Connect with us

DAKSHINA KANNADA

ಕುಟುಂಬ ಸಮೇತ ಕುಕ್ಕೆಗೆ ಭೇಟಿ ನೀಡಿದ ಸುಪ್ರೀಂ ನ್ಯಾಯಮೂರ್ತಿ ಅಬ್ದುಲ್​ ನಜೀರ್

Published

on

ಮಂಗಳೂರು: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಬ್ದುಲ್​ ನಜೀರ್​ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಪವಿತ್ರ ಪೂಜೆಗಳಲ್ಲಿ ಒಂದಾದ ಆಶ್ಲೇಷ ಬಲಿ ಪೂಜೆಯನ್ನು ಅಬ್ದುಲ್​ ನಜೀರ್​ ಅವರು ಸಲ್ಲಿಸಿದರು. ಈ ವೇಳೆ ದೇವಸ್ಥಾನ ಮಂಡಳಿಯವರು ನ್ಯಾಯಮೂರ್ತಿಗಳಿಗೆ ವಿಶೇಷ ಗೌರವವನ್ನು ಸಲ್ಲಿಸಿದರು.
ಅಬ್ದುಲ್​ ನಜೀರ್​ ಅವರು ಒಂದು ವಾರಗಳ ಕಾಲ ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದಾರೆ. 2022ರ ಜನವರಿ 1ರವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಅಬ್ದುಲ್​ ನಜೀರ್​ ಅವರು ಭಾಗವಹಿಸಲಿದ್ದಾರೆ. ಇವರು ಮೂಲತಃ ಮೂಡಬಿದಿರೆಯ ಬೆಳುವಾಯಿಯವರು.

DAKSHINA KANNADA

Bantwal : ಮತದಾನದ ಜಾಗೃತಿ ಮೂಡಿಸುತ್ತಿರುವ ಬಾಲೆ; ಚುನಾವಣಾ ಆಯೋಗದಿಂದ ಬಂತು ಮೆಚ್ಚುಗೆಯ ಓಲೆ!

Published

on

ಬಂಟ್ವಾಳ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದಿರುವ ದಕ್ಷಿಣ ಕನ್ನಡದ ಮಾಣಿಯ 4ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿಗೆ ಕೇಂದ್ರ ಚುನಾವಣಾ ಆಯೋಗವು ಶಹಬ್ಬಾಸ್‌ಗಿರಿ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನದ ಅರಿವು ಮೂಡಿಸುವ ಆಕೆಯ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕಳೆದ ಚುನಾವಣೆಯಲ್ಲಿ ತಾನು ಮಾಡಿದ ಮತದಾನ ಜಾಗೃತಿಯ ದಾಖಲೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸನ್ನಿಧಿ ಇಮೇಲ್ ಮೂಲಕ ಕಳುಹಿಸಿದ್ದಳು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ನಡೆಯಲು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಸಹಕಾರ ಕೋರಿದ್ದಳು. ಇನ್ನು ಇದೀಗ ಸನ್ನಿಧಿಯ ಪತ್ರಕ್ಕೆ ಇದೀಗ ಆಯೋಗದಿಂದ ಪ್ರತಿಕ್ರಿಯೆ ಬಂದಿದೆ.

‘ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಕ್ಕೆ ಧನ್ಯವಾದಗಳು. ಆಯೋಗವು ನಿಮ್ಮ ಮೌಲಿಕ ಅಭಿಪ್ರಾಯಗಳನ್ನು ಗುರುತಿಸಿದೆ. ಉತ್ತಮ ಚುನಾವಣಾ ಪ್ರಕ್ರಿಯೆ ನಡೆಯಲು ಪೂರಕವಾಗಿ ನಿಮ್ಮ ಅಭಿಪ್ರಾಯ, ಕಾರ್ಯಗಳನ್ನು ಪ್ರಶಂಸಿಸುತ್ತೇವೆ’ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಪ್ರಶಂಸೆ ಪಡೆದಿದ್ದ ಬಾಲಕಿ :

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿಯಾಗಿರುವ ಸನ್ನಿಧಿ, ಮಾಣಿ ಪೆರಾಜೆ ಬಾಲವಿಕಾಸ ಇಂಗ್ಲಿಷ್ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಸನ್ನಿಧಿ ತನ್ನ ನಾಲ್ಕೈದು ಮಂದಿ ಪುಟ್ಟ ಸಹಪಾಠಿಗಳೊಂದಿಗೆ ಮನೆ, ಅಂಗಡಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಳು.
ಮತದಾನ ಮಾಡುವ ಜತೆಗೆ ಪಕ್ಷಾತೀತವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಪ್ರೇರಣೆ ನೀಡಿದ್ದಳು. ದ.ಕ. ಜಿಲ್ಲಾಧಿಕಾರಿ ಈಕೆಯ ಕಾರ್ಯವನ್ನು ಗುರುತಿಸಿ ಪ್ರಶಂಸಿಸಿದ್ದರು.

