Connect with us

FILM

‘ಸ್ಟೂಡೆಂಟ್ ಲೈಫ್ ಮೆಮೊರೆಬಲ್’  ಹಳೇ ಫೋಟೋ ಹಂಚಿಕೊಂಡ ಕರಾವಳಿ ಬೆಡಗಿ ‘ಅನುಶ್ರೀ’..!

Published

on

ನಟಿ ಕಂ ನಿರೂಪಕಿ ಅನುಶ್ರೀ ಅವರು ಸ್ಪೂಡೆಂಟ್ ಲೈಫ್ ಇಸ್ ಗೋಲ್ಡ್ ಲೈಫ್ ಅಂತಾ ತಮ್ಮ ಸ್ಟೂಡೆಂಟ್ ಲೈಫ್ ಬಗ್ಗೆ ಮೆಮೊರೇಬಲ್ ಫೋಟೋ ಶೇರ್ ಮಾಡಿದ್ದಾರೆ.

ಬೆಂಗಳೂರು : ಕನ್ನಡದ ಬೆಸ್ಟ್ ನಿರೂಪಕಿಯಾಗಿ ಹೆಸರು ಗಳಿಸಿರುವ ಕರಾವಳಿಯ ಬೆಡಗಿ ಅನುಶ್ರೀ (Anushree) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿ ಇರುತ್ತಲೇ ಇರುತ್ತಾರೆ ಅಂದ್ರೆ ತಪ್ಪಲ್ಲ.

ಇದೀಗ ನಟಿ ಕಂ ನಿರೂಪಕಿ ಅನುಶ್ರೀ ಅವರು ಸ್ಪೂಡೆಂಟ್ ಲೈಫ್ ಇಸ್ ಗೋಲ್ಡ್ ಲೈಫ್ ಅಂತಾ ತಮ್ಮ ಸ್ಟೂಡೆಂಟ್ ಲೈಫ್ ಬಗ್ಗೆ ಮೆಮೊರೇಬಲ್ ಫೋಟೋ ಶೇರ್ ಮಾಡಿದ್ದಾರೆ.

ಸದ್ಯ ಕಿರುತೆರೆ ರಿಯಾಲಿಟಿ ಶೋನ ನಿರೂಪಣೆಯ ಮೂಲಕ ಅಭಿಮಾನಿಗಳನ್ನ ಹೆಚ್ಚೆಚ್ಚು ಗಮನ ಸೆಳೆಯುತ್ತಿದ್ದಾರೆ ಅನುಶ್ರೀ.

ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಇವರ ನಿರೂಪಣೆನೇ ಬೇಕು ಎಂಬಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದ್ದಾರೆ ಕುಡ್ಲದ ಪೊಣ್ಣು.

ತಮ್ಮ ಸ್ಕೂಲ್, ಕಾಲೇಜು ಲೈಫ್‌ ಅನ್ನು ಮಂಗಳೂರಿನಲ್ಲೇ ಖುಶಿಯಿಂದ ಕಳೆದ ಅನುಶ್ರೀ ತನ್ನ ನಿರೂಪಣೆಯ ಕೇರಿಯರ್ ಆರಂಭಿಸಿದ್ದು ನಮ್ಮ ಟಿವಿ ಚಾನೆಲ್ ಮೂಲಕ . ಬಳಿಕ ಬೆಂಗಳೂರು ಎಂದ ಕಡಲಿಗೆ ಧುಮುಕಿದ ಅನುಶ್ರೀ ಅವರು ಸಾಧನೆಯ ಶಿಖರ ಏರಲು ಪಟ್ಟ ಶ್ರಮ ಅಪಾರ.

ಕರಾವಳಿ ಹುಡುಗಿ ಎಂಬ ವಿಚಾರದಲ್ಲಿ ಅವರ ಕಾಲೆಳೆದವರು ಹಲವು ಮಂದಿ ಯಾದರೂ ಇದೆಲ್ಲವನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಿ ಇದೀಗ ಯಶಸ್ವಿ ಜನಮಾನಸದಲ್ಲಿ ಉಳಿಯುವ ನಿರೂಪಕಿಯಾಗಿ ಅನುಶ್ರೀಯವರು ಬೆಳೆದಿದ್ದಾರೆ.

ಇದೀಗ ತಮ್ಮ ಸ್ಟೂಡೆಂಟ್ ಲೈಫ್ ಬಗ್ಗೆ ಅನುಶ್ರೀ ಮೆಲುಕು ಹಾಕಿದ್ದಾರೆ.

ವಿದ್ಯಾರ್ಥಿಯಾಗಿದಾಗಿ ಐಡಿ ಫೋಟೋ ಶೇರ್ ಮಾಡಿ ಈ ಹುಡುಗಿ ಯಾರು ಗೊತ್ತಾ ಅಂತಾ ಕೇಳಿದ್ದಾರೆ.

ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಅಂತಾರೆ. ನಿಜ ಬೆಲೆ ಕಟ್ಟಲು ಅಸಾಧ್ಯ.. ನಿಮ್ಮ ಸ್ಪೂಡೆಂಟ್ ಲೈಫ್ ಹೇಗಿತ್ತು ಅಂತಾ ನಟಿ ಕೇಳಿದ್ದಾರೆ. ಈ ಪೋಸ್ಟ್ ಶೇರ್ ಮಾಡ್ತಿದ್ದಂತೆ, ನೆಟ್ಟಿಗರು ಕಾಮೆಂಟ್ಸ್‌ಗಳು ಹರಿದು ಬರುತ್ತಿದೆ.

bengaluru

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!

Published

on

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಖ್ಯಾತ ನಟ ವಿಜಯ ರಾಘವೇಂದ್ರ ಸೆ.24ರಂದು ಭೇಟಿ ನೀಡಿದರು.

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ ರಾಘವೇಂದ್ರ ಅವರು ಭೇಟಿ ನೀಡಿದರು.


ಬಳಿಕ ತಾಯಿ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.

ಈ ಸಂದರ್ಭ ದೇವಳದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಗೌರವಿಸಲಾಯಿತು.


ಈ ಹಿಂದೆ ಯಾವತ್ತೂ ನಟ ರಾಘು ಕಟೀಲು ಕ್ಷೇತ್ರಕ್ಕೆ ಪತ್ನಿ ಸ್ಪಂದನ ಜೊತೆ ಭೇಟಿ ನೀಡುತ್ತಿದ್ದರು.

ಆದರೆ ಈ ಬಾರಿ ಪತ್ನಿಯ ಅಗಲಿಕೆಯ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ನಟ ಭೇಟಿ ನೀಡಿದ್ದು, ಮುಖದಲ್ಲಿ ಪತ್ನಿಯ ಅಗಲಿಕೆಯ ನೋವು ಕಂಡು ಬರ್ತಾ ಇತ್ತು.

Continue Reading

bangalore

ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?

Published

on

ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್  ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು. ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ. 

 

ಬೆಂಗಳೂರು : ಸದ್ಯ ರಕ್ಷಿತ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಅವರ ಸಿನೆಮಾ ಸಪ್ತ ಸಾಗರಾದಾಚೆ ಅಂತೂ ಹೆವ್ವಿ ಸೌಂಡ್ ಮಾಡ್ತಿದ್ದು, ನೆರೆಯ ಭಾಷೆಗಳಿಗೂ ರಿಮೇಕ್ ಆಗಿ ಜನರ ಮನಸ್ಸು ಗೆದ್ದಿದೆ.


ಈ ನಡುವೆ ರಕ್ಷಿತ್ ಶೆಟ್ಟಿ ಮತ್ತೆ ಲವ್ವಲ್ಲಿ ಬಿದ್ರಾ ಅನ್ನೋ ಗುಮಾನಿ ಕೂಡ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ ಚರ್ಚೆಯಾಗುತ್ತಿದೆ.

ರಕ್ಷಿತ್ ಶೆಟ್ಟಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಹುಡುಗೀನ ನೋಡಿ ನಕ್ಕಿದ್ರೂ ಅದು ಬಿಗ್ ಹೆಡ್ ಲೈನ್ ಆಗಿ ಬಿಡುತ್ತೆ.

ಇದೀಗ ನೆಟ್ಟಿಗರು ಎಷ್ಟು ಸ್ಮಾರ್ಟ್ ಆಗಿದ್ದಾರೆ  ಅಂದ್ರೆ 4-5 ವರ್ಷಗಳ ಹಿಂದಿನ ರಕ್ಷಿತ್ ಶೆಟ್ಟಿ ಫೋಟೋ ಹುಡುಕಿ ಈಗ ಸ್ವೀಟ್ ಮೀಮ್ಸ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಡುತ್ತಿದ್ದಾರೆ.

ಹೌದು! ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್  ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು.

ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ.

ಅಂದು ಪಕ್ಕದಲ್ಲಿ ರಶ್ಮಿಕ ಮಂದಣ್ಣ ಇದ್ರೆ ಇಂದು ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.

ರೊಮ್ಯಾಂಟಿಕ್ ಆಕ್ಷನ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಮತ್ತು ರಕ್ಮಿಣಿ ವಸಂತ್ ನಟಿಸಿದ್ದು , ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಾಕಷ್ಟು ಪ್ರೆಸ್‌ಮೀಟ್ ಮತ್ತು ಸಕ್ಸಸ್ ಮೀಟ್ ಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳೋದು ಮಾಮೂಲು.

