Connect with us

    DAKSHINA KANNADA

    ಮಂಗಳೂರಿನಲ್ಲಿ ಕನ್ನಡ ಕವಿ ಕಾವ್ಯ ಕಲರವ ರಾಜ್ಯ ಮಟ್ಟದ ಆನ್ಲೈನ್ ವೀಡಿಯೋ ಕವಿ ಸಮ್ಮೇಳನ ..!

    Published

    on

    ಮಂಗಳೂರು: ತಾಲೂಕು ಚುಟುಕು  ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಆನ್ಲೈನ್ ವೀಡಿಯೋ ಕವಿ ಸಮ್ಮೇಳನ ಕನ್ನಡ ಕವಿ ಕಾವ್ಯ ಕಲರವ ಎಪ್ರಿಲ್ 26ರ ಸೋಮವಾರ  ಸಂಜೆ 4ಗಂಟೆಗೆ ಡಿಜಿಟಲ್ ವೇದಿಕೆಯಲ್ಲಿ ನಡೆಯಲಿದೆ.

    ಸಮ್ಮೇಳನವನ್ನು ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಡಾ। ಎಂ.ಜಿ ಆರ್ ಅರಸ್  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಿರಿಯ ಸಾಹಿತಿ ನಾಟಕಕಾರ ವಿದ್ವಾಂಸರಾದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ್ ಬಾಗಲಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವಿ. ಕೃಷ್ಣದಾಸ್ ಆಶಯ ಭಾಷಣ ಮಾಡಲಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಕವಿ ಸಮ್ಮೇಳನದಲ್ಲಿ ಅಮೆರಿಕಾ ಸೇರಿದಂತೆ ದೇಶದ ಆಯ್ಕೆಯಾದ ಒಟ್ಟು ೧೦೦ ಮಂದಿ ಹಿರಿಯ ಕಿರಿಯ ಕವಿಗಳು ಭಾಗವಹಿಸುವರು.

    ಕವಿಗಳಾದ ಮುದ್ದು ಮೂಡುಬೆಳ್ಳೆ, ರಮಿತ ಕುತ್ತಾರ್, ಮಂಗಳೂರು, ಸತ್ಯವತಿ ಭಟ್ ಕೊಳಚಪುö್ಪ, ಶಾಂತ ಚೌರಿ ವಿಜಯಪುರ,. ಡಾ.ಅರುಣಾ ನಾಗರಾಜ್, ಮಂಗಳೂರು, ಮಾನಸ ವಿಜಯ್ ಕೈತಂಜೆ, ಶ್ರೀಮತಿ ಅರುಣಾ ಶ್ರೀನಿವಾಸ, ಉಜಿರೆ, ಅರುಂಧತಿ ರಾವ್ ಮಂಗಳೂರು, ಅಚ್ಯುತ ರಾವ್ ಚಿಕ್ಕಮಗಳೂರು, ದಾಕ್ಷಾಯಿಣಿ ಉದಗಟ್ಟಿ, ರಾಣಿಬೆನ್ನೂರು, ಬದ್ರುದ್ದೀನ್ ಕೂಳೂರು, ಮಂಗಳೂರು,

    ಸೋಮನಾಥ್ ಸಾಲಿಮಠ್, ಬಳ್ಳಾರಿ, ಡಾ.ಎಸ್.ವಿ.ಪ್ರಭಾವತಿ ಮಂಡ್ಯ, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ಪಾರ್ವತಿ ಜೋರಾಂಪುರ್ ಮಠ್, ವಿಜಯಪುರ, ಸುರೇಶ್ ಎಂ.ಯಾದಗಿರಿ,

    ಡಾ.ಸುರೇಶ್ ನೆಗಳಗುಳಿ, ಬಿ.ವೆಂಕಟೇಶ್, ಬಸವನಗುಡಿ, ಬೆಂಗಳೂರು, ಆನಂದ ಹಕ್ಕೆನ್ನವರ ಬೆಳಗಾವಿ, ಸುಪ್ರಿಯಾ, ಮಂಗಳೂರು, ವಿದ್ವಾನ್ ಮಂಜುನಾಥ್ ಪುತ್ತೂರು, ವಿಶ್ವನಾಥ್ ನಾರಾಯಣ ಬೇಂದ್ರೆ,ಗದಗ,ಚಂದ್ರಪ್ರಭಾವತಿ ಮಂಗಳೂರು, ಸರೋಜಿನಿ ಕೆ.ಮಾವಿನ್ಮರ್,ವಿಜಯಪುರ ಜಿಲ್ಲೆ, ಎನ್. ಆರ್.ರೂಪಶ್ರೀ,

