Connect with us

  DAKSHINA KANNADA

  ಮೂಡಬಿದಿರೆ ವಕೀಲರ ಭವನ ಕಾಮಗಾರಿ ವೀಕ್ಷಿಸಿ ಗರಂ ಆದ ಸುಪ್ರೀಂಕೋರ್ಟ್ ಜಡ್ಜ್ ಅಬ್ದುಲ್ ನಝೀರ್‌

  Published

  on

  ಮೂಡುಬಿದಿರೆ: ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ವಕೀಲರ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹಾಗೂ ಮೂಡುಬಿದಿರೆಯ ನಿವಾಸಿಯೂ ಆಗಿರುವ ನ್ಯಾಯಮೂರ್ತಿ ಅಬ್ದುಲ್ ನಝೀರ್‌ ಅವರು ದಿಢೀರ್‌ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.


  ಈ ಸಂದರ್ಭದಲ್ಲಿ ಕಾಮಗಾರಿಯ ಗುಣ ಮಟ್ಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

  ಕಾಮಗಾರಿಯು ಕಳಪೆ ಮತ್ತು ಅಸಮರ್ಪಕವಾಗಿದೆ ಎಂದು ನ್ಯಾಯಾಧೀಶರು ಗರಂ ಆದರು. ನ್ಯಾಯಾಧೀಶರು ಕಾಮಗಾರಿಯ ಪರಿಶೀಲನೆಗೆ ಬರುತ್ತಿದ್ದಾರೆ ಎಂದು ಗುತ್ತಿಗೆದಾರರಿಗೆ ಪೂರ್ವ ಮಾಹಿತಿ ಇದ್ದರೂ ಅವರು ಈ ಸಂದರ್ಭದಲ್ಲಿ ಹಾಜರಿರಲಿಲ್ಲ.


  ಇದು ನ್ಯಾಯಾಧೀಶರ ಕೋಪವನ್ನು ಇಮ್ಮಡಿಗೊಳಿಸಿತು. ಆಗ ಅಲ್ಲಿದ್ದ ಎಂಜಿನಿಯರ್‌ ಗೆ ಕಳಪೆ ಗುಣಮಟ್ಟದ ಟೈಲ್ಸ್ ಮತ್ತು ಅವೈಜ್ಞಾನಿಕ ಕಾಮಗಾರಿಯನ್ನು ಒಡೆದು ಸರಿಪಡಿಸುವಂತೆ ಸೂಚನೆ ನೀಡಿದರು. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಲೋಕಾಯುಕ್ತ ತನಿಖೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟರು.

  ‘ದನದ ಕೊಟ್ಟಿಗೆಗೆ ಅಳವಡಿಸುವಂತಹ ಸಾಮಾಗ್ರಿಗಳನ್ನು ಇಲ್ಲಿ ಬಳಕೆ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿ, ಗುತ್ತಿಗೆದಾರ ಬಿಮಲ್ ನ ಪ್ರವೀಣ್‌ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಐದು ವರ್ಷ ಯಾವುದೇ ಗುತ್ತಿಗೆ ಕೊಡದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

  ಇಲ್ಲಿ ಅವ್ಯವಹಾರದ ಸುಳಿವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆಕ್ರೋಶಗೊಂಡ ನ್ಯಾಯಮೂರ್ತಿಗಳು, ನ್ಯಾಯಾಧೀಶರಿಗೆ ಎಲ್ಲಾ ವಿಧದ ಪರಿಜ್ಞಾನವೂ ಇರುತ್ತದೆ. ನಮಗೆ ಸತ್ಯಾಂಶ ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದರು.

  ಕೊನೆ ಕ್ಷಣದಲ್ಲಿ ಗುತ್ತಿಗೆದಾರ ಆಗಮಿಸಿದ್ದು, ಆಗ ನ್ಯಾಯಾಧೀಶರು ‘ನನ್ನ ತವರೂರಿನಲ್ಲಿ ಈ ರೀತಿ ನಡೆದಿರುವುದರಿಂದ ನನ್ನ ಮನಸ್ಸಿಗೆ ಅತೀವ ನೋವಾಗಿದೆ’ ಎಂದು ಹೇಳಿ ಗುತ್ತಿಗೆದಾರರ ಬಳಿ ಏನನ್ನೂ ಮಾತನಾಡದೆ ಅಲ್ಲಿಂದ ತೆರಳಿದರು.

