Connect with us

    LATEST NEWS

    ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ ನೃತ್ಯ…! ಸಂಭ್ರಮಾಚರಣೆ ವಿಡಿಯೋ ವೈರಲ್‌..!

    Published

    on

    ದೆಹಲಿ: ಮೂರನೇ ಬಾರಿ ಗಗನ ಯಾತ್ರೆ ಮಾಡಿರುವ ಭಾರತೀಯ ಮೂಲದ ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶ ನಿಲ್ದಾಣ ಪ್ರವೇಶ ಮಾಡಿದ್ದಾರೆ. ಬಾಹ್ಯಾಕಾಶ ನಿಲ್ದಾಣ ಪ್ರವೇಶ ಮಾಡುವ ವೇಳೆ ಸುನಿತಾ ವಿಲಿಯಮ್ಸ್ ಅವರು ಸಂಭ್ರಮದಿಂದ ನರ್ತಿಸಿದ ವಿಡಿಯೋ ಈಗ ವೈರಲ್ ಆಗಿದೆ. ನಾಸಾ ಈ ವಿಡಿಯೋವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 4.8 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ.

    ವಿಶ್ವವಿಖ್ಯಾತ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಮೂರನೇ ಬಾರಿಗೆ ಯಶಸ್ವಿ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು 2024 ರ ಮೇ 07ರಂದು ಸಂಚರಿಸಿದ್ದ ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಜೂ.6ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ ಸಂತೋಷದ ಕ್ಷಣವನ್ನು ಸುನೀತಾ ವಿಲಿಯಮ್ಸ್ ನೃತ್ಯದ ಮೂಲಕ ಸಂಭ್ರಮಿಸಿದ್ದಾರೆ.

    DAKSHINA KANNADA

    ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ : ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

    Published

    on

    ಮಂಗಳೂರು : ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಮಂಗಳವಾರ(ಜೂ.18) ಕೆಎಸ್ ರಾವ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.


    ಈ ಸಂದರ್ಭ ಸರ್ವೋತ್ತಮ ಅಂಚನ್, ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಹಿಂದುಸ್ತಾನ್ ಪೆಟ್ರೋಲಿಯಂನ ರವಿ ಎಸ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ದಿನೇಶ್ ಕೆ, ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

    ಇದನ್ನೂ ಓದಿ : ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

    Continue Reading

    LATEST NEWS

    ಹಾವು ಕಚ್ಚಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ..!

    Published

    on

    ಪಶ್ಚಿಮ ಬಂಗಾಳ/ಮಂಗಳೂರು: ಇಲ್ಲೊಂದು ವೈದ್ಯೆ ಹಾವಿನಿಂದ ಕಚ್ಚಿಸಿಕೊಂಡರೂ ಮರುದಿನ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.  ವೈದ್ಯೋ ನಾರಾಯಣೋ ಹರಿ: ಎಂಬ ಮಾತು ಈ ವೈದ್ಯೆಯ ವಿಷಯದಲ್ಲಿ  ನಿಜವಾಗಿದೆ.

    ಹಿಂದಿನ ದಿನ ರಾತ್ರಿ ವೈದ್ಯೆ ಶ್ರೀಜಿತಾರಿಗೆ ಹಾವು ಕಚ್ಚಿತ್ತು. ಈ ಪರಿಣಾಮ ಮೈಕೈ ನೋವು, ಒಂದೆಡೆ ಕೈಯಲ್ಲಿ ಸೂಜಿ, ಡ್ರಿಪ್ಸ್ ಏರಿಸಿಕೊಂಡ ವೈದ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳಿಗೆ ಚಿಕಿತ್ಸೆ ನೀಡಿದ್ಧಾರೆ. ಎದ್ದು ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜನರಿಗೆ ಚಿಕಿತ್ಸೆ ನೀಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    Read More..;  ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

    ಪಶ್ಚಿಮ ಬಂಗಾಳದ ದುಫಗಿರಿ ಗ್ರಾಮೀಣ ಆಸ್ಪತ್ರೆಯು ಇತ್ತೀಚೆಗಷ್ಟೇ ಉಪ-ಜಿಲ್ಲಾ ಆಸ್ಪತ್ರೆಯ ಸ್ಥಾನಮಾನವನ್ನು ಪಡೆದುಕೊಂಡಿದೆ. ಆದರೂ ವೈದ್ಯರ ಸಂಖ್ಯೆ ಕಡಿಮೆ ಇದೆ ಎಂಬುದು ಜನರ ದೂರಾಗಿದೆ.

