Connect with us

DAKSHINA KANNADA

ಸುಳ್ಯ : ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ತಂದೆಯನ್ನು ಜೈಲಿಗಟ್ಟಿದ ಸುಳ್ಯ ನ್ಯಾಯಾಲಯ..!

Published

on

ಸುಳ್ಯ: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತಂದೆಯ ಮೇಲೆ ಪುತ್ತೂರು ಪೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ 5 ವರ್ಷಗಹಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂ.ದಂಡ ವಿಧಿಸಿದೆ.

ಅಪರಾಧಿ ಸುಳ್ಯ ತಾಲೂಕಿನ ಎಣ್ಣೂರು ಗ್ರಾಮದ ನಾರಾಯಣ ನಾಯ್ಕ ಎಂಬುವನಾಗಿದ್ದು ಮೇ 24, 2015ರಂದು ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು.

ಮಗಳು ಬೊಬ್ಬೆ ಹಾಕಿದಾಗ ತಾಯಿಗೆ ಎಚ್ಚರವಾಗಿದ್ದು, ಈ ವೇಳೆ ಅಪರಾಧಿ ನಾರಾಯಣ ನಾಯ್ಕ ಹೆಂಡತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ. ಈ ಕುರಿತು ಬಾಲಕಿಯ ತಾಯಿ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಅಂದಿನ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ಸತೀಶ್ ಅರೋಪಿಯ ವಿರುದ್ಧ ತನಿಖೆ ನಡೆಸಿ ಪೋಕೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪೋಕೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಅತ್ಯಾಚಾರ ಯತ್ನ ಸಾಬೀತಾದ ಹಿನ್ನೆಲೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ.

ಬಾಲಕಿಯ ತಾಯಿಗೆ ಅವಾಚ್ಯವಾಗಿ ಬೈದ ಬಗ್ಗೆ ನಾಲ್ಕು ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದ್ದಲ್ಲಿ ಪುನಃ ಒಂದು ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿದೆ.

ಆರೋಪಿಯು ಬಾಲಕಿಯ ತಾಯಿಗೆ ಹಲ್ಲೆ ಮಾಡಿದ ಬಗ್ಗೆ 4 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿವಸಗಳ ಸ್ವರೂಪದ ಶಿಕ್ಷೆ ವಿಧಿಸಲಾಗಿದೆ.

ದಂಡದ ಮೊತ್ತದಲ್ಲಿ 25,000ರೂ. ವನ್ನು ಸಂತ್ರಸ್ತ ಬಾಲಕಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಬಾಲಕಿಗೆ ಪರಿಹಾರವಾಗಿ 1 ಲಕ್ಷ ರೂ. ನೀಡುವಂತೆ ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.

ಸರ್ಕಾರದ ಪರವಾಗಿ ಪೋಕ್ಸ್ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

‘ನಾಟು ನಾಟು’ ರೀತಿಯ ಸಾಂಗ್‌..! ಕುತೂಹಲ ಮೂಡಿಸಿದ ‘ವಾರ್ 2’

Published

on

2019 ರಲ್ಲಿ ಸೂಪರ್ ಹಿಟ್ ಆಗಿದ್ದ ‘ವಾರ್’ ಸಿನೆಮಾದ ಸೆಕಂಡ್ ವರ್ಷನ್‌ ‘ವಾರ್ 2’ ತೆರೆ ಮೇಲೆ ಬರಲು ಭರದ ಸಿದ್ಧತೆ ನಡೆಸಿದೆ. ‘ವಾರ್’ ಸಿನೆಮಾದಲ್ಲಿ ‘ ಜೈ ಜೈ ಶಿವಶಂಕರ್’ ಹಾಡು ಸುಪರ್ ಹಿಟ್ ಆಗಿದ್ದು ಫ್ಯಾನ್ಸ್‌ಗಳು ಹಾಡಿಗೆ ಫಿದಾ ಆಗಿದ್ರು. ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್’ ಸಿನೆಮಾ ಬಳಿಕ ಈಗ ‘ವಾರ್‌ 2’ ರೆಡಿ ಆಗ್ತಾ ಇದೆ. ಇದರಲ್ಲಿ ಹೃತಿಕ್ ರೋಷನ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಜೊತೆಯಾಗಿದ್ದಾರೆ.

