LATEST NEWS
ಶಾಲಾ ಆವರಣದಲ್ಲಿರುವ ಸರಸ್ವತಿ ಮೂರ್ತಿ ಧ್ವಂಸ
Published
3 years agoon
By
Adminಚಿಕ್ಕೋಡಿ: ಬೆಳಗಾವಿಯಲ್ಲಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾರ್ಥಮಿಕ ಶಾಲೆ ಆವರಣದಲ್ಲಿರುವ ಸರಸ್ವತಿ ಮೂರ್ತಿಯನ್ನು ಧ್ವಂಸಗೊಳಿಸಲಾಗಿದೆ.
ಯಾರೋ ಕಿಡಿಗೇಡಿಗಳು ಮೂರ್ತಿಗೆ ಹಾನಿ ಮಾಡಿ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಲೂಕಿನಚಿಂಚನಿ ಗ್ರಾಮದ ಶಾಲಾ ಆವರಣದಲ್ಲಿರುವ ವಿದ್ಯಾದೇವತೆ ಸರಸ್ವತಿ ದೇವಿ ಮೂರ್ತಿಯನ್ನು ಧ್ವಂಸಗೊಳಿಸಲಾಗಿದೆ.
ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಇತ್ತ ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಪೊಲೀಸರು, ಶಾಲೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಕಿಡಿಗೇಡಿಗಳು ಸರಸ್ವತಿ ದೇವಿ ಮೂರ್ತಿಯ ಕೈ, ಗಿಟಾರ್ ಸೇರಿದಂತೆ ದೇವಿಯ ಮೂರ್ತಿಗೆ ಹಾನಿ ಮಾಡಿದ್ದಾರೆ.
ಈ ಘಟನೆ ಶಾಲಾ ಅವಧಿ ಮುಗಿದ್ಮೇಲೆ ನಡೆದಿದ್ದು ಎನ್ನಲಾಗಿದೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು/ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ಜನವರಿ 13 ಕ್ಕೆ ಆರಂಭವಾಗಿದ್ದು, ಫೆಬ್ರುವರಿ 26ರ ತನಕ ನಡೆಯಲಿದೆ. ಮಹಾ ಕುಂಭಮೇಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಅಪಾರವಾದ ನಂಬಿಕೆ, ಶ್ರದ್ಧೆಯು ಸಂಕೇತವಾಗಿದೆ. ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ. ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳ ಬಹಳ ವಿಶೇಷವಾಗಿದ್ದು, 114 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ದೇಶದ ನಾಗಾಸಾಧುಗಳು ಆಗಮಿಸಿದ್ದು, ಇದೀಗ ಮಹಿಳಾ ನಾಗಾಸಾಧುಗಳು ಬಹಳ ವಿಶೇಷವಾಗಿ ಆಕರ್ಷಣೀಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದು, ಅವರು ಕುಟುಂಬ ಮತ್ತು ಭೌತಿಕ ಆಸ್ತಿಗಳ ಜೊತೆಗೆ ತಮ್ಮ ಎಲ್ಲಾ ಬಾಂಧವ್ಯಗಳನ್ನು ಕಡಿದು, ತಪಸ್ಸಿನ ಜೀವನವನ್ನು ಸ್ವೀಕರಿಸುತ್ತಾರೆ. ನಾಗಾ ಸಾಧ್ವಿಗಳಿಗೆ ನೀಡುವ ದೀಕ್ಷಾ ಪ್ರಕ್ರಿಯೆಯೂ ಪುರುಷರಿಗೆ ನೀಡುವುದರಷ್ಟೇ ಕಠಿಣವಾಗಿದೆ. ಅವರು ತಮ್ಮ ಗುರುಗಳಿಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಬೇಕು. ಗುರು ಆಕೆಯನ್ನು ಒಪ್ಪಿಕೊಳ್ಳುವ ಮೊದಲು ತೀವ್ರವಾದ ಆಧ್ಯಾತ್ಮಿಕ ಪರೀಕ್ಷೆಗಳು ಮತ್ತು ತರಬೇತಿಗಳಿಗೆ ಒಳಗಾಗಬೇಕು. ಆಧ್ಯಾತ್ಮಿಕ ಅನ್ವೇಷಣೆಗಾಗಿ ತಮ್ಮ ಲೌಕಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ. ಅವರು ತಮ್ಮ ಹಿಂದಿನ ಜೀವನದಿಂದ ಎಲ್ಲವನ್ನೂ ಬಿಟ್ಟು ಆಧ್ಯಾತ್ಮಿಕ ಮಾರ್ಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸ್ತ್ರೀ ನಾಗಾಸಾಧುಗಳು ವಿರಕ್ತ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಸಂಸಾರ, ದಾಂಪತ್ಯದ ಕಡೆಗೆ ಇವರು ಹೊರಳುವಂತಿಲ್ಲ. ಹಾಗೆ ಹೋದರೆ ಅವರನ್ನು ನಾಗಾ ಪಂಥದಿಂದ ತೆಗೆಯುಲಾಗುತ್ತದೆ.