  ಜಿಲ್ಲಾ ಮುಖ್ಯ ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   

  DAKSHINA KANNADA

  ಹರೀಶ್ ಪೂಂಜಾ ಪ್ರಕರಣ : ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? : ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

  Published

  on

  ಮಂಗಳೂರು : ದ.ಕ ಜಿಲ್ಲೆಗೆ ಆಗಮಿಸಿರುವ ಸಿಎಂ ಸಿದ್ಧರಾಮಯ್ಯ ವಿಮಾನ ನಿಲ್ದಾಣದಲ್ಲಿ ಹರೀಶ್ ಪೂಂಜಾ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
  ಪ್ರಕರಣದಲ್ಲಿ ಕಾಂಗ್ರೆಸ್‌ ಒತ್ತಡ ಅಂದ್ರೆ ಏನು? ಎಂದು ಪ್ರಶ್ನೆ ಮಾಡಿದ ಸಿಎಂ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಹರೀಶ್ ಪೂಂಜಾ ವಿರುದ್ಧ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಏಳು ವರ್ಷ ಜೈಲುವಾಸದ ಶಿಕ್ಷೆ ಸಿಗಬಹುದಾದ ಕೇಸ್ ಆಗಿದ್ದು, ಬೇಲೇಬಲ್‌ ಪ್ರಕರಣ ಅಲ್ಲ ಎಂದಿದ್ದಾರೆ.


  ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? ಶಾಸಕ ಅಂದ ಮಾತ್ರಕ್ಕೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಶಾಸಕರು ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಅನ್ನೋದು ಇಂಪಾರ್ಟೆಂಟ್. ಹಾಗಾಗಿ ಅವರ ಮೇಲೆ ಎರಡು ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.

  Continue Reading

  DAKSHINA KANNADA

  ಮಂಗಳೂರಿನಲ್ಲಿ ಮೊದಲ ಮಳೆಗೆ ಜೀವ ಬ*ಲಿ; ಆಟೋರಿಕ್ಷಾ ತೋಡಿಗೆ ಬಿದ್ದು ಚಾಲಕ ಸಾ*ವು

  Published

  on

  ಮಂಗಳೂರು : ಮಂಗಳೂರಿನಲ್ಲಿ ಆರಂಭಿಕ ಮಳೆಗೆ ಜೀವವೊಂದು ಬ*ಲಿಯಾಗಿದೆ. ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿನ ತೋಡಿನಲ್ಲಿ ಭರ್ತಿ ನೀರು ತುಂಬಿ ಹರಿದಿದೆ. ರಸ್ತೆಯನ್ನೂ ಮೀರಿ ನೀರು ಹರಿಯುತ್ತಿದ್ದ ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ.


  ತೋಡು ಭರ್ತಿ ನೀರಿದ್ದ ಪರಿಣಾಮ ಆಟೋಚಾಲಕ ಸ್ಥಳೀಯ ನಿವಾಸಿ ದೀಪಕ್ (೪೦) ನೀರಿನಲ್ಲಿ ಮುಳುಗಿ ಮೃ*ತಪಟ್ಟಿದ್ದಾರೆ. ರಿಕ್ಷಾ ತೋಡಿನೊಳಗೆ ಮಗುಚಿ ಬಿದ್ದ ಪರಿಣಾಮ ಆಟೋ ಚಾಲಕ ದೀಪಕ್ ನೀರಿನಿಂದ ಮೇಲೆ ಬರಲಾಗದೆ ಮೃ*ತಪಟ್ಟಿರಬಹುದು.

  ಇದನ್ನೂ ಓದಿ : ಪುತ್ತೂರು : ರಸ್ತೆ ಅಪಘಾ*ತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃ*ತ್ಯು

  ಈ ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಭಾರೀ ಅನಾಹುತ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತಲ್ಲಿ ಇನ್ನಷ್ಟು ಜೀವ ಬ*ಲಿಯಾಗೋದು ತಪ್ಪಲಿದೆ.

  Continue Reading

  DAKSHINA KANNADA

  ಪುತ್ತೂರು : ರಸ್ತೆ ಅಪಘಾ*ತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃ*ತ್ಯು

  Published

  on

  ಪುತ್ತೂರು : ಕಬಕ ಸಮೀಪದ ಕೂವೆತ್ತಿಲದಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪಘಾ*ತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ.

  ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ಮಂಜುಶ್ರೀ (20) ಮೃ*ತ ಯುವತಿ. ಮಂಜುಶ್ರೀ ವಿವೇಕಾನಂದ ಕಾಲೇಜಿನಲ್ಲಿ ಪದವಿ ಓದುತ್ತಿದ್ದರು.

  ಇದನ್ನು ಓದಿ : ಪೊಲೀಸ್‌ ತಂದೆಗೆ ಹೆದರಿ ಕಿಡ್ನಾಪ್‌ ಕಥೆ ಕಟ್ಟಿದ್ದ ಮಗ..!! ಮುಂದೆ ಆಗಿದ್ದೇನು?

  ಕೆಲ ಸಮಯಗಳ ಹಿಂದೆ ಕಬಕ ಸಮೀಪದ ಕೂವೆತ್ತಿಲದಲ್ಲಿ ಆಕ್ಟೋ ಕಾರು ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಮಂಜುಶ್ರೀ ಗಂಭೀ*ರ ಗಾಯಗೊಂಡಿದ್ದರು. ಆ ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ(ಮೇ 24) ರಾತ್ರಿ ಮೃ*ತಪಟ್ಟಿದ್ದಾರೆ.

  Continue Reading

  LATEST NEWS

  Trending