LATEST NEWS
ಪರೀಕ್ಷೆ ದಿನವೇ ತಂದೆಯ ಪಿಸ್ತೂಲಿನಿಂದ ತಲೆಗೆ ಗುಂಡಿಟ್ಟು ವಿದ್ಯಾರ್ಥಿ ಆತ್ಮಹತ್ಯೆ
Published
3 years agoon
By
Adminಬೆಂಗಳೂರು: ಪರೀಕ್ಷೆಗೆ ಹಾಜರಾಗಬೇಕಿದ್ದ ದಿನವೇ ಬೆಳಿಗ್ಗೆ ವಾಕಿಂಗ್ ತೆರಳಿದ್ದ ವಿದ್ಯಾರ್ಥಿಯೊಬ್ಬ ತಂದೆಯ ಪಿಸ್ತೂಲಿನಿಂದ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಉತ್ತರಾಖಂಡ್ ಮೂಲದ ಭಗತ್ ಸಿಂಗ್ ಮತ್ತು ಬಾಬ್ನಾ ದಂಪತಿಯ ಪುತ್ರ ರಾಹುಲ್ ಭಂಡಾರಿ(17) ಮೃತ ದುರ್ದೈವಿ.
ರಾಹುಲ್ ತಂದೆ ಸೇನೆಯ ನಿವೃತ್ತ ಹವಾಲ್ದಾರ್. 20 ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿರುವ ಕುಟುಂಬ, ಆರ್.ಟಿ. ನಗರದಲ್ಲಿ ಮನೆ ಮಾಡಿಕೊಂಡು ವಾಸವಿದೆ. ಓದಿನಲ್ಲಿ ಮುಂದಿದ್ದ ರಾಹುಲ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದಿದ್ದ.
ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಇತ್ತು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ರಾಹುಲ್, ಮಾನಸಿಕ ಒತ್ತಡ ನಿವಾರಣೆಗಾಗಿ ಬೆಳಗಿನ ಜಾವ ವಾಕಿಂಗ್ ಮಾಡುವ ಹವ್ಯಾಸ ಇಟ್ಟುಕೊಂಡಿದ್ದ.
ಬೆಳಗಿನ ಜಾವ 4ರ ಸಮಯದಲ್ಲಿ ಎಂದಿನಂತೆ ಮನೆಯಿಂದ ಹೊರ ಬಂದಿದ್ದ. ಸಮಯ 6 ಆದರೂ ಮಗ ವಾಪಸ್ ಮನೆಗೆ ಬಂದಿರಲಿಲ್ಲ.
ಅವನ ಮೊಬೈಲ್ಗೆ ಪಾಲಕರು ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಅಷ್ಟೊತ್ತಿಗೆ ಸಂಜಯನಗರ ಮುಖ್ಯರಸ್ತೆಯ ಬಸ್ ನಿಲ್ದಾಣ ಬಳಿ ತಲೆಗೆ ಗುಂಡೇಟು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಇರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.
ರಾಹುಲ್ ಜೇಬಿನಲ್ಲಿದ್ದ ಮೊಬೈಲ್ ರಿಂಗಣಿಸುತ್ತಲೇ ಇತ್ತು.
ಪೊಲೀಸರು ಕರೆ ಸ್ವೀಕರಿಸುತ್ತಿದ್ದಂತೆ, ಎಲ್ಲಿದ್ದೀಯ ಮಗನೇ? ಇಷ್ಟೊತ್ತಾದರೂ ಏಕೆ ಮನೆಗೆ ಬಂದಿಲ್ಲ? ಎಂದು ಪಾಲಕರು ಕೇಳಿದ್ದು, ಅದಕ್ಕುತ್ತರಿಸಿದ ಪೊಲೀಸರು ಮಗನ ಸಾವಿನ ಬಗ್ಗೆ ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು.
ರಾಹುಲ್ನ ಅಕ್ಕ, ನನ್ನ ತಮ್ಮನಿಗೆ ಏನೂ ಆಗಿಲ್ಲ. ಎದ್ದೇಳು ರಾಹುಲ್ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಂದೆಯ ಪಿಸ್ತೂಲ್ನಿಂದಲೇ ಗುಂಡು ಹಾರಿಸಿಕೊಂಡು ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್
ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು ಎಂದು ಸದಾಶಿವನಗರ ಡಿಸಿಪಿ ಅನುಚೇತ್ ಹೇಳಿದ್ದಾರೆ. ಆರ್ಮಿ ಸ್ಕೂಲ್ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಆತ್ಮಹತ್ಯೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್, ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ 17 ವರ್ಷದ ಯುವಕ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಇಂಡಿಯನ್ ಏರ್ ಫೋರ್ಸ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಆದರೆ ನಾವು ಈ ಕುರಿತು ಪ್ರಾಥಮಿಕ ತನಿಖೆ ನಂತರವೇ ಮಾಡದೇ ಏನನ್ನು ಹೇಳಲಾಗುತ್ತಿಲ್ಲ. ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ ಒಂದು ಸಿಂಗಲ್ ಬುಲೆಟ್ ತಲೆಯ ಬಲಭಾಗದಿಂದ ನುಗಿ ಎಡಭಾಗದಿಂದ ಬಿದ್ದಿದೆ ಎಂದು ತಿಳಿಸಿದ್ದಾರೆ. ಪರಿಶೀಲಿಸಿದಾಗ ನಮಗೆ ಇಂಡಿಯನ್ ಫ್ಯಾಕ್ಟರಿ ಮೇಡ್ ಪಿಸ್ತೂಲ್ ಸಿಕ್ಕಿದೆ. ಆ ಪಿಸ್ತೂಲ್‍ಗೆ ರಾಹುಲ್ ತಂದೆಯ ಪರವಾನಗಿ ಇದೆ ಎಂದು ತಿಳಿದುಬಂದಿದೆ. ರಾಹುಲ್ ಸುಮಾರು ಬೆಳಗ್ಗೆ 3.30ಗೆ ಅವನ ಮನೆಯಿಂದ ಹೊರಟು ಈ ಕಡೆ ಬಂದಿದ್ದಾನೆ. ಗಂಗೆನಹಳ್ಳಿಯಲ್ಲಿ ಈತನ ಮನೆ ಇರುವುದು ತಿಳಿದುಬಂದಿದ್ದು, ತಂದೆ, ತಾಯಿ ಮತ್ತು ಅಕ್ಕನ ಜೊತೆ ಇದ್ದ ಎಂದು ತಿಳಿದುಬಂದಿದೆ. ಅವನು ಸ್ವಯಂ ಪ್ರೇರಣೆಯಿಂದ ಈ ಕೃತ್ಯ ಮಾಡಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದಿದ್ದಾರೆ..
ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ ಈಗ, 9ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಹೊಸ ಟಾಸ್ಕ್ ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಅದುವೇ ಬಿಗ್ ಬಾಸ್ ಸಾಮ್ರಾಜ್ಯ. ಈ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವತಾರಕ್ಕೆ, ಇನ್ನುಳಿದ ಸ್ಪರ್ಧಿಗಳು ಸುಸ್ತಾಗಿದ್ದಾರೆ.
ಮಹಾರಾಜನಾಗಿರುವ ಉಗ್ರಂ ಮಂಜು ಆಸ್ಥಾನದಲ್ಲಿ, ಪ್ರಜೆಗಳೆಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವಾರ ಮಂಜು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗಾಗೀ ಮಹಾರಾಜನಾಗಿ ಮೆರೆಯುವ ಅವಕಾಶ ಸಿಕ್ಕಿದೆ. ಮಂಜು ಅವರ ಸಾಮ್ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆಯನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಮಾತ್ರ ಎಂಟ್ರಿ ; ಪುರುಷರು ಈ ಪಬ್‌ಗೆ ಬರುವಂತಿಲ್ಲ !!
ಇನ್ನೂ ದೊಡ್ಮನೆಯಲ್ಲಿ ಯಾವಾಗಲೂ ಸೌಂಡ್ ಮಾಡುತ್ತಿದ್ದ ಚೈತ್ರಾ ಅವರ ಬಾಯಿಗೆ ಆಲೂಗಡ್ಡೆ ತುರುಕುವಂತೆ ಮಹಾರಾಜರು ಆದೇಶಿಸಿದ್ದಾರೆ. ಮಹಾರಾಜರ ಅಪ್ಪನೆಯಂತೆ ಬಾಯಲ್ಲಿ ಆಲೂಗಡ್ಡೆ ಇಟ್ಟುಕೊಂಡಿದ್ದ ಚೈತ್ರಾ ಕೆಲಹೊತ್ತು ಸುಮ್ಮನೆ ಕೂತಿದ್ದರು. ನಂತರ ಇದನ್ನು ನಾನು ಖಂಡಿಸುತ್ತೇನೆ ಎಂದು ಸೌಂಡ್ ಮಾಡೋಕೆ ಪ್ರಾರಂಭಿಸಿದರು.
ಒಟ್ಟಿನಲ್ಲಿ ಮಂಜು ಅವರ ಆಡಳಿತಕ್ಕೆ ಪ್ರಜೆಗಳು ಉಸಿರಾಡುವುದಕ್ಕೂ ಭಯ ಪಡುತ್ತಿದ್ದಾರೆ. ಅಷ್ಟಕ್ಕೂ ಮಂಜು ಆಡಳಿತ ಇಂದಿನ ಸಂಚಿಕೆಯಲ್ಲಿ ನೋಡಬಹುದು.
DAKSHINA KANNADA
ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ; 166 ಜೊತೆ ಕೋಣಗಳು ಭಾಗಿ
Published
2 hours agoon
25/11/2024By
NEWS DESK4ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್ 22 ಮತ್ತು 23 ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.
ಪ್ರಶಸ್ತಿ ವಿವರ :
ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.
ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಇದನ್ನೂ ಓದಿ: WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
LATEST NEWS
ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ
Published
3 hours agoon
25/11/2024By
NEWS DESK4ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.
ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
LATEST NEWS
ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !
WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
ಮಸ್ಕತ್ ನಲ್ಲಿ ಬಿರುವ ಜವನೆರ್ ಸಂಯೋಜನೆಯ ಕ್ರೀಡಾಕೂಟ
ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !
ಕಾಮೆಂಟ್ ಮೂಲಕ ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನ: ದೂರು ದಾಖಲು
ಬಿಗ್ ಬಾಸ್ ನಿಂದ ಧರ್ಮ ಎಲಿಮಿನೆಟ್ ಆಗಿದ್ದು ಯಾಕೆ ಗೊತ್ತಾ ?
Trending
- LATEST NEWS5 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru3 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION4 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS2 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!