ನಾಗಾ ಸಾಧ್ವಿಗಳು ಆಂತರಿಕವಾಗಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಯಾಕೆಂದರೆ ಪುರುಷರಿಗಿಂತ ಇವರ ಹಾರ್ಮೋನುಗಳು ದೇಹದಲ್ಲಿ ಈ ಕಠಿಣ ವ್ರತಗಳ ಸಂದರ್ಭದಲ್ಲಿ ಯದ್ವಾತದ್ವಾ ವರ್ತಿಸುತ್ತವೆ. ಜೊತೆಗೆ, ಇವರು ಆಕರ್ಷಕವಾಗಿದ್ದರೆ, ಇತರ ಪುರುಷರ ಅಥವಾ ನಾಗಾ ಸಾಧುಗಳ ವೇಷದಲ್ಲಿರುವ ದುರುಳರ ಕಣ್ಣು ಕೂಡ ಇವರ ಮೇಲೆ ಬಿದ್ದು ಅನಾಹುತ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಪರಿಪಕ್ವ ನಾಗಾ ಸಾಧ್ವಿಗಳು ತಮ್ಮ ಕಠೋರವಾದ ದೃಷ್ಟಿ ಮಾತ್ರದಿಂದಲೇ ದುಷ್ಟರನ್ನು ಹಿಮ್ಮೆಟ್ಟಿಸಬಲ್ಲರು. ದೀಕ್ಷೆಗೆ ಮುನ್ನ ನಾಗಾ ಸಾಧ್ವಿಗಳು ಆರರಿಂದ ಹನ್ನೆರಡು ವರ್ಷಗಳ ಕಾಲ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. ಅವರು ತಮ್ಮ ಸಾಧನೆ ಅಥವಾ ತೀವ್ರವಾದ ತಪಸ್ಸಿನ ಸಮಯದಲ್ಲಿ ಸಾಮಾನ್ಯವಾಗಿ ಗುಹೆಗಳು, ಕಾಡುಗಳು ಅಥವಾ ಪರ್ವತಗಳಂತಹ ಪ್ರತ್ಯೇಕ ಸ್ಥಳಗಳಲ್ಲಿ ವಾಸವಿರಬೇಕಾಗುತ್ತದೆ. ಸಾಮಾನ್ಯವಾಗಿ ನಾಗಾ ಸಾಧ್ವಿಗಳು ಅಖಾಡಗಳು ಅಥವಾ ಸನ್ಯಾಸಿಗಳಿರುವ ಆಶ್ರಮಗಳಲ್ಲಿ ವಾಸಿಸುತ್ತಾರೆ. ಪುರುಷ ನಾಗಾ ಸಾಧುಗಳು ಮೈಮೇಲೆ ಒಂದೆಳೆ ಬಟ್ಟೆಯಿಲ್ಲದೆ ಓಡಾಡಬಲ್ಲರು. ಆದರೆ ಸಾಧ್ವಿಗಳು ಹಾಗೆ ಮಾಡಲಾರರು. ಯಾಕೆಂದರೆ ಸಮಾಜ ಅವರನ್ನು ಹಾಗೆ ಒಪ್ಪಿಕೊಳ್ಳಲಾರದು. ಬದಲಾಗಿ ಅವರು “ಗಂಟಿ” ಎಂದು ಕರೆಯಲ್ಪಡುವ ಕುಂಕುಮ ಬಣ್ಣದ ಬಟ್ಟೆಯನ್ನು ಧರಿಸಬೇಕು. ತಲೆಕೂದಲು ಕತ್ತರಿಸದೆ ಜಟೆ ಬಿಟ್ಟಿರಬೇಕು. ಹಣೆಯ ಮೇಲಿನ ವಿಶಿಷ್ಟ ತಿಲಕದಿಂದ ಸಾಧ್ವಿಗಳೆಂದು ಗುರುತಿಸಲ್ಪಡುತ್ತಾರೆ.
