Connect with us

    MANGALORE

    ಶವವಿಟ್ಟು ರಾಜಕೀಯ ಮಾಡುವ ನಾಯಕರು ನಾಪತ್ತೆ: ಸುಹೈಲ್‌ ಕಂದಕ್‌ ವಾಗ್ದಾಳಿ

    Published

    on

    ಮಂಗಳೂರು: ಬೆಳ್ಳಾರೆ ಪ್ರವೀಣ್ ಹತ್ಯೆ ಖಂಡನೀಯ. ಇಲ್ಲಿ ಶವ ಇಟ್ಟು ರಾಜಕೀಯ ಮಾಡಿದ ಎಂಪಿ, ಎಂಎಲ್‌ಎಗಳು ಕಾಣೆ ಆಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ವಾಗ್ದಾಳಿ ನಡೆಸಿದ್ದಾರೆ.


    ಮಸೂದ್‌ ಕೊಲೆಯಾದಾಗ ಮಾಧ್ಯಮಗಳು ಯರ್ರಾಬಿರ್ರಿಯಾಗಿ ರಿಪೋರ್ಟ್‌ ಮಾಡಲಿಲ್ಲ. ಆಗ ತಾಳ್ಮೆಯಿಂದ ಶಾಂತಿಯುತವಾಗಿ ಅವನನ್ನು ದಫನ ಮಾಡಿದೆವು. ಹಿಂದೂ ಸಹೋದರ ಕೊಲೆಯಾದಾಗ ಅದನ್ನು ಎರಡು ಕೋಮುಗಳ ನಡುವೆ ವಿಷಬೀಜ ಬಿತ್ತಲು ಬಿಜೆಪಿ, ಸಂಘಪರಿವಾರ ಯತ್ನಿಸುತ್ತಿದೆ.

    ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಅರೆ ಹುಚ್ಚ ಶಾಂತಿ ಕೆದಡುವ ಹತ್ಯೆಯನ್ನು ತನಿಖೆಗೂ ಮೊದಲೇ ಮುಸ್ಲಿಮರ ತಲೆಗೆ ಕಟ್ಟುವ ಯತ್ನ ನಡೆಯುತ್ತಿದೆ. ಯಾರು ಕೊಲೆಗಡುಕರು ಎಂದು ಪೊಲೀಸ್‌ ಇಲಾಖೆ ಕಂಡುಹಿಡಿಯುತ್ತದೆ. ಅದಕ್ಕೂ ಮೊದಲು ಅದನ್ನು ಮುಸ್ಲಿಂಮರ ತಲೆಗೆ ಕಟ್ಟುವುದನ್ನು ನಾನು ಖಂಡಿಸುತ್ತೇನೆ.

    ಸರಕಾರ ಎಚ್ಚೆತ್ತು, ಅವರನ್ನು ಬಂಧಿಸಬೇಕು. ಕ್ರಿಯೆಗೆ ಪ್ರತಿಕ್ರಿಯೆ ಎಂದಿದ್ದ ಸಿಎಂ ಬೊಮ್ಮಯಿ ಅಧಿಕಾರದಲ್ಲಿರುವುದಕ್ಕೆ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಕೊಲೆ ಯಾವುದೇ ಪಕ್ಷ, ಸಂಘಟನೆಯವರು ಮಾಡಿದರೆ ಅವರನ್ನು ಬಂಧಿಸಿ ಎಂದು ಆಗ್ರಹಿಸಿದರು.

    DAKSHINA KANNADA

    ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ; ಓರ್ವ ಸಾ*ವು

    Published

    on

    ಮಂಗಳೂರು/ಆನೇಕಲ್ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ ಹೊಡೆದು, ಸವಾರ ಸ್ಥಳದಲ್ಲಿಯೇ ಮೃ*ತಪಟ್ಟಿರುವ ಘಟನೆ ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಸಮೀಪದ ಸೂಳಗಿರಿ ಬಳಿ ನಡೆದಿದೆ. ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ನಿವಾಸಿ ಅರ್ಚಕ ಶ್ರೀನಿವಾಸ್ ಮೃ*ತ‌ ದುರ್ದೈವಿ.