ಬೇರೆ ರಾಜ್ಯಕ್ಕೆ ಹೋಗೋ ಆಸಕ್ತಿ :

‘ಲೋಕಸಭೆ ಚುನಾವಣೆ ಸಂದರ್ಭ ಬೇರೆ ರಾಜ್ಯಕ್ಕೂ ಹೋಗಿ ಅಲ್ಲಿನ ಭಾಷೆಯಲ್ಲೇ ಜಾಗೃತಿ ಮೂಡಿಸುವ ಆಸಕ್ತಿಯಿದೆ. ಸಂಗೀತ, ನೃತ್ಯ ಮಾಧ್ಯಮದ ಮೂಲಕ ಮತದಾನ ಜಾಗೃತಿ ಸಾಧ್ಯವೋ ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಮತದಾನ ಕಡ್ಡಾಯವಾಗಿ ಮಾಡುವವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡಬೇಕು. ಆಗ ಮಾತ್ರ ಮತದಾನ ಜಾಸ್ತಿ ಆಗಬಹುದು’ ಎಂದು ಸನ್ನಿಧಿ ಹೇಳುತ್ತಾಳೆ.

Continue Reading

DAKSHINA KANNADA

Mangaluru: ಕಲುಷಿತವಾದ ಫಲ್ಗುಣಿ ನದಿಯ ಒಡಲು-ಕಂಪೆನಿ ವಿರುದ್ಧ ಗ್ರಾಮಸ್ಥರ ಆಕ್ರೋಶ..!

Published

on

ಮಂಗಳೂರು: ಜೋಕಟ್ಟೆ, ಬೈಕಂಪಾಡಿ ಕೈಗಾರಿಕಾ ವಲಯದ ತ್ಯಾಜ್ಯಗಳು ಪಲ್ಗುಣಿ ನದಿ ಸೇರುತ್ತಿದ್ದು, ಫಲ್ಗುಣಿ ನದಿ ಸಂಪೂರ್ಣ ಕಲುಷಿತವಾಗಿದೆ. ಒಂದು ವರ್ಷದ ಹಿಂದೆ ರುಜಿಗೋಲ್ಡ್‌, ಪತಾಂಜಲಿ ಕಂಪೆನಿಗಳ ತ್ಯಾಜ್ಯ ನದಿ ಸೇರುತ್ತಿದ್ದ ವಿಚಾರ ಪತ್ತೆ ಹಚ್ಚಿದ್ದ ತೋಕುರು ಗ್ರಾಮಸ್ಥರು ಕಂಪೆನಿ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಮಾದ್ಯಮಗಳ ವರದಿ ಬಳಿಕ ಹಸಿರು ಪೀಠ ಸುಮೋಟೊ ಕೇಸ್ ದಾಖಲಿಸಿ ತನಿಕೆಗೆ ಆದೇಶ ನೀಡಿತ್ತು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕಂಪೆನಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ಬಳಿಕ ತ್ಯಾಜ ನದಿಗೆ ಬಿಡೋದು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಈ ಭಾಗದ ಬಹುತೇಕ ಕಂಪೆನಿಗಳು ನದಿಗೆ ತ್ಯಾಜ್ಯ ನೀರು ಬಿಡಲು ಆರಂಭಿಸಿದ್ದು, ಫಲ್ಗುಣಿ ನದಿ ಸಂಪೂರ್ಣ ಕಲುಷಿತಗೊಂಡಿದೆ.

ಕಂಪೆನಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೇ ನದಿಗೆ ಬಿಡುತ್ತಿರುವ ಕಾರಣ ಪರಿಸರದಲ್ಲಿ ಗಬ್ಬು ವಾಸನೆ ಹರಡಿದ್ದು, ಈ ಪರಿಸರದಲ್ಲಿ ಜನರು ಓಡಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಆಕ್ರೊಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಜಿಲ್ಲಾಧಿಕಾರಿಗಳೂ ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿನ ಕಂಪೆನಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸೋದಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

 

Continue Reading

DAKSHINA KANNADA

Ullala : ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ನಿರ್ಮಾಣ ಹಂತದ ನೂತನ ಭಂಡಾರ ಮನೆ ಧ್ವಂಸ!