ಮಹಿಳೆಯರು ಸನ್ಯಾಸ ಸ್ವೀಕಾರ ಆಚರಣೆಯ ಭಾಗವಾಗಿ ತಮ್ಮದೇ ‘ಪಿಂಡದಾನ’ವನ್ನು ಮಾಡಬೇಕು. ಸಾಮಾನ್ಯವಾಗಿ ಇದು ಮರಣದ ನಂತರ ನಡೆಸಲಾಗುವ ಸಾಂಪ್ರದಾಯಿಕ ಆಚರಣೆ. ಇದು ಅವರ ಹಿಂದಿನ ಜೀವನದ ಅಂತ್ಯ ಮತ್ತು ಸನ್ಯಾಸಿಗಳಾಗಿ ಅವರ ಪುನರ್ಜನ್ಮವನ್ನು ಸಂಕೇತಿಸುತ್ತದೆ. ನಾಗಾ ಸಾಧ್ವಿಗಳು ನಾಗಾ ಸಮುದಾಯದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುತ್ತಾರೆ. ಅವರನ್ನು “ಮಾತಾ” (ತಾಯಿ) ಎಂದು ಸಂಬೋಧಿಸಲಾಗುತ್ತದೆ. ನಾಗಾ ಸಾಧ್ವಿಗಳು ತಮ್ಮ ಅಸಾಧಾರಣ ಆಧ್ಯಾತ್ಮಿಕ ಶಕ್ತಿ ಮತ್ತು ಕಠಿಣವಾದ ವ್ರತಗಳಿಗಾಗಿ ಖ್ಯಾತರಾಗಿದ್ದಾರೆ. ಮಹಾ ಕುಂಭಮೇಳದಲ್ಲಿ ಅವರ ಉಪಸ್ಥಿತಿಯನ್ನು ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಇವರು ಎಲ್ಲರ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ-ಸಾಕ್ಷಾತ್ಕಾರದ ಪ್ರಾಮುಖ್ಯತೆಯನ್ನು ನೆನಪಿಸುವವರಂತೆ ಕಾರ್ಯನಿರ್ವಹಿಸುತ್ತಾರೆ.
DAKSHINA KANNADA
ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?
Published
31 minutes agoon
15/01/2025By
NEWS DESK3ಮಂಗಳೂರು/ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಆಗಿದ್ದು, ಇನ್ನೂ ಮುಂದಿನ 2 ದಿನ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ಅಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸಮಭಾಜಕ ವೃತ್ತದ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ
ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ?
ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜನವರಿ 20 ರವರೆಗೂ ಇದೇ ಹವಾಮಾನ ಮುಂದುವರಿಯಲಿದೆ.
ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿ.ಸೆ ಮತ್ತು 20 ಡಿ. ಸೆ ಇರುವ ಸಾಧ್ಯತೆ ಇದ್ದು, ನಾಳೆಯೂ ಹೀಗೆ ಇರಲಿದೆ.
