Connect with us

LATEST NEWS

ಡಿಕೆಶಿಗೆ ಅಭದ್ರತೆ ಕಾಡುತ್ತಿದೆ ಹಾಗಾಗಿ ಇನ್ನೊಬ್ಬರ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ: ಸುನಿಲ್‌ ಕುಮಾರ್‌

Published

on

ಕಾರ್ಕಳ: ಡಿಕೆಶಿಗೆ ಅವರ ಪಕ್ಷದಲ್ಲಿ ಅಭದ್ರತೆ ಕಾಡುತ್ತಿರಬೇಕು. ಹಾಗಾಗಿ ಇನ್ನೊಬ್ಬರ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕರೂ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸಿಎಂ ವಿರುದ್ಧ ಜನ ಮುಗಿಬೀಳುತ್ತಾರೆ, ಅವರಿಗೆ ಭದ್ರತೆ ನೀಡಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಮುಖಂಡ ಸುನಿಲ್ ಕುಮಾರ್ ತಿರುಗೇಟು ನೀಡಿ, ಮುಖ್ಯಮಂತ್ರಿಗಳಿಗೆ ಭದ್ರತೆಯ ಸಮಸ್ಯೆಯೇ ಇಲ್ಲ ಎಂದ ಸುನಿಲ್ ಕುಮಾರ್, ಡಿಕೆಶಿ ಅವರೊಂದಿಗೆ ಸಿದ್ದರಾಮಯ್ಯ ಜೊತೆಗಿನ ಭಿನ್ನಮತ ಈಗಾಗಲೇ ಬಹಿರಂಗವಾಗಿದೆ. ಬಿಜೆಪಿ ಸರ್ಕಾರದ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಲಾವಕಾಶ ಇದೆ. ಈಗಲೇ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಶುರುವಾಗಿದೆ. ಡಿಕೆಶಿಗೆ ಆ ಅಭದ್ರತೆ ಕಾಡುತ್ತಿರಬಹುದು.ಡಿ.ಕೆ ಶಿವಕುಮಾರ್ ಗೆ ಸಿದ್ದರಾಮಯ್ಯ, ಪರಮೇಶ್ವರ್ ರನ್ನು ಕಂಡಾಗ ಅಭದ್ರತೆ ಕಾಡಬಹುದು. ಸದ್ಯ ನಮ್ಮಲ್ಲಿ ನೂರಕ್ಕೆ ನೂರು ಪ್ರತಿಶತ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು.

FILM

ಮೂಗುತಿ ಸುಂದರಿ ಮೇಲೆ ತೆಲುಗು ಹೀರೋ ಕಣ್ಣು…!

Published

on

ಮಂಗಳೂರು ( ಸ್ಯಾಂಡಲ್‌ವುಡ್‌ ) : ಸುಪರ್ ಹಿಟ್ ಕಾಂತಾರದ ಮೂಲಕ ಮೂಗುತಿ ಸುಂದರಿ ಅಂತ ಫೇಮಸ್ ಆಗಿದ್ದ ಸಪ್ತಮಿ ಗೌಡ ಮೇಲೆ ತೆಲುಗು ನಿರ್ಮಾಪಕರ ಕಣ್ಣು ಬಿದ್ದಿದೆ. ಹೀಗಾಗಿ ಸಪ್ತಮಿ ಗೌಡಗೆ ತೆಲುಗು ಸಿನೆಮಾದಲ್ಲಿ ಉತ್ತಮ ಅವಕಾಶ ನೀಡಿ ಕರೆಸಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಮೂಗುತಿ ಸುಂದರಿ ಸಪ್ತಮಿ ಗೌಡ ತೆಲುಗಿನ ‘ತಮ್ಮುಡು’ ಸಿನೆಮಾದಲ್ಲಿ ಹೀರೋ ನಿತಿನ್ ಜೊತೆ ನಟಿಸಲಿದ್ದಾರೆ.

ಕೆಲ ನಟಿಯರು ಇರೋ ಉದ್ಯಮದಲ್ಲಿ ಏನಾದರೂ ಸಾಧಿಸಿ ಬೇರೆ ಭಾಷೆಯತ್ತ ಮುಖ ಮಾಡ್ತಾರೆ. ಇನ್ನು ಕೆಲ ನಟಿಯರು ಏನಾದರೂ ಸಾಧಿಸಲೆಬೇಕು ಅಂತ ಪಕ್ಕದ ಮನೆಗಳತ್ತ ಮುಖ ಮಾಡ್ತಾರೆ. ಇದಕ್ಕೆ ಸಪ್ತಮಿಗೌಡ ಅತ್ಯುತ್ತಮ ಉದಾಹರಣೆ.ಹೌದು. ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ‘ಯುವ’ದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಕಳೆದ ನಾಲ್ಕು ವರ್ಷದಲ್ಲಿ ಪಾಪ್‌ ಕಾರ್ನ್ ಮಂಕಿ ಟೈಗರ್, ಕಾಂತಾರ, ಯುವ ಹೀಗೆ ಮೂರು ಕನ್ನಡ ಸಿನಿಮಾಗಳನ್ನ ಮಾಡಿರುವ ಸಪ್ತಮಿ ಗೌಡ, ಇದೀಗ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. `ಜಯಂ’ ಸಿನಿಮಾ ಹೀರೊ ನಿತಿನ್‌ ಅವರ ಮುಂದಿನ ಚಿತ್ರ ʻತಮ್ಮುಡುʼದಲ್ಲಿ ಸಪ್ತಮಿ ಗೌಡ ಹೀರೊಯಿನ್.