    ಮೈಸೂರು, ರಶ್ಮಿ ಸನಿಲ್ ಮಂಗಳೂರು, ಸೀತಾಲಕ್ಷ್ಮಿ ವರ್ಮಾ ವಿಟ್ಲ, ಕುಮುದಾ ಡಿ.ಶೆಟ್ಟಿ,ಮುಂಬೈ, ಮೊಹಮ್ಮದ್ ಹುಮಾಯೂನ್ ಎನ್ ಮೈಸೂರು,ಅನ್ನಪೂರ್ಣ ಹಿರೇಮಠ್, ಬೆಳಗಾವಿ ಜಿಲ್ಲೆ ಮಹಾಂತೇಶ ವಿ.ಕೋಳಿವಾಡ,

    ಹುಬ್ಬಳ್ಳಿ, ಶಾರದಾ ಅಂಚನ್ ಮುಂಬೈ, ರಶ್ಮಿ ಭಟ್, ಕಾರ್ಘರ್, ಮುಂಬೈ, ಅನುರಾಧ ಎಂ.ಕುಲಕರ್ಣಿ, ಧಾರವಾಡ, ರಾಧಾಶ್ಯಾಮ್ ಧಾರವಾಡ, ಸುಶೀಲ ಕೆ.ಪದ್ಯಾಣ ಕಾಸರಗೋಡು, ವೆಂಕಟೇಶ್ ಗಟ್ಟಿ, ಮಂಗಳೂರು, ಮಶಾಕ್ ಅಬ್ದುಲ್ ತಾಳಿಕೋಟೆ, ಕೋಲಾರ, ಕುಸುಮ ಎಸ್.ಮುದಿಗೌಡರ, ಹಾವೇರಿ,

    ಇಂದುಮತಿ ರಾಘವೇಂದ್ರ ಧಾರವಾಡ, ವ.ಉಮೇಶ್ ಕಾರಂತ್, ಮಂಗಳೂರು, ಸಮ್ಯಕ್ತ್ ಜೈನ್ ಕಡಬ, ವಿಶ್ವನಾಥ್ ಎನ್. ನೆರಳಕಟ್ಟೆ, ಸಂಧ್ಯಾ ಗಣಪತಿ ಭಟ್ ಉತ್ತರಕನ್ನಡ, ವಿಜಯ ಕಾನ ಪೆರ್ಲ ಕಾಸರಗೋಡು,ವಿದ್ಯಾಶ್ರೀ ಅಡೂರು, ಬೆಳ್ತಂಗಡಿ,ಶೈಲಾ ಎಸ್.ಭಟ್ ಬೆಳಗಾವಿ,ಫಣಿಶ್ರೀ ನಾರಾಯಣನ್ ಮೇರಿ ಲ್ಯಾಂಡ್ ಅಮೆರಿಕಾ, ವನಜಾಕ್ಷಮ್ಮ ಬಳ್ಳಾರಿ, ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬಳೆ, ವೆಂಕಟ್ ಭಟ್ ಎಡನೀರು, ಸೌಮ್ಯ ಜಯರಾಮ್ ಬೆಂಗಳೂರು, ಪದ್ಮಾವತಿ ಮುದಿಗೌಡರ್ ಶಿವಮೊಗ್ಗ, ಕುಮಾರಿ ಸ್ಫೂರ್ತಿ ಸಾಗರ, ಅಬ್ದುಲ್ ಸಮದ್ ಬಾವ ಪುತ್ತೂರು, ಎಂ.ರಾಮಚಂದ್ರ ರಾವ್ ರಾಯಚೂರು,

    ವಾಣಿ ಲೋಕಯ್ಯ ಮಂಗಳೂರು, ನಾರಾಯಣ ನಾಯ್ಕ್ ಕುದುಕೋಳಿ ಕಾಸರಗೋಡು, ಎನ್. ಸುಬ್ರಾಯ ಭಟ್, ಮಂಗಳೂರು ಸಲೀಂ ಬೋಳಂಗಡಿ, ಬಂಟ್ವಾಳ, ರೇಮಂಡ್ ಡಿಕುನಾ ತಾಕೊಡೆ, ಮಂಗಳೂರು, ಯಮನೂರಪ್ಪ ಶಂ. ಅರಬಿ ವಿಜಯಪುರ, ಶಿವಾಜಿ ಮೊರೆ, ವಿಜಯಪುರ, ಪ್ರಭಾವತಿ ಶೆಟ್ಟಿ ಕಾವಡಿ, ಉಡುಪಿ, ಶೋಭಾ ಜೆ. ಶೆಟ್ಟಿ ಮುಂಬೈ, ಶೇಷಪ್ಪ ಬಿ.ಬಂಬಿಲ ಮಂಗಳೂರು,