ಆದ್ರೆ ಕಿರಿಕ್ ಪಾರ್ಟಿ ಟೈಮಲ್ಲಿ ಹಾಕಿದ ಬಟ್ಟೆಯನ್ನೇ ಇದೀಗ ಮತ್ತೆ ಶೆಟ್ರು ರಿಪೀಟ್ ಮಾಡಿರೋದನ್ನ ನೋಡಿ ಶೆಟ್ರು ಸೋ ಸಿಂಪಲ್ ಅಂತಿದ್ದಾರೆ.

ಒಟ್ನಲ್ಲಿ ಇದನ್ನು ನೋಡಿದ ನೆಟ್ಟಿಗರು ಹುಡುಗಿ ಚೇಂಜ್ ಆದ್ರೂ  ಡ್ರೆಸ್ ಇನ್ನೂ ಚೇಂಜ್ ಆಗಿಲ್ಲ ಅಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ ಅಂದು ರಕ್ಷಿತ್ ಶೆಟ್ಟಿ ಹಾಕಿದ ಶರ್ಟಿಗೂ ಈಗ ವೈರಲ್ ಆಗುತ್ತಿರುವ ಶರ್ಟಿಗೂ ವ್ಯತ್ಯಾಸ ಇರೋದಂತೂ ಅಕ್ಷರಶಃ ಸತ್ಯ.

 

Continue Reading

bangalore

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಡೇಟ್ ಫಿಕ್ಸ್…

Published

on

ಬೆಂಗಳೂರು : ಕೊನೆಗೂ ಕನ್ನಡ ಕಿರುತೆರೆಯ ವೀಕ್ಷಕರು ಕಾಯುತ್ತಿದ್ದ ಕನ್ನಡದ ಬಿಗ್ ಬಾಸ್ ಸೀಸನ್ 10 ಶೋ ಕುರಿತ ಬಿಗ್ ಅಪ್ ಡೇಟ್ ಸಿಕ್ಕಿದ್ದು, ಅಕ್ಟೋಬರ್ 7 ಮತ್ತು 8 ರಂದು ಎರಡು ದಿನಗಳ ಕಾಲ ಪ್ರವೇಶದ ಸಂಚಿಕೆಗಳು ಪ್ರಸಾರವಾಗಲಿದೆ.

ಕಿಚ್ಚ ಸುದೀಪ್ ನಿರಂತರವಾಗಿ ಹೋಸ್ಟ್ ಮಾಡಿಕೊಂಡು ಬಂದಿರುವ ಬಿಗ್ ಬಾಸ್ ಕನ್ನಡ ರಿಲಯಾಲಿಟಿ ಶೋ ಈ ಬಾರಿ ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ.

ಸಿನೆಮಾ, ರಾಜಕೀಯ, ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿ ಸುದ್ದಿಯಾದವರನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡ್ಬೋದು ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ,ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಸೀರಿಯಲ್ ನಟಿ ನಮ್ರತಾ ಗೌಡ, ರೀಲ್ಸ್ ಮಾಡುತ್ತಾ ಜನಪ್ರಿಯತೆ ಪಡೆದ ಭೂಮಿ ಬಸವರಾಜ್ ಸೇರಿದಂತೆ, ಬುಲೆಟ್ಪ್ರಕಾಶ್ ಪುತ್ರ ರಕ್ಷಕ್,

ಲಕ್ಷ್ಮಣ ಧಾರವಾಹಿ ನಟಿ ಸುಕೃತ ನಾಗ್, ಗೀತಾ ಸೀರಿಯಲ್ ನ ಪ್ರಮುಖ ಪಾತ್ರಧಾರಿ ಭವ್ಯಾ ಗೌಡ, ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ಸುದ್ದಿ ಹರಿದಾಡಿಸಿ ಸುದ್ದಿಯಾದ ವರುಣ್ -ವರ್ಷಾ ಹೆಸರು ಕೂಡ ಬಿಗ್ ಬಾಸ್ ರೇಸ್ ನಲ್ಲಿದೆ.


ಇದೀಗ ಅಧಿಕೃತವಾಗಿ ವಾಹಿನಿ ಪ್ರೋಮೋ ವೊಂದನ್ನು ರಿಲೀಸ್ ಮಾಡಿದ್ದು, ಬಿಗ್ ಬಾಸ್ 10ರ ಶೋಗೆ ಕ್ಷಣಗಣನೆ ಶುರುವಾಗಿದೆ.

ಅ.7 ಮತ್ತು 8 ರಂದು ಎರಡು ದಿನಗಳ ಕಾಲ ಪ್ರವೇಶದ ಸಂಚಿಕೆಗಳು ಪ್ರಸಾರವಾಗಲಿದ್ದು, ಅ. 9ರಿಂದ ಬಿಗ್ ಬಾಸ್ ಮನೆಯಲ್ಲಿ ನಿಜವಾದ ಆಟ ಶುರುವಾಗಲಿದೆ.

Continue Reading

LATEST NEWS

Trending