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 14.6 ಡಿ. ಸೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 32.8 ಡಿ. ಸೆ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇನ್ನೆರಡು ದಿನ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ.
ಮಂಗಳೂರು : ದೇಶದ ಗಡಿಯಲ್ಲಿ ನಿಂತು ಸದಾ ನಮ್ಮನ್ನು ಕಾಯುವ ಸೈನಿಕನಿಗೆ ಗೌರವ ಸಲ್ಲಿಸುವ ದಿನವೇ ಭಾರತೀಯ ಸೇನಾ ದಿನ. ಅದೆಷ್ಟೋ ಸೈನಿಕರು ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ. ದೇಶದ ಭದ್ರತೆಗ ಭಾರತೀಯ ಸೇನೆ ಕೊಟ್ಟ ಕೊಡುಗೆ ಅಪಾರವಾದದ್ದು. ವಿಶ್ವದ ನಾಲ್ಕನೇ ಬಲಿಷ್ಠ ಸೇನೆಯಾಗಿ ನಮ್ಮ ಭಾರತೀಯ ಸೇನೆ ಗುರುತಿಸಿಕೊಂಡಿದೆ, ದೇಶದ ಭದ್ರತೆಗೆ ಸದಾ ಬದ್ಧವಾಗಿದೆ. ಶತ್ರು ರಾಷ್ಟ್ರಗಳನ್ನು ಯುದ್ಧದಲ್ಲಿ ಮಣಿಸಿ ವಿಜಯಿಶಾಲಿಯಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವೀರರನ್ನು ಗೌರವಿಸಲು ಹಾಗೂ ಹುತಾತ್ಮರಾದ ಯೋಧರನ್ನು ಸ್ಮರಿಸಲು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸ:
1895 ಏಪ್ರಿಲ್ 01 ರಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಸೇನಾ ಕಮಾಂಡರ್ ಗಳು ಬ್ರಿಟಿಷರೇ ಆಗಿದ್ದರು. ಆದರೆ, ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ಅಂದರೆ ಎರಡು ವರ್ಷಗಳ ನಂತರದಲ್ಲಿ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಅದರ ಸವಿನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಮಹತ್ವ ಹಾಗೂ ಆಚರಣೆ:
ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ದಿನವಾಗಿದ್ದು, ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಅಧಿಕಾರ ಸ್ವೀಕರಿಸಿದ ಸವಿನೆನಪಿಗಾಗಿ ಭಾರತೀಯ ಸೇನಾ ದಿನವನ್ನು ಆಚರಿಸುವುದೇ ಇಂದಿನ ದಿನದ ಮಹತ್ವವಾಗಿದೆ. ಈ ಬಾರಿ 77 ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ದೇಶದಾದ್ಯಂತ ಭವ್ಯವಾದ ಸಮಾರಂಭಗಳು, ಮಿಲಿಟರಿ ಮೆರವಣಿಗೆಗಳು, ಸಾಹಸಿ ಚಟುವಟಿಕೆಗಳ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೇನಾ ಪರೇಡ್, ವೀರಯೋಧರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿ ಕೆಡೇಟ್‌ಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ವಿಶೇಷವಾಗಿ ಯುವ ಸಮೂಹದ ಗಮನ ಸೆಳೆಯುತ್ತಾರೆ.
LATEST NEWS
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ
ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
ಮ*ರಣದ ನಂತರ ಏನು ಎಂದು ಹುಡುಕಿದಾತ ಸಾ*ವಿಗೆ ಶರಣಾದ!
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
ಅಧಿಕಪ್ರಸಂಗದ ಪ್ರಶ್ನೆ ಕೇಳಿದ ಯೂಟ್ಯೂಬರನ್ನು ಹೊಡೆದ ನಾಗಾಸಾಧು
Trending
- BIG BOSS4 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS5 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- BIG BOSS2 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- FILM7 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