    ಅಶೋಕ ಎನ್ ಕಡೇಶಿವಾಲಯ, ಹಮೀದ ಬೇಗಂ ದೇಸಾಯಿ ಸಂಕೇಶ್ವರ, ಬೆಳಗಾವಿ, ಪಂಕಜಾ ಕೆ.ಮುಡಿಪು ಬಂಟ್ವಾಳ,ಮAಜುಳಾ ರಾವ್ ವಾಷಿಂಗ್ಟನ್ ಅಮೆರಿಕ, ಗುಣಾಜೆ ರಾಮಚಂದ್ರ ಭಟ್ ಮಂಗಳೂರು, ಸುಧಾ ನಾಗೇಶ್ ಮಂಗಳೂರು,

    ಇಂದಿರಾ ಶೆಟ್ಟಿ ಮೈಸೂರು. ವಿಘ್ನೇಶ್ ಭಿಡೆ ಮಂಗಳೂರು, ಅಶ್ವಥ್ ಬರಿಮಾರ್ ಬಂಟ್ವಾಳ, ಹಂಸರಾಗ ಶೆಟ್ಟಿ ಪುತ್ತೂರು, ರೇಖಾ ನಾರಾಯಣ್ ಪಕ್ಷಿಕೆರೆ, ಲಕ್ಷ್ಮಿ ವಿ ಭಟ್ ತಲಂಜೇರಿ ಮಂಜೇಶ್ವರ, ಪ್ರೇಮಲತಾ ಸಿ ಎಸ್ ಚಿಪ್ಪಾರು ಮಂಜೇಶ್ವರ, ಹೇಮಲತಾ ಪೂರ್ಣಪ್ರಕಾಶ್ ಮಡಿಕೇರಿ,

    ಲತೀಶ್ ಎಂ.ಸಂಕೊಳಿಗೆ, ಅರ್ಚನಾ ಎಂ ಬಂಗೇರ, ಕುಂಪಲ, ಶ್ರೀಮತಿ ತ್ರಿವೇಣಿ ಭದ್ರಾವತಿ, ಗೀತಾ ಭದ್ರಣ್ಣವರ್ ಧಾರವಾಡ, ಶುಭ ವರ್ಣೇಕರ್ ಬೆಂಗಳೂರು, ಪ್ರಮೋದ ಸುರೇಂದ್ರ ಮಾಡ ಥಾಣೆ ಮಹಾರಾಷ್ಟ ವಾಣಿ ರಾವ್ ಕಿನ್ನಿಗೋಳಿ, ಅನಂತ ಸತ್ಯ ಸಂಜೀವ ಕುಳಾಯಿ, ಮಂಜುಳಾ ಬಿ.ಕೆ. ತುಮಕೂರು, ಸಂಜಯ ಜಿ ಕುರಣೆ, ಕಾಗವಾಡ ಬೆಳಗಾವಿ, ವೇದ ಶೆಟ್ಟಿ ಕಾಳಾವರ ಕುಂದಾಪುರ,

    ಜಯಲಕ್ಷ್ಮಿ ಶರತ್ ಶೆಟ್ಟಿ ಮಂಜೇಶ್ವರ, ಅಕ್ಷಯ ಆರ್ ಶೆಟ್ಟಿ ಮಂಗಳೂರು, ವಿಜೇಶ್ ದೇವಾಡಿಗ, ಸುಧಾ ಎನ್ ತೇಲ್ಕರ್ ಅನಂತಪುರ, ಹೈದರಾಬಾದ್, ಬಿಟ್ಟೀರ ಚೋಂದಮ್ಮ ಶಂಭು ಬೆಂಗಳೂರು, ಶೋಭಾ ಶರ್ಮ, ಈರಣ್ಣ ಶೆಟ್ಟರ, ಧಾರವಾಡ, ಶ್ರೀಮತಿ ಸರೋಜಾ ಜಯಂತ್, ಏಳಿಂಜೆ, ಮಂಗಳೂರು, ವಿಜಯಲಕ್ಷ್ಮಿ, ಅಶೋಕ ಬಸವ ತೆಲಂಗಾಣ ಹೈದರಾಬಾದ್ ಅವರುಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು.

    ಸಮ್ಮೇಳನವು ನಮ್ಮ ಕುಡ್ಲ ವಾಹಿನಿ, ಪರಿಷತ್ತಿನ ಫೇಸ್ಬುಕ್ ಪುಟ, ಹಾಗೂ ಯೂ ಟ್ಯೂಬ್ ವಾಹಿನಿಗಳಲ್ಲಿ ನೇರಪ್ರಸಾರ ಆಗಲಿದೆಯೆಂದು ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್  ತಿಳಿಸಿದ್ದಾರೆ..

