಕೆಲವು ಆ್ಯಪ್ ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ. ಆಗ ನೆಟ್ ಬೇಗ ಖಾಲಿಯಾಗುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ ಗೆ ಹೋಗಿ ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಮಾತ್ರ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡೋದು ಒಳಿತು.
    • ಆಂಡ್ರಾಯ್ಡ್ ಫೋನ್ ಗಳು ಡೇಟಾ ಉಳಿತಾಯ ಮೋಡ್ ಎಂಬ ಆಯ್ಕೆಯನ್ನು ಹೊಂದಿದೆ. ಈ ಆಯ್ಕೆ ನಿಮ್ಮ ಮೊಬೈಲ್ ನಲ್ಲಿದ್ದು ಅದನ್ನು ಸಕ್ರಿಯಗೊಳಿಸಿದ್ರೆ ಡೇಟಾ ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ನಿಮ್ಮ ಫೋನ್ ನಲ್ಲಿ ಅನಗತ್ಯ ಡೇಟಾ ಪೋಲು ಆಗುವುದನ್ನು ತಡೆಯುತ್ತದೆ. ಇದರಿಂದ ನಿಮಗೆ ಬಳಕೆಗೆ ಡೇಟಾ ಹೆಚ್ಚು ಲಭ್ಯ ಆಗುತ್ತದೆ.
    • ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಆ್ಯಪ್ ಬಳಸೋದು ಹೆಚ್ಚಾಗಿದೆ. ಇದು ಅತ್ಯಂತ ಹೆಚ್ಚು ಡೇಟಾವನ್ನು ಬಳಸಿಕೊಳ್ಳುತ್ತೆ‌. ಹಾಗಿರುವಾಗ ಇಂತಹ ಆ್ಯಪ್ ಗಳನ್ನು ಆಫ್ ಲೈನ್ ನಲ್ಲಿ ಉಪಯೋಗಿಸಬೇಕೇ ಹೊರತು ಆನ್ಲೈನ್ ನಲ್ಲಲ್ಲ. ಈ ಆ್ಯಪ್ ನ ಅಪ್ಡೇಟ್ ನ್ನು ಕೂಡಾ ವೈಫೈನಲ್ಲೇ ಮಾಡೋದು ಉತ್ತಮ.‌
    • ನಾವು ಎಲ್ಲಿಯಾದರೂ ಸಂಚರಿಸುತ್ತಿದ್ದರೆ ಯೂಟ್ಯೂಬ್ ವೀಡಿಯೋಗಳನ್ನು ಅಥವಾ ಇನ್ನಾವುದೋ ಆ್ಯಪ್ ಬಳಸೋದು ಹೆಚ್ಚು. ಸಂಚಾರದ ಸಂದರ್ಭದಲ್ಲಿ ವೈಫೈ ಅನುಕೂಲತೆ ಇದ್ದರೆ ವೀಡಿಯೋ ಆಗಲೇ ಡೌನ್ಲೋಡ್ ಮಾಡಿಡುವುದು ಉತ್ತಮ. ನಂತರ ಆಫ್ಲೈನಲ್ಲೇ ಅದನ್ನು ವೀಕ್ಷಿಸಬಹುದು.
    • ವೀಡಿಯೋ ಮತ್ತು ಫೋಟೋಗಳನ್ನು ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನಿಂದ ತೆಗೆಯಿರಿ. ಆಗ ಡೇಟಾ ಉಳಿತಾಯವಾಗುತ್ತದೆ.
    Continue Reading

    LATEST NEWS

    Trending