ಅದ್ಧೂರಿಯಾಗಿ ನಿರ್ಮಾಣ ಆಗ್ತಾ ಇರೋ ‘ವಾರ್ 2’ ಸಿನೆಮಾಗೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲಾಗ್ತಾ ಇದೆ. ಯಶ್‌ ರಾಜ್ ಫಿಲಂಸ್‌ ಸಂಸ್ಥೆ ಈ ‘ವಾರ್ 2’ ಸಿನೆಮಾಗೆ ಬಂಡವಾಳ ಹಾಕುತ್ತಿದೆ. ‘ವಾರ್’ ಸಿನೆಮಾದಂತೆ ಈ ಸಿನೆಮಾದಲ್ಲೂ ವಿಶೇಷ ಹಾಡನ್ನ ಸಿನೆಮಾ ತಂಡ ಪ್ಲ್ಯಾನ್ ಮಾಡಿದೆ. ಜೂನಿಯರ್ ಎನ್‌ಟಿಆರ್ ಅವರ ಆಸ್ಕರ್ ಅವಾರ್ಡ್‌ ವಿನ್ ಆಗಿದ್ದ ‘ನಾಟು ನಾಟು” ಹಾಡಿನಂತೆ ಇರೋ ಹಾಡಿಗೆ ಹೃತಿಕ್ ಹಾಗೂ ಜ್ಯೂನಿಯರ್ ಎನ್‌ಟಿಆರ್‌ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ‘ನಾಟು ನಾಟು’ ರೀತಿಯ ಹಾಡು ಹಾಗೂ ಡ್ಯಾನ್ಸ್‌ ‘ವಾರ್ 2’ ಸಿಎನಮಾದ ಹೈಲೈಟ್ ಆಗಲಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.


ಈಗಾಗಲೇ ‘ವಾರ್ 2’ ಚಿತ್ರದ ಶೂಟಿಂಗ್ ಆರಂಭವಾಗಿದೆ. ಚಿತ್ರದ ಸೆಟ್​ ಫೋಟೋಗಳು ಕೂಡಾ ಲೀಕ್ ಆಗಿವೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಚೋಪ್ರಾ ಅವರು ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ಆಗಸ್ಟ್ 14ರಂದು ರಿಲೀಸ್ ಆಗಲಿದೆ.

Continue Reading

DAKSHINA KANNADA

ಕಡಬ: ಬಿಳಿನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!

Published

on

ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.

ಅಸ್ಥಿಪಂಜರ

ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.

Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್‌:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್

Published

on

ಬಂಟ್ವಾಳ : ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಪೋರೇಟರ್‌ ಆಗಿ ಮೇಯರ್ ಆಗಿದ್ದ ಕವಿತಾ ಸನಿಲ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ಕವಿತಾ ಸನಿಲ್‌ ವಿಧಾನ ಸಭಾ ಚುನಾವಣೆಯಲ್ಲೂ ಸಾಕಷ್ಟು ಪ್ರಚಾರ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಅವರಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಕವಿತಾ ಸನಿಲ್ ಸದ್ಯ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ತನಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಪಕ್ಷ ಚಟುವಟಿಕೆಯಿಂದ ದೂರ ಉಳಿದಿದ್ದರು. ಯಾವುದಾದರು ಒಂದು ನಿಗಮ ಸಿಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾದ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಂಟ್ವಾಳಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಬಿಜೆಪಿ ಬಾವುಟ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ : ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!

Continue Reading

LATEST NEWS

Trending