Published

on

ಉಳ್ಳಾಲ : ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ ಕ್ಷೇತ್ರಕ್ಕೆ ತಾಗಿಕೊಂಡೇ ನೂತನ ಭಂಡಾರಮನೆ ನಿರ್ಮಾಣಗೊಳ್ಳುತ್ತಿದ್ದು, ನಿರ್ಮಾಣ ಹಂತದ ಕಟ್ಟಡವನ್ನು ಕಿಡಿಗೇಡಿಗಳು ಭಾನುವಾರ ಬೆಳಿಗ್ಗೆ ಜೆಸಿಬಿಯಲ್ಲಿ ನೆಲಸಮಗೊಳಿಸಿ ವಿಕೃತಿ ಮೆರೆದಿದ್ದಾರೆ.


ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣದ ಭಂಡಾರಮನೆಯು ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದ್ದು, ಅದರಲ್ಲಿ ಕ್ಷೇತ್ರದ ದೈವಗಳ ಹದಿನೈದು ಕೋಟಿಗೂ ಮಿಕ್ಕಿ ಬೆಲೆ ಬಾಳುವ ಒಡವೆಗಳಿದ್ದು, ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ, ಇದಕ್ಕೆ ಭಂಡಾರಮನೆಯವರು ಸಮ್ಮತಿ ನೀಡಿರಲಿಲ್ಲ. ಆ ಹಿನ್ನಲೆ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣವಾಗಬೇಕೆಂದು‌ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಕಾರಣ, ಕ್ಷೇತ್ರಕ್ಕೆ ತಾಗಿಕೊಂಡ ಜಮೀನನ್ನು ವ್ಯವಸ್ಥಾಪನಾ ಸಮಿತಿಯವರು ಖರೀದಿಸಿದ್ದರು.

ಆ ಜಾಗದಲ್ಲಿ ಕಳೆದ ಜನವರಿ 8 ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಎಂಭತ್ತು ಶೇಕಡಾ ಕಾಮಗಾರಿ ಸಂಪೂರ್ಣಗೊಂಡಿತ್ತು. ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದು, ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಅವರು ಕಳೆದ ಎರಡು ದಿವಸಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು.

ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ವಿಮುಕ್ತರಾಗುತ್ತಿದ್ದಂತೆ, ಭಾನುವಾರ ಬೆಳಿಗ್ಗೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾ ಏಕಿ ನಿರ್ಮಾಣ ಹಂತದ ಭಂಡಾರ ಮನೆಯನ್ನ ನೆಲಸಮ ಮಾಡಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ , ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಮತ್ತು ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮುತ್ತಣ್ಣ ಶೆಟ್ಟಿಯೇ ಕಾರಣ : ಆರೋಪ
ಕ್ಷೇತ್ರದ ಭಕ್ತರಾದ ಕೆ.ಪಿ ಸುರೇಶ್ ಮಾತನಾಡಿ, ಭಂಡಾರ ಮನೆ ಒಡೆಯಲು ಗುರಿಕಾರರಾದ ಮುತ್ತಣ್ಣ ಶೆಟ್ಟಿಯೇ ಕಾರಣ ಎಂದು ಎಲ್ಲರಿಗೂ ತಿಳಿದಿದೆ. ಇಲ್ಲಿ ಕಾನೂನು ಪ್ರಕಾರವಾಗಿಯೇ ಭಂಡಾರ ಮನೆ ನಿರ್ಮಿಸಲಾಗಿತ್ತು, ಅದಕ್ಕೆ ಸದಾ ವಿರುದ್ಧವಾಗಿ ಕೋರ್ಟ್ ನಲ್ಲಿ ಧಾವೆ ಹೂಡುತ್ತಿದ್ದು, ಮುತ್ತಣ್ಣ ಶೆಟ್ಟಿಯೇ ಆಗಿದ್ದು ಅವರ ಹಿಂಬಾಲಕರೇ ಈ ಕೃತ್ಯ ಎಸಗಿರಬೇಕೆಂದು ಆರೋಪಿಸಿದ್ದಾರೆ.

ಮೂವರು ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ, ಮುತ್ತಣ್ಣ ಶೆಟ್ಟಿ, ಧೀರಜ್, ಶಿವರಾಜ್ ಎಂಬ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Continue Reading

LATEST NEWS

Trending