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು – ಕಟೀಲಮ್ಮನ ಮಡಿಲಲ್ಲಿ ಹಲವಾರು ಬಣ್ಣದ ವೇಷಗಳ ವೈಭವ

    Published

    on

    ಮಂಗಳೂರು: ನಂದಿನಿ ನದಿಯ ಮಧ್ಯದಲ್ಲಿ ರಾರಾಜಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯುವ ಶರನ್ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ ಹುಲಿ, ಸಿಂಹ ಸೇರಿದಂತೆ ಸಾವಿರಾರು ಬಣ್ಣದ ವೇಷಗಳು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.


    ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ನಂದಿನಿ ನೀರಿನಲ್ಲಿ ಮಿಂದು ಹೋಗುವುದು ರೂಢಿ. ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇವೆ ಎಂದು ಹರಕೆ ಹೊತ್ತವರು ಒಂದೆಡೆಯಾದರೆ, ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುತ್ತೇವೆ ಎನ್ನುವವರು ಇನ್ನೊಂದೆಡೆ ಇದ್ದಾರೆ. ಇದು ತಲತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.


    ಶರನ್ನವರಾತ್ರಿ ಸಮಯದಲ್ಲಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ತಂಡಗಳ ಹುಲಿ ವೇಷ ನರ್ತನ ಇರುತ್ತದೆ. ಒಟ್ಟಾರೆಯಾಗಿ 2000 ಕ್ಕೂ ಅಧಿಕ ವೇಷಗಳು , 70 ರಿಂದ 80 ತಂಡಗಳು ಕಟೀಲು ಸನ್ನಿಧಿಗೆ ಬಂದು ಸೇವೆ ಸಲ್ಲಿಸುತ್ತವೆ ಎಂದು ಹೇಳಬಹುದು.

    Continue Reading

    DAKSHINA KANNADA

    ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    Published

    on

    ಬೆಂಗಳೂರು: ಈ ಬಾರಿಯ ದಸರಾ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

    ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಯಲ್ಲಿ ನೀರು ರಭಸದಿಂದ ಹರಿದು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

    Continue Reading

    DAKSHINA KANNADA

    ಮಂಗಳೂರು – ರೌಡಿಗಳಂತೆ ಫೈಟ್ ಮಾಡಿಕೊಂಡ ಬಸ್ ಸಿಬ್ಬಂದಿ; ವಿಡಿಯೋ ವೈರಲ್

    Published

    on

    ಮಂಗಳೂರು: ವಿಟ್ಲ-ಮಂಗಳೂರು ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನ ಸಿಬ್ಬಂದಿ ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

    ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ.
    ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್‌ಗಳ ಸಿಬ್ಬಂದಿಯ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬನ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
    ಬಸ್ ವ್ಯವಸ್ಥೆ ಸಾರ್ವಜನಿಕ ಸೇವೆಯೆಂಬುದು ಇಂದಿನವರಿಗೆ ತಿಳಿದಿಲ್ಲವಾಗಿದೆ. ತಮ್ಮದೇ ಸಾಮ್ರಾಜ್ಯ, ತಾವು ಮಾಡಿದ್ದೇ ಆಟ, ನಾವು ನಡೆದಿದ್ದೇ ದಾರಿ ಎಂಬುದನ್ನು ತಿಳಿದಿರುವ ಇಂತಹ ಸಿಬ್ಬಂದಿಯ ಸಮಾಜ ಕಂಟಕ ವರ್ತನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.


    ‘ಇಂತಹ ಅನಾಗರಿಕ ವರ್ತನೆಯಿಂದ ಮಹಿಳೆಯರು , ಪುಟ್ಟ ಮಕ್ಕಳು ಬಸ್ಸಿನಲ್ಲಿ ಹೋಗಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ಬಸ್ಸಿನ ಸಿಬ್ಬಂದಿಗಳನ್ನು ಅರ್ಧದಾರಿಯಲ್ಲೇ ಇಳಿಸಿ ಅವರನ್ನು ಅತಂತ್ರರನ್ನಾಗಿಸುವ ಕ್ರಮ ಸರಿಯಲ್ಲ. ಬೇರೆ ಬಸ್ಸು ಇಲ್ಲದೇ ಅವರು ಕಂಗೆಡುವ ಪರಿಸ್ಥಿತಿ ಕೂಡಾ ಇರುವ ಕಾರಣ ಇಂತಹ ಬಸ್ಸು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    ಈ ಕುರಿತ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶಿಸುತ್ತಿದ್ದಾರೆ.

     

    ವಿಡಿಯೋ ನೋಡಿ :

     

     

    Continue Reading

    LATEST NEWS

    Trending