    ದೇವಾಲಯದ ಅರ್ಚಕರಾಗಿದ್ದ ಶ್ರೀನಿವಾಸ್, ಪೂಜೆಯ ನಿಮಿತ್ತ ಬೈಕ್‌ ಮೂಲಕ ಆನೇಕಲ್‌ನಿಂದ ಹೋಗುತ್ತಿದ್ದರು. ಈ ವೇಳೆ ತಮಿಳುನಾಡಿನ ಲಾರಿಯೊಂದರ ಬ್ರೇಕ್ ಫೇಲ್ ಆಗಿ ಹೆದ್ದಾರಿಯಿಂದ ಡಿವೈಡರ್ ದಾಟಿಕೊಂಡು ಬಂದು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಶ್ರೀನಿವಾಸ್ ಅವರ ವಾಹನಕ್ಕೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲಿಯೇ ಮೃ*ತಪಟ್ಟರೆ, ರಾಘವೇಂದ್ರ ಎಂಬುವವರಿಗೆ ಗಂಭೀರ ಗಾ*ಯವಾಗಿದೆ.

    ಇದನ್ನೂ ಓದಿ : ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು

    ಅಪಘಾ*ತದ ರಭಸಕ್ಕೆ ಬೈಕ್‌ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    Continue Reading

    LATEST NEWS

    ವಾರ ಕಳೆದ್ರೂ ವೈರಲ್ ಫೀವರ್‌ ಗುಣ ಆಗ್ತಿಲ್ವಾ? ಈ ಮನೆಮದ್ದು ಪ್ರಯತ್ನಿಸಿ, ಜ್ವರದೊಂದಿಗೆ ಮೈಕೈನೋವು ಮಾಯವಾಗುತ್ತೆ

    Published

    on

    ಮಂಗಳೂರು: ಇತ್ತೀಚಿನ ದಿನಗಳಲ್ಲಿ ಯಾರ ಬಾಯಲ್ಲಿ ಕೇಳಿದರೂ ವೈರಲ್ ಜ್ವರದ್ದೇ ಮಾತು. ಒಬ್ಬರಿಂದೊಬ್ಬರಿಗೆ ಹರಡುವ ಈ ವೈರಲ್‌ ಜ್ವರದಿಂದ ಮನೆಮಂದಿಯೆಲ್ಲಾ ಸುಸ್ತಾಗಿದ್ದಾರೆ. ಆರಂಭದಲ್ಲಿ ತಲೆನೋವು, ಮೈಕೈನೋವು, ಸಣ್ಣ ಪ್ರಮಾಣದ ಜ್ವರದಿಂದ ಆರಂಭವಾಗಿ ತಿಂಗಳುಗಟ್ಟಲೆ ನಮ್ಮನ್ನು ಸುಸ್ತು ಹೊಡೆಸುತ್ತಿದೆ. ವೈರಲ್ ಜ್ವರ ನಿವಾರಣೆಗೆ ಯಾವುದೇ ಔಷಧಿಯಿಲ್ಲ. ಡೋಲೊ, ಪ್ಯಾರಸಿಟಮಾಲ್‌ನಂತಹ ಮಾತ್ರೆಗಳಿಂದಲೂ ಈ ಜ್ವರ ನಿವಾರಣೆಯಾಗುತ್ತಿಲ್ಲ.

    ವೈರಲ್ ಜ್ವರ ಕಡಿಮೆಯಾಗಲು ಮನೆಮದ್ದಿಗಿಂತ ಉತ್ತಮ ಪರಿಹಾರವಿಲ್ಲ. ಇದರ ನಿವಾರಣೆಗೆ ನಿರಂತರವಾಗಿ ಬಿಸಿ ನೀರು ಕುಡಿಯುವುದು, ವಿಶ್ರಾಂತಿ ತೆಗೆದುಕೊಳ್ಳುವುದು ಹಾಗೂ ಬಿಸಿ ಬಿಸಿ ಆಹಾರಗಳನ್ನು ಸೇವಿಸಬೇಕು. ಜೊತೆಗೆ ಈ ಮನೆಮದ್ದುಗಳನ್ನೂ ಅನುಸರಿಸಬೇಕು.