ತಮ್ಮುಡು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್‌ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ.

ಇನ್ನೂ ತಮ್ಮ ಮೊದಲ ತೆಲುಗು ಚಿತ್ರದಲ್ಲಿಯೇ ನಿತಿನ್ ಅವರಂತಹ ಪ್ರತಿಭಾವಂತ ನಟನ ಜೊತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಸಪ್ತಮಿಗೌಡ ಅವರಿಗೆ ಸಿಕ್ಕಾಪಟ್ಟೆ ಖುಷಿ ಇದೆ. ಸೋನೆ ಪೆ ಸುಹಾಗ ಅನ್ನುವಂತೆ ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸಪ್ತಮಿ ಗೌಡ ಸದ್ಯಕ್ಕೆ ಕ್ಲೌಡ್ ನೈನ್‌ ನಲ್ಲಿದ್ದಾರೆ. ಒಟ್ನಲ್ಲಿ ಕನ್ನಡದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಕನ್ನಡಿಗರ ಮನಗೆದ್ದ ಸಪ್ತಮಿ ಗೌಡ ಈಗ ಬಾಲಿವುಡ್‌ ನಂತರ ಟಾಲಿವುಡ್‌ ಕಡೆ ಹೊರಟಿದ್ದಾರೆ.

Continue Reading

LATEST NEWS

ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Published

on

ಬೆಂಗಳೂರು: ಚುನಾವಣಾ ಪ್ರಚಾರದ ವೇಳೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಕಿರಿಕ್ ಮಾಡಿಕೊಂಡಿದ್ದಾರೆ. ಠೇವಣಿದಾರರ ಸಭೆ ಕರೆದು ಸಭೇಯ ನಡುವೆ ಕಿರಿಕ್ ಮಾಡಿ ಸಭೆಯಿಂದ ಹೊರ ನಡೆದಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಕೈ ಹಿಡಿದು ಎಳೆದಿದ್ದು, ಚುನಾವಣಾ ಅಧಿಕಾರಿಗಳ  ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

thejasvi surya

READ MORE..; ಮೈದಾನ ಸ್ವಚ್ಛತೆಯಲ್ಲಿ ತೊಡಗಿದ ಒಡೆಯರ್ ದಂಪತಿ..!

ಎಪ್ರಿಲ್ 13 ರಂದು ಈ ಘಟನೆ ನಡೆದಿದ್ದು, ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿ ಸೂರ್ಯ ಕೋಪರೇಟಿವ ಬ್ಯಾಂಕ್ ಠೇವಣಿದಾರರ ಸಭೆ ಕರೆದಿದ್ದರು. ಸಭೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಠೇವಣಿದಾರರು ಕೇಳಿದ ಪ್ರಶ್ನೆ ಸರಿಯಾಗಿ ಉತ್ತರಿಸಲಾಗದೆ ತೇಜಸ್ವಿ ಸೂರ್ಯ ತಬ್ಬಿಬ್ಬಾಗಿದ್ದರು. ಹೀಗಾಗಿ ಠೇವಣಿದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿ ತೇಜಸ್ವಿ ಸೂರ್ಯ ಸಭೆಯಿಂದ ಹೊರ ನಡೆಯಲು ಮುಂದಾಗಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಸಭೆಯಲ್ಲಿದ್ದವರು ಡೌನ್ ಡೌನ್ ಎಂದು ಘೋಷಣೆ ಕೂಗಿದ್ದಾರೆ. ಅವರು ಹೊರ ಹೋಗದಂತೆ ತಡೆಯಲು ಬಂದವರನ್ನು ತಳ್ಳಿದ್ದು , ಮಹಿಳೆಯೊಬ್ಬರ ಕೈ ಹಿಡಿದು ಎಳೆದಿದ್ದಾರೆ. ಚುನಾವಣಾ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾಗಿ ಸಭೆಯಲ್ಲಿದ್ದ ಠೇವಣಿದಾರರು ಆರೋಪಿಸಿದ್ದಾರೆ.

Continue Reading

LATEST NEWS

ಜೀವನದಲ್ಲಿ ಸಂಪಾದಿಸಿದ್ದ 200 ಕೋಟಿ ಆಸ್ತಿ ದಾನ! ಕಾರಣವೇನು?