    ಈ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ವೈದ್ಯರಿರುವ ಕಾರಣ ವೈದ್ಯರು ತಮಗೆ ಆರೋಗ್ಯ ಸರಿಯಿಲ್ಲದಿದ್ದರೂ ಕೂಡಾ ಆಸ್ಪತ್ರೆಗೆ ಬರಬೇಕಾದ ಅನಿವಾರ್ಯತೆ. ಇನ್ನು ಈ ವೈದ್ಯೆಗೆ ಹಾವು ಕಚ್ಚಿದ್ದರೂ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿತ್ತು. ವೈದ್ಯೆ ಶ್ರೀಜಿತಾರವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

    Continue Reading

    LATEST NEWS

    ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

    Published

    on

    ಬೆಳಗಾವಿ/ಮಂಗಳೂರು: ಹೆತ್ತ ಮಕ್ಕಳನ್ನು ಬಿಟ್ಟು ಇಪ್ಪತ್ತೈದು ವರ್ಷದ ಯುವಕನ ಜೊತೆ ತಾಯಿಯೊಬ್ಬಳು ಪರಾರಿಯಾದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ನಡೆದಿದೆ. ತಾಯಿಯಿಂದಾಗಿ ಮೂರು ಗಂಡು ಮಕ್ಕಳು ಬೀದಿಗೆ ಬಂದಿದ್ದಾರೆ. ನಮಗೆ ನ್ಯಾಯ ಕೊಡಿಸುವಂತೆ ಮೂರು ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.

    ಸರಕಾರಿ ನೌಕರಿಯಲ್ಲಿದ್ದ ಪತಿಯ ಅಕಾಲಿಕ ಮರಣದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಪತಿಯ ಮರಣ ನಂತರ ಮೂರು ಮಕ್ಕಳು ತಾಯಿಯ ನೆರಳಲ್ಲಿ ಬೆಳೆದಿದ್ದಾರೆ. ಇದೀಗ ಮೂರು ಗಂಡು ಮಕ್ಕಳನ್ನು ಬೀದಿ ಪಾಳು ಮಾಡಿ ಇಪ್ಪತ್ತೈದು ವರ್ಷದ ಯುವಕನ ಜೊತೆ ಓಡಿ ಹೋಗಿದ್ದಾಳೆ. ಕೆಲ ತಿಂಗಳಿನಿಂದ ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ.

    Read More..; ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    ಇತ್ತ ತಂದೆಯೂ ಇಲ್ಲದೆ ತಾಯಿಯೂ ಇಲ್ಲದೆ ಮಕ್ಕಳು ಅನಾಥರಾಗಿದ್ದಾರೆ. ಇತ್ತ ಮನೆ ಬಾಡಿಗೆ ಕಟ್ಟದೆ ಮನೆ ಮಾಲೀಕ ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಸದ್ಯಕ್ಕೆ ಅಜ್ಜಿ ಮನೆಯಲ್ಲಿ ಮೂರು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ.

    ಬೆಳಗಾವಿ ಕ್ಯಾಂಪ್ ಪೊಲೀಸರ ಬಳಿ ಹೋಗಿ ತಮ್ಮ ತಾಯಿಯನ್ನು ನಮ್ಮ ಜೊತೆ ಕಳುಹಿಸಿಕೊಡಿ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ. ನಾವು ವಿದ್ಯಾಭ್ಯಾಸ ಬಿಟ್ಟು ಕೆಲಸಕ್ಕೆ ಹೋಗಿ ತಾಯಿಯನ್ನು ಸಾಕುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆಲ್ಲಾ ಮರುಗದ ನಲುವತ್ತು ವರುಷದ ತಾಯಿ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದಾಳೆ.

    Read More..; WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    ಇನ್ನು ಯುವಕ ವಿನಾಯಕ ಕೋಲ್ಕಾರ ಈ ಹಿಂದೆ ಮಹಿಳೆಯೊಬ್ಬರಿಂದ ಚಪ್ಪಲಿ ಏಟು ತಿಂದಿದ್ದನು. ಮಹಿಳೆಗೆ ಕರೆ ಮಾಡಿ ಐ ಲವ್‌ ಯೂ ಎಂದಿದ್ದನಂತೆ. ಇದರಿಂದ ಆಕ್ರೋಶಗೊಂಡ ಮಹಿಳೆ ಯುವಕನಿಗೆ ಚಪ್ಪಲಿ ಸೇವೆ ಮಾಡಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಸದ್ಯ ಯುವಕನ ಜಾಲದಲ್ಲಿ ಸಿಲುಕಿಕೊಂಡಿರುವ ಮಹಿಳೆ ತನ್ನ ಮೂರು ಮಕ್ಕಳನ್ನು ಬಿಟ್ಟು ಹಾಯಾಗಿದ್ದಾಳೆ. ಕರುಳಿನ ಕೂಗು ಆಕೆಗೆ ಕೇಳಿಸದೆ ಇರುವುದು ವಿಪರ್ಯಾಸ.

    Continue Reading

    LATEST NEWS

    Trending