    ವೈರಲ್ ಜ್ವರ ನಿವಾರಣೆಗೆ ಇದೂ ಅವಶ್ಯ

    ಹೈಡ್ರೇಷನ್‌: ವೈರಲ್ ಜ್ವರ ನಿವಾರಣೆಗೆ ಸಾಕಷ್ಟಯ ನೀರು ಕುಡಿಯುವುದು ಬಹಳ ಮುಖ್ಯವಾಗುತ್ತದೆ.

    ಎಲೆಕ್ಟ್ರೋಲೈಟ್ ಅಂಶಗಳು: ಜ್ವರ ಬಂದಾಗ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಬಿಸಿ ನೀರಿಗೆ ಚಿಟಿಕೆ ಉಪ್ಪು ಹಾಗೂ ಸಕ್ಕರೆ ಸೇರಿಸಿ ಕುಡಿಯಬಹುದು.

    ವಿಶ್ರಾಂತಿ ಮತ್ತು ನಿದ್ರೆ: ಚೇತರಿಕೆಗೆ ವಿಶ್ರಾಂತಿ ಬಹಳ ಮುಖ್ಯ. ಇದರೊಂದಿಗೆ ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯವಾಗುತ್ತದೆ.

    ಸರಿಯಾದ ಪೋಷಣೆ: ಸೂಪ್‌ನಂತಹ ಪೋಷಕಾಂಶ ಸಮೃದ್ಧ ಆಹಾರ ಹೆಚ್ಚು ಸೇವಿಸಿ. ಮಸಾಲೆಯುಕ್ತ ಆಹಾರ ಸೇವನೆಗೆ ಕಡಿವಾಣ ಹಾಕಿ.

    ನೈರ್ಮಲ್ಯ ಕಾಪಾಡಿಕೊಳ್ಳಿ: ನಿಯಮಿತವಾಗಿ ಕೈ ತೊಳೆಯಿರಿ, ನಿಮ್ಮಿಂದ ಬೇರೆಯವರಿಗೆ ಜ್ವರ ಹರಡುವುದನ್ನು ತಪ್ಪಿಸಿ.

    ವೈರಲ್ ಜ್ವರ ನಿವಾರಣೆಗೆ ಮನೆಮದ್ದು

    ಕೊತ್ತಂಬರಿ ಚಹಾ:

    ಕೊತ್ತಂಬರಿ ಬೀಜಗಳು ಅಗತ್ಯವಾದ ಜೀವಸತ್ವಗಳು ಮತ್ತು ಪ್ರತಿಜೀವಕಗಳನ್ನು ಹೊಂದಿದ್ದು ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಕುದಿಸಿ, ಇದನ್ನು ಸೋಸಿ ಕುಡಿಯಿರಿ. ದಿನಕ್ಕೊಮ್ಮೆ ಕೊತ್ತಂಬರಿ ಚಹಾ ಕುಡಿಯುವುದು ವೈರಲ್ ಜ್ವರ ನಿವಾರಣೆಗೆ ಉತ್ತಮ.

    ತುಳಸಿ ಎಲೆಗಳು:

    ತುಳಸಿ ಶಕ್ತಿಯುತವಾದ ಬ್ಯಾಕ್ಟೀರಿಯಾ ವಿರೋಧಿ, ಕ್ರಿಮಿನಾಶಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಕಷಾಯವನ್ನು ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ.

    ಗಂಜಿ:

    ಜ್ವರ ಬಂದಾಗ ಗಂಜಿ ಸೇವಿಸುವ ಅಭ್ಯಾಸವು ಬಹಳ ಪ್ರಯೋಜನಕಾರಿ. ಇದು ಜ್ವರಕ್ಕೆ ಸಾಂಪ್ರದಾಯಿಕ ಪರಿಹಾರವಾಗಿದೆ. ಇದು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜ್ವರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ಹೊಸದಾಗಿ ತಯಾರಿಸಿದ ಅಕ್ಕಿ ಪಿಷ್ಟವನ್ನು ಕುಡಿಯಿರಿ.