Published

on

ಅಹ್ಮದಾಬಾದ್: ಒಬ್ಬ ಸನ್ಯಾಸಿಯು ತನ್ನ ಲೌಕಿಕ ಪ್ರಪಂಚದಿಂದ ದೂರವಾಗಿ, ಏಕಾಂಗಿ ಮತ್ತು ಏಕಾಂತದಲ್ಲಿ ತನ್ನ ಜೀವನವನ್ನು ನಡೆಸಲು ಭಯಸುತ್ತಾನೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿದ್ಯಾವಂತರು ಮಾತ್ರ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸೇರಿದಂತೆ ಸಾಕಷ್ಟು ಜನರು ಸನ್ಯಾಸತ್ವದ ಕಡೆಗೆ ವಾಲುತ್ತಿದ್ದಾರೆ. ಇದೀಗ ಗುಜರಾತ್‌ನ ಉದ್ಯಮಿಯೊಬ್ಬರು ಹಾಗೂ ಅವರ ಪತ್ನಿ ತಮ್ಮ 200 ಕೋಟಿ ಆಸ್ತಿಯನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ.

ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಭಾವೇಶ್ ಭಾಯಿ ಭಂಡಾರಿ ಹಾಗೂ ಪತ್ನಿ ತಮ್ಮ ಇಡೀ ಜೀವಮಾನದಲ್ಲಿ ಗಳಿಸಿದ 200 ಕೋಟಿಗೂ ಹೆಚ್ಚು ಆಸ್ತಿಯನ್ನ ದತ್ತಿ ಸಂಸ್ಥೆಗೆ ದಾನ ನೀಡಿದ್ದಾರೆ. ಲೌಕಿಕ ಜೀವನ ತೊರೆದು ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ಭಾವೇಶ್ ಭಂಡಾರಿ ಅವರು ಗುಜರಾತ್‌ನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರು ಆಗಾಗ್ಗೆ ಜೈನ ಸಮುದಾಯದ ಮುನಿಗಳನ್ನು ಭೇಟಿಯಾಗುತ್ತಿದ್ದರು. ಇದೀಗ ಲೌಕಿಕ ಜೀವನ ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ.

ಉದ್ಯಮಿ ಭಾವೇಶ್ ಭಾಯ್ ಭಂಡಾರಿ ಯಾರು?

ಭಾವೇಶ್ ಭಾಯ್ ಭಂಡಾರಿ ಅವರು ಸಬರಕಾಂತದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದ ಯಾವುದೇ ಕಷ್ಟವನ್ನು ನೋಡದೇ ಬೆಳೆದಿದ್ದಾರೆ. ಭಾವೇಶ್ ಭಾಯ್ ಭಂಡಾರಿ ಅವರು ಕನ್ಸ್​ಟ್ರಕ್ಷನ್​ ವ್ಯವಹಾರವನ್ನು ಹೊಂದಿದ್ದು, ಅಹಮದಾಬಾದ್‌ನಲ್ಲೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದರು.

ಜೈನ ಸಮುದಾಯದತ್ತ ಒಲವು:

ಭಾವೇಶ್ ಭಾಯ್ ಭಂಡಾರಿ ಅವರ ಕುಟುಂಬ ಜೈನ ಸಮುದಾಯದತ್ತ ಒಲವು ಹೊಂದಿತ್ತು. ಆಗಾಗ್ಗೆ ಅವರ ಕುಟುಂಬವು ಜೈನ ಮುನಿಗಳನ್ನು, ದೀಕ್ಷಿಕರನ್ನ ಭೇಟಿಯಾಗುತ್ತಿತ್ತು. ಇದೀಗ ಭಾವೇಶ್, ಅವರ ಪತ್ನಿ ಜೈನ ಸಮುದಾಯಕ್ಕೆ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಈಗ ದೀಕ್ಷೆ ತೆಗೆದುಕೊಂಡ ನಂತರ ಭಿಕ್ಷಾಟನೆಯಲ್ಲಿಯೇ ಜೀವನ ಕಳೆಯಲಿದ್ದಾರೆ. ಅಷ್ಟೇ ಅಲ್ಲ, ಫ್ಯಾನ್, ಎಸಿ, ಮೊಬೈಲ್ ಫೋನ್ ಇತ್ಯಾದಿ ಎಲ್ಲ ಸೌಕರ್ಯಗಳನ್ನೂ ತ್ಯಜಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈಗ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ತಿರುಗಾಡಬೇಕಾಗುತ್ತದೆ.

ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಕ್ಷೆ ತೆಗೆದುಕೊಳ್ಳುವವರು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸಬೇಕು. ಭವೇಶ್ ಭಾಯ್ ಭಂಡಾರಿ ಅವರ ಪರಿಚಿತರಾದ ದಿಕುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದು, ಏಪ್ರಿಲ್ 22 ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.

Continue Reading

LATEST NEWS

Trending