    ಒಣ ಶುಂಠಿ ಕಷಾಯ:

    ಶುಂಠಿಯು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಮಿಶ್ರಣವನ್ನು ತಯಾರಿಸಲು ಒಣ ಶುಂಠಿಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಇದರಿಂದ ಜ್ವರ ಕಡಿಮೆಯಾಗುವುದು ಮಾತ್ರವಲ್ಲ, ಇತರ ರೋಗಲಕ್ಷಣಗಳು ನಿವಾರಣೆಯಾಗುತ್ತವೆ.

    ನಿಂಬೆ ಜೊತೆ ಜೇನುತುಪ್ಪ:

    ಜೇನುತುಪ್ಪ ಮತ್ತು ನಿಂಬೆಯ ಸಂಯೋಜನೆಯು ಗಂಟಲಿನ ಮೇಲೆ ಹಿತವಾದ ಪರಿಣಾಮವನ್ನು ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮತ್ತು ಮಿಶ್ರಣವನ್ನು ಕುಡಿಯಿರಿ.

    ಅಮೃತಬಳ್ಳಿ ಕಷಾಯ:

    ಗಿಲೋಯ್ ಎಂದೂ ಕರೆಯಲ್ಪಡುವ ಅಮೃತಬಳ್ಳಿ ಅಥವಾ ಗುಡುಚಿ ಒಂದು ಸಾಂಪ್ರದಾಯಿಕ ಗಿಡಮೂಲಿಕೆಯಾಗಿದ್ದು ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಗುಡುಚಿ ಕಾಂಡವನ್ನು ನೀರಿನಲ್ಲಿ ಕುದಿಸಿ ಮತ್ತು ಕಷಾಯವನ್ನು ಕುಡಿಯುವುದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ವೈರಲ್‌ ಜ್ವರ ಬಂದಾಗ ಸಾಕಷ್ಟು ವಿಶ್ರಾಂತಿ, ಉತ್ತಮ ನಿದ್ದೆ, ಬಿಸಿ ಬಿಸಿ ನೀರು ಕುಡಿಯುವ ಜೊತೆಗೆ ಈ ಮನೆಮದ್ದನ್ನು ಕೂಡ ಸೇವಿಸಬಹುದು. ಇದರಿಂದ ನಿಮ್ಮ ವೈರಲ್ ಜ್ವರ ಬೇಗನೆ ಗುಣವಾಗುತ್ತದೆ, ಮಾತ್ರವಲ್ಲ ಮೈಕೈ ನೋವು, ಶೀತದಂತಹ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.

    Continue Reading

    LATEST NEWS

    ಆಪಲ್‌ ಮೊಬೈಲ್‌ ವಿರುದ್ಧ ಗ್ರಾಹಕರ ಪ್ರತಿಭಟನೆ

    Published

    on

    ಆಪಲ್‌ ಮೊಬೈಲ್‌ ಸೆಟ್‌ ಅಪ್‌ಡೇಟ್‌ ಕೊಟ್ಟರೆ ಸ್ಕ್ರೀನ್ ನಲ್ಲಿ ಲೈನ್, ಬ್ಲ್ಯಾಂಕ್ ಸಮಸ್ಯೆ. ಈ ಸಮಸ್ಯೆಗೆ ಸ್ಪಂದಿಸುವ ಬದಲು ಸರ್ವಿಸ್ ಸೆಂಟರ್ ನವರಿಂದ ಉಡಾಫೆ ವರ್ತನೆ. ನಾಳೆ ಆಪಲ್ ಐ ಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರಿಟೇಲರ್ಸ್ ಪ್ರತಿಭಟನೆ.

    ಮಂಗಳೂರು: ಆಪಲ್ ಕಂಪೆನಿಯ ಮೊಬೈಲ್‌ ಫೋನ್‌ ಸೆಟ್‌ ನಲ್ಲಿ ಐಒಎಸ್‌ ಅಪ್‌ಡೇಟ್‌ ಮಾಡಿದಾಗ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿದ್ದು, ಈ ಸಮಸ್ಯೆಗೆ ಆಪಲ್ ನ ಸರ್ವಿಸ್ ಸೆಂಟರ್ ನವರು ಯಾವುದೇ ರೀತಿಯ ಸ್ಪಂದನೆ ನೀಡದಿರುವ ಕಾರಣ ಇದೀಗ ಮೊಬೈಲ್‌ ಫೋನ್‌ ಮಾರಾಟ ಮಾಡುವ ಮಳಿಗೆಯವರೇ ಗ್ರಾಹಕರ ಪರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

    ದ.ಕ. ಮತ್ತು ಉಡುಪಿ ಮೊಬೈಲ್ ರಿಟೈಲರ್ಸ್‌ ಅಸೋಸಿಯೇಸನಿನ ರಾಜ್ಯ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ. ಸುವರ್ಣ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಪ್ಟೆಂಬರ್‌ 17 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಜ್ಯೋತಿ ಜಂಕ್ಷನ್‌ ನಿಂದ ಹೊರಟು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಮುಂಭಾಗ ಮೂಲಕ ಸಾಗಿ ಕ್ಲಾಕ್ ಟವರ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

    ಆಪಲ್‌ ಫೋನ್‌ ಸಮಸ್ಯೆ ಬಗ್ಗೆ ಗ್ರಾಹಕರು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕೋರಿದಾಗ ಅಲ್ಲಿದ್ದವರಿಂದ ಉಡಾಫೆ ಉತ್ತರ ಲಭಿಸುತ್ತದೆ. ಇದು ಗ್ರಾಹಕರಿಗೆ ಆಘಾತ ಉಂಟು ಮಾಡಿದೆ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು. ‘ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸಲಿದ್ದಾರೆ. ಹಲವು ಮಂದಿ ನೊಂದ ಗ್ರಾಹಕರು ಕೂಡಾ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

    ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಬಂದರೆ ಫ್ಲಿಪ್ಕಾರ್ಟ್ ಅಥವಾ ಅಮೆಜಾನ್ ನಂತಹ ವಿದೇಶೀ ಕಂಪೆನಿಗಳು ಕೂಡಾ ಗ್ರಾಹಕರ ಹಿತರಕ್ಷಣೆಗೆ ನಿಲ್ಲಲಾರವು. ಕೇವಲ ಸ್ಥಳೀಯ ಅಂಗಡಿಗಳು ಮಾತ್ರ ಗ್ರಾಹಕರ ಹಿತರಕ್ಷಣೆಗೆ ಹಾಗೂ ಅವರ ಬೆಂಬಲಕ್ಕೆ ನಿಲ್ಲುವ ಪ್ರಮೇಯ ಬರಬಹುದು. ಹಾಗಾಗಿ ಮುಂದಿನ ಹಬ್ಬದ ದಿನಗಳಲ್ಲಿ ಗ್ರಾಹಕರು ಆದಷ್ಟು ಸ್ಥಳೀಯ ಅಂಗಡಿಗಳಲ್ಲಿ ಖರೀದಿಸಿ ಸ್ಥಳೀಯರನ್ನು ಬೆಂಬಲಿಸ ಬೇಕು ಎಂದು ವಿನಂತಿಸಿದರು.

    ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಚೇರ್ ಮೆನ್ ಗುರುದತ್ ಕಾಮತ್, ಅಧ್ಯಕ್ಷ ರಾಜೇಶ್ ಮಾಬಿಯಾನ್, ಕಾರ್ಯದರ್ಶಿ ಇಮ್ರಾನ್, ಸ್ಥಾಪಕ ಅಧ್ಯಕ್ಷ ಸಲೀಮ್, ಮಾಜಿ ಅಧ್ಯಕ್ಷ ಶೈಲೇಂದ್ರ ಸರಳಾಯ, ಉಪಾಧ್ಯಕ್ಷ ಅಝರ್ ಮೊಹಮದ್ ಮತ್ತಿತರರು ಉಪಸ್ಥಿತರಿದ್ದರು.

    Continue Reading

    LATEST NEWS

    Trending